| : ವಿಸ್ತೀರ್ಣದಲ್ಲಿ ಭಾರತದ ಅತಿ ದೊಡ್ಡ ರಾಜ್ಯ ಯಾವುದು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಭಾರತೀಯ ರಾಷ್ಟ್ರೀಯ ಸೇನೆಯ (ಆಜಾದ್ ಹಿಂದ್ ಫೌಜ್) ಸ್ಥಾಪಕರು ಯಾರು? ಉತ್ತರ: ಸುಭಾಷ್ ಚಂದ್ರ ಬೋಸ್ ಪ್ರಶ್ನೆ 2:ಸ್ವತಂತ್ರ ಭಾರತದ ಗವರ್ನರ್ ಜನರಲ್ ಆದ ಮೊದಲ ಭಾರತೀಯ ಯಾರು? ಉತ್ತರ: ಸಿ.ರಾಜಗೋಪಾಲಾಚಾರಿ ಪ್ರಶ್ನೆ 3:ಅಟಪಾಕ ಪಕ್ಷಿಧಾಮವು ಯಾವ ರಾಜ್ಯದಲ್ಲಿದೆ? ಉತ್ತರ: ಆಂಧ್ರಪ್ರದೇಶ ಪ್ರಶ್ನೆ 4:ಮೌರ್ಯ ಸಾಮ್ರಾಜ್ಯದ ಮೊದಲ ಚಕ್ರವರ್ತಿ ಯಾರು? ಉತ್ತರ: ಚಂದ್ರಗುಪ್ತ ಮೌರ್ಯ ಪ್ರಶ್ನೆ 5:ತಾಜ್ ಮಹಲ್ ಅನ್ನು ನಿರ್ಮಿಸಿದ ಮೊಘಲ್ ಚಕ್ರವರ್ತಿ ಯಾರು? ಉತ್ತರ: ಷಹಜಹಾನ್ ಇದನ್ನೂ ಓದಿ:ಪ್ರಶ್ನೆ 6:ಭಾರತದಲ್ಲಿ ಖಿಲ್ಜಿ ರಾಜವಂಶದ ಸ್ಥಾಪಕರು ಯಾರು? ಉತ್ತರ: ಜಲಾಲುದ್ದೀನ್ ಖಿಲ್ಜಿ ಪ್ರಶ್ನೆ 7:ಹಿಂದೂ ಧರ್ಮದಲ್ಲಿ ಸುಧಾರಣಾ ಚಳುವಳಿಯಾದ ಆರ್ಯ ಸಮಾಜವನ್ನು ಸ್ಥಾಪಿಸಿದವರು ಯಾರು? ಉತ್ತರ: ಸ್ವಾಮಿ ದಯಾನಂದ ಸರಸ್ವತಿ ಪ್ರಶ್ನೆ 8:ಯಾವ ನದಿಯನ್ನು ಭಾರತದ ಜೀವನಾಡಿ ಎಂದು ಕರೆಯಲಾಗುತ್ತದೆ? ಉತ್ತರ: ಗಂಗಾ ನದಿ ಪ್ರಶ್ನೆ 9:ಭಾರತದ ಅತಿ ಎತ್ತರದ ಶಿಖರ ಯಾವುದು? ಉತ್ತರ: ಕಾಂಚನಜುಂಗಾ ಪ್ರಶ್ನೆ 10:ವಿಸ್ತೀರ್ಣದಲ್ಲಿ ಭಾರತದ ಅತಿ ದೊಡ್ಡ ರಾಜ್ಯ ಯಾವುದು? ಉತ್ತರ: ರಾಜಸ್ಥಾನ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... |