NLP_Assignment_1 / zeenewskannada /data1_url7_1_to_200_133.txt
CoolCoder44's picture
Upload folder using huggingface_hub
3138743 verified
ಒಂದು ವರ್ಷದಲ್ಲಿ ಭಾರತದ ಪೌರತ್ವ ತ್ಯಜಿಸಿದವರ ಸಂಖ್ಯೆ ದ್ವಿಗುಣ! ವಿದೇಶವನ್ನೇ ಇಷ್ಟಪಡ್ತಿರೋದೇಕೆ ಭಾರತೀಯರು? : ಮಾಧ್ಯಮ ವರದಿಗಳ ಪ್ರಕಾರ ಗುಜರಾತ್ ಯುವಜನತೆ ಅಧ್ಯಯನಕ್ಕಾಗಿ ಕೆನಡಾಕ್ಕೆ ಹೋಗುತ್ತಿದ್ದಾರೆ. ವಿದ್ಯಾಭ್ಯಾಸ ಮುಗಿದ ನಂತರ ತಮ್ಮ ವೃತ್ತಿಯನ್ನು ಹೊಂದಿಸಿಕೊಳ್ಳುವಲ್ಲಿ ನಿರತರಾಗಿರುತ್ತಾರೆ. :ಗುಜರಾತಿಗಳು ಭಾರತೀಯ ಪಾಸ್‌ಪೋರ್ಟ್ ತೊರೆಯುವ ಪ್ರವೃತ್ತಿ ಹೆಚ್ಚುತ್ತಿದೆ. 2021 ರಿಂದ ಇಲ್ಲಿಯವರೆಗೆ, 1187 ಗುಜರಾತಿಗಳು ಭಾರತೀಯ ಪೌರತ್ವವನ್ನು ತ್ಯಜಿಸಿ ಇತರ ದೇಶಗಳಲ್ಲಿ ನೆಲೆಸಿದ್ದಾರೆ. ಗುಜರಾತಿಗಳಿಗೆ ಕೆನಡಾ ಮೊದಲ ಆಯ್ಕೆಯಾಗುತ್ತಿದೆ ಎಂಬುದು ವರದಿಗಳಲ್ಲಿ ಬಹಿರಂಗವಾಗಿದೆ. ಇದನ್ನೂ ಓದಿ: ಮಾಧ್ಯಮ ವರದಿಗಳ ಪ್ರಕಾರಯುವಜನತೆ ಅಧ್ಯಯನಕ್ಕಾಗಿ ಕೆನಡಾಕ್ಕೆ ಹೋಗುತ್ತಿದ್ದಾರೆ. ವಿದ್ಯಾಭ್ಯಾಸ ಮುಗಿದ ನಂತರ ತಮ್ಮ ವೃತ್ತಿಯನ್ನು ಹೊಂದಿಸಿಕೊಳ್ಳುವಲ್ಲಿ ನಿರತರಾಗಿರುತ್ತಾರೆ. ಕೆನಡಾದ ಪೌರತ್ವ ಪಡೆದ ನಂತರ ಅವರು ಭಾರತೀಯ ಪೌರತ್ವವನ್ನು ತ್ಯಜಿಸಿ ಅಲ್ಲಿಯೇ ನೆಲೆಸುತ್ತಿದ್ದಾರೆ. ಜನವರಿ 2021 ರಿಂದ 1187 ಗುಜರಾತಿಗಳು ತಮ್ಮ ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ ಎಂದು ವರದಿಗಳು ಹೇಳಿವೆ. ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯ ಮಾಹಿತಿಯ ಪ್ರಕಾರ, 2023 ರಲ್ಲಿ 485 ಪಾಸ್‌ಪೋರ್ಟ್‌ಗಳನ್ನು ಸರೆಂಡರ್ ಮಾಡಲಾಗಿದೆ, ಇದು 2022 ಕ್ಕಿಂತ ದ್ವಿಗುಣ. ಇವರಲ್ಲಿ ಹೆಚ್ಚಿನವರು 30 ರಿಂದ 45 ರ ವಯೋಮಾನದವರು. ಇವರೆಲ್ಲಾ ಅಮೆರಿಕ, ಬ್ರಿಟನ್, ಕೆನಡಾ ಮತ್ತು ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಅಖಿಲ ಭಾರತ ಅಂಕಿಅಂಶಗಳನ್ನು ನೋಡುವುದಾದರೆ, 2014 ಮತ್ತು 2022ರ ನಡುವೆ 22,300 ಗುಜರಾತಿಗಳು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ. ಈ ಸಂಖ್ಯೆ ದೆಹಲಿ (60,414) ಮತ್ತು ಪಂಜಾಬ್ (28,117) ನಂತರ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ಕೋವಿಡ್ ನಂತರ ಪಾಸ್‌ಪೋರ್ಟ್ ಸರೆಂಡರ್’ನಲ್ಲಿ ಏರಿಕೆಯಾಗಿದೆ. ಇದಕ್ಕೆ ಒಂದು ಕಾರಣವೆಂದರೆ ರಾಯಭಾರ ಕಚೇರಿಗಳನ್ನು ಪುನರಾರಂಭಿಸುವುದು ಮತ್ತು ಪೌರತ್ವ ಪ್ರಕ್ರಿಯೆಗಳನ್ನು ಪ್ರಾರಂಭಿಸುವುದು. ವಿದೇಶಕ್ಕೆ ಹೋಗುವ ಹೆಚ್ಚಿನ ಯುವಕರು ಓದಲು ಹೋಗಿ ಅಲ್ಲಿಯೇ ನೆಲೆಸುತ್ತಿದ್ದಾರೆ. ಇದಲ್ಲದೇ, ಜನರು ಉತ್ತಮ ಜೀವನಕ್ಕಾಗಿ ವಿದೇಶಗಳಿಗೆ ಹೋಗುತ್ತಿದ್ದಾರೆ. ಉತ್ತಮ ಮೂಲಸೌಕರ್ಯ ಮತ್ತು ಜೀವನಶೈಲಿಗಾಗಿ ಉದ್ಯಮಿಗಳು ವಿದೇಶಕ್ಕೆ ಹೋಗುತ್ತಿದ್ದಾರೆ ಎಂದು ಹೂಡಿಕೆದಾರರ ವೀಸಾ ಸಲಹೆಗಾರ ಲಲಿತ್ ಅಡ್ವಾಣಿ ಹೇಳುತ್ತಾರೆ. ಭಾರತದಲ್ಲಿ ಉತ್ತಮ ಜೀವನಮಟ್ಟ ಹೊಂದಿರುವವರು ಕೂಡ ಮಾಲಿನ್ಯ, ಹದಗೆಟ್ಟ ರಸ್ತೆಗಳಂತಹ ಸಮಸ್ಯೆಗಳಿಂದ ವಿದೇಶಕ್ಕೆ ಹೋಗುವ ಯೋಚನೆಯಲ್ಲಿದ್ದಾರೆ. ಇದನ್ನೂ ಓದಿ: ಮುಂದಿನ ದಿನಗಳಲ್ಲಿ ಪಾಸ್‌ಪೋರ್ಟ್ ಸರೆಂಡರ್ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು ಎಂದು ಸಂಬಂಧಪಟ್ಟ ಅಧಿಕಾರಿ ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...