NLP_Assignment_1 / zeenewskannada /data1_url7_1_to_200_111.txt
CoolCoder44's picture
Upload folder using huggingface_hub
3138743 verified
ಬಾಲ್ಯದಲ್ಲಿ ಅನಂತ್ ಅಂಬಾನಿಯನ್ನು ನೋಡಿಕೊಂಡಿದ್ದು ಈಕೆ? ಬಾಲಿವುಡ್ ಖ್ಯಾತ ಜೋಡಿಯ ಮಕ್ಕಳನ್ನು ಇವರೇ ನೋಡಿಕೊಂಡಿದ್ದಾರೆ! : ಇತ್ತೀಚಿಗಷ್ಟೇ ಭರ್ಜರಿಯಾಗಿ ವಿವಾಹವಾದ ಏಷ್ಯಾದ ಶ್ರೀಮಂತ ವ್ಯಕ್ತಿಯ ಮಗ ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಮದುವೆ ಮುಂಬೈ ನಲ್ಲಿ ನಡೆಯಿತು. :ಇತ್ತೀಚಿಗಷ್ಟೇ ಭರ್ಜರಿಯಾಗಿ ವಿವಾಹವಾದ ಏಷ್ಯಾದ ಶ್ರೀಮಂತ ವ್ಯಕ್ತಿಯ ಮಗ ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಮದುವೆ ಮುಂಬೈ ನಲ್ಲಿ ನಡೆಯಿತು. ವಿವಾಹವಾದ ಅನಂತ್ ಅಂಬಾನಿ ತನ್ನ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ವಿವಾಹದ ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹದ ಫೋಟೋವನ್ನು ನೋಡಿ ವ್ಯಕ್ತಿಯೊಬ್ಬರು ಅಭಿನಂದಿಸಿದ್ದಾರೆ ಅವರು ಯಾರು ಗೊತ್ತಾ ಇವರೇ ನೋಡಿ. ಇದನ್ನು ಓದಿ : ಸಾಮಾನ್ಯವಾಗಿ ಸ್ಟಾರ್ ದಂಪತಿಗಳು ತಮ್ಮ ಮಕ್ಕಳನ್ನು ನೋಡಲು ಬೇಬಿ ಸಿಟ್ಟರನ್ನು ನೇಮಿಸಿಕೊಳ್ಳುತ್ತಾರೆ. ಹಾಗೆ ಅನಂತ್ ಅಂಬಾನಿ ಅವರನ್ನು ನೋಡಿಕೊಳ್ಳಲು ಈ ವ್ಯಕ್ತಿ ಒಬ್ಬರನ್ನು ನೇಮಿಸಿದ್ದರಂತೆ, ಅವರು ಬೇರೆ ಯಾರು ಅಲ್ಲ ತಾರಾಜೋಡಿ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಅವರ ಪುತ್ರರನ್ನು ನೋಡಿಕೊಳ್ಳಲು ಇವರನ್ನು ನೇಮಿಸಿದ್ದರಂತೆ. ಅವರೇ ಖ್ಯಾತ ನರ್ಸ್ ಲಲಿತಾ ಸಿಲ್ವಾ. ಅನಂತ್ ಅಂಬಾನಿ ಅವರನ್ನು ಬಾಲ್ಯದಲ್ಲಿ ಇವರೇ ನೋಡಿಕೊಂಡಿದ್ದರು. ಇತ್ತೀಚಿಗಷ್ಟೇ ಮದುವೆಯಾದ ಅನಂತ ಅಂಬಾನಿ ಮದುವೆಯಲ್ಲಿ ಲಲಿತಾ ಸಿಲ್ವಾ ಕಾಣಿಸಿಕೊಂಡಿದ್ದಾರೆ. ಇದನ್ನು ಓದಿ : ಅವರೊಟ್ಟಿಗೆ ತೆಗೆದುಕೊಂಡ ಫೋಟೋ ಅನಂತ ಅಂಬಾನಿ ಅವರನ್ನು ತಮ್ಮ ಬಾಲ್ಯಕ್ಕೆ ಕರೆದುಕೊಂಡು ಹೋಗಿದೆ. ಅನಂತ ಅವರ ಬಾಲ್ಯದ ಫೋಟೋ ಒಂದನ್ನು ನೋಡಿ ಲಲಿತಾ ಸಿಲ್ವಾ ತುಂಬಾ ಒಳ್ಳೆ ಹುಡುಗ ಎಂದು ಉಲ್ಲೇಖಿಸಿದ್ದಾರೆ. ಬಾಲ್ಯದಲ್ಲಿ ಡಿಸ್ನಿ ವರ್ಲ್ಡ್ ಪ್ಯಾರಿಸ್ ಪ್ರವಾಸದ ಸಮಯದಲ್ಲಿ ತೆಗೆದುಕೊಂಡು ಫೋಟೋವನ್ನು ಹಂಚಿಕೊಂಡಿದ್ದಾರೆ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...