ಮೋದಿ ಸರ್ಕಾರದಿಂದ ಜನರಿಗೆ ಗುಡ್ ನ್ಯೂಸ್.. ನೇರವಾಗಿ ರೂ.10 ಲಕ್ಷ..! 2024 : ಕೇಂದ್ರ ಸರ್ಕಾರದ 2024ರ ಬಜೆಟ್ ಇದೇ ತಿಂಗಳ 23ರಂದು ಮಂಡನೆಯಾಗಿದ್ದು, ಮೋದಿ ಸರ್ಕಾರ ಜನರಿಗೆ ಗುಡ್ ನ್ಯೂಸ್ ಅನ್ನು ನೀಡಿದೆ. :ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್ ಡಿಎ ಸರ್ಕಾರ 2024ರ ಬಜೆಟ್ ಇದೆ ತಿಂಗಳ 23ರಂದು ಸಾಮಾನ್ಯ ಬಜೆಟ್ ಮಂಡಿಸಲಿದೆ ಈ ಕುರಿತಂತೆ ಸಿದ್ಧತೆಗಳು ನಡೆಯುತ್ತಿದ್ದು, ಜಾರಿಯಲ್ಲಿರುವ ಯೋಜನೆಗಳಿಗೆ ಹೆಚ್ಚು ಮಹತ್ವವನ್ನ ಕೊಡುವ ಉದ್ದೇಶವನ್ನು ಹೊಂದಿದೆ ಮತ್ತು ಸಾಮಾನ್ಯ ಜನರಿಗೆ ಪೂರ್ಣ ಪ್ರಮಾಣದಲ್ಲಿ ಯೋಜನೆಗಳ ಪ್ರಯೋಜನ ಸಿಗಲಿದೆ. ಇದನ್ನು ಓದಿ : ಸಾಮಾನ್ಯ ಜನರಿಗೆ ಆದಾಯ ತೆರಿಗೆ ಕಲ್ಯಾಣ ಮತ್ತು ಆರೋಗ್ಯದ ರಕ್ಷಣೆಗಾಗಿ ಹೆಚ್ಚಿನ ಬಜೆಟ್ ಮೀಸಲಿಡಲಾಗುವುದು ಎಂದು ತಿಳಿಸಿದೆ ಮತ್ತು ಅದರ ಜೊತೆಗೆ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಹಾಗೂ ಆಯುಷ್ಮಾನ್ ಭಾರತ ಯೋಜನೆಗಳಿಗೆ ಸರ್ಕಾರವು ಪ್ರಮುಖ ಘೋಷಣೆ ಮಾಡುವ ನಿರೀಕ್ಷೆಯನ್ನು ಹೊಂದಿದೆ. ಇದರೊಂದಿಗೆ ಆರೋಗ್ಯ ವಿಮಾನ ರಕ್ಷಣೆಯನ್ನು ದ್ವಿಗುಣಗೊಳಿಸುವಂತೆ ಸರ್ಕಾರವು ಯೋಜಿಸುತ್ತಿದೆ. ಇದನ್ನು ಓದಿ : ಈ ಎರಡು ಯೋಜನೆಗಳಡಿ ವಿಮಾ ಮೊತ್ತ ಎರಡನ್ನು ಹೆಚ್ಚಿಸುವಂತೆ ಹಾಗೂ ಫಲಾನುಭವಿಗಳಿಗೆ ನೀಡಲಾಗುವ ವ್ಯಾಪ್ತಿಯ ಮಿತಿಯು 5 ಲಕ್ಷದಿಂದ 10 ಲಕ್ಷಕ್ಕೆ ಏರಿಸುವಂತೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಮೂರು ವರ್ಷಗಳಲ್ಲಿ ಆರೋಗ್ಯ ವಿಮಾ ಯೋಜನೆ ಅಡಿ ಫಲಾನುಭವಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಉದ್ದೇಶವನ್ನು ಹೊಂದಿದೆ. 70 ವರ್ಷ ಮೇಲ್ಪಟ್ಟ ಹೊಸಬರು ಈ ಯೋಜನೆ ಅಡಿಯಲ್ಲಿ ನಾಲ್ಕರಿಂದ ಐದು ಕೋಟಿ ಅಷ್ಟು ಜನ ಫಲ ಪಡೆಯಲಿದ್ದಾರೆ ಎಂದು ತಿಳಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... |