CoolCoder44 commited on
Commit
93ac9f1
·
verified ·
1 Parent(s): 4ece171

338b322e6980e708e2dc71e82b1276d5b86e7c7c73248adfdc0bbad57dfa4deb

Browse files
Files changed (50) hide show
  1. eesanje/url_46_285_8.txt +5 -0
  2. eesanje/url_46_285_9.txt +9 -0
  3. eesanje/url_46_286_1.txt +5 -0
  4. eesanje/url_46_286_10.txt +11 -0
  5. eesanje/url_46_286_11.txt +9 -0
  6. eesanje/url_46_286_12.txt +7 -0
  7. eesanje/url_46_286_2.txt +6 -0
  8. eesanje/url_46_286_3.txt +13 -0
  9. eesanje/url_46_286_4.txt +8 -0
  10. eesanje/url_46_286_5.txt +5 -0
  11. eesanje/url_46_286_6.txt +11 -0
  12. eesanje/url_46_286_7.txt +11 -0
  13. eesanje/url_46_286_8.txt +8 -0
  14. eesanje/url_46_286_9.txt +9 -0
  15. eesanje/url_46_287_1.txt +5 -0
  16. eesanje/url_46_287_10.txt +15 -0
  17. eesanje/url_46_287_11.txt +9 -0
  18. eesanje/url_46_287_12.txt +7 -0
  19. eesanje/url_46_287_2.txt +13 -0
  20. eesanje/url_46_287_3.txt +8 -0
  21. eesanje/url_46_287_4.txt +8 -0
  22. eesanje/url_46_287_5.txt +5 -0
  23. eesanje/url_46_287_6.txt +5 -0
  24. eesanje/url_46_287_7.txt +9 -0
  25. eesanje/url_46_287_8.txt +7 -0
  26. eesanje/url_46_287_9.txt +9 -0
  27. eesanje/url_46_288_1.txt +6 -0
  28. eesanje/url_46_288_10.txt +7 -0
  29. eesanje/url_46_288_11.txt +6 -0
  30. eesanje/url_46_288_12.txt +6 -0
  31. eesanje/url_46_288_2.txt +6 -0
  32. eesanje/url_46_288_3.txt +9 -0
  33. eesanje/url_46_288_4.txt +5 -0
  34. eesanje/url_46_288_5.txt +17 -0
  35. eesanje/url_46_288_6.txt +7 -0
  36. eesanje/url_46_288_7.txt +8 -0
  37. eesanje/url_46_288_8.txt +6 -0
  38. eesanje/url_46_288_9.txt +4 -0
  39. eesanje/url_46_289_1.txt +7 -0
  40. eesanje/url_46_289_10.txt +6 -0
  41. eesanje/url_46_289_11.txt +7 -0
  42. eesanje/url_46_289_12.txt +7 -0
  43. eesanje/url_46_289_2.txt +8 -0
  44. eesanje/url_46_289_3.txt +5 -0
  45. eesanje/url_46_289_4.txt +5 -0
  46. eesanje/url_46_289_5.txt +15 -0
  47. eesanje/url_46_289_6.txt +7 -0
  48. eesanje/url_46_289_7.txt +9 -0
  49. eesanje/url_46_289_8.txt +7 -0
  50. eesanje/url_46_289_9.txt +8 -0
eesanje/url_46_285_8.txt ADDED
@@ -0,0 +1,5 @@
 
 
 
 
 
 
1
+ ಪ್ಯಾಂಟ್‍ನಲ್ಲಿ ಚಿನ್ನ ಕಳ್ಳ ಸಾಗಣೆ, ಸಿಕ್ಕಿಬಿದ್ದ ಪ್ರಯಾಣಿಕ
2
+ ಮಂಗಳೂರು, ಡಿ.17- ಇಲ್ಲಿನ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ದುಬೈನಿಂದ ಇಲ್ಲಿಗೆ ಬಂದ ಪ್ರಯಾಣಿಕರೊಬ್ಬ ಪ್ಯಾಂಟ್‍ನಲ್ಲಿ ಅಡಗಿಸಿಕೊಂಡು ತಂದಿದ್ದ 17.73 ಲಕ್ಷ ಮೌಲ್ಯದ 286 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
3
+ ಇಂಡಿಗೋ ವಿಮಾನ 6ಇ1163 ಮೂಲಕ ಬಂದ ಪ್ರಯಾಣಿಕನ ಚಲನವಲನ ಅನುಮಾನ ಮೂಡಿಸಿತು ಮೊದಲು ಆತನನ್ನು ಪರೀಕ್ಷಿಸಿದಾಗ ಏನು ತಿಳಿಯಲ್ಲಿಲ್ಲ ನಂತರ ಪ್ಯಾಂಟ್ ಅನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಮತ್ತು ಸ್ಕ್ಯಾನಿಂಗ್ ಮಾಡಿದ ನಂತರ, ಕಪ್ಪು ಚಿತ್ರ ಅನುಮಾನವನ್ನು ಹುಟ್ಟುಹಾಕಿತು. ನಂತರದ ಸಂಪೂರ್ಣ ಪರೀಕ್ಷೆಯು ಪ್ಯಾಂಟ್‍ನ ಪದರಗಳಲ್ಲಿ ಮರೆಮಾಚಲ್ಪಟ್ಟ ಹಳದಿ ಬಣ್ಣದ ಪೇಸ್ಟ್ ವಸ್ತು ಕಂಡುಬಂತು.
4
+ ಸ್ಯಾಂಡಲ್‍ವುಡ್‍ನ ಕೆಲ ನಟ-ನಟಿಯರಿಗೆ ಡ್ರಗ್ಸ್ ಪೆಡ್ಲರ್‌ಗಳ ಜೊತೆ ನಂಟು
5
+ ನಂತರ ಚಿನ್ನ ಕಳ್ಳಸಾಗಣೆ ಅಸಲಿಯತ್ತು ಗೊತ್ತಾಯಿತು ಆತನನ್ನು ಬಂಧಿಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.ಪ್ರಯಾಣಿಕರ ಡೇಟಾ ಪರಿಶೀಲನೆ ವೇಳೆ ಈತನ ಬಗ್ಗೆ ಅನುಮಾನ ಮೂಡಿತ್ತು ಆತ ದುಬೈನಿಂದ ಬಂದ ಬಳಿಕ ಗುಮಾನಿ ಮೇಲೆ ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಚಿನ್ನ ಕಳ್ಳ ಸಾಗಣೆ ಬೆಳಕಿಗೆ ಬಂದಿದೆ.
eesanje/url_46_285_9.txt ADDED
@@ -0,0 +1,9 @@
 
 
 
 
 
 
 
 
 
 
1
+ ಬಿಜೆಪಿ ಅನಗತ್ಯ ಹೋರಾಟ, ಪರಮೇಶ್ವರ್ ಟೀಕೆ
2
+ ಬೆಂಗಳೂರು,ಡಿ.17- ಬೆಳಗಾವಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿದ್ದನ್ನು ಮುಂದಿಟ್ಟು ಕೊಂಡು ಬಿಜೆಪಿ ಪ್ರತಿಭಟನೆ ಮಾಡುತ್ತಿರುವುದು ಅನಗತ್ಯವಾದ ರಾಜಕಾರಣ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಆಕ್ಷೇಪಿಸಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯ ವಂಟಮೂರಿ ಗ್ರಾಮದಲ್ಲಿ ನಡೆದ ಘಟನೆಯನ್ನು ಮುಂದಿಟ್ಟುಕೊಂಡು ಬಿಜೆಪಿ ರಾಜಕೀಯಕ್ಕಾಗಿ ಪ್ರತಿಭಟನೆ ನಡೆಸುತ್ತಿದೆ. ಇದಕ್ಕೆ ಏನು ಹೇಳಬೇಕೊ ಗೊತ್ತಿಲ್ಲ. ವಿರೋಧಪಕ್ಷ ಬಿಜೆಪಿ ವಿಷಯವನ್ನು ಆಯ್ದುಕೊಳ್ಳುವುದರಲ್ಲೇ ಲೋಪವಿದೆ. ಘಟನೆ ನಡೆದಿರುವುದರಲ್ಲಿ ಸರ್ಕಾರದ ಪಾತ್ರ ಏನಿದೆ ಎಂದು ಪ್ರಶ್ನಿಸಿದರು.
3
+ ಘಟನೆ ನಡೆಯಬಾರದಿತ್ತು. ದುರದೃಷ್ಟಕರ ವಾಗಿ ನಡೆದಿದೆ. ಊರಿನಲ್ಲಿ ಒಂದು ವರ್ಗದ ಜನ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಘಟನೆ ಮಾಡಿದ್ದಾರೆ. ಇದರಲ್ಲಿ ಸರ್ಕಾರದ ಲೋಪ ಏನಿದೆ. ರಾತ್ರಿ 1.30 ಗಂಟೆ ಸುಮಾರಿಗೆ ದುಷ್ಕøತ್ಯವಾಗಿದೆ. ಪೊಲೀಸರಿಗೆ ಮಾಹಿತಿ ದೊರೆಯುತ್ತಿದ್ದಂತೆ ಸ್ಥಳಕ್ಕೆ ಹೋಗಿದ್ದಾರೆ. ಮಹಿಳೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. 7 ಮಂದಿ ಆರೋಪಿಗಳನ್ನು ತಕ್ಷಣ ಬಂಧಿಸಿದ್ದಾರೆ. ಇಬ್ಬರು ನಾಪತ್ತೆಯಾಗಿದ್ದಾರೆ. ಅದರಲ್ಲಿ ಹೆಚ್ಚು ಮಂದಿ ಮಹಿಳೆಯರೇ ಇದ್ದಾರೆ. ತಕ್ಷಣ ಪೊಲೀಸರು ಬಾರದೆ ಇದ್ದರೆ ನನಗೆ ಬೇರೆ ರೀತಿಯ ತೊಂದರೆಯಾಗುತ್ತಿದ್ದವು ಎಂದು ಸಂತ್ರಸ್ತರು ಮಾಹಿತಿ ನೀಡಿದ್ದಾರೆ.
4
+ ಕೋವಿಡ್ ಹೆಚ್ಚಳ ; ಮುಂಜಾಗ್ರತಾ ಕ್ರಮ ಸಿಎಂ ಸಿದ್ದರಾಮಯ್ಯ ಸೂಚನೆ
5
+ ಬೆಳಿಗ್ಗೆ ಮಾಹಿತಿ ನನಗೆ ತಿಳಿಯುತ್ತಿದ್ದಂತೆ ನಾನು ಸಂತ್ರಸ್ತೆಯನ್ನು ಭೇಟಿ ಮಾಡಿ ಸರ್ಕಾರ ನಿಮ್ಮ ಜೊತೆ ಇದೆ ಎಂದು ಆತ್ಮಸ್ಥೈರ್ಯ ತುಂಬಿದ್ದೇನೆ. ಘಟನೆಯ ಸ್ಥಳಕ್ಕೂ ಹೋಗಿ ಮನೆ ಒಡೆದಿರುವುದು, ಸಾಮಾನು ಚೆಲ್ಲಾಡಿರುವುದು, ಕಂಬಕ್ಕೆ ಕಟ್ಟಿದ ಸ್ಥಳ ಈ ಎಲ್ಲವನ್ನೂ ವೀಕ್ಷಿಸಿ ಬಂದಿದ್ದೇನೆ. ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಿದ್ದು, ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸುವುದಾಗಿ ತಿಳಿಸಿದ್ದೇವೆ. ಬುಡಕಟ್ಟು ಸಮುದಾಯ ಅಭಿವೃದ್ಧಿ ಆಯೋಗದಿಂದ 2 ಎಕರೆ ಭೂಮಿ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
6
+ ಪ್ರೀತಿಸಿ ಓಡಿಹೋಗಿದ್ದ ಜೋಡಿಯನ್ನು ಪತ್ತೆ ಹಚ್ಚಲು ತ್ವರಿತ ಕ್ರಮ ಕೈಗೊಂಡಿತ್ತು. ಅಷ್ಟರಲ್ಲಿ ಆ ಜೋಡಿಯೇ ಪೊಲೀಸ್ ಆಯುಕ್ತರ ಬಳಿ ಬಂದಿದೆ. ಅವರಿಗೂ ತೊಂದರೆಯಾಗದಂತೆ ರಕ್ಷಣೆ ನೀಡಿದ್ದೇವೆ ಎಂದು ತಿಳಿಸಿದರು. ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ವಿರೋಧಪಕ್ಷವಾಗಿ ಅವರು ಅವರ ಕರ್ತವ್ಯ ಮಾಡುವುದಕ್ಕೆ ನಮ್ಮ ಆಕ್ಷೇಪಣೆಯಿಲ್ಲ. ಆದರೆ ಇದರಲ್ಲಿ ಸರ್ಕಾರದ ವೈಫಲ್ಯ ಎಲ್ಲಿದೆ. ಬಿಜೆಪಿಯವರು ದೆಹಲಿಯಿಂದ ನಿಯೋಗ ಬಂದ ಮೇಲಾದರೂ ಏನಾದರೂ ನೆರವು ನೀಡಿದ್ದಾರೆಯೇ. ಕೇಂದ್ರದ ಬುಡಕಟ್ಟು ಆಯೋಗದಿಂದ ಯಾವುದಾದರೂ ಸಹಾಯ ಮಾಡಿದ್ದಾರೆಯೇ, ರಾಜಕೀಯಕ್ಕಾಗಿ ಬಂದರು. ಇದರಲ್ಲಿ ಸರ್ಕಾರದ ವೈಫಲ್ಯ, ಗೃಹಸಚಿವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರೆ ಏನಾದರೂ ಪ್ರಯೋಜನವಿದೆಯೇ. ಸಂತ್ರಸ್ತರಿಗೆ ಏನು ಉಪಯೋಗವಾಯಿತು ಎಂದು ಪ್ರಶ್ನಿಸಿದರು.
7
+ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ನಡೆಸಲಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ವರದಿಯನ್ನು ಬಹಿರಂಗಪಡಿಸಿ ಎಂದು ಬಹಳಷ್ಟು ಜನ ಕೇಳುತ್ತಿದ್ದಾರೆ. ಅದನ್ನು ಅನುಷ್ಠಾನಗೊಳಿಸಿ ಎಂದು ಯಾರೂ ಕೇಳುತ್ತಿಲ್ಲ. ವರದಿಯನ್ನು ಆಧರಿಸಿ ತಕ್ಷಣ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಆದರೆ 168 ಕೋಟಿ ರೂ. ಖರ್ಚು ಮಾಡಿರುವ ವರದಿಯನ್ನೇ ಬಹಿರಂಗ ಪಡಿಸಬಾರದು ಎಂದು ಹೇಳಿದರೆ ಅದು ಸರಿಯಲ್ಲ. ವರದಿಯಿಂದ ಯಾರು ಎಷ್ಟು ಜನಸಂಖ್ಯೆಯಲ್ಲಿದ್ದಾರೆ ಎಂದು ತಿಳಿಯಲಿದೆ. ಅದರ ಆಧಾರದ ಮೇಲೆ ಸ್ಥಾನಮಾನಗಳ ಹಂಚಿಕೆಯೂ ಆಗಲಿದೆ. ವರದಿಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.
8
+ ಸಂಸತ್‍ನ ಭದ್ರತಾ ಲೋಪ : ಕೊನೆಗೂ ಮೌನ ಮುರಿದ ಮೋದಿ
9
+ ವರದಿ ಜಾರಿಯಿಂದಾಗುವ ಅಡ್ಡಪರಿಣಾಮಗಳ ವಿರುದ್ಧ ಪ್ರತಿಭಟನೆ ಮಾಡುವುದಾದರೆ ಸ್ವಾಗತಿಸಬಹುದು. ಆದರೆ ಸರ್ಕಾರ ನಡೆಸುವ ವರದಿಯನ್ನೇ ಬಹಿರಂಗಪಡಿಸಬಾರದು ಎಂಬುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಹೇಳಿದರು. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ಶಾಲಾ ಮಕ್ಕಳನ್ನು ಶೌಚಾಲಯ ಗುಂಡಿ ಸ್ವಚ್ಛಗೊಳಿಸಲು ಬಳಕೆ ಮಾಡಿರುವುದು ಸರಿಯಲ್ಲ. ಅದಕ್ಕೆ ಸಂಬಂಧಪಟ್ಟ ಶಿಕ್ಷಕರು ಹಾಗೂ ಅಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ನಾವು ಒತ್ತಾಯಿಸುತ್ತೇವೆ. ಪೊಲೀಸರಿಗೆ ದೂರು ನೀಡಿದರೆ ಮುಂದಿನ ಕ್ರಮ ಜರುಗಿಸುತ್ತೇವೆ ಎಂದರು.
eesanje/url_46_286_1.txt ADDED
@@ -0,0 +1,5 @@
 
 
 
 
 
 
1
+ ಸ್ಯಾಂಡಲ್‍ವುಡ್‍ನ ಕೆಲ ನಟ-ನಟಿಯರಿಗೆ ಡ್ರಗ್ಸ್ ಪೆಡ್ಲರ್‌ಗಳ ಜೊತೆ ನಂಟು
2
+ ಬೆಂಗಳೂರು,ಡಿ.17- ಸ್ಯಾಂಡಲ್‍ವುಡ್‍ನ ಕೆಲ ನಟ-ನಟಿಯರಿಗೆ ಡ್ರಗ್ಸ್ ಪೆಡ್ಲರ್‍ಗಳ ಜೊತೆ ನಂಟಿರುವ ಬಗ್ಗೆ ಸಿಸಿಬಿ ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಕಳೆದ ವಾರ ಆಫ್ರಿಕಾ ಮೂಲದ ಡ್ರಗ್ ಪೆಡ್ಲರ್ ಲಿಯೋನಾರ್ಡ್ ಎಂಬಾತನನ್ನು ಬಂಧಿಸಿ 21 ಕೋಟಿ ರೂ. ಮೌಲ್ಯದ ಡ್ರಗ್ಸ್‍ನ್ನು ವಶಕ್ಕೆ ಪಡೆದು ಸಿಸಿಬಿ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದಾಗ, ಸ್ಪೋಟ ಮಾಹಿತಿ ಹೊರಬಿದ್ದಿದ್ದು, ಪೆಡ್ಲರ್ ಜೊತೆ ಕನ್ನಡದ ನಟ-ನಟಿ ಹಾಗೂ ಕಿರುತೆರೆ ಕಲಾವಿದರ ಸಂಪರ್ಕ ಇರುವ ಬಗ್ಗೆ ತಿಳಿದುಬಂದಿದೆ.
3
+ ಕಳೆದ ಮೂರು ವರ್ಷಗಳ ಹಿಂದೆ ಡ್ರಗ್ಸ್ ಪ್ರಕರಣವೊಂದರಲ್ಲಿ ಕನ್ನಡದ ಖ್ಯಾತ ನಟಿ ಸೇರಿದಂತೆ ಹಲವರನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದರು. ಇದೀಗ ಮತ್ತೆ ನಗರ ಪೊಲೀಸರು ಸ್ಯಾಂಡಲ್‍ವುಡ್ ತಾರೆಯರ ಮೇಲೆ ಕಣ್ಣಿಟ್ಟಿದ್ದಾರೆ. ಆರೋಪಿಯನ್ನು ಮತ್ತಷ್ಟು ವಿಚಾರಣೆಗೊಳಪಡಿಸಿರುವ ಸಿಸಿಬಿ ಪೆಪೊಲೀಸರು, ಯಾರೆಲ್ಲ ಜೊತೆ ವ್ಯವಹಾರ ನಡೆಸಿದ್ದಾರೆ, ಅವರಿಗೆಲ್ಲ ಯಾವ ರೀತಿ ಡ್ರಗ್ಸ್ ಸರಬರಾಜು ಆಗುತ್ತಿತ್ತು ಎಂಬ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.
4
+ ಮಲಗುಂಡಿ ಸ್ವಚ್ಛತೆಗೆ ಮಕ್ಕಳ ಬಳಕೆ : ಪ್ರಾಂಶುಪಾಲೆ, ವಾರ್ಡನ್, ಡಿ ಗ್ರೂಪ್ ನೌಕರರ ಅಮಾನತು
5
+ ಪೊಲೀಸರ ಹದ್ದಿನ ಕಣ್ಣು:ಹೊಸ ವರ್ಷಾಚರಣೆಗೆ ದಿನಗಣನೆ ಆರಂಭವಾಗಿದ್ದು, ಈ ವೇಳೆ ಡ್ರಗ್ಸ್ ಸೇವನೆ ಮತ್ತು ಮಾರಾಟದ ಮೇಲೆ ನಿಗಾ ಇಡುವಂತೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ವಿದೇಶಿ ಪ್ರಜೆಗಳು ಹೆಚ್ಚು ವಾಸಿಸುತ್ತಿರುವ ಸ್ಥಳಗಳಲ್ಲಿ ಮುಫ್ತಿ ಕಾರ್ಯಾಚರಣೆ, ರೆಸಾರ್ಟ್, ರೇವಾ ಪಾರ್ಟಿ ನಡೆಯುವಂತಹ ಸ್ಥಳಗಳು, ಫಾರ್ಮ್‍ಹೌಸ್, ಸ್ಟಾರ್ ಹೋಟೆಲ್, ಪಬ್,ಬಾರ್‍ಗಳ ಮೇಲೆ ನಿಗಾ ಇಡಲು ಸೂಚಿಸಲಾಗಿದೆ.
eesanje/url_46_286_10.txt ADDED
@@ -0,0 +1,11 @@
 
 
 
 
 
 
 
 
 
 
 
 
1
+ ಕಾಂಗ್ರೆಸ್‌ನಲ್ಲಿ ಅಹಿಂದಾ ಫೈಟ್, ಶಕ್ತಿ ಪ್ರದರ್ಶನಕ್ಕೆ ಸಜ್ಜಾದ ಸಿದ್ದು-ಹರಿಪ್ರಸಾದ್
2
+ ಬೆಂಗಳೂರು,ಡಿ.16- ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ಹಿಂದುಳಿದ ವರ್ಗಗಳ ನಾಯಕನ ಸ್ಥಾನಕ್ಕೆ ಪೈಪೋಟಿ ತೀವ್ರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜನವರಿಯಲ್ಲಿ ಚಿತ್ರದುರ್ಗದಲ್ಲಿ ಮತ್ತೊಮ್ಮೆ ಅಹಿಂದ ಸಮಾವೇಶ ನಡೆಸಿ ಸುಮಾರು ಹತ್ತು ಲಕ್ಷ ಜನರನ್ನು ಸೇರಿಸುವ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ನ ಬಿ.ಕೆ.ಹರಿಪ್ರಸಾದ್ ಕೂಡ ಜನವರಿ ತಿಂಗಳಿನಲ್ಲೇ ಸಮಾವೇಶ ನಡೆಸುವ ಪ್ರಯತ್ನದಲ್ಲಿದ್ದಾರೆ.
3
+ ಇತ್ತೀಚೆಗೆ ನಡೆದ ಆರ್ಯ ಈಡಿಗರ ಸಮಾವೇಶದಲ್ಲಿ ಹರಿಪ್ರಸಾದ್ ಅವರನ್ನು ಕಡೆಗಣಿಸಲಾಗಿತ್ತು. ಇದಕ್ಕೆ ಸೆಡ್ಡು ಹೊಡೆಯಲು ಬಿ.ಕೆ.ಹರಿಪ್ರಸಾದ್ ಬೃಹತ್ ಸಮಾವೇಶಕ್ಕೆ ತಯಾರಿ ನಡೆಸಿದ್ದರು. ಅದಕ್ಕೂ ಮುನ್ನವೇ ಎಚ್ಚೆತ್ತುಕೊಂಡಿರುವ ಸಿದ್ದರಾಮಯ್ಯ ಅವರ ಟೀಂ ಜನವರಿಯಲ್ಲೇ ಸಮಾವೇಶಕ್ಕೆ ಸಜ್ಜುಗೊಳ್ಳುತ್ತಿದೆ.
4
+ ರಾಜಕೀಯದಲ್ಲಿ ಸಿದ್ದರಾಮಯ್ಯ ಅವರು ಕಾಲಕಾಲಕ್ಕೆ ಬೃಹತ್ ಸಮಾವೇಶಗಳ ಮೂಲಕ ತಮ್ಮ ಶಕ್ತಿ ಪ್ರದರ್ಶನ ನಡೆಸಿ ರಾಜಕೀಯ ಎದುರಾಳಿಗಳನ್ನು ಬಗ್ಗುಬಡಿದಿರುವುದು ಮೊದಲಿನಿಂದಲೂ ಕಂಡುಬರುತ್ತಿದೆ. ಅಹಿಂದ ಸಮಾವೇಶ, ಸಿದ್ದರಾಮೋತ್ಸವ ಸೇರಿದಂತೆ ಹಲವಾರು ಕಾರ್ಯಕ್ರಮಗಳು ಸಿದ್ದರಾಮಯ್ಯ ಅವರ ಬಲವರ್ಧನೆಗೆ ಕಾರಣವಾಗಿವೆ. ಲೋಕಸಭೆ ಚುನಾವಣೆಯ ನಂತರ ರಾಜಕೀಯ ವಿಪ್ಲವಗಳ ಮುನ್ಸೂಚನೆಯಿದೆ. ಕೇಂದ್ರದಲ್ಲಿ ಬಿಜೆಪಿ ಆಡಳಿತವೇ ಮರುಕಳಿಸಿದರೆ, ಕರ್ನಾಟಕದಲ್ಲಿ ಆಪರೇಷನ್ ಕಮಲ ನಡೆದು ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂಬ ಸೂಚನೆ ಇದೆ.
5
+ ತುಮಕೂರು ನೂತನ ಜಿಲ್ಲಾಧಿಕಾರಿಯಾಗಿ ಶುಭ ಕಲ್ಯಾಣ್ ಅಧಿಕಾರ ಸ್ವೀಕಾರ
6
+ ಮತ್ತೊಂದೆಡೆ ಕಾಂಗ್ರೆಸ್ನ ಆಂತರಿಕ ಒಳ ಒಪ್ಪಂದದ ಪ್ರಕಾರ ಅಕಾರ ಹಂಚಿಕೆಯಾಗಲಿದೆ ಎಂದು ಒಂದು ಬಣ ಪ್ರತಿಪಾದಿಸುತ್ತಿದೆ. ಆದರೆ ಇದನ್ನು ಅಲ್ಲಗಳೆಯುತ್ತಿರುವ ಸಿದ್ದರಾಮಯ್ಯ ಅವರ ತಂಡ ಪೂರ್ಣಾವಧಿ ಮುಖ್ಯಮಂತ್ರಿಯಾಗಲಿದ್ದಾರೆ, ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನೆ ಮಾಡುತ್ತಿದೆ.
7
+ ಇದರ ನಡುವೆ ಮೂಲ ಕಾಂಗ್ರೆಸಿಗರ ಹೆಸರಿನಲ್ಲಿ ಹರಿಪ್ರಸಾದ್, ವೀರಪ್ಪ ಮೊಯ್ಲಿ ಸೇರಿದಂತೆ ಕೆಲವು ನಾಯಕರು ಸಿದ್ದರಾಮಯ್ಯ ಅವರ ವಿರುದ್ಧ ವ್ಯಕ್ತಪಡಿಸುತ್ತಿರುವ ಅಸಹನೆ ಗುಟ್ಟಾಗಿ ಉಳಿದಿಲ್ಲ. ಇದಕ್ಕೆಲ್ಲಾ ಪ್ರತ್ಯುತ್ತರ ನೀಡುವಂತೆ ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವದ ಮಾದರಿಯಲ್ಲಿ ಚಿತ್ರದುರ್ಗದಲ್ಲಿ ಮತ್ತೊಂದು ಬೃಹತ್ ಸಮಾವೇಶವನ್ನು ನಡೆಸುವ ತಯಾರಿ ನಡೆದಿದೆ.
8
+ ಈಗಾಗಲೇ ಇದಕ್ಕೆ ಪೂರ್ವ ಸಿದ್ಧತೆಗಳು ಆರಂಭಗೊಂಡಿದ್ದು, ಹಲವಾರು ಉಪಸಮಿತಿಗಳನ್ನು ರಚಿಸಲಾಗುತ್ತಿದೆ. ಶೋಷಿತ ಸಮುದಾಯಗಳು ಅವಕಾಶ ವಂಚಿತವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಗಮನ ಸೆಳೆಯಲು ಸಮಾವೇಶ ನಡೆಸುತ್ತಿರುವುದಾಗಿ ಮುಖಂಡರು ಹೇಳುತ್ತಿದ್ದಾರೆ.
9
+ ಆದರೆ ಸಮಾವೇಶದ ಮೂಲ ಧಾತು ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬುದು ರಹಸ್ಯವೇನಲ್ಲ. ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಸಲಾದ ಸಾಮಾಜಿಕ, ಆರ್ಥಿಕ ಸಮೀಕ್ಷೆ ವರದಿಯ ಜಾರಿಗೂ ಈ ಸಮಾವೇಶ ಒತ್ತಡ ಹೇರಲಿದೆ ಎಂದು ಹೇಳಲಾಗಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಹಿಂದ ಮತಗಳನ್ನು ಕಾಂಗ್ರೆಸ್ನತ್ತ ಆಕರ್ಷಿಸುವ ನಿಟ್ಟಿನಲ್ಲಿ ಇಂತಹ ಸಮಾವೇಶಗಳು ಅನಿವಾರ್ಯ ಎಂಬ ಸಮರ್ಥನೆ ಕೇಳಿಬರುತ್ತಿವೆ.
10
+ ಐಎನ್‍ಎಸ್ ಸುದ್ದಿಸಂಸ್ಥೆಯ ಷೇರು ಖರೀದಿಸಿದ ಅದಾನಿ
11
+ ಆದರೆ ಇದಕ್ಕೆ ಎದುರೇಟು ಎಂಬಂತೆ ಬಿ.ಕೆ.ಹರಿಪ್ರಸಾದ್ ನೇತೃತ್ವದಲ್ಲಿ ಸಿದ್ದರಾಮಯ್ಯ ಅವರ ವಿರೋಧಿ ಬಣವೂ ಕೂಡ ಸಮಾವೇಶ ಮಾಡಲು ಮುಂದಾಗಿರುವುದು ರಾಜಕೀಯವಾಗಿ ಚರ್ಚೆಗೆ ಗ್ರಾಸವಾಗಿದೆ.
eesanje/url_46_286_11.txt ADDED
@@ -0,0 +1,9 @@
 
 
 
 
 
 
 
 
 
 
1
+ 64ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ಮಾಜಿ ಸಿಎಂ ಹೆಚ್ಡಿಕೆ
2
+ ಬೆಂಗಳೂರು, ಡಿ.16- ಜೆಡಿಎಸ್ ರಾಜ್ಯಾಧ್ಯಕ್ಷರಾದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಇಂದು 64ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ತಮ್ಮ ಜನ್ಮದಿನದ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಸಿಂಗಾಪುರ ಪ್ರವಾಸ ಕೈಗೊಂಡಿದ್ದಾರೆ. ವಿದೇಶ ಪ್ರವಾಸದಲ್ಲಿರುವ ಕುಮಾರಸ್ವಾಮಿ ಅವರಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಹಲವು ಗಣ್ಯರು ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
3
+ ಪಕ್ಷದ ಕಾರ್ಯಕರ್ತರು, ಮುಖಂಡರು, ಹಿತೈಷಿಗಳು ಯಾರೂ ಹುಟ್ಟುಹಬ್ಬದ ಶುಭಕೋರಲು ತಮ್ಮ ಮನೆಗೆ ಬರುವುದು ಬೇಡ. ಹುಟ್ಟುಹಬ್ಬದ ಸಂದರ್ಭದಲ್ಲಿ ತಾವು ಲಭ್ಯವಿರುವುದಿಲ್ಲ. ತಾವಿದ್ದಲ್ಲಿಂದಲೇ ಶುಭಾಶಯ ಕೋರಿ ಎಂದು ಕುಮಾರಸ್ವಾಮಿ ಅವರು, ಸಾಮಾಜಿಕ ಮಾಧ್ಯಮ ಎಕ್ಸ್‍ನಲ್ಲಿ ಪೋಸ್ಟ್ ಮಾಡಿ ಮನವಿ ಮಾಡಿದ್ದರು.
4
+ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಭಗವಂತ ನಿಮಗೆ ಉತ್ತಮ ಆರೋಗ್ಯ, ಆಯುಷ್ಯ ಕರುಣಿಸಿ, ಸುದೀರ್ಘ ಅವಧಿ ಜನಸೇವೆ ಮಾಡುವ ಅವಕಾಶವನ್ನು ನೀಡಲಿ ಎಂದು ಹಾರೈಸಿದ್ದಾರೆ.
5
+ ತುಮಕೂರು ನೂತನ ಜಿಲ್ಲಾಧಿಕಾರಿಯಾಗಿ ಶುಭ ಕಲ್ಯಾಣ್ ಅಧಿಕಾರ ಸ್ವೀಕಾರ
6
+ ಕುಮಾರಸ್ವಾಮಿ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು, ಎನ್‍ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಗೊಂಡು ರಾಷ್ಟ್ರ ಹಿತಾಸಕ್ತಿಗಾಗಿ ಕೈ ಜೋಡಿಸಿರುವ ನಿಮಗೆ ದೇವರು ಉತ್ತಮ ಆಯುರಾರೋಗ್ಯ ಕರುಣಿಸಿ ಸಾರ್ವಜನಿಕ ಜೀವನದಲ್ಲಿ ಇನ್ನೂ ಹೆಚ್ಚಿನ ಜನಸೇವೆ ಮಾಡುವ ಶಕ್ತಿಯನ್ನು ಕರುಣಿಸಲಿ ಎಂದು ಹಾರೈಸಿದ್ದಾರೆ.
7
+ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ಅಂಗವಾಗಿ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಿ ಅನ್ನದಾನ ಮಾಡಿದರು. ಅಲ್ಲದೆ, ಬೆಂಗಳೂರಿನ ಮಲ್ಲೇಶ್ವರದಲ್ಲಿ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸಿದ್ದರು.
8
+ ಐಎನ್‍ಎಸ್ ಸುದ್ದಿಸಂಸ್ಥೆಯ ಷೇರು ಖರೀದಿಸಿದ ಅದಾನಿ
9
+ ಮಾಜಿ ಸಚಿವ ಸಾ.ರಾ.ಮಹೇಶ್, ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ಬೆಂಗಳೂರು ಮಹಾನಗರ ಜೆಡಿಎಸ್ ಅಧ್ಯಕ್ಷ ರಮೇಶ್‍ಗೌಡ ಅವರು ಸಹ ಕುಮಾರಸ್ವಾಮಿ ಅವರೊಂದಿಗೆ ಸಿಂಗಾಪುರ ಪ್ರವಾಸಕ್ಕೆ ತೆರಳಿದ್ದಾರೆ. ಪ್ರವಾಸ ಮುಗಿಸಿ ಕುಮಾರಸ್ವಾಮಿ ಅವರು ಡಿ.18ರಂದು ನಗರಕ್ಕೆ ಮರಳುವ ನಿರೀಕ್ಷೆ ಇದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
eesanje/url_46_286_12.txt ADDED
@@ -0,0 +1,7 @@
 
 
 
 
 
 
 
 
1
+ ಸಕ್ಕರೆ ಕಾರ್ಖಾನೆ ಖಾಸಗಿ ಗುತ್ತಿಗೆ ಕುರಿತು ಪರಿಶೀಲನೆ : ಸಚಿವ ಶಿವಾನಂದ ಪಾಟೀಲ್
2
+ ಬೆಂಗಳೂರು,ಡಿ.16- ಆರ್ಥಿಕವಾಗಿ ನಷ್ಟದಲ್ಲಿರುವ ಹಾಗೂ ಆಡಳಿತಾತ್ಮಕ ಕಾರಣಗಳಿಂದ ಸ್ಥಗಿತಗೊಂಡಿರುವ ಸಹಕಾರಿ ಸಕ್ಕರೆ ಕಾರ್ಖಾನೆಗಳಲ್ಲಿ ದೀರ್ಘಾವಧಿಯ ಆಧಾರದ ಮೇಲೆ ಖಾಸಗಿಯವರಿಗೆ ಗುತ್ತಿಗೆ ನೀಡಿ ಪುನಶ್ಚೇತನಗೊಳಿಸಲು ಪರಿಶೀಲಿಸಲಾಗಿದೆ ಎಂದು ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವ ಶಿವಾನಂದ ಎಸ್.ಪಾಟೀಲ್ ತಿಳಿಸಿದ್ದಾರೆ.
3
+ ಭೈಲಹೊಂಗಲ ಕ್ಷೇತ್ರದ ಶಾಸಕ ಮಹಂತೇಶ್ ಕೌಜಲಗಿ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ರಾಜ್ಯದಲ್ಲಿ 93 ನೋಂದಾಯಿತ ಸಕ್ಕರೆ ಕಾರ್ಖಾನೆಗಳಿದ್ದವು. ಅವುಗಳಲ್ಲಿ 76 ಕಾರ್ಯನಿರತವಾಗಿವೆ. 12 ಸ್ಥಗಿತಗೊಂಡಿವೆ. 5 ಮುಚ್ಚಿ ಹೋಗಿವೆ ಎಂದು ಸಚಿವರು ತಿಳಿಸಿದ್ದಾರೆ. ಸಾರ್ವಜನಿಕ ವಲಯದಲ್ಲಿ 1 ಕಾರ್ಖಾನೆ ಕಾರ್ಯನಿರತವಾಗಿದ್ದರೆ, ಮತ್ತೊಂದು ಸ್ಥಗಿತಗೊಂಡಿದೆ. ಇನ್ನೊಂದು ಕಾರ್ಖಾನೆಯನ್ನು ಪೂರ್ಣವಾಗಿ ಮುಚ್ಚಲಾಗಿದೆ. ಸಹಕಾರಿ ವಲಯದಲ್ಲಿ 13 ಕಾರ್ಖಾನೆಗಳು ಕಾರ್ಯನಿರತವಾಗಿದ್ದರೆ 4 ಮುಚ್ಚಿವೆ, ಇನ್ನೂ 4 ಸ್ಥಗಿತಗೊಂಡಿವೆ.
4
+ ಸಹಕಾರಿ ವಲಯದಲ್ಲಿ 9 ಕಾರ್ಖಾನೆಗಳನ್ನು ಗುತ್ತಿಗೆ ಆಧಾರದ ಮೇಲೆ ನೀಡಲಾಗಿದೆ. ಅಷ್ಟೂ ಚಾಲನೆಯಲ್ಲಿವೆ. ಖಾಸಗಿ ವಲಯದ 60 ಕಾರ್ಖಾನೆಗಳಲ್ಲಿ 53 ಚಾಲ್ತಿಯಲ್ಲಿದ್ದರೆ, 7 ಸ್ಥಗಿತಗೊಂಡಿವೆ ಎಂದು ಸಚಿವರು ವಿವರಿಸಿದ್ದಾರೆ.
5
+ ಐಎನ್‍ಎಸ್ ಸುದ್ದಿಸಂಸ್ಥೆಯ ಷೇರು ಖರೀದಿಸಿದ ಅದಾನಿ
6
+ ಮಂಡ್ಯದ ದಿ ಮೈ ಶುಗರ್ಸ್ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ರಾಜ್ಯಸರ್ಕಾರ 2020-21 ರಲ್ಲಿ 20.80 ಕೋಟಿ, ಪ್ರಸಕ್ತ ಸಾಲಿನಲ್ಲಿ 72.58 ಕೋಟಿ ಸೇರಿ 93.38 ಕೋಟಿ ರೂ.ಗಳನ್ನು ನೀಡಿದೆ. 2021-22 ನೇ ಸಾಲಿನಲ್ಲಿ ಯಾವುದೇ ಹಣ ನೀಡಿಲ್ಲ. 1933 ರಲ್ಲಿ ಸ್ಥಾಪಿಸಲಾದ ಈ ಕಾರ್ಖಾನೆ ಪ್ರಸ್ತುತ ರಾಜ್ಯಸರ್ಕಾರದ ಅೀಧಿನದಲ್ಲಿರುವ ಸಾರ್ವಜನಿಕ ಉದ್ಯಮವಾಗಿದೆ. ರಾಜ್ಯಸರ್ಕಾರ ಶೇ.89.39 ರಷ್ಟು ಷೇರುಗಳನ್ನು ಹೊಂದಿದೆ. ಕಂಪನಿಯ ಯಂತ್ರೋಪಕರಣಗಳ ವಿತರಣೆ, ಆಧುನೀಕರಣ, ದುಡಿಯುವ ಬಂಡವಾಳ ಮತ್ತು ನೌಕರರ ವೇತನ ಭತ್ಯೆಗಳಿಗೆ ರಾಜ್ಯಸರ್ಕಾರ ಕಾಲಕಾಲಕ್ಕೆ ಷೇರು, ಸಾಲ ಮತ್ತು ಸಹಾಯಧನದ ರೂಪದಲ್ಲಿ ಆರ್ಥಿಕ ನೆರವು ಒದಗಿಸುತ್ತಿದೆ ಎಂದು ಹೇಳಿದ್ದಾರೆ.
7
+ ಸಹಕಾರಿ ತಳಹದಿಯ ಮೇಲೆ ನಡೆಯುತ್ತಿರುವ ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಸಿದ್ದಸಮುದ್ರದಲ್ಲಿನ ಶ್ರೀ ಸೋಮೇಶ್ವರ ಸಕ್ಕರೆ ಕಾರ್ಖಾನೆ 137.05 ಕೋಟಿ, ಬೈಲಹೊಂಗಲದ ಎಂ.ಕೆ.ಹುಬ್ಬಳ್ಳಿಯ ಶ್ರೀ ಮಲ್ಲಪ್ರಭ ಸಹಕಾರಿ ಸಕ್ಕರೆ ಕಾರ್ಖಾನೆ 146 ಕೋಟಿ, ಕಾಕತೀಯ ಶ್ರೀ ಮಾರ್ಕಂಡೇಯ ಸಕ್ಕರೆ ಕಾರ್ಖಾನೆ 112.43 ಕೋಟಿ ರೂ.ಗಳ ನಷ್ಟದಲ್ಲಿದೆ. ಕಬ್ಬು ಬೆಳೆಗಾರರ ರೈತರ ಮತ್ತು ಕಾರ್ಮಿಕರ ಹಿತದೃಷ್ಟಿಯಿಂದ ನಷ್ಟದಲ್ಲಿರುವ ಕಾರ್ಖಾನೆಯನ್ನು ಗುತ್ತಿಗೆ ಆಧಾರದ ಮೇಲೆ ಖಾಸಗಿಯವರಿಗೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
eesanje/url_46_286_2.txt ADDED
@@ -0,0 +1,6 @@
 
 
 
 
 
 
 
1
+ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ, ರಾಜ್ಯದಲ್ಲಿ ಹಗುರ ಮಳೆ
2
+ ಬೆಂಗಳೂರು,ಡಿ.17- ಬಂಗಾಳಕೊಲ್ಲಿಯಲ್ಲಿ ಲಘು ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ರಾಜ್ಯದಲ್ಲಿ ಮೋಡ ಕವಿದ ವಾತಾವರಣ ಕಂಡುಬಂದಿದೆ. ಆದರೆ ಭಾರೀ ಮಳೆಯಾಗುವ ಲಕ್ಷಣ ಗೋಚರಿಸುತ್ತಿಲ್ಲ. ಒಂದೆರೆಡು ಕಡೆ ಚದುರಿದಂತೆ ಹಗುರ ಮಳೆಯಾಗುವ ನಿರೀಕ್ಷೆಯಿದೆ. ರಾಜ್ಯಾದ್ಯಂತ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಆಗಾಗ್ಗೆ ತಂಪಾದ ಮೇಲ್ಮೈ ಗಾಳಿ ಬೀಸುತ್ತಿದೆ.
3
+ ಇದರಿಂದ ಚಳಿ ಅನುಭವ ಹೆಚ್ಚಾಗಿ ಕಂಡುಬರುತ್ತಿದೆ. ಅಲ್ಲದೆ, ಬಹಳಷ್ಟು ಕಡೆ ಸಂಜೆ ಹಾಗೂ ಬೆಳಿಗ್ಗೆ ಹೆಚ್ಚಿನ ಪ್ರಮಾಣದಲ್ಲಿ ಇಬ್ಬನಿ ಬೀಳುತ್ತಿದೆ. ಉತ್ತರ ಕರ್ನಾಟಕ ಸೇರಿದಂತೆ ಕೆಲವೆಡೆ ಬೆಳಗಿನ ಜಾವ ದಟ್ಟವಾದ ಮಂಜು ಮುಸುಕಿದ ವಾತಾವರಣ ಕಂಡುಬರುತ್ತಿದೆ.
4
+ ವಾಯುಭಾರ ಕುಸಿತದ ಪರಿಣಾಮದಿಂದ ದಕ್ಷಿಣ ಒಳನಾಡು ಸೇರಿದಂತೆ ರಾಜ್ಯದ ಹಲವೆಡೆ ಮೋಡ ಕವಿದ ವಾತಾವರಣವಿರುವುದರಿಂದ ಮಬ್ಬು ಕವಿದ ವಾತಾವರಣ ಸೃಷ್ಟಿಯಾಗಿದೆ. ಆದರೆ ತಮಿಳುನಾಡಿನ ದಕ್ಷಿಣ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಭಾರೀ ಪ್ರಮಾಣದ ಮಳೆಯಾಗುತ್ತಿದೆ ಎಂದು ಹವಾಮಾನ ತಜ್ಞರು ತಿಳಿಸಿದರು.
5
+ ಸಂಸತ್‍ನ ಭದ್ರತಾ ಲೋಪ : ಕೊನೆಗೂ ಮೌನ ಮುರಿದ ಮೋದಿ
6
+ ಕಳೆದ ಮೂರ್ನಾಲ್ಕು ದಿನಗಳಿಂದ ಮೋಡ ಕವಿದ ವಾತಾವರಣ ಇರುವುದರಿಂದ ಕನಿಷ್ಟ ತಾಪಮಾನದಲ್ಲೂ ಗಣನೀಯವಾಗಿ ಇಳಿಕೆಯಾಗಿದೆ. 14 ಡಿಗ್ರಿ ಸೆಲ್ಶಿಯಸ್‍ನಿಂದ 18 ಡಿಗ್ರಿ ಸೆಲ್ಶಿಯಸ್ ಕನಿಷ್ಟ ತಾಪಮಾನ ದಾಖಲಾಗುತ್ತಿದೆ. ಹಗಲಿನಲ್ಲಿ ಬಿಸಲು ಇಲ್ಲದಿರುವ ಹಾಗೂ ತಂಪಾದ ಮೇಲ್ಮೈ ಗಾಳಿ ಬೀಸುವುದರಿಂದ ಹೆಚ್ಚು ಚಳಿಯಾಗುತ್ತದೆ. ಸಂಕ್ರಾಂತಿ ಹಬ್ಬದವರೆಗೂ ಇದೇ ರೀತಿ ಚಳಿಯ ವಾತಾವರಣ ಹೆಚ್ಚಾಗಿ ಕಂಡುಬರಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.
eesanje/url_46_286_3.txt ADDED
@@ -0,0 +1,13 @@
 
 
 
 
 
 
 
 
 
 
 
 
 
 
1
+ ಕೋವಿಡ್ ಹೆಚ್ಚಳ ; ಮುಂಜಾಗ್ರತಾ ಕ್ರಮ ಸಿಎಂ ಸಿದ್ದರಾಮಯ್ಯ ಸೂಚನೆ
2
+ ಬೆಂಗಳೂರು,ಡಿ.17- ನೆರೆಯ ರಾಜ್ಯ ಕೇರಳದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ನಿನ್ನೆ ತಾವು ಆರೋಗ್ಯ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರೊಂದಿಗೆ ಚರ್ಚೆ ನಡೆಸಿದ್ದು, ಸಭೆ ನಡೆಸುವಂತೆ ಸೂಚನೆ ನೀಡಿದ್ದೆ. ಆರೋಗ್ಯ ಕ್ಷೇತ್ರದ ತಜ್ಞರೊಂದಿಗೆ ಚರ್ಚೆ ನಡೆಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಸಲಹೆ ನೀಡಲಾಗಿದೆ. ಅದರಂತೆ ಅವರು ಸಭೆ ನಡೆಸಿದ್ದಾರೆ. ಇಂದು ಆರೋಗ್ಯ ಸಚಿವರ ಜೊತೆ ಮಾತನಾಡಲು ಸಾಧ್ಯವಾಗಿಲ್ಲ. ಕೋವಿಡ್ ನಿಯಂತ್ರಣಕ್ಕೆ ಅಗತ್ಯವಾದ ಎಲ್ಲಾ ಕ್ರಮಗಳನ್ನೂ ಹಾಗೂ ಮುಂಜಾಗ್ರತೆಯನ್ನು ರಾಜ್ಯಸರ್ಕಾರ ವಹಿಸಲಿದೆ ಎಂದು ಸ್ಪಷ್ಟಪಡಿಸಿದರು.
3
+ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಂಡಿದೆ. ಪಕ್ಷದ ಶಾಸಕರು, ಕಾಂಗ್ರೆಸ್ ಅಭ್ಯರ್ಥಿಗಳಾಗಿದ್ದವರು , ಕಾರ್ಯಕರ್ತರು ಹೇಳಿದವರಿಗೆ ಟಿಕೆಟ್ ನೀಡಿದ್ದೇವೆ. ಪ್ರತೀ ಜಿಲ್ಲೆಗೂ ಒಬ್ಬೊಬ್ಬ ಸಚಿವರನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ. ಅವರು ಸಭೆ ನಡೆಸಿ ಮೂರು ಜನರ ಹೆಸರನ್ನು ಸೂಚಿಸಲಿದ್ದಾರೆ. ಅವರಲ್ಲಿ ಯಾರು ಮುಖ್ಯ ಹಾಗೂ ಸೂಕ್ತ ಎಂಬುದನ್ನು ಚರ್ಚಿಸಿ ಆಯ್ಕೆ ಮಾಡುತ್ತೇವೆ ಎಂದು ಹೇಳಿದರು.
4
+ ಅಲ್ಪಸಂಖ್ಯಾತರು ಮೂರು ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಕಾಂಗ್ರೆಸ್ ಈ ಹಿಂದೆ ನಾವು ಅವರಿಗೆ ಎರಡು ಕ್ಷೇತ್ರಗಳಲ್ಲಿ ಟಿಕೆಟ್ ನೀಡಿದ್ದೇವೆ. ಈ ಚುನಾವಣೆಯಲ್ಲೂ ಅವಕಾಶ ಕಲ್ಪಿಸುತ್ತೇವೆ. ಬಿಜೆಪಿಯವರು ಏನು ಮಾಡುತ್ತಾರೆ, ಅಲ್ಪಸಂಖ್ಯಾತರ ಮತವೇ ಬೇಡ ಎಂದು ಹೇಳುತ್ತಿದ್ದಾರೆ. ಅವರೇನು ಭಾರೀಯ ಪ್ರಜೆಗಳಲ್ಲವೇ ಎಂದು ಪ್ರಶ್ನಿಸಿದರು.
5
+ ಬಿಜೆಪಿ ಶಾಸಕ ಯತ್ನಾಳ್ ಗಡ್ಡ ಬಿಟ್ಟಿರುವವರು, ಬುರ್ಖಾ ಹಾಕಿರುವವರು ಬರಬೇಡಿ, ನಾನು ಭೇಟಿ ಮಾಡುವುದಿಲ್ಲ ಎನ್ನುತ್ತಾರೆ. ಬಿಜೆಪಿ ಬಹುತ್ವದ ಪಕ್ಷ ಅಲ್ಲ. ಭಾರತ ಬಹುತ್ವವನ್ನು ಒಪ್ಪಿಕೊಂಡಿದೆ. ದೇಶದಲ್ಲಿರುವ ಎಲ್ಲರೂ ಪ್ರಜೆಗಳೇ. ಎಲ್ಲರ ರಕ್ಷಣೆ ನಮ್ಮ ಹೊಣೆ ಎಂದು ಹೇಳಿದರು.
6
+ ತಾವು ಹುಬ್ಬಳ್ಳಿಯ ಮೌಲ್ವಿಗಳ ಸಮಾವೇಶದಲ್ಲಿ ಭಾಗವಹಿಸಿದ್ದನ್ನು ಬಸನಗೌಡ ಪಾಟೀಲ್ ಯತ್ನಾಳ್ ಟೀಕಿಸುತ್ತಿರುವುದು ಸಂಪೂರ್ಣ ವೈಯಕ್ತಿಕ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಲ್ಪಸಂಖ್ಯಾತ ನಾಯಕರು ಯತ್ನಾಳ್ ಅವರನ್ನು ಸೋಲಿಸಲು ಸಕ್ರಿಯವಾಗಿ ಕೆಲಸ ಮಾಡಿದರು. ಆ ಸಿಟ್ಟಿಗೆ ಯತ್ನಾಳ್ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು.
7
+ ಬೆಳಗಾವಿಯ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯಸರ್ಕಾರ ಈಗಾಗಲೇ ಕಠಿಣ ಕ್ರಮ ಕೈಗೊಂಡಿದೆ. ಆರೋಪಿಗಳನ್ನು ಬಂಸ��ಾಗಿದೆ. ಆದರೆ ಬಿಜೆಪಿಯ ನಾಯಕರು ದುರುದ್ದೇಶಪೂರಕವಾಗಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಘಟನೆಯ ಬಗ್ಗೆ ರಾಹುಲ್‍ಗಾಂಯವರು ಹೇಳಿಕೆ ನೀಡಬೇಕೆಂಬ ಬಿಜೆಪಿಯವರ ವಾದ ಅಪ್ರಸ್ತುತ.
8
+ ವಿಮಾನನಿಲ್ದಾಣದಲ್ಲಿ ತಾವು ಇಳಿಯುತ್ತಿದ್ದಂತೆ ಘಟನೆ ಬಗ್ಗೆ ಮಾಹಿತಿ ದೊರೆಯಿತು. ತಕ್ಷಣವೇ ಸರ್ಕಾರ ಬಿಗಿ ಕ್ರಮಗಳನ್ನು ಕೈಗೊಂಡಿದೆ. ಗೃಹಸಚಿವ ಪರಮೇಶ್ವರ್ ಅವರನ್ನು ಸ್ಥಳಕ್ಕೆ ಕಳುಹಿಸಿ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಲಾಯಿತು. ಸರ್ಕಾರ ಯಾವುದೇ ಹಂತದಲ್ಲೂ ವೈಫಲ್ಯವಾಗಿಲ್ಲ ಎಂದರು.
9
+ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಶಾಸಕ 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಆತನಿಗೆ ನಿನ್ನೆಯಷ್ಟೇ 25 ವರ್ಷ ಜೈಲುಶಿಕ್ಷೆಯಾಗಿದೆ. ಅಂತವರನ್ನು ಪಕ್ಷದಲ್ಲಿ ಉಳಿಸಿಕೊಂಡಿರುವ ಬಿಜೆಪಿಯವರಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕ ಹಕ್ಕಿದೆಯೇ. ಬಿಜೆಪಿಯ ರಾಜಕೀಯ ಅಧ್ಯಕ್ಷ ದೆಹಲಿಯಿಂದ ಸಂಸದರ ತಂಡ ಕಳುಹಿಸಿದ್ದಾರೆ. ಹೆಣ್ಣು ಮಕ್ಕಳ ದೌರ್ಜನ್ಯ ಮಾಡುವ ಬಿಜೆಪಿಯವರು ನಮ್ಮ ಪಕ್ಷದವರ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ ಎಂದು ಆಕ್ರೋಶ ವ್ಯಕ್ತಪಡಿಸಿದರು.
10
+ ಪ್ರಧಾನಿ ಕಚೇರಿಯ ಅಧಿಕಾರಿ ಎಂದು ವಂಚಿಸುತ್ತಿದ್ದ ವ್ಯಕ್ತಿಯ ಬಂಧನ
11
+ ಕೋಲಾರದ ಮಾಲೂರಿನಲ್ಲಿ ಪರಿಶಿಷ್ಟ ಜಾತಿಯ ಇಬ್ಬರು ಮಕ್ಕಳನ್ನು ಮಲದ ಗುಂಡಿಗೆ ಇಳಿಸಿದ ಬಗ್ಗೆ ಈಗಷ್ಟೇ ಸುದ್ದಿ ಬಂದಿದೆ. ಸಂಪೂರ್ಣ ವರದಿ ಪಡೆದುಕೊಂಡು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು. ಎನ್‍ಸಿಆರ್‍ಬಿ ಪ್ರಕಾರ ಯಾರ ಆಡಳಿತದಲ್ಲಿ ಹೆಣ್ಣು ಮಕ್ಕಳು, ಮಕ್ಕಳ ಮೇಲೆ ಹೆಚ್ಚು ದೌರ್ಜನ್ಯಗಳಾಗಿವೆ ಎಂಬುದನ್ನು ಕಣ್ತೆರೆದು ನೋಡಲಿ. ಬಿಜೆಪಿ ಮಕ್ಕಳ ಮತ್ತು ಮಹಿಳೆಯರ ಮೇಲೆ ದೌರ್ಜನ್ಯವೆಸಗುವ ಪಕ್ಷ ಎಂದು ಆರೋಪಿಸಿದರು.
12
+ ಬಿಜೆಪಿಯವರು ದುರುದ್ದೇಶಪೂರಕವಾದಂತಹ ರಾಜಕೀಯ ಮಾಡುತ್ತಾರೆ. ನಮ್ಮ ಸರ್ಕಾರ ಯಾರ ಮೇಲೆ ದೌರ್ಜನ್ಯ ನಡೆದರೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತದೆ. ಎಲ್ಲರಿಗೂ ರಕ್ಷಣೆ ನೀಡುವುದು ನಮ್ಮ ಹೊಣೆಗಾರಿಕೆ. ಅದರಲ್ಲೂ ಮಹಿಳೆಯನ್ನು ವಿವಸ್ತ್ರಗೊಳಿಸುವುದು , ಕಂಬಕ್ಕೆ ಕಟ್ಟಿಹಾಕಿ ಹೊಡೆಯುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಘಟನೆ. ಕಾನೂನು ಮೀರುವವರನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
13
+ ಹಿಂದುಳಿದ ವರ್ಗಗಳ ಆಯೋಗದ ವರದಿಯಲ್ಲಿರುವ ಅಂಶಗಳ ಬಗ್ಗೆ ಊಹೆಗಳ ಆಧಾರದ ಮೇಲೆ ಆಕ್ಷೇಪ ವ್ಯಕ್ತಪಡಿಸುವುದು ಸರಿಯಲ್ಲ. ವರದಿಯಲ್ಲಿಯೇನಿದೆ ಎಂದು ಯಾರಿಗೂ ಗೊತ್ತಿಲ್ಲ. ಈ ಹಿಂದೆ ನಮ್ಮ ಸರ್ಕಾರ ಇದ್ದಾಗಲೇ ವರದಿ ಸೋರಿಕೆಯಾಗಿದೆ ಎಂಬ ಆರೋಪಗಳಿವೆ. ಆದರೆ ಅದೆಲ್ಲಾ ಸುಳ್ಳು. ಯಾವ ಮಾಹಿತಿಯೂ ಸೋರಿಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಬರಗಾಲದ ಹಿನ್ನೆಲೆಯಲ್ಲಿ ಸಹಕಾರ ಸಂಘಗಳಲ್ಲಿ ರೈತರು ಪಡೆದಿರುವ ಸಾಲದ ಅಸಲನ್ನು ಪಾವತಿಸಿದರೆ ಬಡ್ಡಿ ಮನ್ನಾ ಮಾಡುವ ನಿರ್ಧಾರವನ್ನುನಮ್ಮ ಸರ್ಕಾರ ತೆಗೆದುಕೊಂಡಿದೆ ಎಂದು ಹೇಳಿದರು.
eesanje/url_46_286_4.txt ADDED
@@ -0,0 +1,8 @@
 
 
 
 
 
 
 
 
 
1
+ ಮಲಗುಂಡಿ ಸ್ವಚ್ಛತೆಗೆ ಮಕ್ಕಳ ಬಳಕೆ : ಪ್ರಾಂಶುಪಾಲೆ, ವಾರ್ಡನ್, ಡಿ ಗ್ರೂಪ್ ನೌಕರರ ಅಮಾನತು
2
+ ಬೆಂಗಳೂರು,ಡಿ.17- ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಯಲುವ ಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳನ್ನು ಮಲದಗುಂಡಿಗೆ ಇಳಿಸಿ ಸ್ವಚ್ಛಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಸಮಾಜ ಕಲ್ಯಾಣ ಇಲಾಖೆ ಅಮಾನತುಗೊಳಿಸಿದೆ.
3
+ ಮೊರಾರ್ಜಿ ಶಾಲೆ ಪ್ರಾಂಶುಪಾಲೆ ಭಾರತಮ್ಮ, ಶಿಕ್ಷಕ ಅಭಿಷೇಕ್, ವಾರ್ಡನ್ ಮಂಜುನಾಥ್ ಹಾಗೂ ಡಿ ಗ್ರೂಪ್ ನೌಕರರನ್ನು ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿ ತನಿಖೆಗೂ ಸೂಚನೆ ನೀಡಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಸೂಚನೆ ಮೇರೆಗೆ ಶಾಲೆಯ ಸಿಬ್ಬಂದಿಗಳನ್ನು ಇಲಾಖೆಯ ಜಂಟಿ ನಿರ್ದೇಶಕನನ್ನು ಅಮಾನತು ಮಾಡಿದ್ದಾರೆ.
4
+ ಸಂಸತ್ತಿಗೆ ನುಗ್ಗಿದವರ ಮೊಬೈಲ್ ಬಿಡಿ ಭಾಗಗಳು ರಾಜಸ್ಥಾನದಲ್ಲಿ ಪತ್ತೆ
5
+ ಅಲ್ಲದೆ ಭವಿಷ್ಯದಲ್ಲಿ ಇಂತಹ ಘಟನೆಗಳು ರಾಜ್ಯದ ಯಾವುದೇ ಸ್ಥಳಗಳಲ್ಲೂ ನಡೆಯದಂತೆ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸುತ್ತೋಲೆ ಹೊರಡಿಸುವುದಾಗಿ ಮಹದೇವಪ್ಪ ಹೇಳಿದ್ದಾರೆ.ಮಾಲೂರು ತಾಲ್ಲೂಕಿನ ಯಲುವಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳನ್ನು ಮಲದಗುಂಡಿಯೊಳಗೆ ಇಳಿಸಿ ಪ್ರಾಂಶುಪಾಲರ ಎದುರೇ ಸ್ವಚ್ಛಗೊಳಿಸಿರುವ ಘಟನೆ ಭಾರೀ ವಿವಾದವನ್ನೇ ಸೃಷ್ಟಿಸಿತ್ತು.
6
+ ಮಕ್ಕಳಿಗೆ ಇಲ್ಲಿನ ಸಿಬ್ಬಂದಿಯವರು ಕಿರುಕುಳ ನೀಡುತ್ತಿದ್ದರು. ಅನಗತ್ಯವಾಗಿ ಹೊಡೆಯುವುದು, ಕಿರುಕುಳ ನೀಡುವುದು, ರಾತ್ರಿ ಹೊತ್ತಿನಲ್ಲಿ ಬ್ಯಾಗ್ ಹೊರಿಸಿ ಹಿಂಸೆ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.ಇನ್ನು ಘಟನಾ ಸ್ಥಳಕ್ಕೆ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸ್, ಕೋಲಾರ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸೇರಿದಂತೆ ಮತ್ತಿತರರು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.
7
+ ರಾಮಮಂದಿರ ಉದ್ಘಾಟನೆ : ಅಮೆರಿಕದಲ್ಲಿನ ಹಿಂದೂ ಸಮುದಾಯದಿಂದ ಕಾರು ರ‍್ಯಾಲಿ
8
+ ಇಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 250 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಇದು ಮಲದಗುಂಡಿಯಲ್ಲ. ಸ್ವಚ್ಛತಾ ಆಂದೋಲನ ಛೇಂಬರ್ ಒಳಗೆ ಇಳಿಸಲಾಗಿದೆ ಎಂದು ಅಧಿಕಾರಿಗಳು ಕೇಳಿದ್ದಾರೆ. ಆದರೆ ಇದು ಮಲದಗುಂಡಿ ಎಂದು ವಸತಿ ಶಾಲೆಯ ಶಿಕ್ಷಕರು ಹಾಗೂ ಸ್ಥಳೀಯರು ಖಚಿತಪಡಿಸಿದ್ದಾರೆ.
eesanje/url_46_286_5.txt ADDED
@@ -0,0 +1,5 @@
 
 
 
 
 
 
1
+ ಸಿಲಿಂಡರ್ ಸ್ಫೋಟ : ಒಂದೇ ಕುಟುಂಬದ 7 ಮಂದಿಗೆ ಗಾಯ
2
+ ಬೆಳಗಾವಿ, ಡಿ.17- ಸಿಲಿಂಡರ್ ಸ್ಫೋಟಗೊಂಡು 9 ತಿಂಗಳ ಹಸುಗೂಸು ಸೇರಿದಂತೆ ಒಂದೆ ಕುಟುಂಬದ 7 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಗೋಕಾಕ್ ತಾಲೂಕಿನ ಅಕ್ಕತಂಗೇರಹಾಳ ಗ್ರಾಮದಲ್ಲಿ ರಾತ್ರಿ ನಡೆದಿದೆ.ರಾಜಶ್ರೀ ನಿರ್ವಾಣಿ (42), ಅಶೋಕ ನಿರ್ವಾಣಿ (45), ದೀಪಾ( 42), ಸೋಮನಗೌಡ (44), ನವೀನ(14), ವಿದ್ಯಾ(13) ಹಾಗೂ ಒಂಭತ್ತು ತಿಂಗಳ ಬಸವನಗೌಡ ನಿರ್ವಾಣಿ ಗಾಯಗೊಂಡ ಕುಟುಂಬ ಸದಸ್ಯರು.
3
+ ಕಳೆದ ರಾತ್ರಿ ಮನೆಯವರೆಲ್ಲ ಊಟ ಮಾಡಿ ಮಲಗಿದ್ದು, ಮಧ್ಯರಾತ್ರಿ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾದ ವಾಸನೆಯಿಂದ ಎಚ್ಚರಗೊಂಡ ಕುಟುಂಬ ಸದಸ್ಯರೊಬ್ಬರು ಮೊಬೈಲ್ ಟಾರ್ಚ್ ಆನ್ ಮಾಡಿ ಅಡುಗೆ ಮನೆಗೆ ಹೋದಾಗ ಏಕಾಏಕಿ ಸಿಲಿಂಡರ್ ಸ್ಫೋಟಗೊಂಡಿದೆ.
4
+ ಹೊಂದಾಣಿಕೆ ರಾಜಕಾರಣದ ಅನುಮಾನ, ಸೈಲೆಂಟಾಗಿ ಮುಗಿದೋಯ್ತು ಬೆಳಗಾವಿ ಅಧಿವೇಶನ
5
+ ಸ್ಫೋಟದ ರಭಸಕ್ಕೆ ಮನೆಯ ಹೆಂಚುಗಳು ಹಾರಿ ಹೋಗಿದ್ದು ಮನೆಯಲ್ಲಿದ್ದ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿವೆ. ಸ್ಫೋಟದಿಂದ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರಿಗೆ ಸ್ಥಳೀಯ ಆಸ್ಪತೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
eesanje/url_46_286_6.txt ADDED
@@ -0,0 +1,11 @@
 
 
 
 
 
 
 
 
 
 
 
 
1
+ ಹೊಂದಾಣಿಕೆ ರಾಜಕಾರಣದ ಅನುಮಾನ, ಸೈಲೆಂಟಾಗಿ ಮುಗಿದೋಯ್ತು ಬೆಳಗಾವಿ ಅಧಿವೇಶನ
2
+ ಬೆಂಗಳೂರು, ಡಿ.16- ಸುವರ್ಣ ಸೌಧದಲ್ಲಿ ಮುಕ್ತಾಯಗೊಂಡ ಚಳಿಗಾಲದ ಅಧಿವೇಶನದಲ್ಲಿ ವಿರೋಧಪಕ್ಷಗಳ ಸಹಿಷ್ಣತೆ, ಕಾಂಗ್ರೆಸ್ನ ಅಬ್ಬರ ಎದ್ದುಕಾಣುತ್ತಿದ್ದು, ರಾಜಕೀಯ ಹೊಂದಾಣಿಕೆಯ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕಳೆದ ಆರು ತಿಂಗಳಿನಿಂದಲೂ ವಿರೋಧ ಪಕ್ಷದ ನಾಯಕರನ್ನು ನೇಮಿಸದೇ ಇದ್ದ ಬಿಜೆಪಿ ಕೆಲವು ದಿನಗಳ ಹಿಂದಷ್ಟೇ ವಿಧಾನಸಭೆಗೆ ಆರ್. ಅಶೋಕ್ ಅವರನ್ನು ವಿಪಕ್ಷ ನಾಯಕರನ್ನಾಗಿ ನೇಮಿಸಿತ್ತು. ಬಿಜೆಪಿಗೆ ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದೆ.
3
+ ವಿಧಾನಸಭೆ ಕಲಾಪದಲ್ಲಿ ಅಶೋಕ್ ಅವರಿಗೆ ಪಕ್ಷಭೇದ ಮರೆತು ಅಭಿನಂದನೆ ಸಲ್ಲಿಸಿದರು. ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ ಮಾತ್ರ ಇಬ್ಬರಿಗೂ ಅಭಿನಂದನೆ ಸಲ್ಲಿಸುವುದಿಲ್ಲ ಎಂದು ಹೇಳುವ ಮೂಲಕ ಸೆಟೆದು ನಿಂತರು.ನಿನ್ನೆ ನಡೆದ ಚರ್ಚೆಯಲ್ಲಿಯೂ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ರಾಜಕೀಯ ಹೊಂದಾಣಿಕೆ ಇದೆ ಎಂದು ನೇರವಾಗಿಯೇ ಆರೋಪಿಸಿದ್ದರು. ಅದಕ್ಕೆ ಪೂರಕ ಎಂಬಂತೆ ಬಿಜೆಪಿ ನಾಯಕರು ಚರ್ಚೆಯ ಪ್ರತಿ ಹಂತದಲ್ಲೂ ಮೃದು ಧೋರಣೆಯನ್ನು ಅನುಭವಿ ಸುತ್ತಿದ್ದುದು ಕಂಡುಬಂದಿತು.
4
+ ವಿಪಕ್ಷ ನಾಯಕ ಆರ್. ಅಶೋಕ್ ತಮಗೆ ಅಟಲ್ಬಿಹಾರಿ ವಾಜಪೇಯಿ ಮಾದರಿ. ನಾನು ಅವರಂತೆಯೇ ಲಕ್ಷ್ಮಣ ರೇಖೆ ದಾಟುವುದಿಲ್ಲ ಎಂದು ಸದನ ದಲ್ಲೇ ಘೋಷಣೆ ಮಾಡಿದ್ದರು. ಹತ್ತು ದಿನ ಕಲಾಪ ಪೂರ್ತಿಯಾಗಿ ಅದರಂತೆಯೇ ನಡೆದುಕೊಂಡರು.ವಿಪಕ್ಷ ನಾಯಕರಾಗಿ ಅಶೋಕ್ ಅವರ ಮೊದಲ ಅಧಿವೇಶನ ಇದಾಗಿರುವುದರಿಂದಾಗಿ ಆಕ್ರಮಣಕಾರಿಯಾದಂತಹ ಚರ್ಚೆಗಳನ್ನು ನಿರೀಕ್ಷಿಸಲಾಗಿತ್ತು. ಆದರೆ ಆ ರೀತಿಯ ಕಲಾಪಗಳು ಕಂಡುಬರಲೇ ಇಲ್ಲ.
5
+ ಬರದ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಯವರ ಬದಲಾಗಿ ಕಂದಾಯ ಸಚಿವ ಕೃಷ್ಣಭೈರೇಗೌಡ ಉತ್ತರ ನೀಡಿದಾಗಲೂ ಬಿಜೆಪಿಯವರು ಸಹಿಸಿಕೊಂಡಿದ್ದರು. ಉತ್ತರ ಕರ್ನಾಟಕ ಅಭಿವೃದ್ಧಿಯ ಕುರಿತು ನಡೆದ ಸುದೀರ್ಘ ಚರ್ಚೆಯಲ್ಲಿ ನಿನ್ನೆ ಮುಖ್ಯಮಂತ್ರಿಯವರು ಉತ್ತರ ನೀಡಿದ ವೇಳೆ ಮಹತ್ವದ ಘೋಷಣೆಗಳೇನೂ ಕಂಡುಬರಲಿಲ್ಲ. ಆದರೂ ಬಿಜೆಪಿ ಪ್ರತಿಭಟನೆ ಮಾಡುವುದಾಗಿ ಸಭಾತ್ಯಾಗ ಮಾಡದೇ ಸಹನೆಯಿಂದ ಕುಳಿತಿದ್ದು ಅಚ್ಚರಿ ಮೂಡಿಸಿತ್ತು.
6
+ ತುಮಕೂರು ನೂತನ ಜಿಲ್ಲಾಧಿಕಾರಿಯಾಗಿ ಶುಭ ಕಲ್ಯಾಣ್ ಅಧಿಕಾರ ಸ್ವೀಕಾರ
7
+ ಕೊನೆಗೆ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಪರಿಸಮಾಪ್ತಿ ವರದಿ ಓದುವಾಗ ಬಿಜೆಪಿ ನಾಯಕರು ರೈತರ ಸಾಲಮನ್ನಾ ಮಾಡಬೇಕೆಂದು ಪಟ್ಟುಹಿಡಿದು ಸದನದ ಬಾವಿಗಿಳಿದು ಧರಣಿ ನಡೆಸಲು ಮುಂದಾಗಿದ್ದರು. ಆ ವೇಳೆಗಾಗಲೇ ತಡವಾಗಿತ್ತು. ಸಭಾಧ್ಯಕ್ಷರು ಸದನವನ್ನು ಮುಕ್ತಾಯಗೊಳಿಸುವ ಸಲುವಾಗಿ ರಾಷ್ಟ್ರಗೀತೆ ಗಾಯನವನ್ನು ಆರಂಭಿಸಿದರು. ಹೀಗಾಗಿ ಬಿಜೆಪಿಯ ಹೋರಾಟ ನೆಪಮಾತ್ರ ಎನ್ನುವಂತಾಗಿತ್ತು.
8
+ ಅದೇ ವಿಧಾನಪರಿಷತ್ನಲ್ಲಿ ಮುಖ್ಯಮಂತ್ರಿಯವರು ಉತ್��ರ ನೀಡುವಾಗ ಬಿಜೆಪಿ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಭಾರೀ ಗದ್ದಲ ನಡೆಸಿದ್ದರು. ಅಲ್ಲಿ ವಿರೋಧಪಕ್ಷದ ನಾಯಕರು ಇಲ್ಲದೇ ಇದ್ದರೂ ಸಾಮೂಹಿಕ ನಾಯಕತ್ವದಲ್ಲಿ ಸರ್ಕಾರದ ವಿರುದ್ಧ ಸಮರ್ಥ ಪ್ರತಿಭಟನೆ ಕಂಡುಬಂದಿತು.
9
+ ವಿಧಾನಸಭೆಯಲ್ಲಿ ಬಿಜೆಪಿ ಕಾರ್ಯಕರ್ತರ ಮೇಲಿನ ಹಲ್ಲೆ ಪ್ರಕರಣ ಚರ್ಚೆಯಾದ ವೇಳೆಯಲ್ಲೂ ವಿಪಕ್ಷ ನಾಯಕರು ಸರಿಯಾದ ನಿರ್ಧಾರ ತೆಗೆದುಕೊಳ್ಳಲಿಲ್ಲ ಎಂಬ ಆಕ್ಷೇಪಗಳಿವೆ. ನಿನ್ನೆ ಮುಖ್ಯಮಂತ್ರಿಯವರು ಬಿಜೆಪಿಯ ಪ್ರಮುಖ ನಾಯಕರ ಹೆಸರನ್ನು ಹೇಳುತ್ತಾ, ಅವರು ನನ್ನ ಸ್ನೇಹಿತರು….ಇವರು ನಮ್ಮವರು ಎಂದು ಔಪಚಾರಿಕವಾಗಿ ಹೇಳಿದ್ದು ಕಂಡುಬಂದಿತ್ತಾದರೂ ವಾಸ್ತವದಲ್ಲಿ ಹೊಂದಾಣಿಕೆಯ ರಾಜಕಾರಣದ ಅನುಮಾನದ ಗುಮ್ಮ ಮೊಗಸಾಲೆಯಲ್ಲಿ ಬಿರುಸಾಗಿ ಓಡಾಡಿತು.
10
+ ಐಎನ್‍ಎಸ್ ಸುದ್ದಿಸಂಸ್ಥೆಯ ಷೇರು ಖರೀದಿಸಿದ ಅದಾನಿ
11
+ ಹೀಗಾಗಿ ವಿಧಾನಸಭೆಯಲ್ಲಿ ಕಾಂಗ್ರೆಸ್ ಪ್ರಬಲ ಪ್ರತಿಪಕ್ಷದ ಕೊರತೆಯನ್ನು ಎದುರಿಸುವಂತಾಗಿದೆ. ಜೆಡಿಎಸ್ ನಾಯಕರು ಅವೇಶನಕ್ಕೆ ಬರುವುದಕ್ಕೆ ನಿರಾಸಕ್ತಿ ತೋರಿಸಿದ್ದು ಎದ್ದು ಕಾಣುತ್ತಿತ್ತು.
eesanje/url_46_286_7.txt ADDED
@@ -0,0 +1,11 @@
 
 
 
 
 
 
 
 
 
 
 
 
1
+ ಸ್ಥಳೀಯ ನವೋದ್ಯಮಗಳ ಉತ್ತೇಜನಕ್ಕೆ ಕ್ರಮ : ಪ್ರಿಯಾಂಕ ಖರ್ಗೆ
2
+ ಬೆಳಗಾವಿ,ಡಿ.16- ಸ್ಥಳೀಯ ನವೋದ್ಯಮಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರಾಶಸ್ತ್ಯದ ಸಾರ್ವಜನಿಕ ಸಂಗ್ರಹಣೆ ನೀತಿ ರೂಪಿಸಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
3
+ ರಾಜ್ಯದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಐಟಿ, ಇಎಸ್ಡಿಎಂ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ವಲಯಗಳಿಗೆ ಒತ್ತು ನೀಡುವ ನಿಟ್ಟಿನಲ್ಲಿ ಹುಬ್ಬಳ್ಳಿ-ಧಾರವಾಡ-ಬೆಳಗಾವಿ (ಹೆಚ್ಡಿಬಿ) ಕ್ಲಸ್ಟರ್ನಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಬೆಳಗಾವಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಟೆಕ್ಸೆಲರೇಶನ್ನ 3 ನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉದ್ಯಮಿಗಳ ಜತೆ ಸಚಿವರು ಸಂವಾದ ನಡೆಸಿದರು.
4
+ ಬಿಯಾಂಡ್ ಬೆಂಗಳೂರು ಯೋಜನೆಯಡಿ ಹೂಡಿಕೆ ಮಾಡಿ, ಸ್ಟ್ರಾರ್ಟ್ಅಪ್ ಸೆಲ್ನಲ್ಲಿ ನೋಂದಣಿಯಾದ ನವೋದ್ಯಮಗಳ ಉತ್ಪನ್ನವನ್ನು ಸರ್ಕಾರವೇ ಖರೀದಿಸುವ ಉದ್ದೇಶದಿಂದ ಈ ನೀತಿ ರೂಪಿಸಲಾಗುವುದು. ಈ ಸಂಬಂಧ ಅರ್ಜಿ ಸಲ್ಲಿಸಲು ಇದ್ದ ಗಡುವನ್ನು 2024ರ ಜನವರಿ 5ರವಗೆಗೆ ವಿಸ್ತರಿಸಲಾಗುವುದು. ಈ ನೀತಿ ಮೂಲಕ ರೀತಿ ಮೇಡ್ ಇನ್ ಕರ್ನಾಟಕದ ಉತ್ಪನ್ನಗಳನ್ನು ಖರೀದಿಸಿ, ಸ್ಟಾರ್ಟ್ ಅಪ್ಗಳನ್ನು ಪೋಷಿಸಲು ನಮ್ಮ ಸರ್ಕಾರ ಬದ್ಧ ಎಂದರು.
5
+ ರಾಜ್ಯದ ಎರಡು ಮತ್ತು ಮೂರನೇ ಹಂತದ ನಗರಗಳ ಅಭಿವೃದ್ಧಿಗೆ ಬದ್ಧವಾಗಿ, ಬಿಯಾಂಡ್ ಬೆಂಗಳೂರು ಯೋಜನೆಗೆ ಮತ್ತಷ್ಟು ಬಲ ತುಂಬಲಾಗುವುದು. ಇಂಥ ನಗರಗಳಲ್ಲಿ ಹೆಚ್ಚು ಉದ್ಯಮಗಳು ಸ್ಥಾಪನೆಯಾದರೆ, ಸ್ಥಳೀಯವಾಗಿ ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತದೆ ಎಂದರು.
6
+ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಕೋಡಿಶ್ರೀಗಳಿಗೆ ಆಹ್ವಾನ
7
+ ಸೆಂಟರ್ ಆಫ್ ಎಕ್ಸಲೆನ್ಸ್- ಫಿನ್ಟೆಕ್, ಗೇಮಿಂಗ್ ಆಕ್ಸಿಲರೇಟರ್, ಹೆಲ್ತ ಸೈನ್ಸ್, ಬಯೋಟೆಕ್ ಆಕ್ಸಿಲರೇಟರ್ಗಳನ್ನು ಸ್ಥಾಪಿಸುವ ಗುರಿ ಇದ್ದು, ಈ ಕ್ಷೇತ್ರಗಳಲ್ಲಿ ಪ್ರಾವಿಣ್ಯತೆ ಇರುವವರಿಗೆ ಇವುಗಳನ್ನು ನಡೆಸುವ ಹೊಣೆ ವಹಿಸಲಾಗುತ್ತದೆ. ರಾಜ್ಯ ಬೇರೆ ಬೇರೆ ಭಾಗಗಳಲ್ಲಿ ಸ್ಥಾಪಿಸಲಾಗುವ ಇಂಥ ಈ ಶ್ರೇಷ್ಠತಾ ಕೇಂದ್ರಗಳಿಗೆ ಎಲ್ಲ ರೀತಿಯ ಬೆಂಬಲ ನೀಡಲು ನಮ್ಮ ಸರ್ಕಾರ ಸಿದ್ಧ ಎಂದರು.
8
+ ಪ್ರಗತಿಯ ಹಾದಿಯಲ್ಲಿ ಹೆಚ್ಬಿಡಿ ಕ್ಲಸ್ಟರ್ಹೆಚ್ಬಿಡಿ ಕ್ಲಸ್ಟರ್ನಲ್ಲಿ 16 ಹೊಸ ಕಂಪನಿಗಳು ತಲೆ ಎತ್ತಿದ್ದು, 4 ಕಂಪನಿಗಳು ತಮ್ಮ ಉದ್ಯಮಗಳ ವಿಸ್ತರಣೆ ಮಾಡಿವೆ. ಕ್ಲಸ್ಟರ್ ಉದ್ಯಮ ಸ್ಥಾಪಿಸಲು 40 ಕಂಪನಿಗಳು ಮುಂದೆ ಬಂದಿವೆ. ಜತೆಗೆ, ಒಂದು ಉತ್ಪಾದನಾ ಘಟಕ ಸಹ ಆರಂಭವಾಗಿದ್ದು, ಇದರಿಂದ 3,000 ಜನರಿಗೆ ಉದ್ಯೋಗ ಲಭಿಸಿದೆ. ಬರೋಬ್ಬರಿ 25 ಕೋಟಿ ರೂ. ಬಂಡವಾಳದೊಂದಿಗೆ 150 ಸ್ಟಾರ್ಟ್ಅಪ್ಗಳು ಕಾರ್ಯಾರಂಭಿಸಿವೆ.
9
+ ಟೆಕ್ಸೆಲರೇಶನ್ ಸಂವಾದ:ರಾಜ್ಯದಾದ್ಯಂತ ಸ್ಟ��ರ್ಟ್ಅಪ್ಗಳಿಗೆ ಬಂಡವಾಳ ಲಭ್ಯತೆಯನ್ನು ಹೆಚ್ಚಿಸಲು ಸರ್ಕಾರ ಕೈಗೊಂಡಿರುವ ಉಪಕ್ರಮಗಳ ಬಗ್ಗೆ ಎಲೆಕ್ಟ್ರಾನಿಕ್ಸ್ ಇಲಾಖೆ ನಿರ್ದೇಶಕರು, ಕಿಟ್ಸ ವ್ಯವಸ್ಥಾಪಕ ನಿರ್ದೇಶಕ ದರ್ಶನ್ ಎಚ್.ವಿ. ಮಾತನಾಡಿದರು. ಇದಲ್ಲದೇ, ನಾಗರಿಕ ಸ್ನೇಹಿ ಸ್ಟಾರ್ಟ್ ಆಪ್ಗಳು, ಉದಯೋನ್ಮುಖ ಕ್ಲಸ್ಟರ್ಗಳಲ್ಲಿ ಇಎಸ್ಡಿಎಂ ಭವಿಷ್ಯ, ಎಂಜಿನಿಯರಿಂಗ್ ಮತ್ತು ವಿನ್ಯಾಸ ಕೇಂದ್ರವಾಗಿ ಹೆಚ್ಡಿಬಿ ಕ್ಲಸ್ಟರ್, ಕ್ಲಸ್ಟರ್ನಲ್ಲಿ ಆರಂಭಿಕ ಪರಿಸರ ವ್ಯವಸ್ಥೆಗೆ ಬಂಡವಾಳ, ಹೆಚ್ಡಿಬಿ ಕ್ಲಸ್ಟರ್ನೊಂದಿಗೆ ಜಾಗತಿಕ ಸಾಮಥ್ರ್ಯ ಕೇಂದ್ರಗಳ ಜೋಡಣೆ, ಕರ್ನಾಟಕ ಸ್ಕಿಲ್ ಕನೆಕ್ಟ್ ಪೋರ್ಟಲ್ ಮತ್ತು ಜಿಸಿಸಿಯ ಬೆಳವಣಿಗೆಗೆ ಇತರ ಉಪಕ್ರಮಗಳು, 100 ದಿನಗಳಲ್ಲಿ 1000 ಉದ್ಯಮ-ಸಿದ್ಧ ವೃತ್ತಿಪರರ ರೂಪಿಸುವ ಬಗ್ಗೆ ಸಂವಾದ ನಡೆಯಿತು.
10
+ ಉದ್ಯಮಿಗಳಿಗೆ ಸನ್ಮಾನ:ಹೆಚ್ಡಿಬಿ ಕ್ಲಸ್ಟರ್ ಸೀಡ್ ಫಂಡ್ಗೆ 2 ಕೋಟಿ ರೂ. ನೀಡಿದ್ದ ಗೋಲ್ಡ ಪ್ಲಸ್ನ ಸುಭಾಷ್ ತ್ಯಾಗಿ ಹಾಗೂ ಹೆಚ್ಬಿಡಿ ಕ್ಲಸ್ಟರ್ ಲೀಡ್ ಇಂಡಸ್ಟ್ರಿ ಆಂಕರ್ ವೆಂಕಟೇಶ್ ಪಾಟೀಲ್ ಅವರನ್ನು ಸಚಿವರು ಸನ್ಮಾನಿಸಿದರು. ಸಮಾರೋಪ ಸಮಾರಂಭದಲ್ಲಿ ಹೆಚ್ಡಿಬಿ ಕ್ಲಸ್ಟರ್ನ ಉದ್ಯಮಿಗಳನ್ನು ಅಭಿನಂದಿಸಲಾಯಿತು. ನಂತರ ಕೆಎಲಇ ಟೆಕ್, ಐಎಂಇಆರ್, ಜಿಐಟಿ ಜತೆಗಿನ ಒಪ್ಪಂದ ಪತ್ರಕ್ಕೆ ಕೆಡಿಇಎಂ ಸಹಿ ಹಾಕಿತು. ನವೋದ್ಯಮಗಳ ಉತ್ಪನ್ನಗಳ ಬಿಡುಗಡೆಗೂ ಕಾರ್ಯಕ್ರಮ ಸಾಕ್ಷಿಯಾಯಿತು.
11
+ ಕಾರ್ಯಕ್ರಮದಲ್ಲಿ ಐಟಿ ಮತ್ತು ಬಿಟಿ, ಎಲೆಕ್ಟ್ರಾನಿಕ್ಸ್ ಇಲಾಖೆ ನಿರ್ದೇಶಕರು, ಕಿಟ್ಸ ವ್ಯವಸ್ಥಾಪಕ ನಿರ್ದೇಶಕ ದರ್ಶನ್ ಎಚ್ ವಿ, ಕೆಡಿಇಎಂ ಅಧ್ಯಕ್ಷ ಬಿ.ವಿ ನಾಯ್ಡು, ಕೆಡಿಇಎಂನ ಸಿಇಓ ಸಂಜೀವ್ ಗುಪ್ತಾ, ಹೆಚ್ಬಿಡಿ ಕ್ಲಸ್ಟರ್ ಲೀಡ್ ಇಂಡಸ್ಟ್ರಿ ಆಂಕರ್ಗಳಾದ ವೆಂಕಟೇಶ್ ಪಾಟೀಲ, ಸಂತೋಷ್ ಹುರಳಿಕೊಪ್ಪಿ ಉಪಸ್ಥಿತರಿದ್ದರು.
eesanje/url_46_286_8.txt ADDED
@@ -0,0 +1,8 @@
 
 
 
 
 
 
 
 
 
1
+ ಕೇರಳದಲ್ಲಿ ಕೋವಿಡ್ ಹೆಚ್ಚಳ, ಕರ್ನಾಟಕಕ್ಕೂ ಶುರುವಾಯ್ತು ಆತಂಕ
2
+ ಬೆಂಗಳೂರು,ಡಿ.16- ನೆರೆಯ ಕೇರಳ ರಾಜ್ಯದಲ್ಲಿ ಕೋವಿಡ್ ಪ್ರಮಾಣ ಹೆಚ್ಚಾಗಿರುವ ಮಾಹಿತಿ ಇದ್ದರೂ ರಾಜ್ಯದಲ್ಲಿ ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ನಗರದ ಮಾಗಡಿ ರಸ್ತೆಯ ಆರೋಗ್ಯ ಸೌಧದ ಬಳಿ ಸಿಎಸ್ಆರ್ ಯೋಜನೆಯಡಿ ಸಮುದಾಯ ಆರೋಗ್ಯ ಸೇವೆ ಒದಗಿಸುವ ವೆಲ್ನೆಸ್ ಆನ್ ವೀಲ್ಸ್ ವಾಹನಕ್ಕೆ ಚಾಲನೆ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳದಲ್ಲಿ ಕೋವಿಡ್ ಸೋಂಕು ಯಾವ ರೀತಿ ಜನರ ಮೇಲೆ ಪ್ರಭಾವ ಬೀರಿದೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ.
3
+ ರಾಜ್ಯದಲ್ಲಿ ಆತಂಕಪಡುವಂತಹ ಬೆಳವಣಿಗೆ ಏನೂ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.ಚಳಿಯ ವಾತಾವರಣದಿಂದಾಗಿ ವೈರಲ್ ಇನ್ಫ್ಲುಯೆಂಜ ಹಾಗೂ ಕೋವಿಡ್ ಸೋಂಕು ಕಂಡುಬರುತ್ತಿದೆ. ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೇರಳದಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಶಿಷ್ಟಾಚಾರ ಪಾಲನೆ ಮಾಡಬೇಕಿದೆ. ಮುನ್ನೆಚ್ಚರಿಕೆ ದೃಷ್ಟಿಯಿಂದ ಎಲ್ಲವನ್ನು ಗಮನಿಸಲಾಗುತ್ತಿದೆ.
4
+ ಒಂದು ವೇಳೆ ಆತಂಕಪಡುವ ಸ್ಥಿತಿ ಬಂದಾಗ ಅದಕ್ಕೆ ಬೇಕಾದ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸದ್ಯಕ್ಕೆ ರಾಜ್ಯದಲ್ಲಿ ಭಯ ಸೃಷ್ಟಿಸುವ ವಾತಾವರಣವಿಲ್ಲ. ಸೋಂಕು ಪೀಡಿತ ಪ್ರದೇಶದಿಂದ ಬರುವವರನ್ನು ಪರೀಕ್ಷೆಗೊಳಪಡಿಸಲಾಗುತ್ತದೆ ಎಂದು ಹೇಳಿದರು. ಆರೋಗ್ಯ ಅಧಿಕಾರಿಗಳು ಹಾಗೂ ತಜ್ಞರೊಂದಿಗೆ ಸಭೆ ನಡೆಸಿ ರಾಜ್ಯದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಕೇರಳದಲ್ಲಿ ಯಾವ ರೀತಿಯ ಸೋಂಕು ಹೆಚ್ಚಾಗಿದೆ ಎಂಬ ಬಗ್ಗೆ ತಜ್ಞರಿಂದ ಮಾಹಿತಿ ಪಡೆಯಲಾಗುವುದು ಎಂದರು.
5
+ ಮೈಸೂರಿನ ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಹೆಸರಿಡಿ : ಯತ್ನಾಳ್
6
+ ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಭೆ ನಡೆಸಲಾಗುವುದು. ಪೊಲೀಸ್ ಇಲಾಖೆಯ ಅಧಿಕಾರಿಗಳು ಕೂಡ ಸಭೆಯಲ್ಲಿ ಭಾಗವಹಿಸಲಿದ್ದಾರೆ. ರಾಜ್ಯದಲ್ಲಿ ಭ್ರೂಣಹತ್ಯೆ ಪ್ರಕರಣಗಳು ಮರುಕಳಿಸದಂತೆ ಅಗತ್ಯ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು ಎಂದರು.
7
+ ಹೊಸಕೋಟೆಯಲ್ಲಿ ನಮ್ಮ ವೈದ್ಯರೇ ಕ್ರಮ ಕೈಗೊಂಡಿದ್ದಾರೆ. ಅದೇ ರೀತಿ ರಾಜ್ಯದ ಎಲ್ಲ ಕಡೆಯೂ ಆಗಬೇಕು. ಹೆಣ್ಣು ಮಗುವಿನ ಬಗ್ಗೆ ಅಸಡ್ಡೆ ಬೇಡ ಪ್ರೀತಿ ಇರಬೇಕು. ತಪ್ಪು ಎಸಗಿದವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ಆರೋಗ್ಯ ಇಲಾಖೆಯಿಂದಲೂ ಈ ಬಗ್ಗೆ ಕಾರ್ಯಾಚರಣೆ ಹೆಚ್ಚು ಮಾಡಲಾಗುವುದು ಎಂದು ಹೇಳಿದರು.
8
+ ವೋಲ್ವೋ ಗ್ರೂಪ್ ಮತ್ತು ನಾರಾಯಣ ಹೆಲ್ತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ವೆಲ್ನೆಸ್ ಆನ್ ವೀಲ್ಸ್ನ್ನು ಪ್ರಾರಂಭಿಸಲಾಗಿದೆ. ಇದು ಕ್ಯಾನ್ಸರ್, ಹೃದಯ ಮತ್ತು ರೋಗ ನಿರ್ಣಯ ಸೇವೆಗಳಿಗೆ ಉಚಿತ ಸ್ಕ್ರೀನಿಂಗ್ ಗಳಿಗೆ ಮೀಸಲಾಗಿರುವ ಸುಧಾರಿತ ಸಂಚಾರಿ ಕ್ಲಿನಿಕ್ ಆಗಿದೆ. ಇಂದಿನಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಕೈಗೊಳ್ಳಲಾಗುತ್ತದೆ.
eesanje/url_46_286_9.txt ADDED
@@ -0,0 +1,9 @@
 
 
 
 
 
 
 
 
 
 
1
+ ಸಂಸದ ಪ್ರತಾಪ್ ಸಿಂಹಗೆ ಕಾನೂನು ಸಂಕಷ್ಟ..!
2
+ ಬೆಂಗಳೂರು,ಡಿ.16-ದೇಶವನ್ನೇ ಬೆಚ್ಚಿ ಬೀಳಿಸಿದ್ದ ಹೊಸ ಸಂಸತ್ ಭವನದ ಮೇಲೆ ನಡೆದ ಭದ್ರತಾ ಲೋಪ ಕುರಿತಾಗಿ ಬಿಜೆಪಿಯ ಮೈಸೂರು-ಕೊಡಗು ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಅವರಿಗೆ ಕಾನೂನಿನ ಸಂಕಷ್ಟ ಎದುರಾಗಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿ ವಿಶೇಷ ಘಟಕದ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಪ್ರತಾಪ್ ಸಿಂಹ ಅವರಿಗೆ ನೋಟಿಸ್ ನೀಡಲು ಮುಂದಾಗಿದೆ. ಮುಂದಿನ ವಾರ ನೋಟಿಸ್ ನೀಡುವ ಸಂಭವ ಹೆಚ್ಚಾಗಿದ್ದು, ಪ್ರಕರಣ ಕುರಿತಂತೆ ದೆಹಲಿ ವಿಶೇಷ ಘಟಕದ ಅಪರಾಧ ವಿಭಾಗದ ಹಿರಿಯ ನೇತೃತ್ವದ ಪೊಲೀಸ್ ತಂಡ ವಿಚಾರಣೆಗೆ ಒಳಪಡಿಸಲು ಮುಂದಾಗಿದ್ದಾರೆ.
3
+ ಸಂಸತ್ ಒಳಗೆ ಪ್ರವೇಶಿಸಿದ್ದ ಇಬ್ಬರಲ್ಲಿ ಒಬ್ಬಾತ ಉತ್ತರಪ್ರದೇಶದ ಲಖ್ನೋ ನಿವಾಸಿಯಾಗಿದ್ದರೆ, ಮತ್ತೋರ್ವ ಮೈಸೂರಿನ ಮನೋರಂಜನ್. ಈ ಇಬ್ಬರಿಗೂ ಪ್ರತಾಪ್ ಸಿಂಹ ಅವರ ಆಪ್ತ ಕಾರ್ಯದರ್ಶಿ ಸಂಸತ್ ಭವನದೊಳಗೆ ಪ್ರವೇಶ ಪಡೆಯಲು ತಮ್ಮ ಅನುಮತಿಯುಳ್ಳ ಪಾಸ್ ನೀಡಿದ್ದರು.
4
+ 34 ವರ್ಷದ ಮನೋರಂಜನ್ ಮೈಸೂರಿನ ವಿಜಯನಗರದ 2ನೇ ಹಂತದ ನಿವಾಸಿಯಾಗಿರುವ ದೇವರಾಜ ಗೌಡರ ಪುತ್ರ. ಬೆಂಗಳೂರಿನ ಬಿಐಟಿ ಕಾಲೇಜಿನಿಂದ ಬಿಇ ಪದವಿ ಪಡೆದುಕೊಂಡಿದ್ದ. ಸಂಸತ್ ಹೊರಗೆ ದಾಂಧಲೆ ಎಬ್ಬಿಸಿದ ಹರಿಯಾಣದ ಹಿರ್ಷದ ನಿವಾಸಿ ನೀಲಂ, ಮತ್ತೋರ್ವ ಮಹಾರಾಷ್ಟ್ರದ ಲಾಥೂರ್ನ ಅಮೂಲ್ ಸಿಂಧೆ ಬಂಧಿತ ಆರೋಪಿಗಳಾಗಿದ್ದಾರೆ.
5
+ ಬಂಧಿತ ಇಬ್ಬರು ಆರೋಪಿಗಳು ಪ್ರತಾಪ್ ಸಿಂಹ ಅವರ ಸಹಿವುಳ್ಳ ಪತ್ರದಲ್ಲೇ ಪಾಸ್ ಪಡೆದುಕೊಂಡಿರುವುದರಿಂದ ಇದನ್ನು ಭದ್ರತಾ ವೈಫಲ್ಯವೆಂದೇ ಪರಿಗಣಿಸಲಾಗಿದ್ದು, ಎಲ್ಲ ಆಯಾಮಗಳಿಂದಲೂ ಸಂಸದರನ್ನು ತನಿಖೆಗೆ ಒಳಪಡಿಸಲು ದೆಹಲಿ ವಿಶೇಷ ಘಟಕದ ಪೊಲೀಸರು ತೀರ್ಮಾನಿಸಿದ್ದಾರೆಂದು ಮೂಲಗಳು ತಿಳಿಸಿವೆ.
6
+ ರಾಷ್ಟ್ರೀಯ ಭದ್ರತಾ ವಿಷಯದಲ್ಲಿ ರಾಜೀಯಾಗುವ ಪ್ರಶ್ನೆಯೇ ಇಲ್ಲ ಎಂದು ಖುದ್ದು ನರೇಂದ್ರಮೋದಿ ಹಲವಾರು ಬಾರಿ ತಮ್ಮ ಭಾಷಣಗಳಲ್ಲಿ ಹೇಳಿರುವುದರಿಂದ ತಮ್ಮ ಪಕ್ಷದವರೇ ಸಂಸತ್ ಸದಸ್ಯರಾಗಿದ್ದರೂ ವಿಚಾರಣೆಯಿಂದ ವಿನಾಯ್ತಿ ನೀಡಬಾರದೆಂದು ಗೃಹ ಇಲಾಖೆಗೆ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ. ಈಗ ಬಂಧಿತರ ವಿರುದ್ಧ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಈ ಇಬ್ಬರಿಗೂ ಯಾವ ಕಾರಣದಿಂದ ಪಾಸ್ಗಳನ್ನು ನೀಡಲಾಗಿತ್ತು. ಎಷ್ಟು ವರ್ಷದಿಂದ ಇವರು ಪರಿಚಿತರು, ಇವರ ಹಿನ್ನಲೆ , ಆರೋಪಿಗಳಿಗೂ ಮತ್ತು ಸಂಸದರಿಗಿರುವ ಸಂಬಂಧ ಇದೆಲ್ಲವನ್ನೂ ಕೂಲಂಕುಷವಾಗಿ ವಿಚಾರಣೆಗೆ ಒಳಪಡಿಸಲಿದೆ.
7
+ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಕೋಡಿಶ್ರೀಗಳಿಗೆ ಆಹ್ವಾನ
8
+ ಒಂದು ವೇಳೆ ಪ್ರತಾಪ್ ಸಿಂಹ ಅವರನ್ನು ವಿಚಾರಣೆಗೊಳಪಡಿಸದಿದ್ದರೆ ಕೇಂದ್ರ ಸರ್ಕಾರ ತಮ್ಮ ಭದ್ರತಾ ವೈಫಲ್ಯವನ್ನು ಮುಚ್ಚಿ ಹಾಕಲು ಇಡೀ ಪ್ರಕರಣವನ್ನೇ ತಿಪ್ಪೆ ಸಾರಿಸಿದೆ ಎಂದು ಪ್ರತಿಪಕ್ಷಗಳು ಆರೋಪ ಮಾಡಬಹುದು.ಈಗಾಗಲೇ ��ಎಪಿ, ಟಿಎಂಸಿ ಸೇರಿದಂತೆ ಹಲವಾರು ರಾಜಕೀಯ ಪಕ್ಷಗಳು ಪ್ರತಾಪ್ ಸಿಂಹ ಅವರನ್ನು ವಿಚಾರಣೆಗೊಳಪಡಿಸಬೇಕು ಹಾಗೂ ಅವರ ವಿರುದ್ಧವೂ ಬಂಧಿತ ಆರೋಪಿಗಳ ಮೇಲೆ ದಾಖಲಾಗಿರುವ ಪ್ರಕರಣವನ್ನೇ ದಾಖಲಿಸಬೇಕೆಂದು ಒತ್ತಡ ಹಾಕಿದ್ದಾರೆ.
9
+ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ವಿರೋಧ ಪಕ್ಷಗಳಿಗೆ ಪ್ರಕರಣವು ಅಸ್ತ್ರವಾಗದಂತೆ ಬಿಜೆಪಿ ಜಾಗೃತ ಹೆಜ್ಜೆ ಇಡುತ್ತಿದ್ದು, ಪ್ರಕರಣದಲ್ಲಿ ಯಾರಿಗೂ ವಿನಾಯ್ತಿ ಬೇಡ ಎಂಬ ದೃಢ ನಿರ್ಧಾರಕ್ಕೆ ಬಂದಂತಿದೆ.
eesanje/url_46_287_1.txt ADDED
@@ -0,0 +1,5 @@
 
 
 
 
 
 
1
+ ಮೈಸೂರಿನ ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಹೆಸರಿಡಿ : ಯತ್ನಾಳ್
2
+ ಬೆಂಗಳೂರು,ಡಿ.16- ಮೈಸೂರಿನ ವಿಮಾನ ನಿಲ್ದಾಣಕ್ಕೆ ಮಹಾಪ್ರಭುಗಳಾದ ಮಹಾರಾಜ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರ ಹೆಸರನ್ನು ಕರ್ನಾಟಕ ಸರ್ಕಾರ ಶಿಫಾರಸ್ಸು ಮಾಡಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
3
+ ಈ ಸಂಬಂಧ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಪೋಸ್ಟ್ ಮಾಡಿರುವ ಅವರು, ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರ ಕೊಡುಗೆ ಕರ್ನಾಟಕ ಹಾಗೂ ಭಾರತಕ್ಕೆ ಅಪಾರವಾದದ್ದು. ರಾಜ್ಯ ಸರ್ಕಾರ ಮೈಸೂರು ವಿಮಾನ ನಿಲ್ದಾಣಕ್ಕೆ ಇವರ ಹೆಸರನ್ನು ನಾಮಕರಣ ಮಾಡುವಂತೆ ಶಿಫಾರಸ್ಸು ಮಾಡಬೇಕು ಎಂದು ಕೋರಿದ್ದಾರೆ.
4
+ ವಿದೇಶಿ ವಿವಿ ಪದವಿ ಮಾನ್ಯವಲ್ಲ ; ಯುಜಿಸಿ
5
+ ತನಿಖೆಗೆ ಅನುಮತಿ ವಾಪಸಾತಿ ವಿರುದ್ಧ ನಾನು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ ನಡೆಸಿದೆ. ಭ್ರಷ್ಟಾಚಾರದ ವಿರುದ್ಧ ದಿನಂಪ್ರತಿ ಮಾತನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭ್ರಷ್ಟ್ರಾಚಾರಿಯ ರಕ್ಷಣೆಗೆ ನಿಂತಿರುವುದು ದುರಂತ ಎಂದು ಇದೇ ವೇಳೆ ಬೇಸರ ವ್ಯಕ್ತಪಡಿಸಿದ್ದಾರೆ.
eesanje/url_46_287_10.txt ADDED
@@ -0,0 +1,15 @@
 
 
 
 
 
 
 
 
 
 
 
 
 
 
 
 
1
+ ಡಿಕೆಶಿ ಸಿಬಿಐ ತನಿಖೆ ವಾಪಸ್ : ಉಭಯ ಸದನಗಳಲ್ಲಿ ಗದ್ದಲ, ವಾಕ್ಸಮರ
2
+ ಬೆಳಗಾವಿ, ಡಿ. 15- ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೀಡಲಾಗಿದ್ದ ಅನು ಮತಿಯನ್ನು ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ಸಭೆ ಹಿಂಪಡೆದ ವಿಷಯ ವಿಧಾನಮಂಡಲದ ಉಭಯ ಸದನಗಳಲ್ಲಿ ಪ್ರತಿಧ್ವನಿಸಿ ವಾಕ್ಸಮರಕ್ಕೆ ಕಾರಣವಾಯಿತು.
3
+ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನಿಲುವಳಿ ಸೂಚನೆಯಡಿ ತಾವು ನೀಡಿದ್ದ ಪ್ರಸ್ತಾವನೆಯನ್ನು ಮಂಡಿಸಲು ಅವಕಾಶ ನೀಡಬೇಕು ಎಂದು ಸಭಾಧ್ಯಕ್ಷ ಯು.ಟಿ.ಖಾದರ್ ಅವರನ್ನು ಕೋರಿದರು. ವಿಧಾನಪರಿಷತ್ನಲ್ಲಿ ಬಿಜೆಪಿ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರು ಇದೇ ವಿಚಾರದ ಬಗ್ಗೆ ನಿಲುವಳಿ ಸೂಚನೆ ಪೂರ್ವಭಾವಿ ಪ್ರಸ್ತಾಪ ಮಾಡಿ ಚರ್ಚೆಗೆ ಅವಕಾಶ ನೀಡುವಂತೆ ಸಭಾಪತಿ ಬಸವರಾಜ ಹೊರಟ್ಟಿ ಅವರಲ್ಲಿ ವಿನಂತಿಸಿದರು.
4
+ ಈ ವಿಚಾರ ನ್ಯಾಯಾಲಯದಲ್ಲಿರುವುದರಿಂದ ಚರ್ಚೆಗೆ ಅವಕಾಶ ನೀಡಲು ಸಭಾಧ್ಯಕ್ಷ ಯು.ಟಿ.ಖಾದರ್ ಹಾಗೂ ಸಭಾಪತಿ ಬಸವರಾಜ ಹೊರಟ್ಟಿ ನಿರಾಕರಿಸಿದರು. ವಿಧಾನಸಭೆಯಲ್ಲಿ ಅಶೋಕ್ ನಿಲುವಳಿ ಸೂಚನೆ ಪೂರ್ವಭಾವಿ ಪ್ರಸ್ತಾಪ ಮಾಡುವ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ಕಾಂಗ್ರೆಸ್ನ ಶಾಸಕ ಬಸವರಾಜರಾಯರೆಡ್ಡಿ ಮತ್ತು ಇತರರು ಪಟ್ಟು ಹಿಡಿದರು. ಶಾಸಕರನ್ನು ಸಮಾಧಾನಪಡಿಸಿದ ಸಭಾಧ್ಯಕ್ಷರು ವಿಪಕ್ಷ ನಾಯಕರಿಗೆ ನಿಲುವಳಿ ಸೂಚನೆಯ ಪೂರ್ವಭಾವಿ ಪ್ರಸ್ತಾವನೆಗೆ ಅವಕಾಶ ಮಾಡಿಕೊಟ್ಟರು.
5
+ ಕಾಂಗ್ರೆಸ್ ಶಾಸಕ ಎಚ್.ಡಿ.ರಂಗನಾಥ್ ಮಾತನಾಡಿ, ರಾಯರೆಡ್ಡಿಯವರಿಗೆ ಮಾತನಾಡಲು ಸಭಾಧ್ಯಕ್ಷರು ಆಹ್ವಾನಿಸಿ ಈಗ ಮಧ್ಯದಲ್ಲಿ ತಡೆದು ವಿಪಕ್ಷ ನಾಯಕರಿಗೆ ನಿಲುವಳಿ ಪ್ರಸ್ತಾವನೆಗೆ ಅವಕಾಶ ಮಾಡಿಕೊಟ್ಟಿದ್ದೇಕೆ, ವಿರೋಧ ಪಕ್ಷದ ನಾಯಕರು ಈ ಕಲಾಪದಲ್ಲಿ ಫುಲ್ ಆಕ್ಟಿಂಗ್ ಮಾಡಿದ್ದಾರೆ. ಹೆಚ್ಚು ಸಮಯ ತೆಗೆದುಕೊಂಡಿದ್ದಾರೆ. ಇನ್ನೂ ಎಷ್ಟು ಸಮಯ ಅವರಿಗೆ ಬೇಕು, ಈ ರೀತಿ ನಡೆದುಕೊಳ್ಳುತ್ತಿರುವುದು ಒಳ್ಳೆಯದಲ್ಲ ಎಂದರು.
6
+ ಆಕ್ಷೇಪದ ನಡುವೆಯೂ ಅವಕಾಶ ಪಡೆದ ಆರ್.ಅಶೋಕ್ ಮಾತನಾಡಿ, ಈ ಹಿಂದೆ ಯಡಿಯೂರಪ್ಪ ಅವರ ಸರ್ಕಾರ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಹಿಂಪಡೆದಿರುವುದು ಸರಿಯಲ್ಲ. ಸಚಿವ ಸಂಪುಟದ ಪಾವಿತ್ರ್ಯತೆಗೆ ಧಕ್ಕೆಯುಂಟು ಮಾಡಿದೆ. ಆಗಿನ ಸರ್ಕಾರ ಸ್ವಯಂಪ್ರೇರಿತ ಹಾಗೂ ರಾಜಕೀಯವಾಗಿ ನಿರ್ಧಾರ ತೆಗೆದುಕೊಳ್ಳಲಿಲ್ಲ. ಜಾರಿ ನಿರ್ದೇಶನಾಲಯದ ಪತ್ರ ಆಧರಿಸಿ ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯ ಪಡೆದು ಕ್ರಮ ಕೈಗೊಂಡಿದೆ.
7
+ ಒಂದು ಪ್ರಕರಣದಲ್ಲಿ ಮಾತ್ರ ಪೂರ್ವಾನುಮತಿಯನ್ನು ಹಿಂಪಡೆಯುವುದಾದರೆ ಶಾಸಕ ಜನಾರ್ಧನರೆಡ್ಡಿಯವರ ಮೇಲೂ ಹಲವು ಪ್ರಕರಣಗಳಿವೆ. ಸಚಿವರಾಗಿರುವ ನಾಗೇಂದ್ರ ಅವರ ಮೇಲೆ 23 ಪ್ರಕರಣಗಳಿವೆ. ಅದರ ಜೊತೆಯಲ್ಲಿ ಹಿಂದೆ ಕಾಂಗ್ರೆಸ್ ಸರ್ಕ���ರ ಯಡಿಯೂರಪ್ಪ ವಿರುದ್ಧವೂ ಪ್ರಕರಣಗಳನ್ನು ದಾಖಲಿಸಿದೆ. ಅವುಗಳನ್ನು ಹಿಂಪಡೆಯಬೇಕಲ್ಲವೇ ಎಂದು ಪ್ರಶ್ನಿಸಿದರು.
8
+ ಮಧ್ಯಪ್ರವೇಶಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಇದು ಸಾರ್ವಜನಿಕ ಮಹತ್ವದ ವಿಷಯ ಅಲ್ಲ. ಜೊತೆಗೆ ಪ್ರಕರಣ ನ್ಯಾಯಾಲಯದಲ್ಲಿದೆ. ವೈಯಕ್ತಿಕವೂ ಕೂಡ ಆಗಿದೆ. ಅದನ್ನೂ ನಿಲುವಳಿ ಸೂಚನೆಯಡಿ ಚರ್ಚಿಸಲು ಅವಕಾಶವಿಲ್ಲ ಎಂದು ಆಗ್ರಹಿಸಿದರು.ಆರ್.ಅಶೋಕ್ ಅವರು ಮಾತನಾಡಿ, ಪ್ರಕರಣದ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಅವಕಾಶವನ್ನು ನ್ಯಾಯಾಲಯಕ್ಕೆ ಬಿಡಬೇಕಿತ್ತು.
9
+ ಸರ್ಕಾರ ತನಗೆ ತೋಚಿದಂತೆ ನಿರ್ಣಯ ಕೈಗೊಂಡು ನ್ಯಾಯಾಂಗದ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಿದೆ ಎಂದು ಆಕ್ಷೇಪಿಸಿದರು. ಬಿಜೆಪಿಯ ಸುನಿಲ್ಕುಮಾರ್ ಮಾತನಾಡಿ, ಇದು ವೈಯಕ್ತಿಕ ವಿಚಾರ ಆಗುವುದಿಲ್ಲ. ಸಚಿವ ಸಂಪುಟಕ್ಕೆ ಇದಕ್ಕಿಂತಲೂ ಆದ್ಯತೆ ವಿಷಯಗಳಿವೆ. ಭ್ರಷ್ಟಾಚಾರವನ್ನು ಮುಚ್ಚಿ ಹಾಕುವ ಪ್ರಯತ್ನಗಳಾಗುತ್ತಿವೆ ಎಂದು ಕಿಡಿಕಾರಿದರು.
10
+ ಭ್ರಷ್ಟಾಚಾರದ ವಿರುದ್ಧ ನಾವು ಪಾಠ ಕಲಿಯಬೇಕಿಲ್ಲ ಮತ್ತು ಈ ಚರ್ಚೆ ಮಾಡುವುದರಿಂದ ನ್ಯಾಯಾಂಗ ನಿಂದನೆಯಾಗಲಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ವಾದಿಸಿದರು. ಈ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರಗಳು ನಡೆದವು.ನ್ಯಾಯಾಲಯದಲ್ಲಿ ಪ್ರಕರಣಗಳಿದ್ದರೂ ಕೂಡ ಸಭಾಧ್ಯಕ್ಷರ ವಿವೇಚನೆಗೆ ಸರಿಯೆನಿಸಿದರೆ ಚರ್ಚೆಗೆ ಅವಕಾಶ ನೀಡಬಹುದು ಎಂದು ಆರ್.ಅಶೋಕ್ ವಾದಿಸಿದರು.
11
+ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಸರ್ಕಾರದ ನಿರ್ಧಾರವನ್ನು ಖಂಡಿಸಿದರು.ಕಾಂಗ್ರೆಸ್ ಶಾಸಕ ಬಸವರಾಯರೆಡ್ಡಿ ಮಾತನಾಡಿ, ಡಿ.ಕೆ.ಶಿವಕುಮಾರ್ರ ವಿರುದ್ಧ ಭ್ರಷ್ಟಾಚಾರದಡಿ ಪ್ರಕರಣ ದಾಖಲಾಗಿಲ್ಲ. ನ್ಯಾಯಾಲಯದಲ್ಲಿರುವ ಪ್ರಕರಣವನ್ನು ಚರ್ಚೆ ನಡೆಸಲು ಇಲ್ಲಿ ಅವಕಾಶವಿಲ್ಲ. ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಂಪುಟದ ನಿರ್ಣಯವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದಾರೆ ಎಂದು ಸರ್ಕಾರದ ಬೆಂಬಲಕ್ಕೆ ಬಂದರು. ಈ ಸಂದರ್ಭದಲ್ಲಿ ಬಿಜೆಪಿ ಸುರೇಶ್ಕುಮಾರ್ ಮತ್ತು ರಾಯರೆಡ್ಡಿ ನಡುವೆ ವಾದ-ಪ್ರತಿವಾದಗಳು ನಡೆದವು.
12
+ ಕೊನೆಗೆ ಸಭಾಧ್ಯಕ್ಷರು ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ನಿಲುವಳಿ ಚರ್ಚೆಗೆ ಅವಕಾಶವಿಲ್ಲ. ನ್ಯಾಯಾಲಯವೇ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಹೇಳಿ ವಿರೋಧಪಕ್ಷಗಳ ನಿಲುವಳಿ ಸೂಚನಾ ಪ್ರಸ್ತಾಪವನ್ನು ತಿರಸ್ಕರಿಸಿ ಉತ್ತರ ಕರ್ನಾಟಕ ಭಾಗದ ಚರ್ಚೆಗೆ ಅವಕಾಶ ಮಾಡಿಕೊಟ್ಟರು.
13
+ ಚರ್ಚೆಗೆ ಬಿಜೆಪಿ ಆಗ್ರಹ :ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ನಿಲುವಳಿ ಸೂಚನೆ ಪೂರ್ವಭಾವಿ ಪ್ರಸ್ತಾಪ ಮಾಡಿ ಉಪಮುಖ್ಯ ಮಂತ್ರಿ ಸ್ಥಾನದಲ್ಲಿರುವ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆ ಕೇಸ್ ವಾಪಸ್ ಪಡೆದಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ. ಇದೊಂದು ಗಂಭೀರ ಪ್ರಕರಣ. ಈ ವಿಚಾರದ ಬಗ್ಗೆ ಚರ್ಚೆ ಮಾಡುವು���ಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.
14
+ ಕಾನೂನು ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಬಿಜೆಪಿ ಇದನ್ನು ನಿಲುವಳಿ ಸೂಚನೆಗೆ ಎತ್ತಿಕೊಂಡಿದ್ದೇ ತಪ್ಪು. ಯಾವ ವಿಚಾರ ಕೋರ್ಟ್ನಲ್ಲಿದೆಯೋ ಅದನ್ನೇ ಚರ್ಚೆಗೆ ತಂದರೆ ಹೇಗೆ? ಇದನ್ನು ಕೈಬಿಡಬೇಕು ಎಂದು ಮನವಿ ಮಾಡಿದರು. ಕೋರ್ಟ್ನಲ್ಲಿ ಪ್ರಕರಣ ಬಾಕಿ ಇರುವಾಗ ಚರ್ಚೆಗೆ ಅವಕಾಶ ನೀಡುವುದಿಲ್ಲ, ಇದು ನ್ಯಾಯಾಂಗ ನಿಂದನೆ ಆಗುತ್ತದೆ. ಹೀಗಾಗಿ ಚರ್ಚೆಗೆ ಅವಕಾಶವಿಲ್ಲ ಎಂದು ಸಭಾಪತಿ ಹೊರಟ್ಟಿ ರೂಲಿಂಗ್ ನೀಡಿದರು.
15
+ ಇದನ್ನು ಒಪ್ಪದೇ ಚರ್ಚೆಗೆ ಅವಕಾಶ ನೀಡುವಂತೆ ಬಿಜೆಪಿ ಸದಸ್ಯರು ಆಗ್ರಹಪಡಿಸಿದರು. ಸಭಾಪತಿ ರೂಲಿಂಗ್ ಕೊಟ್ಟ ಮೇಲೂ ಮಾತನಾಡುವುದು ಗೌರವ ಅಲ್ಲ ಎಂದು ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಈ ವಿಚಾರದ ಬಗ್ಗೆ ಆಡಳಿತ ಮತ್ತು ಬಿಜೆಪಿ ಸದಸ್ಯರ ನಡುವೆ ಕೆಲಕಾಲ ವಾಗ್ವಾದ ನಡೆದಾಗ ಮಧ್ಯಪ್ರವೇಶಿಸಿದ ಸಭಾಪತಿ, ಈ ವಿಷಯದ ಮೇಲೆ ಮತ್ತೆ ಮಾತಾಡಬೇಡಿ, ಹುಡುಗಾಟ ಮಾಡಬೇಡಿ ಎಂದು ಗರಂ ಆಗಿ ಮುಂದಿನ ಕಲಾಪ ಕೈಗೆತ್ತಿಕೊಂಡಾಗ ಚರ್ಚೆಗೆ ತೆರೆ ಬಿದ್ದಿತು.
eesanje/url_46_287_11.txt ADDED
@@ -0,0 +1,9 @@
 
 
 
 
 
 
 
 
 
 
1
+ : ರೈತರಿಗೆ ಸಿಹಿಸುದ್ದಿ ಕೊಟ್ಟ ಸಿಎಂ, ಸಹಕಾರ ಬ್ಯಾಂಕುಗಳ ಬಡ್ಡಿ ಸಂಪೂರ್ಣ ಮನ್ನಾ
2
+ ಬೆಳಗಾವಿ, ಡಿ.15- ಸಹಕಾರ ಬ್ಯಾಂಕುಗಳಲ್ಲಿರುವ ಮಧ್ಯಮಾವ ಮತ್ತು ದೀರ್ಘಾವ ಸಾಲದ ಅಸಲನ್ನು ಕಟ್ಟಿದರೆ ಸಂಪೂರ್ಣ ಬಡ್ಡಿಯನ್ನು ಮನ್ನಾ ಮಾಡಲು ನಮ್ಮ ಸರ್ಕಾರ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಗೆ ತಿಳಿಸಿದರು. ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತ ಚರ್ಚೆಗೆ ಉತ್ತರ ನೀಡಿದ ಅವರು, ರೈತರ ಸಾಲ ಮನ್ನಾ ಮಾಡುವ ಕುರಿತು ನಾವು ನಮ್ಮ ಪ್ರಣಾಳಿಕೆಯಲ್ಲಿ ಹೇಳಿಲ್ಲ.
3
+ ಬಿಜೆಪಿಯವರು 2018 ರ ತಮ್ಮ ಪ್ರಣಾಳಿಕೆಯಲ್ಲಿ ನಮ್ಮ ಸರಕಾರದ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ರಾಷ್ಟ್ರೀಕೃತ ಬ್ಯಾಂಕು ಮತ್ತು ಸಹಕಾರಿ ಸಂಘಗಳಲ್ಲಿ ಇರುವ 1 ಲಕ್ಷದವರೆಗೆ ರೈತರ ಬೆಳೆ ಸಾಲ ಮನ್ನಾ ಮಾಡಲಾಗುವುದು ಎಂದು ಹೇಳಿದ್ದರು. ಆದರೆ ಬಿಜೆಪಿಯವರು ಈ ಕುರಿತು ಏನಾದರೂ ಮಾಡಿದರಾ? ನಯಾಪೈಸೆ ಬಿಡುಗಡೆ ಮಾಡಿದರಾ? ಹೇಳಿ ಎಂದು ಪ್ರಶ್ನಿಸಿದರು.
4
+ ಯಡಿಯೂರಪ್ಪನವರು 2019 ರ ಆಗಸ್ಟ್‍ನಲ್ಲಿ ಅತಿವೃಷ್ಟಿಯ ಕಾರಣಕ್ಕೆ ಬೆಳೆ ಹಾನಿಯಾಗಿತ್ತು. ಆಗ ಶಿವಮೊಗ್ಗದಲ್ಲಿ ಯಡಿಯೂರಪ್ಪನವರು ಕೇಳಿದಷ್ಟು ಹಣ ಕೊಡಲು ಸರ್ಕಾರದಲ್ಲಿ ನೋಟ್ ಪ್ರಿಂಟ್ ಮಾಡುವ ಯಂತ್ರವಿಲ್ಲ ಎಂದು ಹೇಳಿದ್ದರು. ಇದೇ ರೀತಿ ಈ ಹಿಂದೆಯೂ ಹೇಳಿದ್ದರು ಎಂದು ಟೀಕಿಸಿದರು.
5
+ ಉತ್ತರ ಕರ್ನಾಟಕದಲ್ಲಿ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಆರ್ಥಿಕತೆಗೆ ಉತ್ತೇಜನ ನೀಡಲು ಹಾಗೂ ಸ್ಥಳೀಯರಿಗೆ ಉದ್ಯೋಗ ಒದಗಿಸುವ ಸಲುವಾಗಿ ಬೆಳಗಾವಿ ಸಮೀಪ ಸುಮಾರು 2000 ಎಕರೆ ಪ್ರದೇಶದಲ್ಲಿ ಹೊಸ ಕೈಗಾರಿಕಾ ಪ್ರದೇಶ, 500 ಎಕರೆ ಪ್ರದೇಶದಲ್ಲಿ ಫೌಂಡ್ರಿ ಕ್ಲಸ್ಟರ್ ಅನ್ನು ಸ್ಥಾಪಿಸಲಾಗುವುದು ಹಾಗೂ ಜಿಲ್ಲೆಯಲ್ಲಿ ಏರೋಸ್ಪೇಸ್ ಆಧಾರಿತ ಕೈಗಾರಿಕೆಗಳ ಬೆಳವಣಿಗೆಗೆ ವಿಶೇಷ ಒತ್ತು ನೀಡಲಾಗುವುದು ಎಂದರು.
6
+ ಹೆಚ್ಚುತ್ತಿರುವ ಹೃದಯ ಸಂಬಂಧಿ ಕಾಯಿಲೆಗಳು, ಆತಂಕ ವ್ಯಕ್ತಪಡಿಸಿದ ವೈದ್ಯರು
7
+ ಧಾರವಾಡ ಲ್ಲೆಯಲ್ಲಿ ಕೈಗಾರಿಕಾ ಕ್ಲಸ್ಟರ್ ಅನ್ನು ಸ್ಥಾಪಿಸಲಾಗುತ್ತಿದ್ದು, ಈಗಾಗಲೇ 19 ಘಟಕಗಳು 1255 ಕೋಟಿ ರೂ. ಬಂಡವಾಳ ಹೂಡಿಕೆ ಮಾಡುತ್ತಿದ್ದು, ಸುಮಾರು 2450 ಜನರಿಗೆ ಉದ್ಯೋಗ ದೊರೆಯುವ ನಿರೀಕ್ಷೆ ಇದೆ. ಅಲ್ಲದೇ, ಧಾರವಾಡದ ಸಮೀಪ ಸುಮಾರು 3000 ಎಕರೆ ಪ್ರದೇಶದಲ್ಲಿ ಹೊಸ ಕೈಗಾರಿಕಾ ಪ್ರದೇಶವನ್ನು ಸ್ಥಾಪಿಸಲಾಗುತ್ತದೆ ಎಂದು ಪ್ರಕಟಿಸಿದರು.
8
+ ರಾಯಚೂರಿನಲ್ಲಿ ಹತ್ತಿ ಉತ್ಪಾದನೆಯು ಹೆಚ್ಚಿರುವುದರಿಂದ ಈ ಲ್ಲೆಯಲ್ಲಿ ಆರ್ಥಿಕ ಅಭಿವೃದ್ಧಿ ಹಾಗೂ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವ ದೃಷ್ಠಿಯಿಂದ ಹತ್ತಿ ಆಧಾರಿತ ಕೈಗಾರಿಕೆಗಳ ಸ್ಥಾಪನೆಗೆ ವಿಶೇಷ ಒತ್ತು ನೀಡಲಾಗುವುದು ಎಂದರು. ವಿಜಯಪುರದಲ್ಲಿ ಉತ್ಪಾದನಾ ಕ್ಲಸ್ಟರ್ ಅನ್ನು ಅಂದಾಜು 1500 ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಗುವುದು. ಉತ್ತರ ಕರ್ನಾಟಕವು ಸಮೃದ್ಧ ಪ್ರವಾಸೋದ್ಯಮಗಳ ತಾಣವಾಗಿದೆ.
9
+ ಐತಿಹಾಸಿಕ ಮಹತ್ವವಿರುವ ಈ ತಾ���ಗಳು ಅಂತರಾಷ್ಟ್ರೀಯವಾಗಿಯೂ ಮಹತ್ವ ಪಡೆದಿವೆ. ಪ್ರವಾಸೋದ್ಯಮವನ್ನು ಅಭಿವೃದ್ಧಿ ಮಾಡಲು ಸಮಗ್ರ ಕ್ರಿಯಾಯೋಜನೆಯನ್ನು ರೂಪಿಸಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಕ್ರಮ ವಹಿಸುತ್ತೇವೆ ಎಂದು ಹೇಳಿದರು.ಧಾರವಾಡದಲ್ಲಿರುವ ವಾಲ್ಮಿ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ ಯನ್ನು ಉನ್ನತೀಕರಿಸಲಾಗುವುದು. ಇದರ ಮೂಲಕ ಜಲ ಶಿಕ್ಷಣ ನೀಡುವುದಷ್ಟೆ ಅಲ್ಲ, ಉತ್ತರ ಕರ್ನಾಟಕದ ಮಣ್ಣಿನ ಸವುಳು- ಜವುಳು ಸಮಸ್ಯೆಯನ್ನು ನಿರ್ವಹಿಸಲಾಗುವುದು. ಹಾಗೂ ರೈತರ ಆದಾಯ ಹೆಚ್ಚಳದ ಕಡೆಗೆ ಒತ್ತು ನೀಡಲಾಗುವುದು ಎಂದು ಹೇಳಿದರು.
eesanje/url_46_287_12.txt ADDED
@@ -0,0 +1,7 @@
 
 
 
 
 
 
 
 
1
+ ಬೆಂಗಳೂರು : ಚರ್ಚ್ ಸ್ಪೋಟದ ಆರೋಪಿಗೆ ಪೆರೋಲ್ ಮಂಜೂರು
2
+ ಬೆಂಗಳೂರು, ಡಿ 15 (ಪಿಟಿಐ) : ಚರ್ಚ್ ಸ್ಪೋಟ ಪ್ರಕರಣದಲ್ಲಿ ಜೀವಾವ ಶಿಕ್ಷೆ ಅನುಭವಿಸುತ್ತಿರುವ ಅಪರಾಗೆ ಕರ್ನಾಟಕ ಹೈಕೋರ್ಟ್ ಎರಡು ವಾರಗಳ ಪೆರೋಲ್ ಮಂಜೂರು ಮಾಡಿದೆ. ಬಂತ ಮೊಹಮ್ಮದ್ ಅಖಿಲ್ ಜುಲೈ 2000 ರಲ್ಲಿ ಬೆಂಗಳೂರಿನಲ್ಲಿ ನಡೆದ ಚರ್ಚ್ ಸ್ಪೋಟ ಪ್ರಕರಣದ ಅಪರಾಗಳಲ್ಲಿ ಒಬ್ಬರಾಗಿದ್ದಾರೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ಗೋವಾದಲ್ಲಿ ಉಂಟಾದ ಸ್ಪೋಟಗಳಲ್ಲಿ ದೀನದರ್ ಅಂಜುಮನ್ ಪಂಥಕ್ಕೆ ಸೇರಿದ 24 ಆರೋಪಿಗಳು ತಪ್ಪಿತಸ್ಥರೆಂದು ಸಾಬೀತಾಗಿದೆ. ಜೀವಾವ ಶಿಕ್ಷೆಗೆ ಗುರಿಯಾದ 13 ಮಂದಿಯಲ್ಲಿ ಅಖಿಲ್ ಕೂಡ ಒಬ್ಬ.
3
+ ಅಖಿಲ್ ಅವರ ಪತ್ನಿ ಮುಬೀನ್ ಉನ್ನಿಸ್ಸಾ ಬೇಗಂ ಅವರು ಅರ್ಜಿ ಸಲ್ಲಿಸಿದ್ದು, ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ವಿಚಾರಣೆ ನಡೆಸಿದರು.ಅಪರಾಯು ಇಂದಿನವರೆಗೆ 23 ವರ್ಷಗಳ ಜೈಲುವಾಸವನ್ನು ವಿನಾಯಿತಿ ಇಲ್ಲದೆ ಅನುಭವಿಸಿದ್ದಾರೆ ಮತ್ತು 23 ವರ್ಷಗಳವರೆಗೆ ಪೆರೋಲ್ ನೀಡಲಾಗಿಲ್ಲ.
4
+ ಅಪರಾಯ ಪತ್ನಿ ಈಗ ನ್ಯಾಯಾಲಯದ ಮುಂದೆ ತಾನು ಅನುಭವಿಸುತ್ತಿರುವ ನೋವು ಹಾಗೂ ಇತರ ಕುಟುಂಬ ಸದಸ್ಯರು ಸಹ ವಯಸ್ಸಾದವರು ಮತ್ತು ಕಾಯಿಲೆಗಳಿಂದ ಬಳಲುತ್ತಿರುವ ಕಾರಣ ಕುಟುಂಬದಲ್ಲಿ ತನ್ನ ಗಂಡನ ಉಪಸ್ಥಿತಿಯು ತುಂಬಾ ಅವಶ್ಯಕವಾಗಿದೆ ಎಂದು ಮಾಡಿಕೊಂಡ ಮನವಿ ಪರಿಗಣಿಸಿ ಪೆರೋಲ್ ಮಂಜೂರು ಮಾಡಲಾಗಿದೆ ಎಂದು ನ್ಯಾಯಾಲಯವು ತನ್ನ ಇತ್ತೀಚಿನ ತೀರ್ಪಿನಲ್ಲಿ ತಿಳಿಸಿದೆ.
5
+ ಶಿಮ್ಲಾಗಿಂತಲೂ ತಂಪಾದ ದೆಹಲಿ
6
+ ಪೆರೋಲ್ ಅವಯಲ್ಲಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರು ಮತ್ತು ಪೊಲೀಸ್ ಮಹಾನಿರ್ದೇಶಕರು, ಕಾರಾಗೃಹಗಳು ಮತ್ತು ಸುಧಾರಣಾ ಸೇವೆಗಳು, ಸಾಮಾನ್ಯವಾಗಿ ನಿಗದಿಪಡಿಸಿದಂತೆ ಕಟ್ಟುನಿಟ್ಟಾದ ಷರತ್ತುಗಳನ್ನು ವಿಸಲು, ಬಂತ ಮತ್ತೆ ಜೈಲಿಗೆ ಹಿಂದಿರುಗಿಸುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಅವರು ಯಾವುದೇ ಇತರ ಅಪರಾಧವನ್ನು ಮಾಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಆದೇಶಿಸಲಾಗಿದೆ.
7
+ ಮುಬೀನ್ ಉನ್ನಿಸ್ಸಾ ಬೇಗಂ ಅವರು ತಮ್ಮ ಪತಿಗೆ 90 ದಿನಗಳ ಪೆರೋಲ್ ನೀಡುವಂತೆ ಕೋರಿದ್ದರು. ಅರ್ಜಿದಾರರ ಪತ್ನಿ ಪೆರೋಲ್‍ನ ವಿಸ್ತರಣೆಯನ್ನು ಕೋರಬಹುದು ಎಂದು ನ್ಯಾಯಾಲಯವು ಅರ್ಜಿದಾರನ ಪತಿ – ಅಪರಾ ಪೆರೋಲ್‍ನಲ್ಲಿ ಹೊರಗಿರುವಾಗ ಅವರ ನಡವಳಿಕೆಯನ್ನು ಪರಿಗಣಿಸುತ್ತದೆ ಎಂದು ಹೇಳಿದೆ.
eesanje/url_46_287_2.txt ADDED
@@ -0,0 +1,13 @@
 
 
 
 
 
 
 
 
 
 
 
 
 
 
1
+ ಬೆಳಗಾವಿಗೆ ರಾಷ್ಟ್ರೀಯ ಮಹಿಳಾ ಆಯೋಗ ತಂಡ ಭೇಟಿ
2
+ ಬೆಂಗಳೂರು,ಡಿ.16- ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿರುವ ಬೆಳಗಾವಿ ಮಹಿಳಾ ವಿವಸ್ತ್ರ ಪ್ರಕರಣ ಸಂಬಂಧ ರಾಷ್ಟ್ರೀಯ ಮಹಿಳಾ ಆಯೋಗವು ಮಾಹಿತಿಯನ್ನು ಕಲೆ ಹಾಕಿದೆ. ಇದರ ಬೆನ್ನಲ್ಲೇ ಬಿಜೆಪಿ ಸತ್ಯಶೋಧನಾ ಸಮಿತಿಯು ಕೂಡ ಬೆಳಗಾವಿಯ ಸಂತ್ರಸ್ತ ಮಹಿಳೆಯನ್ನು ಭೇಟಿ ಮಾಡಿ ವಿವರಣೆ ಪಡೆದುಕೊಂಡಿದೆ. ಮತ್ತೊಂದೆಡೆ ಬಿಜೆಪಿ ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದೆ.
3
+ ಶನಿವಾರ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಡೆಲಿನಾ ಕೊಂಗ್‍ಡೊಪ್ ನೇತೃತ್ವದ ತಂಡ ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ಸಖಿ-1 ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತ ಮಹಿಳೆಯನ್ನು ಭೇಟಿ ಮಾಡಿ ವಿವರಣೆ ಪಡೆದುಕೊಂಡಿತು. ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ನಗರ ಪೊಲೀಸ್ ಆಯುಕ್ತ, ಜಿಲ್ಲಾ ಆರೋಗ್ಯ ಅಧಿಕಾರಿಗಳು ಸೇರಿದಂತೆ ಮತ್ತಿತರರು ಹಾಜರಿದ್ದರು.
4
+ ಆಯೋಗದ ಸದಸ್ಯರನ್ನು ನೋಡುತ್ತಲೇ ಸಂತ್ರಸ್ತೆ ಕಣ್ಣೀರಿಟ್ಟರು. ಅಂದು ಸಕಾಲಕ್ಕೆ ಸರಿಯಾಗಿ ಪೊಲೀಸರು ಬಾರದಿದ್ದರೆ ನನ್ನನ್ನು ಕೊಂದೇ ಬಿಡುತ್ತಿದ್ದರು. ಈಗಲೂ ಅದನ್ನು ನೆನೆಸಿಕೊಂಡರೆ ನನಗೆ ಮೈಜುಮ್ಮೆನ್ನುತ್ತದೆ ಎಂದು ಘಟನೆಯ ಬಗ್ಗೆ ಮಹಿಳೆಯು ದಿಗ್ಭ್ರಾಂತಿ ವ್ಯಕ್ತಪಡಿಸಿದರೆಂದು ತಿಳಿದುಬಂದಿದೆ. ಘಟನೆ ಹೇಗೆ ನಡೆಯಿತು? ಅಂದು ಮನೆಗೆ ಯಾರ್ಯಾರು ಬಂದಿದ್ದರು, ನಿಜವಾದ ಕಾರಣವೇನು? ಇದರ ಹಿಂದೆ ಯಾವುದಾದರೂ ಕಾಣದ ಕೈಗಳ ಕೈವಾಡವಿದೆಯೇ ಎಂಬುದು ಸೇರಿದಂತೆ ಹಲವಾರು ಆಯಾಮಗಳಲ್ಲಿ ಮಹಿಳಾ ಆಯೋಗ ಸಂತ್ರಸ್ತೆಯಿಂದ ಖುದ್ದು ವಿವರಣೆಯನ್ನು ಪಡೆದುಕೊಂಡಿತು.
5
+ ತುಮಕೂರು ನೂತನ ಜಿಲ್ಲಾಧಿಕಾರಿಯಾಗಿ ಶುಭಕಲ್ಯಾಣ್ ಅಧಿಕಾರ ಸ್ವೀಕಾರ
6
+ ಸಂತ್ರಸ್ತೆಯ ಹೇಳಿಕೆಯನ್ನು ವಿಡಿಯೋ ರೆಕಾರ್ಡ್ ಮಾಡಿಕೊಳ್ಳಲಾಗಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳಿಗೂ ಸಂಬಂಧವಿದೆಯೇ ಎಂಬುದರ ಬಗ್ಗೆಯೂ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ. ಇದಕ್ಕೂ ಮುನ್ನ ದೆಹಲಿಯಿಂದ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಬಂದ ಸಂಸದರ ತಂಡವನ್ನು ಮಾಜಿ ಶಾಸಕ ಸಂಜಯ್ ಪಾಟೀಲ್ ಬರ ಮಾಡಿಕೊಂಡರು. ನಂತರ ಬೆಳಗಾವಿ ಲೋಕಸಭೆ ಸದಸ್ಯೆಮಂಗಳಾ ಅಂಗಡಿಯವರನ್ನು ಭೇಟಿ ಮಾಡಿದರು. ಈ ವೇಳೆ ಮಾಜಿ ಶಾಸಕ ಅನಿಲ್ ಬೆನಕೆ ಮತ್ತಿತರರು ಉಪಸ್ಥಿತರಿದ್ದರು.
7
+ ಬಿಜೆಪಿ ನಿಯೋಗ ಭೇಟಿ:ರಾಷ್ಟ್ರೀಯ ಮಹಿಳಾ ಆಯೋಗ ಭೇಟಿ ಕೊಟ್ಟ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ರಚಿಸಿದ್ದ ಐವರು ಮಹಿಳಾ ಸಂಸದರ ಸತ್ಯ ಶೋಧನಾ ಸಮಿತಿಯ ತಂಡವೂ ಕೂಡ ಸಂತ್ರಸ್ತ ಮಹಿಳೆಯನ್ನು ಭೇಟಿ ಮಾಡಿದೆ. ಬಿಜೆಪಿ ಸಂಸದರಾದ ಅಪ್ರಜಿತಾ ಸಾರಂಗಿ, ಸುನೀತಾ ದುಗ್ಗಲ್, ಲಾಕೆಟ್ ಚಟರ್ಜಿ, ರಂಜಿತಾ ಕೋಲಿ ಮತ್ತು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಆಶಾ ಲಾಕ್ರಾ ಅವರ ತಂಡವು ಆಸ್ಪತ್ರೆ ಮತ್ತು ಮನೆಗೆ ಪ್ರತ್ಯೇಕವಾಗಿ ಭೇಟಿ ಕೊಟ್ಟಿದೆ.
8
+ ಕೇಂದ್��ದ ಈ ತಂಡಕ್ಕೆ ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ, ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ಡಾ.ರಾಜೇಶ ನೆರ್ಲಿ, ಬೆಳಗಾವಿ ಮೇಯರ್ ಶೋಭಾ ಸೋಮನಾಚೆ, ಉಪಮೇಯರ್ ರೇಶ್ಮಾ ಪಾಟೀಲ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕರಾದ ಶಶಿಕಲಾ ಜೊಲ್ಲೆ, ಅಭಯ ಪಾಟೀಲ, ವಿಧಾನಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ರಾಜ್ಯ ಕಾರ್ಯದರ್ಶಿ ಉಜ್ವಲಾ ಬಡವಣಾಚೆ, ಮುಖಂಡರಾದ ಬಸವರಾಜ ಹುಂದ್ರಿ ಹಾಗೂ ಪವನ ಕತ್ತಿ ಅವರು ಕೃತ್ಯದ ಕುರಿತ ಮಾಹಿತಿಗಳನ್ನು ನೀಡಿದ್ದರು. ಮೊದಲು ಆಸ್ಪತ್ರೆಗೆ ಭೇಟಿ ಕೊಟ್ಟ ತಂಡ ಮಹಿಳೆಯನ್ನು ಭೇಟಿ ಮಾಡಿ ಘಟನೆ ಕುರಿತು ಮಾಹಿತಿಯನ್ನು ಕಲೆ ಹಾಕಿದೆ. ನಂತರ ಘಟನೆ ನಡೆದ ವಂಟಮುರಿಗೂ ಭೇಟಿ ನೀಡಿ ಸಂಬಂಧಿಕರಿಂದ ಮಾಹಿತಿಯನ್ನು ಪಡೆದುಕೊಂಡಿದೆ.
9
+ ಈ ಸತ್ಯಶೋಧನಾ ಸಮಿತಿಯು ಘಟನೆ ಕುರಿತು ಹಲವರಿಂದ ಹೇಳಿಕೆಗಳನ್ನು ಪಡೆದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರಿಗೆ ವರದಿಯನ್ನು ಸಲ್ಲಿಸಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಘಟನೆ ಕುರಿತಂತೆ ಸತ್ಯ ಶೋಧನಾ ಸಮಿತಿಯಿಂದ ವಿಡಿಯೋ ಕಾನರೆನ್ಸ್ ಮೂಲಕ ಮಾಹಿತಿ ಪಡೆದುಕೊಂಡರು. ರಾಜ್ಯ ಸರ್ಕಾರದ ವೈಫಲ್ಯ ಹಾಗೂ ಮಹಿಳೆಯರಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
10
+ ಬಿಜೆಪಿ ಪ್ರತಿಭಟನೆ:ಇನ್ನು ಬಿಜೆಪಿ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯಾದ್ಯಂತ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದೆ. ಬೆಂಗಳೂರು ಸೇರಿದಂತೆ ಅನೇಕ ಕಡೆ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ಸರ್ಕಾರದ ವಿರುದ್ಧ ಕ್ಕಾರದ ಘೋಷಣೆಗಳನ್ನು ಕೂಗಿ ಮಹಿಳೆಗೆ ರಕ್ಷಣೆ ಕೊಡಲು ಸಾಧ್ಯವಾಗದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹಸಚಿವ ಡಾ.ಜಿ.ಪರಮೇಶ್ವರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದರು.
11
+ ನಗರದ ಮೇಕ್ರಿವೃತ್ತದಲ್ಲಿ ಕೇಂದ್ರದ ಮಾಜಿ ಸಚಿವ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಡಿ.ವಿ.ಸದಾನಂದಗೌಡ ಹಾಗು ಮಹಿಳಾ ಘಟಕದ ವತಿಯಿಂದ ಪ್ರತಿಭಟನೆ ನಡೆಸಿ ಗೃಹಸಚಿವ ಪರಮೇಶ್ವರ್ ಅವರ ಮನೆಗೆ ಮುತ್ತಿಗೆ ಹಾಕುವ ಪ್ರಯತ್ನ ನಡೆಸಲಾಯಿತು. ಸದಾಶಿವನಗರದಲ್ಲಿರುವ ಪರಮೇಶ್ವರ್ ಅವರ ಮನೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರಾದರೂ ಪೊಲೀಸರು ಕೆಲವರನ್ನು ವಶಕ್ಕೆ ಪಡೆದುಕೊಂಡರು.
12
+ ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿದ ಇಬ್ಬರು ಭಾರತೀಯರ ಬಂಧನ
13
+ ಡಿಸೆಂಬರ್ 11 ರಂದು ಬೆಳಗಾವಿ ಜಿಲ್ಲೆಯ ವಂಟಮುರಿ ಗ್ರಾಮದಲ್ಲಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ, ಬೆತ್ತಲೆ ಮೆರವಣಿಗೆ ನಡೆಸಿ, ವಿದ್ಯುತ್ ಕಂಬಕ್ಕೆ ಕಟ್ಟಿಹಾಕಲಾಗಿತ್ತು. ಬೇರೊಬ್ಬರೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳಲು ಹೊರಟಿದ್ದ ಹುಡುಗಿಯೊಂದಿಗೆ ಈ ಮಹಿಳೆಯ ಮಗ ಓಡಿಹೋಗಿದ್ದಕ್ಕಾಗಿ ಇಂತಹ ಕೃತ್ಯ ಎಸಗಲಾಗಿತ್ತು. ಈಗಾಗಲೇ ಪ್ರಕರಣದಲ್ಲಿ 8 ಮಂದಿಯನ್ನು ಬಂಧಿಸಲಾಗಿದ್ದು, ಇನ್ನೂ 8 ಜನರಿಗಾಗಿ ಶೋಧ ನಡೆಯುತ್ತಿದೆ. ಕರ್ನಾಟಕ ಹೈಕೋರ್ಟ್ ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿದೆ.
eesanje/url_46_287_3.txt ADDED
@@ -0,0 +1,8 @@
 
 
 
 
 
 
 
 
 
1
+ ಕೃಷಿ ಸಾಲ ಮನ್ನಾ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ : ಸಚಿವ ರಾಜಣ್ಣ
2
+ ಬೆಂಗಳೂರು,ಡಿ.16- ರಾಜ್ಯದ ರೈತರು ಪಡೆದಿರುವ ಕೃಷಿ ಸಾಲವನ್ನು ಮನ್ನಾ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ. ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, 2022-23 ನೇ ಸಾಲಿನಲ್ಲಿ ಸಹಕಾರ ಸಂಸ್ಥೆಗಳ ಮೂಲಕ 28,86,548 ರೈತರು, 21,324.05 ಕೋಟಿ ರೂ. ಮೊತ್ತದ ಬೆಳೆಸಾಲ ಪಡೆದಿದ್ದಾರೆ. ಅವರಲ್ಲಿ ನವೆಂಬರ್ 30 ರವರೆಗೆ 18,64,042 ರೈತರು 12,484.18 ಕೋಟಿ ರೂ.ಗಳನ್ನು ಮರುಪಾವತಿಸಿದ್ದಾರೆ. ಈ ಅವಯಲ್ಲಿ ಗಡುವು ಬರುವ ಸಾಲಗಳಿಗೆ 47,733 ರೈತರು 320 ಕೋಟಿ ರೂ.ಗಳನ್ನು ಪಾವತಿಸದೆ ಸುಸ್ತಿದಾರರಾಗಿದ್ದಾರೆ.
3
+ ರಾಷ್ಟ್ರೀಕೃತ ಬ್ಯಾಂಕುಗಳಿಂದ 5,47,777 ರೈತರು 9,761.85 ಕೋಟಿ ರೂ.ಗಳ ಬೆಳೆ ಸಾಲ ಪಡೆದುಕೊಂಡಿದ್ದಾರೆ. ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸಂಬಂಧಿಸಿದಂತೆ ಸಾಲದ ಮೊತ್ತದಲ್ಲಿ ಮರುಪಾವತಿ ಮಾಹಿತಿ ಲಭ್ಯವಿಲ್ಲ ಎಂದು ರಾಜ್ಯಮಟ್ಟದ ಬ್ಯಾಂಕರ್‍ಗಳ ಸಮಿತಿಯ ಸಂಚಾಲಕರು ತಿಳಿಸಿದ್ದಾರೆ.
4
+ ಬರಗಾಲದ ಹಿನ್ನೆಲೆಯಲ್ಲಿ ಸಾಲಮನ್ನಾ ಮಾಡಬೇಕು ಎಂಬ ವಿಪಕ್ಷಗಳ ಬೇಡಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ವಿಧಾನಮಂಡಲದ ಚರ್ಚೆಯಲ್ಲಿ ನೇರವಾಗಿ ಉತ್ತರಿಸದೆ ಅಸಮ್ಮತಿ ತೋರಿಸಿದ್ದಾರೆ. ಆದರೆ ಸಹಕಾರ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಬೆಳೆಸಾಲದ ಅಸಲನ್ನು ಪಾವತಿಸಿದರೆ ಸಂಪೂರ್ಣ ಬಡ್ಡಿ ಮನ್ನಾ ಮಾಡುವುದಾಗಿ ಹೇಳಿದ್ದಾರೆ.
5
+ ಸಹಕಾರ ಸಚಿವ ರಾಜಣ್ಣ ನೀಡಿರುವ ಮಾಹಿತಿ ಪ್ರಕಾರ ಸಹಕಾರ ಬ್ಯಾಂಕುಗಳಲ್ಲಿ ಸಾಲ ಪಡೆದವರ ಪೈಕಿ 10,22,506 ರೈತರು ಇನ್ನೂ 8,374.86 ಕೋಟಿ ರೂ.ಗಳನ್ನು ಪಾವತಿಸಬೇಕಿದೆ. ಬರದ ಹಿನ್ನೆಲೆಯಲ್ಲಿ ಸಾಲಮರುಪಾವತಿ ಕಷ್ಟಸಾಧ್ಯ ಎಂಬ ಕಾರಣಕ್ಕಾಗಿಯೇ ಮನ್ನಾ ಮಾಡುವ ಬೇಡಿಕೆಗಳು ಕೇಳಿಬಂದಿದ್ದವು. ಆದರೆ ಸರ್ಕಾರ ಸಾಲಮನ್ನಾ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಉತ್ತರಿಸಿದೆ.
6
+ ಮಧ್ಯಪ್ರದೇಶ ಸಿಎಂ ಪ್ರಧಾನ ಕಾರ್ಯದರ್ಶಿಯಾಗಿ ರಾಘವೇಂದ್ರ ಕುಮಾರ್ ಸಿಂಗ್ ನೇಮಕ
7
+ ಯಶಸ್ವಿನಿ ಯೋಜನೆಯಡಿ ಸಹಕಾರ ಸಂಘಗಳ 48.24 ಲಕ್ಷ ಸದಸ್ಯರು ನೋಂದಣಿಬೆಂಗಳೂರು,ಡಿ.16- ರಾಜ್ಯದಲ್ಲಿ ಯಶಸ್ವಿನಿ ಯೋಜನೆಯಡಿ ಸಹಕಾರ ಸಂಘಗಳ 48.24 ಲಕ್ಷ ಸದಸ್ಯರು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ. ಬಾಗೇಪಲ್ಲಿ ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರ ಪ್ರಶ್ನೆಗೆ ಉತ್ತರ ನೀಡಿರುವ ಸಚಿವರು, ಗ್ರಾಮೀಣ ಭಾಗದಲ್ಲಿ 44,35,202 ಸದಸ್ಯರು ನೋಂದಣಿಯಾಗಿದ್ದು, 12,14,472 ಮಂದಿಗೆ ಕಾರ್ಡ್ ವಿತರಿಸಲಾಗಿದೆ. ನಗರ ಪ್ರದೇಶದಲ್ಲಿ 3,89,467 ಸದಸ್ಯರು ನೋಂದಣಿಯಾಗಿದ್ದು, 1,15,193 ಮಂದಿಗೆ ಕಾರ್ಡ್ ವಿತರಿಸಲಾಗಿದೆ.
8
+ ಒಟ್ಟಾರೆ ಯಶಸ್ವಿನಿ ಕಾರ್ಡ್ ವಿತರಣೆಯ ಪ್ರಮಾಣ ಶೇ.27 ರಷ್ಟಾಗಿದ್ದು, 13,21,665 ಮಂದಿಗೆ ಮಾತ್ರ ಕಾರ್ಡ್‍ಗಳನ್ನು ತಲುಪಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಜಿಲ್ಲಾ ಹಾಲು ಒಕ್ಕೂಟಗಳ ಸಹಯೋಗದೊಂದಿಗೆ ಯೋಜನೆಯ ಶಿಬಿರಗಳನ್ನು ಆಯೋಜಿಸಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯಾಧ್ಯಕ್ಷರ ಸಭೆ ನಡೆಸಿ ಹೆಚ್ಚಿನ ಸದಸ್ಯರನ್ನು ನೋಂದಾಯಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದ್ದಾರೆ.
eesanje/url_46_287_4.txt ADDED
@@ -0,0 +1,8 @@
 
 
 
 
 
 
 
 
 
1
+ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಕೋಡಿಶ್ರೀಗಳಿಗೆ ಆಹ್ವಾನ
2
+ ಅರಸೀಕೆರೆ, ಡಿ.16- ಮುಂದಿನ ವರ್ಷದ ಜ.22ರಂದು ಅಯೋಧ್ಯೆಯ ಶ್ರೀರಾಮ ಮಂದಿರದ ಗರ್ಭಗೃಹದಲ್ಲಿ ಜರುಗಲಿರುವ ಪವಿತ್ರ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿ ಅವರಿಗೆ ಆಹ್ವಾನ ನೀಡಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಾರಥ್ಯದಲ್ಲಿ ಅಭಿಜಿನ್ ಮುಹೂರ್ತದಲ್ಲಿ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯಾಗಲಿದೆ. ಪುಣ್ಯ ಹಾಗೂ ಐತಿಹಾಸಿಕ ಕ್ಷಣಕ್ಕೆ ಪೂಜ್ಯರು ಹಾಜರಿರಬೇಕು ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಸಮಿತಿ ಆಹ್ವಾನಿಸಿದೆ.
3
+ ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿದ ಇಬ್ಬರು ಭಾರತೀಯರ ಬಂಧನ
4
+ ಜ.21ರೊಳಗೆ ತಾವು ಅಯೋಧ್ಯೆಗೆ ಭೇಟಿ ನೀಡುವಂತೆ ಕೋರಲಾಗಿದ್ದು, ವಾಸ್ತವ್ಯಕ್ಕೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ತಡವಾದರೆ ಬೇರೆ ಬೇರೆ ತೊಂದರೆ ಎದುರಾಗಲಿವೆ. ಹಾಗಾಗಿ ಮುಂಚಿತವಾಗಿ ಪೂಜ್ಯರು ಉಪಸ್ಥಿತರಿರುವಂತೆ ಸಮಿತಿಯ ಪ್ರಧಾನ ಕಾರ್ಯದರ್ಶಿ ಚಂಪಲ್ ರೈ ವಿನಂತಿಸಿದ್ದಾರೆ.
5
+ ಉದ್ಘಾಟನೆಗೆ ಸಜ್ಜಾಗಿರುವ ಅಯೋಧ್ಯಾ ಶ್ರೀರಾಮ ಮಂದಿರ ಹತ್ತು-ಹಲವು ವಿಶೇಷತೆ ಹೊಂದಿರುವುದರ ಜೊತೆಗೆ ಇಲ್ಲಿನ ಪೂಜೆ-ಪುನಸ್ಕಾರಗಳೂ ವಿಶಿಷ್ಟವಾಗಿ ನಡೆಯಲಿವೆ. ಆದರೆ, ರಾಮ ಮಂದಿರದಲ್ಲಿ ಭಕ್ತರಿಗೆ ಹರಕೆ ಸೇವೆಗಳೇ ಇರುವುದಿಲ್ಲವಂತೆ. ಭಾರತ ದೇಶ ಮಾತ್ರವಲ್ಲ, ವಿಶ್ವದೆಲ್ಲೇಡೆ ಹಿಂದೂಗಳಿಗೆ ಜ.22 ಅತ್ಯಂತ ಮಹತ್ವದ ದಿನ. ಶತಮಾನಗಳ ಕಾಲ ಹಿಂದೂ ಸಮುದಾಯ ಕಾದು ಕುಳಿತಿದ್ದ ಮಹತ್ವದ ಕಾರ್ಯಕ್ರಮವೊಂದು ಆ ದಿನ ನಡೆಯಲಿದೆ. ಶ್ರೀರಾಮ ಮಂದಿರ ಇನ್ನೇನು ಮುಕ್ತಾಯ ಹಂತದಲ್ಲಿದೆ. ಮಂದಿರದ ಗರ್ಭ ಗೃಹದಲ್ಲಿ ರಾಮಲಲ್ಲಾ ಮೂರ್ತಿ, ಅಂದರೆ ಬಾಲ ರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಗೆ ಜ.22ರಂದು ಮುಹೂರ್ತ ನಿಗದಿ ಆಗಿದೆ.
6
+ ಪ್ರಧಾನಿ ಮೋದಿ ಅವರು ರಾಮ ಮಂದಿರದಿಂದ 500 ಮೀಟರ್ ದೂರದಲ್ಲಿ ಇರುವ ತಾತ್ಕಾಲಿಕ ನೆಲೆಯಿಂದ ಬಾಲ ರಾಮನ ಮೂರ್ತಿಯನ್ನು ತಮ್ಮ ಕೈಗಳಲ್ಲಿ ಹೊತ್ತು ತಂದು ಕಾಲ್ನಡಿಗೆ ಮೂಲಕವೇ ಶ್ರೀರಾಮ ಮಂದಿರದ ಗರ್ಭ ಗೃಹ ತಲುಪಲಿದ್ದಾರೆ. ಅಭಿಜಿನ್ ಮುಹೂರ್ತದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಆಗಲಿದೆ. ಈ ಮೂಲಕ ಶ್ರೀರಾಮನ ಭವ್ಯ ಮಂದಿರವನ್ನು ಪ್ರಧಾನಮಂತ್ರಿ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.
7
+ 12 ಕೋಟಿ ಮೌಲ್ಯದ ಕೊಕೇನ್ ವಶ
8
+ ಗರ್ಭಗೃಹದಲ್ಲಿ ಮೂರ್ತಿ ಪ್ರತಿಷ್ಠಾಪನೆಯಾದ ಬೆನ್ನಲ್ಲೇ ಬ್ರಹ್ಮ ಕಳಶೋತ್ಸವ ಕೂಡ ಶುರುವಾಗಲಿದೆ. ಜ.22 ರಿಂದ ಮಾರ್ಚ್ 10ರ ವರೆಗೆ 48 ದಿನಗಳ ಕಾಲ ಬ್ರಹ್ಮ ಕಳಶೋತ್ಸವ ನಡೆಯಲಿದೆ.
eesanje/url_46_287_5.txt ADDED
@@ -0,0 +1,5 @@
 
 
 
 
 
 
1
+ ಮನೋರಂಜನ್ ಕುಟುಂಬದ ಮೇಲೆ ಐಬಿ ನಿಗಾ
2
+ ಮೈಸೂರು, ಡಿ. 16-ಸಂಸತ್ ಕಲಾಪದ ವೇಳೆ ಆತಂಕ ಸೃಷ್ಟಿಸಿದ್ದ ಪ್ರಕರಣ ಸಂಬಂಧ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಆರೋಪಿ ಮನೋರಂಜನ್ ಪೋಷಕರು ಮನೆಯಿಂದ ಹೊರ ಹೋಗದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಮನೋರಂಜನ್ ತಂದೆ ತಾಯಿ ಮನೆ ಬಿಟ್ಟು ಹೊರಗಡೆ ಹೋಗದಂತೆ ಐಬಿ ಅಧಿಕಾರಿಗಳು ಖಡಕ್ ಸೂಚನೆ ನೀಡಿದ್ದು, ಹಾಗೆಯೇ ಮನೆಗೆ ಯಾವುದೇ ಸಂಬಂಧಿಕರು ಸದ್ಯದ ಪರಿಸ್ಥಿತಿಯಲ್ಲಿ ಬರದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
3
+ ಅಲ್ಲದೆ ಮನೆಯಲ್ಲಿರುವ ಯಾವುದೇ ಪತ್ರಿಕೆ ಹಾಗೂ ಪುಸ್ತಕಗಳನ್ನು ನಾವು ಹೇಳುವವವರೆಗೂ ಮಾರಾಟ ಮಾಡದಂತೆ ಮನೋರಂಜನ್ ತಂದೆ-ತಾಯಿಗೆ ಐಬಿ ಅಧಿಕಾರಿಗಳು ಸೂಚಿಸಿದ್ದಾರೆ. ಒಂದು ವೇಳೆ ತುರ್ತು ಪರಿಸ್ಥಿತಿ ಇದ್ದು ಹೊರಹೋಗಬೇಕಾದ ಅನಿವಾರ್ಯತೆ ಇದ್ದರೆ ನಮಗೆ ತಿಳಿಸುವಂತೆ ಹಾಗೂ ಅನಾಮಧೇಯ ಕರೆ ಬಂದರೆ ಅದರ ಬಗ್ಗೆ ಮಾಹಿತಿ ನೀಡುವಂತೂ ಅಧಿಕಾರಿಗಳು ಮನೋರಂಜನ್ ಪೋಷಕರಿಗೆ ತಿಳಿಸಿದ್ದಾರೆ.
4
+ ರತನ್ ಟಾಟಾಗೆ ಜೀವ ಬೆದರಿಕೆ ಹಾಕಿದ ವ್ಯಕಿ ಸುಳಿವು ಲಭ್ಯ
5
+ ಘಟನೆ ಮರುಸೃಷ್ಟಿ:ಆರೋಪಿಗಳು ಸಂಸತ್ ಭವನ ಪ್ರವೇಶಿಸಿದ್ದು ಹೇಗೆ ಎಂಬುದನ್ನು ದೃಢಪಡಿಸಿಕೊಳ್ಳಲು ದೆಹಲಿ ಪೋಲೀಸರು ಈ ಪ್ರಕರಣವನ್ನು ಮರುಸೃಷ್ಟಿಸಲು ಮುಂದಾಗಿದ್ದಾರೆ. ಆರೋಪಿಗಳನ್ನು ಸ್ಥಳಕ್ಕೆ ಕರೆದೊಯ್ದು ಸದ್ಯದಲ್ಲಿಯೇ ಮಹಜರು ಮಾಡಲಿದ್ದಾರೆ. ಲೋಕಸಭ ಗ್ಯಾಲರಿಯಿಂದ ಏಕಾಏಕಿ ಸಂಸದರು ಕುಳಿತುಕೊಳ್ಳುವ ಸ್ಥಳಕ್ಕೆ ಜಿಗಿದು ಕೋಲಾಹಲ ಸೃಷ್ಟಿಸಿದ ಪ್ರಕರಣದ ತನಿಖೆಯನ್ನು ದೆಹಲಿ ಪೋಲೀಸರು ಚುರುಕುಗೊಳಿಸಿದ್ದಾರೆ.
eesanje/url_46_287_6.txt ADDED
@@ -0,0 +1,5 @@
 
 
 
 
 
 
1
+ ತುಮಕೂರು ನೂತನ ಜಿಲ್ಲಾಧಿಕಾರಿಯಾಗಿ ಶುಭ ಕಲ್ಯಾಣ್ ಅಧಿಕಾರ ಸ್ವೀಕಾರ
2
+ ತುಮಕೂರು,ಡಿ.16- ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಶುಭಕಲ್ಯಾಣ್ ಅವರು ಅಧಿಕಾರ ಸ್ವೀಕರಿಸಿದರು. ಆರ್‍ಡಿಪಿಆರ್-ಇ ಆಡಳಿತದ ನಿರ್ದೇಶಕರಾಗಿದ್ದ ಶುಭಕಲ್ಯಾಣ್ ಅವರನ್ನು ತುಮಕೂರು ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ.2014ನೇ ಬ್ಯಾಚ್‍ನ ಐಎಎಸ್ ಅಧಿಕಾರಿ ಶುಭಕಲ್ಯಾಣ್ ಅವರು ತುಮಕೂರು ಜಿಲ್ಲೆಗೆ ಚಿರಪರಿಚಿತರು. ಈ ಹಿಂದೆ ತುಮಕೂರು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.
3
+ ಭೌಗೋಳಿಕವಾಗಿ ರಾಜ್ಯದ ಎರಡನೇ ಅತಿ ದೊಡ್ಡ ಜಿಲ್ಲೆಯಾಗಿರುವ ತುಮಕೂರು ತಾಲೂಕುಗಳನ್ನು ಒಳಗೊಂಡಿದ್ದು, ತೀವ್ರ ಬರಪೀಡಿತ ಪ್ರದೇಶವಾಗಿದ್ದು, ಪ್ರಸ್ತುತ ಬರಗಾಲ ಆವರಿಸಿದ್ದು, ಕುಡಿಯುವ ನೀರು , ಜಾನುವಾರುಗಳ ಮೇವು ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯ ನಿರ್ವಹಣೆಯ ಜವಾಬ್ದಾರಿ ಸೇರಿದಂತೆ ಹಲವಾರು ಹೊಣೆಗಾರಿಕೆ ಇವರ ಮೇಲಿದೆ.
4
+ ಸುಪ್ರೀಂ ಕೋರ್ಟ್ ಚಾಟಿ ಬೀಸಿದ ಬೆನ್ನಲ್ಲೇ ಪಾಕ್ ಚುನಾವಣೆ ದಿನಾಂಕ ಘೋಷಣೆ
5
+ ಈ ಹಿಂದೆ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮವಾಗಿ ಕಾರ್ಯ ನಿರ್ವಹಿಸಲಿದ್ದಾರೆ. ನಿರ್ಗಮಿತ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್‍ರಿಂದ ನಿನ್ನೆ ಸಂಜೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ನೂತನ ಜಿಲ್ಲಾಧಿಕಾರಿಗೆ ಜಿಲ್ಲಾ ತಾಲೂಕು ಪಂಚಾಯಿತಿ ಅಧಿಕಾರಿಗಳು ಶುಭ ಕೋರಿದ್ದಾರೆ.
eesanje/url_46_287_7.txt ADDED
@@ -0,0 +1,9 @@
 
 
 
 
 
 
 
 
 
 
1
+ “ನನ್ನನ್ನೂ ಮಂತ್ರಿ ಮಾಡಿ” ಎಂದು ಬೇಡಿಕೆಯಿಟ್ಟ ಆಡಳಿತ ಪಕ್ಷದ ಶಾಸಕರು
2
+ ಬೆಳಗಾವಿ, ಡಿ. 15- ಮುಖ್ಯಮಂತ್ರಿ ಅಥವಾ ಮಂತ್ರಿಯಾದರೆ ಮಾತ್ರ ಕ್ಷೇತ್ರ ಅಭಿವೃದ್ಧಿಯಾಗುವುದಾದರೆ ನನ್ನನ್ನೂ ಮಂತ್ರಿ ಮಾಡಿ ಎಂದು ಆಡಳಿತ ಪಕ್ಷದ ಶಾಸಕರು ವಿಧಾನಸಭೆಯಲ್ಲಿ ಬೇಡಿಕೆ ಮಂಡಿಸಿದರು. ಪ್ರಶ್ನೋತ್ತರದ ಅವಧಿಯಲ್ಲಿ ರಾಣೆಬೆನ್ನೂರು ಕ್ಷೇತ್ರದ ಶಾಸಕ ಪ್ರಕಾಶ್ ಕೋಳಿವಾಡ, ತಮ್ಮ ಕ್ಷೇತ್ರದಲ್ಲಿ ಅಡಿಕೆ ಬೆಳೆಗಳು ಅಗತ್ಯ ಬೆಂಬಲ ಮತ್ತು ಪೊ್ರೀತ್ಸಾಹ ದೊರೆಯದೆ ಇರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
3
+ ನೆರೆಯ ಕ್ಷೇತ್ರವಾಗಿರುವ ಚನ್ನಗಿರಿ ಮತ್ತು ಶಿಗ್ಗಾವು ಕ್ಷೇತ್ರದಲ್ಲಿ ಅಡಿಕೆ ಬೆಳೆಗೆ ಹನಿ ನೀರಾವರಿ, ರಸಗೊಬ್ಬರ, ರಾಸಾಯನಿಕ ಸಿಂಪಡಣೆ ಸೇರಿದಂತೆ ವಿವಿಧ ಸೌಲಭ್ಯಗಳು, ಮಾರುಕಟ್ಟೆ ವ್ಯವಸ್ಥೆ ಎಲ್ಲವೂ ದೊರೆಯುತ್ತಿದೆ ಎಂದು ಹೇಳಿದರು.
4
+ ಶಿಗ್ಗಾವಿಗೆ ಹೊಂದಿಕೊಂಡಿರುವ ತಮ್ಮ ಕ್ಷೇತ್ರ ಬಯಲು ಪ್ರದೇಶವಾಗಿರುವುದರಿಂದ ಅಡಿಗೆ ಬೆಳೆಯಲು ತೋಟಗಾರಿಕೆ ಇಲಾಖೆಯಿಂದ ಪೊ್ರೀತ್ಸಾಹ ದೊರೆಯುವುದಿಲ್ಲ ಎಂದು ಸಚಿವರು ಉತ್ತರಿಸಿದ್ದಾರೆ. ಶಿಗ್ಗಾವು ಕ್ಷೇತ್ರದ ಶಾಸಕರಾದ ಬಸವರಾಜು ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದರು ಎಂಬ ಕಾರಣಕ್ಕೆ ಎಲ್ಲಾ ಸೌಲಭ್ಯಗಳನ್ನೂ ನೀಡಲಾಗುತ್ತಿದೆ. ಜನರಿಗೆ ಅನುಕೂಲ ಮಾಡಿಕೊಡಲು ಮುಖ್ಯಮಂತ್ರಿ ಅಥವಾ ಸಚಿವರೇ ಆಗಬೇಕೆಂದಾದರೆ ನನ್ನನ್ನೂ ಮಂತ್ರಿ ಮಾಡಿ ಎಂದು ಒತ್ತಾಯಿಸಿದರು.
5
+ ಭದ್ರತಾ ಲೋಪದ ಚರ್ಚೆಗೆ ಪ್ರತಿಪಕ್ಷಗಳ ಬಿಗಿಪಟ್ಟು, ಲೋಕಸಭೆಯಲ್ಲಿ ಕೋಲಾಹಲ
6
+ ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಪರವಾಗಿ ಉತ್ತರ ನೀಡಿದಂತಹ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಮಲೆನಾಡು ಭಾಗದ ಶಿವಮೊಗ್ಗ, ಚಿಕ್ಕಮಗಳೂರು, ಕರಾವಳಿಯ ಉಡುಪಿ, ದಕ್ಷಿಣ ಕನ್ನಡದಂತಹ ಪ್ರದೇಶಗಳಲ್ಲಿ ಅಡಿಕೆ ಬೆಳೆಯಲು ಪೊ್ರೀತ್ಸಾಹ ದೊರೆಯುತ್ತಿದೆ. ಬಯಲು ಸೀಮೆಯ ಪ್ರದೇಶಗಳಿಗೆ ಇಲಾಖೆಯ ಆರ್ಥಿಕ ಬೆಂಬಲ ದೊರೆಯುವುದಿಲ್ಲ ಎಂದು ಹೇಳಿದರು.
7
+ ಈ ವೇಳೆ ಬಿಜೆಪಿಯ ಅರಗಜ್ಞಾನೇಂದ್ರ ತಮ್ಮನ್ನು ಸಚಿವರನ್ನಾಗಿ ಮಾಡಿ ಎಂದು ಶಾಸಕರು ಕೇಳಿದ್ದಾರೆ. ಅದಕ್ಕೆ ಸರಿಯಾದ ಉತ್ತರ ಸಿಕ್ಕಿಲ್ಲ ಎಂದು ಕಾಲೆಳೆದರು.ಶಾಸಕರ ಬೇಡಿಕೆಯನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರುವುದಾಗಿ ಎಂ.ಸಿ.ಸುಧಾಕರ್ ಭರವಸೆ ನೀಡಿದರು.
8
+ ಕೃಷಿ ಮಾರುಕಟ್ಟೆ ಸಚಿವರೂ ಆಗಿರುವ ಶಿವಾನಂದ ಪಾಟೀಲ್, ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಮೂರು ತಾಲೂಕಿನಲ್ಲಿ ಅಡಿಕೆ ಬೆಳೆಯಲು ಅವಕಾಶ ಕಲ್ಪಿಸಲಾಗಿದೆ. ರಾಣೆಬೆನ್ನೂರು, ಹಾನಗಲ್ ತಾಲೂಕುಗಳನ್ನು ಅಡಿಕೆ ಬೆಳೆಗೆ ಪೊ್ರೀತ್ಸಾಹ ನೀಡುವ ಯೋಜನೆಗಳಿಗೊಳಪಡಿಸಲು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಒಪ್ಪುವುದಿಲ್ಲ ಎಂದು ಹೇಳಿದರು.
9
+ ವಿಧಾನಸಭೆಯ ಉಪಾಧ್ಯಕ್ಷರಾದ ರುದ್ರಪ್ಪ ಲಮಾಣಿ ಹಾವೇರಿ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಅಡಿಕೆ ಬೆಳೆಗಳಿಗೆ ಬೆಂಬಲ ನ���ಡಬೇಕು ಎಂದು ಆಗ್ರಹಿಸಿದರು.ಹಾಸನ ಜಿಲ್ಲೆಯ ಚನ್ನಗಿರಿ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ ಕೂಡ ತಮ್ಮ ಕ್ಷೇತ್ರಕ್ಕೂ ಪೊ್ರೀತ್ಸಾಹಕ ಯೋಜನೆಗಳನ್ನು ನೀಡಬೇಕೆಂದು ಒತ್ತಾಯಿಸಿದರು.
eesanje/url_46_287_8.txt ADDED
@@ -0,0 +1,7 @@
 
 
 
 
 
 
 
 
1
+ ಉಮಾಶ್ರೀ ನಟನೆಯ ಬಗ್ಗೆ ಪರಿಷತ್‌ನಲ್ಲಿ ಮೆಚ್ಚುಗೆ
2
+ ಬೆಂಗಳೂರು,ಡಿ.15- ಮೇಲ್ಮನೆ ಸದಸ್ಯರೂ ಆದ ಕನ್ನಡ ಚಿತ್ರರಂಗದ ಖ್ಯಾತ ನಟಿ ಉಮಾಶ್ರೀ ಅವರ ನಟನೆಯನ್ನು ವಿಧಾನಪರಿಷತ್ನಲ್ಲಿ ಸದಸ್ಯರು ಪ್ರಶಂಸಿಸಿದರು. ಶಾಸನ ರಚನಾ ಕಲಾಪದಲ್ಲಿ ವಿಧೇಯಕದ ಮೇಲೆ ಚರ್ಚೆ ನಡೆಯುವಾಗ ಪರಿಷತ್ ಸದಸ್ಯ ವಿಶ್ವನಾಥ್ ಅವರು ಉಮಾಶ್ರೀ ಅವರ ಹೆಸರು ಹೇಳುವಾಗ ಬಾಯ್ತಪ್ಪಿ ಮಾಲಾಶ್ರೀ ಎಂದು ಹೇಳಿದ್ದು ಸ್ವಾರಸ್ಯಕರ ಚರ್ಚೆಗೆ ಎಡೆ ಮಾಡಿಕೊಟ್ಟಿತು.
3
+ ಆಗ ಸಭಾಪತಿ ಬಸವರಾಜ ಹೊರಟ್ಟಿಯವರು ಮಾಲಾಶ್ರೀಯವರ ನೆನಪು ಈಗೇಕೆ ನಿಮಗೆ ಬಂತು ಎಂದು ಹಾಸ್ಯ ಮಾಡಿದರು. ಈ ವೇಳೆ ಮಧ್ಯಪ್ರವೇಶಿಸಿದ ತೇಜಸ್ವಿನಿಗೌಡ ಅವರು ಮಾತನಾಡಿ, ಭಾರತದಲ್ಲಿ ಹೇಮಮಾಲಿನಿ ಹೇಗೆ ಕನಸಿನ ಕನ್ಯೆ ಎಂದು ಹೆಸರು ಪಡೆದಿದ್ದರೋ, ಕನ್ನಡ ಚಿತ್ರರಂಗದಲ್ಲಿ ಮಾಲಾಶ್ರೀ ನಟನೆಯಿಂದ ಹೆಸರು ಮಾಡಿದ್ದಾರೆ.
4
+ ನಾಯಕಿಯಾಗಲು ಸೌಂದರ್ಯದ ಮಾನದಂಡದ ಬದಲು ನಟನೆಯ ಮಾನದಂಡದ ಮೇಲೆ ಆಯ್ಕೆ ಮಾಡುವ ಹಾಗಿದ್ದರೆ ಉಮಾಶ್ರೀಯವರು ನಾಯಕಿಯಾಗಿ ಹಲವು ಚಿತ್ರಗಳಲ್ಲಿ ನಟಿಸಬಹುದಿತ್ತು ಎಂದರು. ಆಗ ಎದ್ದು ನಿಂತ ಉಮಾಶ್ರೀಯವರು ಮಾತನಾಡಿ, ನನ್ನ ನಟನೆಯ ಬಗ್ಗೆ ಮಾತನಾಡಿದ್ದಕ್ಕೆ ಧನ್ಯವಾದ. ನಾನು ರಂಗಭೂಮಿಯಿಂದ ಬಂದವಳು, ರಂಗಭೂಮಿಯಲ್ಲಿ ನಾಯಕಿ, ಪೊಷಕನಟಿ, ಹಾಸ್ಯನಟಿ ಎಂಬ ವರ್ಗಗಳಲ್ಲಿಲ್ಲ. ಆದರೆ ಸಿನಿಮಾದಲ್ಲಿದೆ.
5
+ ಡಿಕೆಶಿ ಸಿಬಿಐ ತನಿಖೆ ವಾಪಸ್ : ಉಭಯ ಸದನಗಳಲ್ಲಿ ಗದ್ದಲ, ವಾಕ್ಸಮರ
6
+ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿಯವರು ನನಗೆ ಗುಲಾಬಿ ಚಿತ್ರದಲ್ಲಿ ನಾಯಕಿ ನಟಿಯ ಅವಕಾಶ ನೀಡಿದರು. ಅದರಿಂದ ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿ ನನಗೆ ಬಂತು. ಈ ನಾಡಿನ ಜನತೆ ಕಲಾವಿದೆಯಾದ ನನಗೆ ಸಾಕಷ್ಟು ಬೆಂಬಲ ನೀಡಿದ್ದಾರೆ ಎಂದು ಧನ್ಯವಾದ ತಿಳಿಸಿದರು.
7
+ ಈ ವೇಳೆ ಕಾನೂನು ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಉಮಾಶ್ರೀಯವರ ಒಡಲಾಳ ನಾಟಕ ನೋಡಿದರೆ ಎಂತಹ ಅದ್ಬುತ ಕಲಾವಿದೆ ಎಂದು ಗೊತ್ತಾಗಲಿದೆ. ಈ ಒಡಲಾಳ ನಾಟಕವನ್ನು ಸೋನಿಯಾ ಗಾಂಯವರಿಗೆ ತೋರಿಸಿದ್ದೇವೆ.ಆ ನಂತರ ಉಮಾಶ್ರೀಯವರನ್ನು ಭೇಟಿ ಮಾಡಿಸಿದಾಗ ಆ ನಾಟಕದಲ್ಲಿ ಪಾತ್ರ ಮಾಡಿರುವವರು ಇವರೇನಾ ಎಂದು ಮೂರು ಬಾರಿ ಕೇಳಿದರು ಎಂದು ಹೇಳಿದರು. ಬಳಿಕ ಈ ವಿಚಾರದ ಚರ್ಚೆಗೆ ತೆರೆ ಬಿದ್ದಿತು.
eesanje/url_46_287_9.txt ADDED
@@ -0,0 +1,9 @@
 
 
 
 
 
 
 
 
 
 
1
+ ನ್ಯಾಯವಾದಿಗಳ ರಕ್ಷಣಾ ಕಾಯ್ದೆ ಮೇಲ್ಮನೆಯಲ್ಲಿ ಅಂಗೀಕಾರ
2
+ ಬೆಳಗಾವಿ,ಡಿ.15- ನ್ಯಾಯವಾದಿಗಳು ಯಾವುದೇ ಭಯ ಅಥವಾ ಬಾಹ್ಯ ಪ್ರಭಾವಕ್ಕೆ ಒಳಗಾಗದೆ ತಮ್ಮ ವೃತ್ತಿಪರ ಸೇವೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲು ಹಾಗೂ ಅವರ ಮೇಲಿನ ಹಿಂಸೆಯನ್ನು ನಿಷೇಸಲು ಹಾಗೂ ಅವರಿಗೆ ರಕ್ಷಣೆ ಒದಗಿಸಲು ಅವಕಾಶ ಕಲ್ಪಿಸಿರುವ 2023ನೇ ಸಾಲಿನ ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕಕ್ಕೆ ವಿಧಾನ ಪರಿಷತ್ ನಲ್ಲಿ ಅಂಗೀಕಾರ ಲಭಿಸಿತು.
3
+ ವಿಧೇಯಕ ಮಂಡಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ವಕೀಲರ ಮೇಲೆ ಹಲ್ಲೆ ನಡೆಯುತ್ತಿರುವ ಪ್ರಸಂಗಗಳು ನಡೆಯುತ್ತಿವೆ. ಅವರಿಗೆ ಕಾನೂನಾತ್ಮಕ ರಕ್ಷಣೆ ಅವಶ್ಯಕತೆ ಇದೆ. ಈ ಸಂಬಂಧ ಸುಪ್ರೀಂ ಕೋರ್ಟ್ ಕೂಡ ಆದೇಶ ನೀಡಿದೆ. ಭಾರತೀಯ ನ್ಯಾಯ ವ್ಯವಸ್ಥೆಯಲ್ಲಿ ಪೊಲೀಸರ ರೀತಿ, ವಕೀಲರೂ ಮುಖ್ಯ ಎಂದರು.
4
+ ವಿಧೇಯಕದ ಮೇಲೆ ಬಿಜೆಪಿಯ ತೇಜಸ್ವಿನಿ ರಮೇಶ್ ಮಾತನಾಡಿ, ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲಿ ಈ ವಿಧೇಯಕವನ್ನು ಜಾರಿಗೆ ಮಾಡಲು ಮುಂದಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಸಾಧ್ಯವಾಗಿರಲಿಲ್ಲ. ಕಡೆ ಪಕ್ಷ ಈಗ ಬಂದಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಹೇಳಿದರು.
5
+ ಕಾಂಗ್ರೆಸ್ನ ನಾಗರಾಜ್ ಯಾದವ್ ಅವರು, ಹಿಂದಿನ ಸರ್ಕಾರಕ್ಕೆ ಬದ್ದತೆ ಇರಲಿಲ್ಲ. ನಮ್ಮ ಸರ್ಕಾರ ವಕೀಲರ ಮೇಲಿನ ಹಲ್ಲೆಯನ್ನು ತಡೆಗಟ್ಟುವ ಉದ್ದೇಶದಿಂದ ಈ ಕಾಯ್ದೆಯನ್ನು ಜಾರಿ ಮಾಡಿದೆ. ಇದು ನುಡಿದಂತೆ ನಡೆಯುವ ಸರ್ಕಾರ ಎಂದು ಸಮರ್ಥನೆ ಮಾಡಿಕೊಂಡರು. ನಾಗರಾಜ್ ಯಾದವ್ ಅವರ ಈ ಹೇಳಿಕೆಗೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಬಿಜೆಪಿಯ ಕೋಟಾ ಶ್ರೀನಿವಾಸ್ ಪೂಜಾರಿ, ಶಶಿಲ್ ನಮೋಶಿ, ತೇಜಸ್ವಿನಿ ರಮೇಶ್ ಮತ್ತಿತರರು ತಿರುಗಿ ಬಿದ್ದರು.
6
+ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ, ಇದರಲ್ಲಿ ಯಾವ ಸರ್ಕಾರವು ಭುಜ ತಟ್ಟಿಕೊಳ್ಳಬೇಕಾದ ಅಗತ್ಯವಿಲ್ಲ. ಹಿಂದೆ ನಮ್ಮ ಸರ್ಕಾರ ದೊಡ್ಡದು ಮಾಡಲು ಮುಂದಾಗಿತ್ತು. ವಕೀಲರ ಪರಿಷತ್ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಕಾಯ್ದೆಯನ್ನು ಜಾರಿಗೆ ತರುವಂತೆ ಮನವಿ ಮಾಡಿದ್ದರು. ಬಹುತೇಕ ನಮ್ಮ ಸರ್ಕಾರದ ಅವಧಿಯಲ್ಲೇ ಕಾಯ್ದೆ ಮಂಡನೆಗೆ ಸಿದ್ಧವಾಗಿತ್ತು. ಆದರೆ ಕೆಲವು ಕಾರಣಗಳಿಂದ ವಿಳಂಬವಾಗಿದೆ.
7
+ ನನ್ನ ಸ್ಪಷ್ಟನೆ ಎಂದರೆ ಕಾಯ್ದೆ ಮೇಲೆ ಮಾತನಾಡುವಾಗ ನಮ್ಮ ಸರ್ಕಾರ, ನಿಮ್ಮ ಸರ್ಕಾರ ಮಾಡಿತ್ತು ಎಂಬುದನ್ನು ಹೇಳಿಕೊಳ್ಳಬಾರದು. ನಾಗರಾಜ್ ಯಾದವ್ ಅವರ ಹೇಳಿಕೆಯನ್ನು ನಾವು ಒಪ್ಪುವುದಿಲ್ಲ ಎಂದು ಆಕ್ಷೇಪಿಸಿದರು. ಆಗ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಅವರು, ಕಾಯ್ದೆ ಮೇಲೆ ಮಾತನಾಡುವಾಗ ಆ ಸರ್ಕಾರ, ಈ ಸರ್ಕಾರ ಎಂದು ಹೇಳಬಾರದು. ಕಾಯ್ದೆಯಲ್ಲಿರುವ ಅಂಶಗಳನ್ನು ಉಲ್ಲೇಖಿಸಿ ಮಾತನಾಡಬೇಕು. ಅಗತ್ಯವಾದರೆ ಸರ್ಕಾರಕ್ಕೆ ಸಲಹೆಗಳನ್ನು ನೀಡಬೇಕು ಎಂದು ಕಿವಿಮಾತ�� ಹೇಳಿದರು.
8
+ ಆಗ ಜೆಡಿಎಸ್ನ ಮರಿತಿಬ್ಬೇಗೌಡ ಅವರು, ಸದಸ್ಯರು ಹೇಗೆ ಮಾತನಾಡಬೇಕೆಂಬ ಸಾಮಾನ್ಯ ಜ್ಞಾನ ಇರಬೇಕಲ್ಲವೇ? ಪಾಕಿಸ್ತಾನ, ಅದು ಇದು ಎಂದು ಬೆಂಕಿ ಹಚ್ಚಿದವರು ಯಾರು ಎಂದು ತೇಜಸ್ವಿನಿ ರಮೇಶ್ ಮತ್ತು ಬಿಜೆಪಿ ವಿರುದ್ಧ ಕಿಡಿಕಾರಿದರು. ಬಳಿಕ ಸಭಾಪತಿಗಳ ಮಧ್ಯಪ್ರವೇಶದಿಂದ ಸದನ ತಿಳಿಗೊಂಡಿತು. ನಂತರ ವಿಧೇಯಕದ ಮೇಲೆ ಪಿ.ಎಚ್.ಪೂಜಾರ್, ಎಚ್.ವಿಶ್ವನಾಥ್ ಮತ್ತಿತರರು ಮಾತನಾಡಿದರು.
9
+ ಸದಸ್ಯರು ನೀಡಿರುವ ಸಲಹೆಗಳನ್ನು ಪರಿಗಣಿಸಿಯೇ ವಿಧೇಯಕವನ್ನು ಜಾರಿಗೆ ಮಾಡಿದ್ದೇವೆ ಎಂದು ಸಚಿವ ಎಚ್.ಕೆ.ಪಾಟೀಲ್ ಹೇಳಿದರು. ಬಳಿಕ ಸಭಾಪತಿ ಹೊರಟ್ಟಿ ಅವರು ಧ್ವನಿ ಮತದ ಮೂಲಕ ವಿಧೇಯಕವನ್ನು ಅಂಗೀಕರಿಸಿದರು. ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ಕಾಯಿದೆಯನ್ನು ಡಿಸೆಂಬರ್ 12ರಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ವಿಧಾನಸಭೆಯಲ್ಲಿ ಮಂಡಿಸಿದ್ದರು.
eesanje/url_46_288_1.txt ADDED
@@ -0,0 +1,6 @@
 
 
 
 
 
 
 
1
+ ಸುವರ್ಣಸೌಧದಲ್ಲಿ ಜಾರಿ ಬಿದ್ದ ಶಾಸಕ, ಸದನದಲ್ಲಿ ಸ್ವಾರಸ್ಯಕರ ಚರ್ಚೆ
2
+ ಬೆಳಗಾವಿ, ಡಿ. 15- ಶಾಸಕರು ಜಾರಿ ಬಿದ್ದ ಪ್ರಸಂಗ ವಿಧಾನಸಭೆಯಲ್ಲಿ ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು. ಪ್ರಶ್ನೋತ್ತರದ ಅವಧಿಯಲ್ಲಿ ಬಹಳಷ್ಟು ಮಂದಿ ಶಾಸಕರು ತಡವಾಗಿ ಬಂದರು. ಅವರಿಗೆ ಸರದಿ ದಾಟಿದ್ದರೂ ಕೂಡ ಪ್ರಶ್ನೆ ಕೇಳಲು ಸಭಾಧ್ಯಕ್ಷರು ಅವಕಾಶ ಮಾಡಿಕೊಡುತ್ತಿದ್ದರು. ಆ ಸಂದರ್ಭದಲ್ಲಿ ಕಾಂಗ್ರೆಸ್‍ನ ರಾಣೆಬೆನ್ನೂರು ಕ್ಷೇತ್ರದ ಶಾಸಕ ಪ್ರಕಾಶ್ ಕೋಳಿವಾಡ ಅವರಿಗೂ ಅವಕಾಶ ಮಾಡಿಕೊಡಲಾಯಿತು. ಈ ಸಂದರ್ಭದಲ್ಲಿ ವಿಳಂಬ ಏಕೆ ಎಂದು ಸಭಾಧ್ಯಕ್ಷ ಯು.ಟಿ.ಖಾದರ್‍ರವರು ಪ್ರಶ್ನಿಸಿದರು.
3
+ ಇದಕ್ಕೆ ತಾವು ನಿನ್ನೆ ಸುವರ್ಣಸೌಧದಲ್ಲಿ ಮೆಟ್ಟಿಲುಗಳ ಮೇಲೆ ಜಾರಿ ಬಿದ್ದಿದ್ದಾಗಿ ಕೋಳಿವಾಡ ಉತ್ತರಿಸಿದರು. ತಾವು ಮೆಟ್ಟಲಿಳಿಯುವಾಗ ಬಿದ್ದು ಪೆಟ್ಟಾಯಿತು. ಇಂದು ಬೆಳಿಗ್ಗೆ ಎಕ್ಸರೇ ಮಾಡಿಸಿಕೊಳ್ಳಲು ಹೋಗಿದ್ದೆ. ಹೀಗಾಗಿ ತಡವಾಯಿತು ಎಂದು ವಿವರಣೆ ನೀಡಿದರು.ಕಾಂಗ್ರೆಸ್‍ನ ಶಾಸಕ ಮಾಲತೇಶ್ ಕೌಜಲಗಿ, ಯಾಕೆ ಬಿದ್ದಿರಿ ಎಂದು ಕಿಚಾಯಿಸಿದರು.ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಕೂಡ ಅದೇ ರೀತಿಯ ಪ್ರಶ್ನೆಯ ಮೂಲಕ ಪ್ರಕಾಶ್ ಕೋಳಿವಾಡರ ಕಾಲೆಳೆದರು.
4
+ ಕೇಂದ್ರದಲ್ಲಿ ಮೋದಿ ಹ್ಯಾಟ್ರಿಕ್ ಸರ್ಕಾರ ಗ್ಯಾರಂಟಿ : ಸಮೀಕ್ಷೆ
5
+ ಅದಕ್ಕೆ ಉತ್ತರಿಸಿದ ಪ್ರಕಾಶ್ ಕೋಳಿವಾಡ ಸುವರ್ಣಸೌಧದಲ್ಲಿ ಹಗಲು ಹೊತ್ತಿನಲ್ಲೇ ಬಿದ್ದೆ. ಎಲ್ಲರನ್ನೂ ನಿಮ್ಮಂತೆಯೇ ಎಂದು ಅಂದುಕೊಳ್ಳಬೇಡಿ ಎಂದು ಹಾಸ್ಯಮಿಶ್ರಿತ ಧಾಟಿಯಲ್ಲಿ ತಿರುಗೇಟು ನೀಡಿದರು.ಬಿದ್ದು ಕಾಲು ನೋವಾಗಿದ್ದರೂ ಕ್ಷೇತ್ರದ ಜನರ ಪರವಾಗಿ ಕಾಳಜಿ ಇಟ್ಟುಕೊಂಡು ಕಲಾಪಕ್ಕೆ ಬಂದು ಪ್ರಶ್ನೆ ಕೇಳುತ್ತಿರುವ ಕೋಳಿವಾಡರಿಗೆ ಅಭಿನಂದನೆಗಳು ಎಂದು ಸಭಾಧ್ಯಕ್ಷರು ಹೇಳಿದರು.
6
+ ಪ್ರಶ್ನೋತ್ತರದ ಕಲಾಪದಲ್ಲಿ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನುಪ್ರಕಾಶ್ ಕೋಳಿವಾಡ ಕೇಳುತ್ತಿದ್ದಾಗ ನಿಮಗೆ ಕಾಲುನೋವು ಇದೆ ಹೆಚ್ಚು ಹೊತ್ತು ನಿಂತುಕೊಳ್ಳಬೇಡಿ ಕುಳಿತುಕೊಳ್ಳಿ ಎಂದು ಸಭಾಧ್ಯಕ್ಷರು ಸಮಾಧಾನ ಹೇಳಿದರು.
eesanje/url_46_288_10.txt ADDED
@@ -0,0 +1,7 @@
 
 
 
 
 
 
 
 
1
+ ಕ್ರೂರ ಮೃಗಗಳ ಸಂಘರ್ಷ ತಪ್ಪಿಸಲು ಶಾಶ್ವತ ಕ್ರಮಕ್ಕೆ ಪಕ್ಷಬೇಧ ಮರೆತು ಸದಸ್ಯರ ಆಗ್ರಹ
2
+ ಬೆಳಗಾವಿ,ಡಿ.14- ಆನೆ, ಹುಲಿ ಮತ್ತು ಇತರೆ ಕ್ರೂರ ಮೃಗಗಳ ಸಂಘರ್ಷ ತಪ್ಪಿಸಲು ಶಾಶ್ವತ ಕ್ರಮಗಳನ್ನು ಕೈಗೊಳ್ಳುವಂತೆ ವಿಧಾನಸೌಧದಲ್ಲಿಂದು ಪಕ್ಷಬೇಧ ಮರೆತು ಸದಸ್ಯರೆಲ್ಲರೂ ಆಗ್ರಹಿಸಿದರು. ಪ್ರಶ್ನೋತ್ತರದ ಅವಧಿಯಲ್ಲಿ ಶೃಂಗೇರಿ ಕ್ಷೇತ್ರದ ಶಾಸಕ ಪಿ.ಡಿ.ರಾಜೇಗೌಡ ವಿಷಯ ಪ್ರಸ್ತಾಪಿಸಿ, ತಮ್ಮ ಕ್ಷೇತ್ರದ 18 ಗ್ರಾಮಗಳಲ್ಲಿ ನಿರಂತರವಾಗಿ ಆನೆ ದಾಳಿಗಳಾಗುತ್ತಿವೆ. ಒಂದೆಡೆ ಕುದುರೆಮುಖ ಮತ್ತೊಂದೆಡೆ ಅಭಯಾರಣ್ಯಗಳನ್ನು ಹೊಂದಿರುವ ತಮ್ಮ ಕ್ಷೇತ್ರದಲ್ಲಿ ವನ್ಯಜೀವಿಗಳ ಸಂಘರ್ಷ ಮರುಕಳಿಸುತ್ತಿದೆ.
3
+ ಕಂದಕ ಹಾಗೂತಂತಿ ಬೇಲಿಗಳ ನಿರ್ಮಾಣ ಪ್ರಯೋಜನವಾಗುತ್ತಿಲ್ಲ. ರೈಲ್ವೆ ಹಳಿಗಳ ಬ್ಯಾರಿಕೇಡ್ ನಿರ್ಮಾಣ ಶಾಶ್ವತ ಪರಿಹಾರವಾಗಿದೆ. 225 ಕೋಟಿ ರೂ. ವೆಚ್ಚದಲ್ಲಿ ಬ್ಯಾರಿಕೇಡ್‍ಗಳನ್ನು ನಿರ್ಮಿಸುವ ಯೋಜನೆಯಾಗಿದ್ದು, ಈ ವರ್ಷ 120 ಕೋಟಿ ರೂ. ಒದಗಿಸುವುದಾಗಿ ತಿಳಿಸಲಾಗಿದೆ. ಆದ್ಯತೆ ಮೇರೆಗೆ ತ್ವರಿತವಾಗಿ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿದರು.
4
+ ಅನುದಾನಿತ ಸಂಸ್ಥೆಗಳ ನೌಕರರಿಗೂ ಜ್ಯೋತಿ ಸಂಜೀವಿನಿ ಯೋಜನೆ ವಿಸ್ತರಣೆ : ಸಿಎಂ
5
+ ಆರಗ ಜ್ಞಾನೇಂದ್ರ ಮಧ್ಯಪ್ರವೇಶಿಸಿ, ರೈತರು ಕಷ್ಟಪಟ್ಟು ಬೆಳೆದ ಬೆಳೆಗಳ ಮೇಲೆ ಆನೆಗಳು ದಾಳಿ ಮಾಡಿ ಒಂದು ಗಂಟೇಯಲ್ಲೇ ನಾಶ ಮಾಡುತ್ತಿವೆ ಎಂದರು. ಶಾಸಕ ಎಚ್.ಡಿ.ತಮ್ಮಯ್ಯ, ಹರೀಶ್ ಪೂಂಜ್ಯಾ, ಭಾಗಿರಥಿ ಮೂರಳ್ಯ ಸೇರಿದಂತೆ ಹಲವು ಸೇರಿದಂತೆ ಸಾಕಷ್ಟು ಶಾಸಕರು ವನ್ಯಜೀವಿಗಳ ಸಂಘರ್ಷದ ಬಗ್ಗೆ ಆತಂಕ ವ್ಯಕ್ತಪಡಿಸಿದರು.
6
+ ಚರ್ಚೆ ತೀವ್ರವಾದಾಗ ಸಭಾಧ್ಯಕ್ಷರು, ಅಲ್ಲಿ ಆನೆ ಕಾಟ, ಇಲ್ಲಿ ನಿಮ್ಮ ಕಾಟ ಎಂದರು. ಅರಣ್ಯ ಸಚಿವರಾದ ಈಶ್ವರ ಖಂಡ್ರೆ, ಆನೆ-ಮಾನವ ಸಂಘರ್ಷ ದಿನೇ ದಿನೇ ಹೆಚ್ಚುತ್ತಿದೆ. ರೈಲ್ವೆ ಹಳಿಗಳನ್ನು ಉಪಯೋಗಿಸಿಕೊಂಡು ಬ್ಯಾರಿಕೇಡ್ ನಿರ್ಮಿಸುವುದರಿಂದ ಸಮಸ್ಯೆ ಬಗೆಹರಿಸಬಹುದು. ಶೃಂಗೇರಿ ಕ್ಷೇತ್ರದಲ್ಲಿ 7.51 ಕಿ.ಮೀ ಉದ್ದಕ್ಕೆ ಬ್ಯಾರಿಕೇಡ್ ನಿರ್ಮಿಸಬೇಕೆಂಬ ಪ್ರಸ್ತಾವನೆ ಕಲ್ಪಿಸಬೇಕು. ಈಗಾಗಲೇ 5 ಕೋಟಿರೂ.ಗಳನ್ನು ಖರ್ಚು ಮಾಡಿ 4 ಕಿ.ಮೀ ಹೆಚ್ಚಿನ ಬ್ಯಾರಿಕೇಡ್ ನಿರ್ಮಿಸಲಾಗಿದೆ. ಅನುದಾನ ಆಧರಿಸಿ ಬಾಕಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದರು.
7
+ ರಾಜ್ಯಾದ್ಯಂತ 6395 ಆನೆಗಳಿವೆ. ಆನೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಜನವಸತಿ ಪ್ರದೇಶಗಳಿಗೆ ನುಗ್ಗದಂತೆ ತಡೆಯಲು 200 ಕೋಟಿ ರೂ. ವೆಚ್ಚದಲ್ಲಿ 120 ಕಿ.ಮೀ ಬ್ಯಾರಿಕೇಡ್‍ನ್ನು ರಾಜ್ಯಾದ್ಯಂತ ನಿರ್ಮಿಸಲಾಗುತ್ತಿದೆ. ಏಳು ವಿಶೇಷ ಕಾರ್ಯಪಡೆಗಳು ಕೆಲಸ ನಿರ್ವಹಿಸುತ್ತಿದ್ದು, ಅಗತ್ಯವಾದರೆ ಮತ್ತಷ್ಟು ಹೆಚ್ಚುವರಿ ಕಾರ್ಯಪಡೆಗಳನ್ನು ರಚಿಸಲಾಗುವುದು ಎಂದು ತಿಳಿಸಿದರು.
eesanje/url_46_288_11.txt ADDED
@@ -0,0 +1,6 @@
 
 
 
 
 
 
 
1
+ ಜಂಟಿ ಸರ್ವೆ ಬಳಿಕ ಹೆಚ್ಚುವರಿ ಭೂಮಿ ಕಂದಾಯ ಇಲಾಖೆಗೆ ಹಸ್ತಾಂತರ : ಖಂಡ್ರೆ
2
+ ಬೆಳಗಾವಿ,ಡಿ.14- ಅರಣ್ಯ ಮತ್ತು ಕಂದಾಯ ಇಲಾಖೆಯ ಜಂಟಿ ಸರ್ವೆ ಬಳಿಕ ಹೆಚ್ಚುವರಿ ಭೂಮಿ ಕಂಡುಬಂದರೆ ಕಂದಾಯ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ವಿಧಾನಸಭೆಗೆ ತಿಳಿಸಿದರು. ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ಪ್ರಶ್ನೆ ಕೇಳಿ, ಅರಣ್ಯದ ಗಡಿಯಾಚೆಗೆ ಇರುವ ರೈತರ ಜಮೀನಿಗೆ ಸಾಗುವಳಿ ಚೀಟಿ ಪಡೆದುಕೊಳ್ಳಲು ಅರಣ್ಯ ಇಲಾಖೆಯ ನಿರಪಕ್ಷೇಣ ಪತ್ರ ಅಗತ್ಯವಿದೆ. ಆದರೆ ಇದು ಸುಲಭವಾಗಿ ದೊರೆಯದೆ ತೊಂದರೆಯಾಗುತ್ತಿದೆ. ತಮ್ಮ ಕ್ಷೇತ್ರದಲ್ಲಿ ಜಂಟಿ ಸಮೀಕ್ಷೆ ನಡೆಸಿದಾಗ 800 ಎಕರೆ ಅರಣ್ಯ ಪ್ರದೇಶವಿದ್ದು, ಹೆಚ್ಚುವರಿಯಾಗಿ 500 ಎಕರೆ ಭೂಮಿ ಪತ್ತೆಯಾಗಿದೆ.
3
+ ಹೀಗಾಗಿ ನಕ್ಷೆ ಇಲ್ಲದ ಜಮೀನುಗಳನ್ನು ಜಂಟಿ ಸರ್ವೆ ಮಾಡಿಸಿ ರೈತರಿಗೆ ಸಾಗುವಳಿ ಚೀಟಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸಚಿವ ಈಶ್ವರ್ ಖಂಡ್ರೆ, ಜಂಟಿ ಮೋಜಿಣಿಯನ್ನು ಶೀಘ್ರವಾಗಿ ಕಾಲಮಿತಿಯೊಳಗೆ ಪೂರ್ಣಗೊಳಿಸಲಾಗುವುದು. ಅರಣ್ಯ ಇಲಾಖೆಯ ಸುತ್ತಳತೆಯಲ್ಲಿ ಹೆಚ್ಚುವರಿ ಭೂಮಿ ಕಂಡುಬಂದರೆ ಗಡಿಯನ್ನು ಗುರುತಿಸಿ ಉಳಿದ ಭೂಮಿಯನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸುತ್ತೇವೆ.
4
+ ಅನುದಾನಿತ ಸಂಸ್ಥೆಗಳ ನೌಕರರಿಗೂ ಜ್ಯೋತಿ ಸಂಜೀವಿನಿ ಯೋಜನೆ ವಿಸ್ತರಣೆ : ಸಿಎಂ
5
+ ನಿರಪೇಕ್ಷಣಾ ಪತ್ರ ನೀಡಲು ಕೃಷಿ ಭೂಮಿಗಳು 100 ಮೀಟರ್ ಅಂತರದಲ್ಲಿರಬೇಕು ಮತ್ತು ಅರಣ್ಯ ಎಂದು ಪರಿಗಣಿಸಬಹುದಾದಷ್ಟು ಮರಗಳ ಸಂಖ್ಯೆ ಇರಬಾರದು. ಜೊತೆಗೆ ಕೇಂದ್ರ ಇಲಾಖೆಗೂ ಪ್ರಸ್ತಾವನೆ ಕಳುಹಿಸಿ ಅನುಮೋದನೆ ಪಡೆದುಕೊಳ್ಳಬೇಕಿದೆ ಎಂದು ಹೇಳಿದರು. ಈ ವೇಳೆ ಶೂಳ್ಯ ಕ್ಷೇತ್ರದ ಶಾಸಕರಾದ ಭಾಗಿರಥಿ ಮುರುಳ್ಯ ಅವರು ತಮ್ಮ ಕ್ಷೇತ್ರದಲ್ಲಿರುವ ರಬ್ಬರ್ ಕಾರ್ಮಿಕರಿಗೆ ಹೆಚ್ಚುವರಿ ಬೋನಸ್ ನೀಡಬೇಕು, ಆನೆ ದಾಳಿಯಿಂದ ಮೃತಪಟ್ಟ ಕುಟುಂಬಗಳಿಗೆ 25 ಲಕ್ಷ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
6
+ ಈಗಾಗಲೇ ಶೇ.8.3ರಷ್ಟು ಬೋನಸ್ ನೀಡಲಾಗಿದೆ. ಕಾರ್ಮಿಕರು ಶೇ.20ರಷ್ಟು ಬೋನಸ್‍ಗಾಗಿ ಪಟ್ಟು ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಆರ್ಥಿಕ ಸ್ಥಿತಿಗತಿಯಲ್ಲಿ ಅದು ಕಷ್ಟಸಾಧ್ಯ ಎಂದರಲ್ಲದೆ, ಆನೆ ದಾಳಿಯಿಂದ ಮೃತಪಟ್ಟವರಿಗೆ 15 ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದು ತಿಳಿಸಿದರು.
eesanje/url_46_288_12.txt ADDED
@@ -0,0 +1,6 @@
 
 
 
 
 
 
 
1
+ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ, ಇದಕ್ಕೆ ಅಂಕಿ-ಅಂಶಗಳೇ ಸಾಕ್ಷಿ : ಸಚಿವ ಪರಮೇಶ್ವರ್
2
+ ಬೆಳಗಾವಿ, ಡಿ.14- ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ಇದಕ್ಕೆ ಲಭ್ಯವಿರುವ ಅಂಕಿ-ಅಂಶಗಳೇ ಸಾಕ್ಷಿ ಎಂದು ಪ್ರಸ್ತಾಪಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಮೇಲ್ಮನೆಯಲ್ಲಿ ಪ್ರತಿಪಕ್ಷಗಳ ಬಾಯಿ ಮುಚ್ಚಿಸಿದ ಪ್ರಸಂಗ ಜರುಗಿತು. ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಮುನಿರಾಜುಗೌಡ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರು ಸೇರಿದಂತೆ ರಾಜ್ಯ ವ್ಯಾಪಿ ಎಲ್ಲಿಯೂ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ಇತ್ತೀಚಿಗೆ ನಡೆದ 57 ಕೊಲೆ ಪ್ರಕರಣಗಳ ಪೈಕಿ 56 ಪ್ರಕರಣಗಳಲ್ಲಿ ಪ್ರಮುಖ ಆರೋಪಿಗಳನ್ನು ಬಂಸಿ ವಿಚಾರಣೆಗೊಳಪಡಿಸಲಾಗಿದೆ ಎಂದು ಹೇಳಿದರು.
3
+ ಈ ಹಿಂದೆ 2011ರಿಂದ 2013ರವರೆಗೆ ಎರಡು ವರ್ಷ ನಾಲ್ಕು ತಿಂಗಳು ಬಿಜೆಪಿಯ ಆರ್.ಅಶೋಕ್ ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ಬರೋಬ್ಬರಿ 4121 ಕೊಲೆ ಪ್ರರಕಣಗಳು ನಡೆದಿವೆ. ಅದರಲ್ಲೂ ಅತ್ಯಾಚಾರ ಪ್ರರಕಣಗಳು 1639ರಷ್ಟಿದ್ದು, 234 ಪೆÇೀಕ್ಸೋ ಕಾಯ್ದೆ ಅಡಿಯೂ ಮೊಕದ್ದಮೆ ದಾಖಲಾಗಿವೆ. ಬಸವರಾಜ ಬೊಮ್ಮಾಯಿ ಗೃಹ ಸಚಿವರಾಗಿದ್ದ ಸಂದರ್ಭದಲ್ಲಿಯೂ 2254 ಕೊಲೆಗಳು, 915ರಷ್ಟು ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬಂದಿವೆ ಎಂಬ ಮಾಹಿತಿ ನೀಡಿದರು.
4
+ ಅನುದಾನಿತ ಸಂಸ್ಥೆಗಳ ನೌಕರರಿಗೂ ಜ್ಯೋತಿ ಸಂಜೀವಿನಿ ಯೋಜನೆ ವಿಸ್ತರಣೆ : ಸಿಎಂ
5
+ ಅದೇ ರೀತಿ, ಕಳೆದ ಅವಗೆ ಗೃಹ ಸಚಿವರಾಗಿದ್ದ ಆರಗ ಜ್ಞಾನೇಂದ್ರ ಆಡಳಿತ ವೇಳೆಯೂ 2417 ಕೊಲೆಗಳು, 949 ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬಂದಿವೆ. ಇನ್ನೂ, ಕಾಂಗ್ರೆಸ್ ಸರ್ಕಾರ ಆಡಳಿತದ ಆರಂಭದಿಂದ ಇದುವರೆಗೂ 616 ಕೊಲೆಗಳು, 310 ಅತ್ಯಾಚಾರ ಪ್ರಕರಣಗಳು ಮಾತ್ರ ವರದಿಯಾಗಿದೆ ಎಂದು ಅವರು ತಿಳಿಸಿದರು.
6
+ ಯಾವುದೇ ಅಂಕಿ-ಅಂಶಗಳು ಇಲ್ಲದೆ ನಮ್ಮ ಸರ್ಕಾರದ ವಿರುದ್ಧ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಸುಳ್ಳು ಆರೋಪ ಮಾಡುವುದು ಸರಿಯಲ್ಲ. ಅಲ್ಲದೆ, ಕೋಮು ಗಲಭೆಗಳು ನಿಯಂತ್ರಣದಲ್ಲಿವೆ. ಹಿಂದಿನ ಬಿಜೆಪಿ ಸರ್ಕಾರದ ಅವಯಲ್ಲಿ ಕೋಲಾರ, ಉಪ್ಪಿನ ಅಂಗಡಿ, ನರಗುಂದ, ಹಿಜಾಬ್ ಕಡೆ ಗಲಾಟೆ, ಶಿವಮೊಗ್ಗದಲ್ಲಿ ಸಾರ್ವಕರ್ ಫೋಟೋ , ಹೀಗೆ ಸಣ್ಣ ಸಣ್ಣ ವಿಚಾರಗಳಿಗೂ ಗಲಭೆ ನಡೆಸಲಾಗುತ್ತಿತ್ತು ಎಂದು ಪರಮೇಶ್ವರ್ ಹೇಳಿದರು.
eesanje/url_46_288_2.txt ADDED
@@ -0,0 +1,6 @@
 
 
 
 
 
 
 
1
+ ವಿಧಾನಸಭೆಯಲ್ಲಿ ಕೋರಂ ಹಗ್ಗಜಗ್ಗಾಟ
2
+ ಬೆಳಗಾವಿ, ಡಿ. 15- ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅವೇಶನದ ಕೊನೆಯ ದಿನವಾದ ಇಂದು ಕಲಾಪದ ಆರಂಭದಲ್ಲಿ ಕೋರಂನ ಹಗ್ಗಜಗ್ಗಾಟ ಕಂಡುಬಂದಿತು. ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಬೆಳಿಗ್ಗೆ 9 ಗಂಟೆಗೆ ಸದನ ಸಮಾವೇಶಕ್ಕೆ ಸಮಯ ನಿಗದಿ ಮಾಡಿದ್ದರು. ಆದರೆ ಆಡಳಿತ ಪಕ್ಷದ ಕಡೆಯಿಂದ ಕೇವಲ ನಾಲ್ಕೈದು ಮಂದಿ ಸದಸ್ಯರು ಮಾತ್ರ ಸದನದಲ್ಲಿ ಹಾಜರಿದ್ದರು.
3
+ ಬಿಜೆಪಿಯಿಂದ ಸುಮಾರು 20 ಕ್ಕೂ ಹೆಚ್ಚು ಶಾಸಕರು ಉಪಸ್ಥಿತರಿದ್ದರು. ಆಡಳಿತ ಪಕ್ಷದ ಸಾಲಿನಲ್ಲಿ ಸದಸ್ಯರ ಕೊರತೆ ಇದ್ದುದ್ದರಿಂದ ಬಿಜೆಪಿ ಶಾಸಕರು ಸದನ ಕರೆದವರೇ ಸಮಯಕ್ಕೆ ಬಂದಿಲ್ಲ. ನಾವು ಏಕೆ ಹಾಜರಿದ್ದು ಕೋರಂಗೆ ಬೆಂಬಲ ಏಕೆ ನೀಡಬೇಕು ಎಂದು ಹೇಳುತ್ತಾ ಹೊರನಡೆದರು.
4
+ ಕೇಂದ್ರದಲ್ಲಿ ಮೋದಿ ಹ್ಯಾಟ್ರಿಕ್ ಸರ್ಕಾರ ಗ್ಯಾರಂಟಿ : ಸಮೀಕ್ಷೆ
5
+ ಸುಮಾರು ಅರ್ಧಗಂಟೆ ಕಾಲ ಸದನದ ಬೆಲ್ಲು ಬಾರಿಸುತ್ತಲೇ ಇತ್ತು. ಕೊನೆಗೆ ಸರ್ಕಾರದ ಮುಖ್ಯ ಸಚೇತಕ ಪಿ.ಎಂ.ಅಶೋಕ್ ಅವರು ಸದನದ ಮೊಗಸಾಲೆಯಲ್ಲಿದ್ದ ಕಾಂಗ್ರೆಸ್ ಶಾಸಕರನ್ನು ಒಳಗೆ ಕರೆತಂದರು. ಆದರೂ ಕೋರಂಗೆ ಸಂಖ್ಯೆ ಸಾಲದಿದ್ದಾಗ ಬಿಜೆಪಿ ಪಾಳಯದತ್ತ ಬಂದು ಹಿರಿಯ ಶಾಸಕ ಸುರೇಶ್‍ಕುಮಾರ್ ಅವರಲ್ಲಿ ಮೂರ್ನಾಲ್ಕು ಮಂದಿ ಶಾಸಕರನ್ನು ಒಳಗೆ ಬರುವಂತೆ ಹೇಳಿ ಕೋರಂ ಆಗುತ್ತಲೆ ಕಲಾಪ ಶುರು ಮಾಡೋಣ ಎಂದು ಮನವಿ ಮಾಡಿಕೊಂಡರು.
6
+ ಅಷ್ಟರಲ್ಲಿ ಕಾಂಗ್ರೆಸ್ ಶಾಸಕರುಗಳೇ ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದರಿಂದಾಗಿ ಕಲಾಪ ಆರಂಭಿಸಿದಾಗ ಬೆಲ್ಲು ನಿಲ್ಲಿಸಲಾಯಿತು. ಸಭಾಂಗಣದ ಒಳಗೆ ಬರುವಾಗ ಬಿಜೆಪಿ ಶಾಸಕರು, ನಾವು ಒಳಗೆಬರಲಿ ಎಂಬ ಕಾರಣಕ್ಕಾಗಿಯೇ ಬೆಲ್ ನಿಲ್ಲಿಸಿದ್ರಾ ಹೇಗೆ ಎಂದು ಅನುಮಾನ ವ್ಯಕ್ತಪಡಿಸುತ್ತಲೇ ಬಂದರು.
eesanje/url_46_288_3.txt ADDED
@@ -0,0 +1,9 @@
 
 
 
 
 
 
 
 
 
 
1
+ ಲೋಕಸಭೆಯಲ್ಲಿ ಆತಂಕ ಸೃಷ್ಟಿಸಿದ್ದ ಮನೋರಂಜನ್ ಸಾಫ್ಟ್‌ವೇರ್ ಎಕ್ಸ್‌ಪರ್ಟ್‌
2
+ ಮೈಸೂರು,ಡಿ.15- ಲೋಕಸಭೆ ಕಲಾಪದ ವೇಳೆ ಆತಂಕ ಸೃಷ್ಟಿಸಿದ್ದ ಪ್ರಕರಣ ಸಂಬಂಧ ಮೈಸೂರಿನಲ್ಲಿ ಆಂತರಿಕ ಭದ್ರತಾ ಪಡೆ ಅಧಿಕಾರಿಗಳು ಮನೋರಂಜನ್ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿದರು.ಲೋಕಸಭೆ ಕಲಾಪ ವೇಳೆ ಮನೋರಂಜನ್ ಮತ್ತು ಸಾಗರ್ ಶರ್ಮಾ ನುಗ್ಗಿದ್ದು ಭಾರಿ ಸುದ್ದಿಯಾಗಿದೆ.
3
+ ಈ ಸಂಬಂಧ ಮೈಸೂರಿನ ಮನೋರಂಜನ್ ನಿವಾಸಕ್ಕೆ ಆಂತರಿಕ ಭದ್ರತಾ ಪಡೆ ಅಧಿಕಾರಿಗಳು ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಆಂತರಿಕ ಭದ್ರತಾ ಪಡೆ ಅಕಾರಿಗಳ ಮುಂದೆ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.ಮನೋರಂಜನ್ ಮನೆಗೆ ಸಾಗರ್ ಶರ್ಮ ಎರಡು ಬಾರಿ ಬಂದು ಹೋಗಿದ್ದ ಈ ವೇಳೆ ಊಟ ಮಾಡಿಕೊಂಡು ಹೋಗಿದ್ದ. ಆದರೆ ಸದ್ಯದ ಮಾಹಿತಿ ಪ್ರಕಾರ ಇಲ್ಲಿ ಉಳಿದುಕೊಂಡಿರಲಿಲ್ಲ ಎಂದು ಮನೋರಂಜನ್ ಕುಟುಂಬಸ್ಥರು ತಿಳಿಸಿದ್ದಾರೆ.
4
+ ಕುಟುಂಬಸ್ಥರ ಬಳಿಯು ಮನೋರಂಜನ್ ಹೆಚ್ಚು ಮಾತನಾಡಿರಲಿಲ್ಲವಂತೆ. ಹೆಚ್ಚು ಪುಸ್ತಕವನ್ನು ಓದುತ್ತಿದ್ದ, ಹೆಚ್ಚು ಮಾತನಾಡುತ್ತಿರಲ್ಲ. ಆದರ್ಶ ವ್ಯಕ್ತಿತ್ವದ ಹಿನ್ನೆಲೆ ತೋರಿಸಿಕೊಂಡಿದ್ದ ಎಂದು ತಿಳಿದು ಬಂದಿದೆ.ಸಂಸತ್ ಭವನಕ್ಕೆ ನುಗ್ಗಿದ ಮನೋರಂಜನ್ ಸಾಫ್ಟ್‍ವೇರ್ ಪಂಟರ್ ಆಗಿದ್ದು ಎಲ್ಲಿಯೂ ವಾಟ್ಸಾಪ್, ಇನ್‍ಸ್ಟಾಗ್ರಾಂ, ಫೇಸ್ ಬುಕ್ ಐಡಿ ಬಿಟ್ಟುಕೊಟ್ಟಿಲ್ಲ.
5
+ ಕೇಂದ್ರದಲ್ಲಿ ಮೋದಿ ಹ್ಯಾಟ್ರಿಕ್ ಸರ್ಕಾರ ಗ್ಯಾರಂಟಿ : ಸಮೀಕ್ಷೆ
6
+ ತಂಗಿ ಮದುವೆ ಸಂದರ್ಭದಲ್ಲಿ ಎಲ್ಲಾ ಜಾಲತಾಣದಲ್ಲೂ ಸಕ್ರಿಯನಾಗಿದ್ದ. ಕಳೆದ ಮೂರು ತಿಂಗಳಿಂದ ಎಲ್ಲಾ ಅಕೌಂಟ್‍ಗಳು ಡಿಆಕ್ಟೀವ್ ಆಗಿತ್ತು. ತನ್ನ ಗುರುತು ಪತ್ತೆ ಆಗಬಾರದು ಎಂಬ ಕಾರಣಕ್ಕೆ ಮನೋರಂಜನ್ ಜಾಲತಾಣಗಳಲ್ಲಿ ಇನ್ ಆಕ್ಟೀವ್ ಆಗಿ ಗುರುತು ಮರೆಮಾಚಿದ್ದ.
7
+ ಕ್ರಾಂತಿಕಾರಿ ಪುಸ್ತಕಗಳೇ ಪ್ರೇರಣೆ. ಕಿಕ್ ಬಾಕ್ಸಿಂಗ್ ಮನೋರಂಜನ್ ಹವ್ಯಾಸ. ಎಂಜಿನಿಯರಿಂಗ್ ಮುಗಿಸಿದ್ರೂ ನಿರುದ್ಯೋಗಿ ಆಗಿದ್ದ ಮನೋರಂಜನ್ ಕೆಲಸಕ್ಕೂ ಹೋಗದೆ, ಮದುವೆಯನ್ನೂ ಆಗದೆ ಒಬ್ಬಂಟಿಯಾಗಿದ್ದ. ಮನೆ ಸುತ್ತ-ಮುತ್ತ ಅಪರಿಚಿತನಂತಿರುತ್ತಿದ್ದ ಆತ ಕೊಠಡಿ ಒಳಗೆ ಸೇರಿಕೊಂಡು ಪುಸ್ತಕ ಓದುತ್ತಿದ್ದ. ಬೆಂಗಳೂರು, ದೆಹಲಿಯಲ್ಲದೆ ವಿದೇಶಕ್ಕೂ ತೆರಳಿದ್ದ.
8
+ ಪದೇ ಪದೇ ಬೆಂಗಳೂರಿಗೆ ಅಂತ ಹೇಳಿ ಹೋಗುತ್ತಿದ್ದ. ಮನೆಗೆ ಬರುತ್ತಿದ್ದ ಪೋಸ್ಟ್ ಗಳನ್ನ ಬೇರೆ ವಿಳಾಸಕ್ಕೆ ವರ್ಗಾಯಿಸಿದ್ದ. ಬೆಂಗಳೂರಿನಲ್ಲಿ ತಾನು ಉಳಿದುಕೊಂಡಿದ್ದ ಕೊಠಡಿಗೆ ಬರುವಂತೆ ನೋಡಿಕೊಂಡಿದ್ದ ಎಂಬ ಮಾಹಿತಿ ಕುಟುಂಬಸ್ಥರಿಂದ ತಿಳಿದು ಗೊತ್ತಾಗಿದೆ.ಮನೋರಂಜನ್ ಫಸ್ಟ್ ಕ್ಲಾಸ್ ಸ್ಟೂಡೆಂಟ್ ಆಗಿದ್ದು, ಮೈಸೂರಿನಲ್ಲಿಯೇ ಪಿಯುಸಿವರೆಗೆ ವ್ಯಾಸಂಗ ಮಾಡಿದ್ದನು.
9
+ ಸೆಂಟ್ ಜೋಸೆಫ್ ಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ, ಮರಿಮಲ್ಲಪ್ಪ ಶಾಲೆಯಲ್ಲಿ ಪಿಯು ಶಿಕ್ಷಣ, ಬೆಂಗಳೂರಿನ ಬಿಐಟಿಯಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡಿದ್ದನು. ಸಿವಿಲ್ ಓ��ು ಅಂದರೂ ಕಂಪ್ಯೂಟರ್ ಸೈನ್ಸೇ ಓದಬೇಕೆಂದು ಹಠ ಹಿಡಿದಿದ್ದನಂತೆ. ಆದರೆ ಪದವಿ ಪಡೆದಿರಲಿಲ್ಲ ಎಂದು ತಿಳಿದು ಬಂದಿದೆ.
eesanje/url_46_288_4.txt ADDED
@@ -0,0 +1,5 @@
 
 
 
 
 
 
1
+ ಪತಿ-ಪತ್ನಿ ಅಂತರ್ ಜಿಲ್ಲಾ ವರ್ಗಾವಣೆಗೆ ಅವಕಾಶ
2
+ ಬೆಳಗಾವಿ, ಡಿ.14- ಪೊಲೀಸ್ ಇಲಾಖೆಯಲ್ಲಿ ಪತಿ -ಪತ್ನಿ ಅಂತರ್ ಜಿಲ್ಲಾ ವರ್ಗಾವಣೆಗೆ ಅವಕಾಶ ಮಾಡಿ ಕೊಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ವಿಧಾನಸಭೆಗೆ ತಿಳಿಸಿದರು. ಶೂನ್ಯವೇಳೆಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಪೊಲೀಸ್ ಇಲಾಖೆಯಲ್ಲಿ ಪತಿ -ಪತ್ನಿ ಅಂತರ್ ಜಿಲ್ಲಾ ವರ್ಗಾವಣೆಗೆ ಅವಕಾಶ ಮಾಡಿ ಕೊಡಲಾಗಿದೆ. ಪೊಲೀಸ್ ಅಧಿಕಾರಿಗಳ ಕನಿಷ್ಠ ವರ್ಗಾವಣೆಯನ್ನು ಎರಡು ವರ್ಷಗಳಿಗೆ ಹೆಚ್ಚಿಸುವ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
3
+ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಅವಯು ಮೊದಲು ಎರಡು ವರ್ಷವಿತ್ತು. 7 ವರ್ಷದ ಹಿಂದೆ ಅದನ್ನು ಒಂದು ವರ್ಷಕ್ಕೆ ಮಾಡಲಾಗಿದೆ. ಪೊಲೀಸ್ ವರ್ಗಾವಣೆ ಕುರಿತು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವುದು ಎಂದು ಸಚಿವರು ಹೇಳಿದರು.
4
+ ಮತ್ತೊಬ್ಬ ಮಹಿಳೆಯನ್ನು ಬಲಿಪಡೆದ ಕಿಲ್ಲರ್ ಬಿಎಂಟಿಸಿ
5
+ ಇದಕ್ಕೂ ಮುನ್ನ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಪೊಲೀಸ್ ಸಬ್ ಇನ್ಸ್ಪೆಕ್ಟರ್, ಇನ್ಸ್ಪೆಕ್ಟರ್, ಡಿವೈಎಸ್ಪಿಗಳ ವರ್ಗಾವಣೆಯನ್ನು ಒಂದು ವರ್ಷಕ್ಕೆ ನಿಗದಿ ಪಡಿಸಲಾಗಿದೆ. ಒಂದು ಜಾಗಕ್ಕೆ ವರ್ಗಾವಣೆಗೊಂಡು ಕರ್ತವ್ಯಕ್ಕೆ ಹಾಜರಾಗುವ ಅಧಿಕಾರಿಗಳೇ ಠಾಣೆಯ ಸರಹದ್ದಿನ ಸಮಗ್ರ ಮಾಹಿತಿ ಪಡೆದು, ಕ್ರಿಮಿನಲ್ ಗುಂಡಾಗಳನ್ನೂ ಮಟ್ಟ ಹಾಕುವ ವೇಳೆಗೆ ಒಂದು ವರ್ಷ ಮುಗಿದು ಹೋಗುತ್ತದೆ. ಅದರಿಂದ ಕ್ರಿಮಿನಲ್ ಪ್ರಕರಣಗಳನ್ನು ಮಟ್ಟಹಾಕಲು ಆಗುತ್ತಿಲ್ಲ. ಹೀಗಾಗಿ ಕನಿಷ್ಠ ವರ್ಗಾವಣೆ ಅವಧಿಯನ್ನು ಎರಡು ವರ್ಷಕ್ಕೆ ಹೆಚ್ಚಿಸಬೇಕು ಎಂದು ಹೇಳಿದರು.
eesanje/url_46_288_5.txt ADDED
@@ -0,0 +1,17 @@
 
 
 
 
 
 
 
 
 
 
 
 
 
 
 
 
 
 
1
+ ಭ್ರೂಣ ಲಿಂಗ ಪತ್ತೆ-ಹತ್ಯೆ ತಡೆಗೆ ಪ್ರತ್ಯೇಕ ಕಾಯ್ದೆ-ನೀತಿ ರಚನೆ : ಗುಂಡೂರಾವ್
2
+ ಬೆಳಗಾವಿ, ಡಿ.14- ಹೆಣ್ಣು ಭ್ರೂಣಲಿಂಗ ಪತ್ತೆ ಮತ್ತು ಹತ್ಯೆಯನ್ನು ತಡೆಗಟ್ಟಲು ಐಪಿಸಿ ಸೆಕ್ಷನ್ಗೆ ತಿದ್ದುಪಡಿ ತರಲಾಗುವುದು, ಜೊತೆಗೆ ವಿಶೇಷ ಕಾಯ್ದೆ ಹಾಗೂ ಪ್ರತ್ಯೇಕ ನೀತಿ ರಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
3
+ ವಿಧಾನಸಭೆಯ ಶೂನ್ಯವೇಳೆಯಲ್ಲಿ ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಕುರಿತು ನಡೆದ ಚರ್ಚೆಗೆ ಉತ್ತರ ನೀಡಿದ ಸಚಿವರು, ಸಾಮಾಜಿಕವಾದ ಈ ಪಿಡುಗನ್ನು ತಡೆಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.ಆಧುನಿಕ ತಂತ್ರಜಾ್ಞನದಿಂದ ಭ್ರೂಣ ಲಿಂಗ ಪತ್ತೆ ಮಾಡುವುದು ಸುಲಭವಾಗಿದೆ. ಇನ್ನೂ ಕೆಲವು ಪ್ರಕರಣಗಳಲ್ಲಿ ಮಗು ಜನಿಸಿದ ಬಳಿಕ ಹೆಣ್ಣು ಮಗುವಾಗಿದ್ದರೆ ಅದರ ಬಾಯಿಗೆ ಕಾಳು ಹಾಕಿ ಉಸಿರುಗಟ್ಟುವಂತೆ ಮಾಡಿ ಕೊಲೆ ಮಾಡುವ ಉದಾಹರಣೆಗಳಿವೆ. ಇದು ಸಮಾಜದ ಕೆಟ್ಟ ಮನಸ್ಥಿತಿ ಎಂದು ಹೇಳಿದರು.
4
+ 2002ರಿಂದ 2023ರವರೆಗೆ 21 ವರ್ಷದಲ್ಲಿ 100 ಭ್ರೂಣ ಲಿಂಗ ಪತ್ತೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಅಧಿಕಾರಿಗಳು ಕಾಳಜಿ ಹಾಗೂ ಪ್ರಾಣಿಕತೆಯಿಂದ ತಪಾಸಣೆ ನಡೆಸಿಲ್ಲ. ಇನ್ನೂ ಮುಂದೆ ಇದನ್ನು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದರು.ಹೆಣ್ಣು ಭ್ರೂಣ ಹತ್ಯೆ ಮೊದಲಿನಿಂದಲೂ ನಡೆಯುತ್ತಿದೆ. ಆದರೆ ನಾವು ಅದನ್ನು ಕಂಡೂ ಕಾಣದಂತೆ ಇದ್ದು ಬಿಡುತ್ತೇವೆ.
5
+ ಪತ್ನಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ವಿಡಿಯೋ ಮಾಡಿದ ಪತಿರಾಯ
6
+ ಭ್ರೂಣ ಹತ್ಯೆಯಿಂದ ದೇಶದಲ್ಲಿ ಲಿಂಗಾನುಪಾತ 979ರಿಂದ 947ಕ್ಕೆ ಕುಸಿದಿದೆ. ಜನರೂ ಭ್ರೂಣ ಹತ್ಯೆಯನ್ನು ಬಯಸುತ್ತಿದ್ದಾರೆ. ಅದಕ್ಕಾಗಿಯೇ ಅಕ್ರಮ ಸೆಂಟರ್ಗಳು, ಕೃತ್ಯಗಳು ಹೆಚ್ಚಾಗುತ್ತಿವೆ. ಈ ಕುರಿತು ಜನಜಾಗೃತಿ ಹೆಚ್ಚಾಗಬೇಕು, ಜೊತೆಗೆ ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಭ್ರೂಣ ಹತ್ಯೆ ಮಾಡಿಸಿದವರು ಹಾಗೂ ಮಾಡಿದವರು ಸೇರಿ ಎರಡು ಕಡೆಯವರನ್ನು ಹೊಣೆ ಮಾಡಬೇಕು. ಭ್ರೂಣ ಹತ್ಯೆ ಎಂದರೆ ಅದು ಕೊಲೆಯೇ ಆಗಿದೆ ಎಂದರು.
7
+ ಇಂತಹ ವೇಳೆಯಲ್ಲಿ ತಾಯಿ ಹೊಣೆಗಾರಿಕೆಯಿಂದ ನುಣಚಿಕೊಳ್ಳುವಂತಿಲ್ಲ. ಗರ್ಭಪಾತ ಮಾಡಿಸುವುದು ನನಗೆ ಗೋತ್ತಿಲ್ಲ, ಒತ್ತಡ ಹೇರಿ ಭ್ರೂಣ ಹತ್ಯೆ ಮಾಡಿಸಿದ್ದಾರೆ ಎಂದು ಹೇಳುವುದನ್ನು ಒಪ್ಪಿಕೊಳ್ಳಲಾಗುವುದಿಲ್ಲ ಎಂದು ಹೇಳಿದರು. ಮಂಡ್ಯದಲ್ಲಿ ನಡೆದ ಪ್ರಕರಣವನ್ನು ಗಮನಿಸುವಲ್ಲಿ ಅಧಿಕಾರಿಗಳು ಲೋಪವೆಸಗಿದ್ದಾರೆ. ಬೆಂಗಳೂರಿನ ಬಯ್ಯಪ್ಪನಹಳ್ಳಿ ಪೊಲೀಸರು ಪ್ರಕರಣ ಪತ್ತೆ ಹಚ್ಚಿದ್ದಾರೆ. ಇದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಪೊಲೀಸರ ತನಿಖೆಯಲ್ಲಿ ಹೆಚ್ಚು ಪ್ರಕರಣಗಳು ನಡೆದಿರುವುದು ಸಮಾಜದ ಕಣ್ಣು ತೆರೆಸಿದೆ ಎಂದರು.
8
+ ಇದನ್ನು ತಡೆಯಲು ಕಾನೂನು ಜಾರಿಗೆ ತರಬೇಕು. ಭ್ರೂಣ ಲಿಂಗ ಪತ್ತೆ ಕಾನೂನನ್ನು ಮತ್ತಷ್ಟು ಕಠಿಣಗೊಳಿಸಿ, ಪರಿಣಾಮಕಾರಿಯಾಗಿ ಬಳಕೆ ಮಾಡಬೇಕು. ಭ್ರೂಣ ಪತ್ತೆ ಪ್ರತ್ಯೇಕ ಕಾನೂನು ಇದೆ. ಭ್ರೂಣ ಹತ್ಯೆ ತಡೆಯಲು ಚಾಲ್ತಿಯಲ್ಲಿರುವ ಕಾನೂನು ಸಮರ್ಥವಾಗಿಲ್ಲ. ಪ್ರಸ್ತುತ ಐಪಿಸಿ ಸೆಕ್ಷನ್ ಸೆಕ್ಷನ್ 315, 316, ಬಳಸಿಕೊಳ್ಳಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಐಪಿಸಿಗೂ ತಿದ್ದುಪಡಿ ತರಲಾಗುವುದು. ಬಯ್ಯಪ್ಪನಹಳ್ಳಿ ಪ್ರಕರಣದಲ್ಲಿ ದಾಖಲಿಸಲಾಗಿದ್ದ ಸೆಕ್ಷನ್ಗಳನ್ನೇ ಆಧಾರವಾಗಿಟ್ಟುಕೊಂಡು ಆರೋಪಿಗಳು ಜಾಮೀನು ಪಡೆದುಕೊಂಡಿದ್ದಾರೆ ಎಂದರು.
9
+ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ತನಿಖೆಯ ಮೇಲೆ ನಿಗಾವಹಿಸಲಾಗುತ್ತಿದೆ. ಇದು ಮಂಡ್ಯ ಅಥವಾ ಕೆಲವು ಜಿಲ್ಲೆಗಳಿಗೆ ಸೀಮಿತವಾಗಿಲ್ಲ. ರಾಜಾ್ಯದ್ಯಂತ ಪರಿಶೀಲನೆ ನಡೆಸಲಾಗುತ್ತಿದೆ. ಜೊತೆಗೆ ಅಧಿಕಾರಿಗಳು ಗಂಭೀರ ಸ್ವರೂಪದ ತಪಾಸಣೆ ನಡೆಸುವಂತೆ ಸೂಚಿಸಲಾಗಿದೆ ಎಂದರು.
10
+ ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ತಡೆಗೆ ವಿಶೇಷ ಕಾರ್ಯಪಡೆ ರಚಿಸಲಾಗಿದೆ. ಪೊಲೀಸ್ ಇಲಾಖೆಯ ಜಂಟಿ ಕಾರ್ಯಚರಣೆ ನಡೆಸಲಾಗುವುದು. ಈ ಕಾರ್ಯಚರಣೆಗಾಗಿಯೇ ಎಸಿಪಿ ದರ್ಜೆಯ ಅಧಿಕಾರಿಯನ್ನು ವಿಶೇಷವಾಗಿ ನಿಯೋಜಿಸುವಂತೆ ಗೃಹ ಇಲಾಖೆಗೆ ಮನವಿ ಮಾಡಲಾಗಿದೆ ಎಂದರು.
11
+ ಹೊಸಕೋಟೆಯಲ್ಲಿ ಅಧಿಕಾರಿಗಳು ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದಾಗ ಹತ್ಯೆಗೆ ಒಳಗಾದ ಭ್ರೂಣ ಪತ್ತೆಯಾಗಿದೆ. ತಕ್ಷಣವೇ ಆಸ್ಪತ್ರೆ ಹಾಗೂ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್, ಭ್ರೂಣ ಹತ್ಯೆ ತಡೆಯಲು ಸೂಕ್ತ ಕಾನೂನು ತರುವುದು ಅನಿವಾರ್ಯ. ಮುಂದಿನ ಅವೇಶನದ ವೇಳೆಗೆ ಕಾನೂನು ಮತ್ತು ಆರೋಗ್ಯ ಇಲಾಖೆ ಜಂಟಿಯಾಗಿ ಕಾನೂನು ರೂಪಿಸುತ್ತೇವೆ ಎಂದು ಭರವಸೆ ನೀಡಿದರು.
12
+ ಇದಕ್ಕೂ ಮೊದಲು ಚರ್ಚೆಯಲ್ಲಿ ಭಾಗವಹಿಸಿದ್ದ ಆರ್.ಅಶೋಕ್, ಚಾಲ್ತಿಯಲ್ಲಿರುವ ಕಾನೂನನ್ನು ಭ್ರೂಣ ಹತ್ಯೆ ಮಾಡಿದ ಕುಟುಂಬದವರನ್ನು ಮಾತ್ರ ಹೊಣೆ ಮಾಡಲು ಬಳಕೆಯಾಗುತ್ತದೆ. ಆಸ್ಪತ್ರೆಗಳು ಹಾಗೂ ಇತರ ಸಂಸ್ಥೆಗಳನ್ನು ಜವಾಬ್ದಾರಿ ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಕಾನೂನು ತಿದ್ದುಪಡಿ ತನ್ನಿ ಎಂದರು.
13
+ ಪತ್ನಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ವಿಡಿಯೋ ಮಾಡಿದ ಪತಿರಾಯ
14
+ ರಾಜಾ್ಯದ್ಯಂತ ಭ್ರೂಣ ಹತ್ಯೆ ನಡೆಯುತ್ತಿದ್ದರೂ ಆರೋಗ್ಯ ಇಲಾಖೆ ಯಾವುದೇ ಕ್ರಮಕೈಗೊಳ್ಳದೇ ಸುಮ್ಮನೆ ಇದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಎಸ್ಐಟಿ ತಂಡ ರಚಿಸಬೇಕು. ಕಳೆದ 27 ವರ್ಷದಲ್ಲಿ ಆರೋಗ್ಯ ಇಲಾಖೆ ಕೇವಲ 87 ಭ್ರೂಣಹತ್ಯೆ ಪ್ರಕರಣವನ್ನು ವರದಿ ಮಾಡಿದೆ. ಮಂಡ್ಯ, ಮೈಸೂರು, ರಾಮನಗರ ಬೆಂಗಳೂರು ಸೇರಿದಂತೆ ರಾಜಾ್ಯದ್ಯಂತ ಭ್ರೂಣಹತ್ಯೆ ಪ್ರಕರಣಗಳು ವ್ಯಾಪಿಸಿದೆ. ಇಂತಹ ದುಷ್ಕೃತ್ಯದಲ್ಲಿ ತೊಡಗಿರುವ ವರಿಗೆ ಮರಣದಂಡನೆ ಯಂತಹ ಕಠಿಣ ಶಿಕ್ಷೆಯನ್ನು ವಿಸಬೇಕು ಎಂದು ಒತ್ತಾಯಿಸಿದರು.
15
+ ಕೆಲ ವರದಿಗಳನ್ನು ನೋಡುತ್ತಿದ್ದರೆ ಒಬ್ಬೊಬ್ಬ 200, 300, 400 ಭ್ರೂಣ ಹತ್ಯೆ ಮಾಡಿದ್ದಾರೆ. ಇದು ಮಾನವಕುಲಕ್ಕೆ ಕಳಂಕ ತರುವ ವ���ಷಯ. ಈ ಹತ್ಯೆಗೆ ಮೂಢನಂಬಿಕೆಗಳು ಕಾರಣ, ನಾನು ಅವನ್ನು ನಂಬುವುದಿಲ್ಲ, ನಮ್ಮಲಿ ಯಾರಾದರೂ ಸತ್ತರೆ ಅವರಿಗೆ ಕೊನೆ ಕಾರ್ಯಗಳನ್ನು ಮಾಡಲು ಗಂಡು ಮಗು ಬೇಕು ಎನ್ನುತ್ತಾರೆ. ಮತ್ತು ವರದಕ್ಷಿಣೆ ಕಾರಣದಿಂದಲೂ ಹೆಣ್ಣು ಭ್ರೂಣ ಹತ್ಯೆಗಳು ನಡೆಯುತಿದ್ದೆ. ಗರ್ಭಿಣಿ ಹೆಣ್ಣಿನ ಮೇಲೆ ಗಂಡ ಸೇರಿದಂತೆ ಕುಟುಂಬದವರು ಒತ್ತಡ ಹೇರಿದಾಗ ಈ ರೀತಿಯ ಕೃತ್ಯಗಳು ನಡೆಯುತ್ತವೆ ಎಂದರು.
16
+ ಇವತ್ತಿನ ಜಗತ್ತಿನಲ್ಲಿ ಹೆಣ್ಣು ಅಂತರಿಕ್ಷಕ್ಕೆ ಹಾರಿದ್ದಾರೆ, ಭಾರತ ಪಾಕ್ ಗಡಿಯಲ್ಲಿ ಎ ಕೆ 47 ಬಂದೂಕು ಹಿಡಿದು ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾರೆ, ಮಹಿಳೆಯರು ಪಾಕಿಸ್ತಾನದ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಇಲ್ಲಿ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿದೆ ಎಂದರೆ ಅದು ಮನುಕುಲ ತಲೆ ತಗ್ಗಿಸುವ ವಿಚಾರ ಎಂದರು. ಇದು ಕೇವಲ 4-5 ತಂಡದಲ್ಲಿ ಮಂಡ್ಯ, ಮೈಸೂರು, ಬೆಂಗಳೂರಿಗೆ ಸೀಮಿತವಾಗಿಲ್ಲ ರಾಜ್ಯ ಬೇರೆ ಬೇರೆ ಕಡೆ ಸುಮಾರು 20 ರಿಂದ 30 ತಂಡ ಇರಬಹುದು ಸರ್ಕಾರ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.
17
+ ಆರೋಪಿಗಳು 200-300 ಕೋಟಿಯಷ್ಟು ಆಸ್ತಿ ಮಾಡಿದ್ದಾರೆ. ವೈದ್ಯರು ಸೇರಿಕೊಂಡಿದ್ದಾರೆ. ಇದಕ್ಕಾಗಿಯೇ ಆಸ್ಪತ್ರೆಗಳನ್ನು ನಿರ್ಮಿಸಿದರೆ ಆ ಆಸ್ಪತ್ರೆಯ ಹೆಸರನ್ನು ನಮ್ಮ ಮನೆ ಎಂದು ಇಟ್ಟಿದ್ದಾರೆ. ನಾನು ಸಚಿವನಾಗಿ ನಕಲಿ ವೈದ್ಯರ ವಿರುದ್ಧ ಕಾರ್ಯಾಚರಣೆ ಮಾಡಿದಾಗ ಮಂತ್ರಿಗಳು, ಶಾಸಕರು, ಸಂಸದರು ಸೇರಿದಂತೆ ಅನೇಕ ಪ್ರಭಾವಿಗಳು ನನ್ನ ಮೇಲೆ ಒತ್ತಡವೇರಿ ಅವರನ್ನು ಬಿಡಿ ಎನ್ನುತ್ತಿದ್ದರು. ಸುಮಾರು 4 ಸಾವಿರದಿಂದ 5 ಸಾವಿರ ನಕಲಿ ವೈದ್ಯರು ಇದ್ದಾರೆ. ನನ್ನ ಜೊತೆ ಪೊಲೀಸರನ್ನು ಕರೆದುಕೊಂಡು ಹೋಗಿ ಅವರನ್ನು ಬಂದಿಸಿದ್ದೆ ಎಂದರು. ಇಂತಹ ಪ್ರಕರಣಗಳಿಗೆ ಪ್ರಭಾವಿಗಳ ಒತ್ತಡ ಬರುತ್ತೆ, ಕೆಲ ಪ್ರಕರಣಗಲ್ಲಿ ಆಸ್ಪತ್ರೆಯಾಗಲಿ, ವೈದ್ಯರಿಗೆ ಶಿಕ್ಷೆ ಯಾಗಲ್ಲ ಬೇರೆ ಯಾರ ಮೇಲೆ ಪ್ರಕರಣ ದಾಖಲಾಗಿರುತ್ತದೆ ಎಂದರು.
eesanje/url_46_288_6.txt ADDED
@@ -0,0 +1,7 @@
 
 
 
 
 
 
 
 
1
+ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಸರ್ಕಾರ ಬದ್ಧ : ಡಿಕೆಶಿ
2
+ ಬೆಳಗಾವಿ,ಡಿ.14- ಮಂಡ್ಯ, ಮೈಸೂರು, ರಾಜಧಾನಿ ಬೆಂಗಳೂರು ಸೇರಿದಂತೆ ಮತ್ತಿತರ ನಗರಗಳಿಗೆ ಕುಡಿಯುವ ನೀರು ಪೂರೈಸುವ ಮತ್ತು ವಿದ್ಯುತ್ ಉತ್ಪಾದನೆ ಮಾಡುವ ಮೇಕೆದಾಟು ಯೋಜನೆ ಅನುಷ್ಠಾನ ಮಾಡಲು ನಮ್ಮ ಸರ್ಕಾರ ಬದ್ಧವಿದೆ. ಇದಕ್ಕೆ ಕೇಂದ್ರ ಸರ್ಕಾರ ನಮ್ಮ ಜತೆ ಕೈ ಜೋಡಿಸಲಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಧಾನ ಪರಿಷತ್ತಿನಲ್ಲಿ ಮನವಿ ಮಾಡಿದ್ದಾರೆ.
3
+ ಬಿಜೆಪಿ ಸದಸ್ಯ ಎನ್. ರವಿಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ನೀರು, ನಮ್ಮ ಹಕ್ಕು. ನಿಮ್ಮ ನೀರು, ನಿಮ್ಮ ಹಕ್ಕು ಎಂಬ ತತ್ವದ ಮೇಲೆ ಹೋರಾಟ ಮಾಡೋಣ. ಯೋಜನೆ ಅನುಷ್ಠಾನವಾಗುವುದರಿಂದ ತಮಿಳುನಾಡಿಗೆ ನಮಗಿಂತಲೂ ಹೆಚ್ಚಿನ ಅನುಕೂಲವಾಗಲಿದೆ. ನಮಗೆ 400 ಮೆ.ವ್ಯಾ. ವಿದ್ಯುತ್ ಉತ್ಪಾದನೆಗೆ ಅವಕಾಶ ಸಿಕ್ಕರೆ, ಅವರಿಗೆ ಇನ್ನೂ ಹೆಚ್ಚಿನ ಕುಡಿಯುವ ನೀರಿನ ಅನುಕೂಲವಾಗಲಿದೆ ಎಂದು ತಿಳಿಸಿದರು.
4
+ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಯೋಜನೆಯನ್ನು ನಮ್ಮ ನೆಲದಲ್ಲೇ ಆರಂಭಿಸಿದರೂ ಕೇಂದ್ರದ ಪರಿಸರ ಮತ್ತು ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕು. ಈ ಇಲಾಖೆಗಳ ಒಪ್ಪಿಗೆ ಇಲ್ಲದೆ, ಯೋಜನೆ ಪ್ರಾರಂಭಿಸಲಾಗುವುದು. ಈ ಯೋಜನೆಯಿಂದ ಶಾಶ್ವತ ಪರಿಹಾರ ದೊರೆಯಲಿದೆ. ಇದರಿಂದಾಗಿ ಸಂಕಷ್ಟ ಪರಿಸ್ಥಿತಿಯೂ ನಿವಾರಣೆಯಾಗಲಿದೆ ಎಂದು ಅವರು ಹೇಳಿದರು.
5
+ ವಿವಸ್ತ್ರಗೊಳಿಸಿ ಮಹಿಳೆ ಮೇಲೆ ಹಲ್ಲೆ ಪ್ರಕರಣ, ಸರ್ಕಾರಕ್ಕೆ ಹೈಕೋರ್ಟ್ ಹಿಗ್ಗಾಮುಗ್ಗಾ ತರಾಟೆ
6
+ ರಾಜ್ಯದಲ್ಲಿ ಈ ಬಾರಿ ಬರಗಾಲ ಆವರಿಸಿದ್ದರೂ ರೈತರಿಗೆ ತೊಂದರೆಯಾಗದಂತೆ ಅವರ ಬೆಳೆಗಳನ್ನು ರಕ್ಷಣೆ ಮಾಡಿದ್ದೇವೆ. ಒಂದು ಕಡೆ ಸಿಡಬ್ಲ್ಯು ಆರ್ಸಿ ಮತ್ತು ಸಿಡಬ್ಲ್ಯು ಎಂಎ ನಿರ್ದೇಶನಗಳನ್ನು ಪಾಲನೆ ಮಾಡಿದ್ದೇವೆ. ಕೆಲವು ಸಂದರ್ಭಗಳಲ್ಲಿ ಅರ್ಕಾವತಿ ಮತ್ತು ಹಾರಂಗಿಯ ಹೆಚ್ಚುವರಿ ನೀರನ್ನು ಬಳಸಿಕೊಂಡು ಬಿಳಿಗುಂಡ್ಲುವಿಗೆ ಎಷ್ಟು ನೀರು ಬಿಡಬೇಕಿತ್ತೋ ಅಷ್ಟು ನೀರನ್ನು ಬಿಟ್ಟಿದ್ದೇವೆ. ಪ್ರತಿ ವರ್ಷ ತಮಿಳುನಾಡಿಗೆ 177 ಟಿಎಂಸಿ ಅಡಿ ನೀರು ಹರಿಸಬೇಕು. ಎಲ್ಲಿಯೂ ಕೂಡ ರೈತರ ಹಿತವನ್ನು ಕಡೆಗಣಿಸಿಲ್ಲ.
7
+ ಕುಡಿಯುವ ನೀರು, ರೈತರ ಬೆಳೆಗಳ ರಕ್ಷಣೆ ಮತ್ತು ಜಾನುವಾರುಗಳಿಗೆ ಮೇವು ಒದಗಿಸುವುದು ನಮ್ಮ ಆದ್ಯತೆಯಾಗಿತ್ತು. ಬರಗಾಲದ ಸಂದರ್ಭದಲ್ಲೂ ಪರಿಸ್ಥಿತಿಯನ್ನು ನಿಭಾಯಿಸಿದ್ದೇವೆ ಎಂದು ಸಮರ್ಥಿಸಿಕೊಂಡರು. ಮೇಕೆದಾಟು ಯೋಜನೆ ಸಂಬಂಧ ಕೆಳಹಂತದಲ್ಲೇ ಪರಿಹರಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಹೀಗಾಗಿ ಪ್ರಧಾನಿ ಹಾಗೂ ಕೇಂದ್ರ ಜಲಶಕ್ತಿ ಸಚಿವರ ಬಳಿಗೆ ನಮ್ಮ ರಾಜ್ಯದ ಎಲ್ಲಾ ಪಕ್ಷಗಳ ಸಂಸದರನ್ನೊಳಗೊಂಡ ನಿಯೋಗವನ್ನುಕರೆದೊಯ್ಯಲು ಸಿದ್ಧವಿದೆ. ಇದಕ್ಕೆ ನೀವು(ಬಿಜೆಪಿ) ಸಹಕಾರ ಕೊಡಿ ಎಂದು ಶಿವಕುಮಾರ್ ಅವರು ಮನವಿ ಮಾಡಿದರು.
eesanje/url_46_288_7.txt ADDED
@@ -0,0 +1,8 @@
 
 
 
 
 
 
 
 
 
1
+ ಬಿಡಿಎ ಆಸ್ತಿ ರಕ್ಷಣೆಗೆ ಪ್ರತ್ಯೇಕ ಕೋಶ ರಚನೆ : ಡಿಸಿಎಂ ಡಿಕೆಶಿ
2
+ ಬೆಳಗಾವಿ,ಡಿ.14- ಬೆಂಗಳೂರು ಅಭಿವೃದ್ಧಿ ಪ್ರಾಕಾರ(ಬಿಡಿಎ)ದಲ್ಲಿರುವ ಆಸ್ತಿಗಳ ರಕ್ಷಣೆಗಾಗಿ ಪ್ರತ್ಯೇಕ ಕೋಶವನ್ನು ತೆರೆಯಲು ತೀರ್ಮಾನಿಸಲಾಗಿದೆ ಎಂದು ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
3
+ ಪರಿಷತ್ನಲ್ಲಿ ಜೆಡಿಎಸ್ನ ಮರಿತಿಬ್ಬೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಡಿಎ ವ್ಯಾಪ್ತಿಯಲ್ಲಿ ಸಾವಿರಾರು ಕೋಟಿ ಬೆಲೆ ಬಾಳುವ ಸ್ವತ್ತುಗಳಿವೆ. ಇವುಗಳನ್ನು ರಕ್ಷಣೆ ಮಾಡಿಕೊಳ್ಳುವುದು ನಮಗೆ ಸವಾಲೇ ಸರಿ. ಹೀಗಾಗಿ ಪ್ರತ್ಯೇಕ ಕೋಶ ತೆರೆಯುವ ಚಿಂತನೆ ಇದೆ ಎಂದರು.
4
+ ಬಿಡಿಎ ಭೂ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ತಮಗೆ ನ್ಯಾಯಾಲಯದಲ್ಲಿ ಸಾಕಷ್ಟು ಹಿನ್ನಡೆಯಾಗುತ್ತಿತ್ತು. ನಮ್ಮ ವಕೀಲರು ಸಮರ್ಥವಾಗಿ ವಾದ ಮಾಡಿದರೂ ತೀರ್ಪುಗಳು ಮಾತ್ರ ಖಾಸಗಿಯವರ ಪರವಾಗಿಯೇ ಬರುತ್ತಿದ್ದವು. ಹೀಗಾಗಿ ಇತ್ತೀಚೆಗೆ ಕಾನೂನು ಸಚಿವರಾದ ಎಚ್.ಕೆ.ಪಾಟೀಲ್ ಅವರು ನನ್ನ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಸಭೆ ನಡೆಸಿದ್ದರು.
5
+ ವಿವಸ್ತ್ರಗೊಳಿಸಿ ಮಹಿಳೆ ಮೇಲೆ ಹಲ್ಲೆ ಪ್ರಕರಣ, ಸರ್ಕಾರಕ್ಕೆ ಹೈಕೋರ್ಟ್ ಹಿಗ್ಗಾಮುಗ್ಗಾ ತರಾಟೆ
6
+ ಈ ಸಭೆಗೆ ಬಿಡಿಎ ಹಾಗು ಬಿಬಿಎಂಪಿ ಪ್ರತಿನಿಸುವ ವಕೀಲರುಗಳನ್ನು ಕರೆಸಲಾಗಿತ್ತು. ಇನ್ನು ಮುಂದೆ ನ್ಯಾಯಾಲಯಗಳಲ್ಲಿ ನಮಗೆ ಹಿನ್ನಡೆಯಾಗದಂತೆ ಸಮರ್ಪಕವಾದ ಮಂಡಿಸಿ ಕಾನೂನು ಹೋರಾಟ ಮಾಡಬೇಕೆಂದು ಸೂಚನೆ ಕೊಡಲಾಗಿದೆ. ಏಕಾಏಕಿ ವಕೀಲರನ್ನು ಬದಲಾವಣೆ ಮಾಡಿದರೆ ಹೊಸ ವಕೀಲರಿಗೆ ಹಿಂದಿನ ಮಾಹಿತಿ ಇರುವುದಿಲ್ಲ. ಒಟ್ಟಿನಲ್ಲಿ ಬಿಡಿಎ ಸ್ವತ್ತುಗಳನ್ನು ಸಂರಕ್ಷಣೆ ಮಾಡಿಕೊಳ್ಳಲು ಸಮರ್ಥವಾಗಿದೆ ಎಂದರು.
7
+ ಇದಕ್ಕೂ ಮುನ್ನ ಮರಿತಿಬ್ಬೇಗೌಡ ಅವರು ವಿಷಯ ಪ್ರಸ್ತಾಪಿಸಿ ಬಿಡಿಎ ಪ್ರಕರಣದಲ್ಲಿ ನಮಗೆ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ನಲ್ಲಿ ತೀವ್ರ ಹಿನ್ನಡೆಯಾಗಿದೆ. ಕೇವಲ 3 ತಿಂಗಳಲ್ಲೇ ಒಬ್ಬರೇ ನ್ಯಾಯಾೀಶರು, ಅದೇ ವಕೀಲರು ವಾದ ಮಾಡಿದರೂ ತೀರ್ಪು ಮಾತ್ರ ಖಾಸಗಿಯವರ ಪರ ಬಂದಿದೆ. ಈ ಭೂಮಾಫಿಯಾವನ್ನು ಬಗ್ಗು ಬಡಿಯದಿದ್ದರೆ ಬಿಡಿಎ ಉಳಿಯುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
8
+ ಇದಕ್ಕೆ ಸಹಮತ ವ್ಯಕ್ತಪಡಿಸಿದ ಡಿ.ಕೆ.ಶಿವಕುಮಾರ್, ಇನ್ನು ಮುಂದೆ ಈ ರೀತಿಯಾಗದಂತೆ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಆಶ್ವಾಸನೆ ನೀಡಿದರು.
eesanje/url_46_288_8.txt ADDED
@@ -0,0 +1,6 @@
 
 
 
 
 
 
 
1
+ ವಿವಸ್ತ್ರಗೊಳಿಸಿ ಮಹಿಳೆ ಮೇಲೆ ಹಲ್ಲೆ ಪ್ರಕರಣ, ಸರ್ಕಾರಕ್ಕೆ ಹೈಕೋರ್ಟ್ ಹಿಗ್ಗಾಮುಗ್ಗಾ ತರಾಟೆ
2
+ ಬೆಂಗಳೂರು, ಡಿ.14- ಬೆಳಗಾವಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಹೈಕೋರ್ಟ್ ಡಿ.18ರೊಳಗೆ ಕೈಗೊಂಡಿರುವ ಕ್ರಮದ ವರದಿಯನ್ನು ಸಲ್ಲಿಸುವಂತೆ ಸೂಚಿಸಿ ಬೆಳಗಾವಿ ಪೊಲೀಸ್ ಆಯುಕ್ತರು, ಹಾಗೂ ಎಸಿಪಿ ಮುಂದಿನ ವಿಚಾರಣೆಗೆ ಖುದ್ದು ಹಾಜರಾಗುವಂತೆ ಖಡಕ್ ಆದೇಶ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ, ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
3
+ ಸಂತ್ರಸ್ತೆಯನ್ನು ಪ್ರಾಣಿಗಿಂತ ಕೀಳಾಗಿ ನಡೆಸಿಕೊಂಡಿದ್ದಾರೆ. ಇವರು ಮನುಷ್ಯರೆಂದು ಕರೆಸಿಕೊಳ್ಳಲು ಯೋಗ್ಯರಲ್ಲ. ಎರಡು ಗಂಟೆ ಕಾಲ ಮಹಿಳೆಯನ್ನು ಹಿಂಸಿಸಲಾಗಿದೆ. ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹೊಡೆಯಲಾಗಿದೆ. ಸಂತ್ರಸ್ತೆ ಎದುರಿಸಿರಬಹುದಾದ ನೋವನ್ನು ಊಹಿಸಲೂ ಸಾಧ್ಯವಿಲ್ಲ. ಬಡವರ ಮೇಲೆಯೇ ಇಂತಹ ದೌರ್ಜನ್ಯಗಳು ನಡೆಯುವುದೇಕೆ ಎಂದು ನ್ಯಾಯಪೀಠ ಆಕ್ರೋಶ ವ್ಯಕ್ತಪಡಿಸಿದೆ.
4
+ ಮೇ ತಿಂಗಳಿನಲ್ಲಿ ಮೈಸೂರಿಗೆ ಬಂದಿದ್ದ ಸಾಗರ್ ಶರ್ಮಾ
5
+ ಸಂತ್ರಸ್ತೆಗೆ ಅತ್ಯುತ್ತಮ ಚಿಕಿತ್ಸೆ ಹಾಗೂ ಕೌನ್ಸಿಲಿಂಗ್ ಒದಗಿಸುವ ಅಗತ್ಯವಿದೆ. ಯಾವ ಆಸ್ಪತ್ರೆಯಲ್ಲಿ ಯಾವ ವೈದ್ಯರು ಚಿಕಿತ್ಸೆ ನೀಡಿದ್ದಾರೆ, ಪೊಲೀಸರು ಕೈಗೊಂಡ ಕ್ರಮವೇನು, ಈ ಕುರಿತು ವರದಿ ನೀಡಲು ಸೂಚನೆ ನೀಡಿತು.ಮಹಿಳಾ ಆಯೋಗ, ಮಾನವ ಹಕ್ಕುಗಳ ಆಯೋಗ ಏನು ಮಾಡುತ್ತಿದೆ, ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಃ ಎಂಬ ಮಂತ್ರವಿದ್ದರೂ ಪ್ರಯೋಜನವೇನು ಬಂತು, ದ್ರೌಪದಿಯನ್ನು ವಿವಸ್ತ್ರಗೊಳಿಸಿದಾಗ ರಕ್ಷಿಸಲು ಕೃಷ್ಣನಿದ್ದ. ಇದು ದುಶ್ಯಾಸನರ ಕಾಲ.
6
+ ಸಂತ್ರಸ್ತೆಯ ಸಹಾಯಕ್ಕೆ ಯಾರೂ ಬರಲಿಲ್ಲ. ನಮ್ಮಲ್ಲಿ ಕಾನೂನು ಭಯವಿಲ್ಲವೆಂಬ ಸಂದೇಶ ಹೋಗುತ್ತಿದೆ. ಸ್ವತಂತ್ರ ಬಂದು 75 ವರ್ಷದ ನಂತರವೂ ಇಂತಹ ಘಟನೆ ನಡೆದಿದೆ. ಇಂತಹ ಸಮಾಜದಲ್ಲಿ ಬದುಕುವುದಕ್ಕಿಂತ ಸಾಯುವುದೇ ಮೇಲು ಎಂಬ ಸ್ಥಿತಿ ಬರಬಾರದು. ಇದು ನಾವೆಲ್ಲ ನಾಚಿಕೆ ಪಡಬೇಕಾದ ವಿಷಯ ಎಂದು ಹೇಳಿದ ನ್ಯಾಯಪೀಠ, ಕೈಗೊಂಡಿರುವ ಕ್ರಮಗಳ ಬಗ್ಗೆ ಡಿ.18ರೊಳಗೆ ವರದಿ ಸಲ್ಲಿಸಬೇಕು. ಬೆಳಗಾವಿ ಪೊಲೀಸ್ ಆಯುಕ್ತರು ಮುಂದಿನ ವಿಚಾರಣೆಗೆ ಹಾಜರಾಗುವುದರ ಜತೆಗೆ ಎಸಿಪಿಯೂ ಕೂಡ ಹಾಜರಾಗಬೇಕು ಎಂದು ಹೇಳಿದೆ.
eesanje/url_46_288_9.txt ADDED
@@ -0,0 +1,4 @@
 
 
 
 
 
1
+ ಮೇ ತಿಂಗಳಿನಲ್ಲಿ ಮೈಸೂರಿಗೆ ಬಂದಿದ್ದ ಸಾಗರ್ ಶರ್ಮಾ
2
+ ಮೈಸೂರು, ಡಿ.14- ಸಂಸತ್ ಒಳಗೆ ಕೋಲಾಹಲ ಪ್ರಕರಣ ಆರೋಪಿ ಮೈಸೂರಿಗೆ ಆಗಮಿಸಿದ್ದ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಪ್ರಮುಖ ಆರೋಪಿ ಸಾಗರ್ ಶರ್ಮಾ ಕಳೆದ ಮೇ ತಿಂಗಳಿನಲ್ಲಿ ಮೈಸೂರಿಗೆ ಆಗಮಿಸಿದ್ದ. ಕುತೂಹಲಕ್ಕೆ ಕಾರಣವಾದ ಉತ್ತರಪ್ರದೇಶ ಮೂಲದ ಸಾಗರ್ ಶರ್ಮಾ ಮೈಸೂರು ಭೇಟಿ ವೇಳೆ ಮತ್ತೊಬ್ಬ ಆರೋಪಿ ಮನೋರಂಜನ್‍ನ ಭೇಟಿಗೆ ಆಗಮಿಸಿದ್ದನಾ ಅಥವಾ ಬೇರೆ ಕಾರಣಕ್ಕೆ ಆಗಮಿಸಿದ್ದನಾ ಎಂಬ ಬಗ್ಗೆ ಪೊಲೀಸರು ಈಗ ಪರಿಶೀಲನೆ ನಡೆಸುತ್ತಿದ್ದಾರೆ.
3
+ ಅನುದಾನಿತ ಸಂಸ್ಥೆಗಳ ನೌಕರರಿಗೂ ಜ್ಯೋತಿ ಸಂಜೀವಿನಿ ಯೋಜನೆ ವಿಸ್ತರಣೆ : ಸಿಎಂ
4
+ ಸಾಗರ್ ಶರ್ಮಾ ಮೈಸೂರು ಭೇಟಿ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು, ಅವನು ಮೈಸೂರಿಗೆ ಬಂದಾಗ ಯಾರ್ಯಾರನ್ನು ಭೇಟಿ ಮಾಡಿದ್ದ ಮೈಸೂರಿನ ಇನ್ಯಾವ ಸ್ಥಳಗಳಿಗೆ ಈತ ತೆರಳಿದ್ದ ಎಂಬ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
eesanje/url_46_289_1.txt ADDED
@@ -0,0 +1,7 @@
 
 
 
 
 
 
 
 
1
+ ಅನುದಾನಿತ ಸಂಸ್ಥೆಗಳ ನೌಕರರಿಗೂ ಜ್ಯೋತಿ ಸಂಜೀವಿನಿ ಯೋಜನೆ ವಿಸ್ತರಣೆ : ಸಿಎಂ
2
+ ಬೆಳಗಾವಿ,ಡಿ.14- ರಾಜ್ಯ ಸರ್ಕಾರಿ ನೌಕರರಿಗೆ ಇರುವ ಸೌಲಭ್ಯಗಳಲ್ಲಿ ಒಂದಾದ ಜ್ಯೋತಿ ಸಂಜೀವಿನಿ ಯೋಜನೆ ಅನುದಾನಿತ ಸಂಸ್ಥೆಗಳ ನೌಕರರಿಗೂ ವಿಸ್ತರಣೆ ಮಾಡುವ ಸಂಬಂಧ ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.
3
+ ಪ್ರಶ್ನೋತ್ತರ ವೇಳೆಯಲ್ಲಿಂದು ಬಿಜೆಪಿ ಸದಸ್ಯೆ ಹೇಮಲತಾ ನಾಯಕ್ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ,ಜ್ಯೋತಿ ಸಂಜೀವಿನಿ ಯೋಜನೆ ಅನುದಾನಿತ ಸಂಸ್ಥೆಗಳ ನೌಕರರಿಗೆ ಇಲ್ಲ. ಆದರೂ, ಆರ್ಥಿಕ ಸಂಪನ್ಮೂಲಕ್ಕೆ ಅನುಗುಣವಾಗಿ ಲೆಕ್ಕಾಚಾರ ಹಾಕಿ ಅವರನ್ನೂ ಈ ಯೋಜನೆ ವ್ಯಾಪ್ತಿಗೆ ಒಳಪಡಿಸಲಾಗುವುದು ಎಂದು ಹೇಳಿದರು.
4
+ ರಾಜ್ಯ ಸರ್ಕಾರವು ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಅವಲಂಬಿತ ಸದಸ್ಯರುಗಳಿಗೆ ರ್ನಿಷ್ಟವಾಗಿ ಗುರುತಿಸಲಾಗಿರುವ ಏಳು ಮಾರಣಾಂತಿಕ ರೋಗಗಳಾದ ಹೃದ್ರೋಗ, ಕ್ಯಾನ್ಸರ್, ನರರೋಗ, ಮೂತ್ರಪಿಂಡ, ಯೂರಿನರಿ ಚಿಕಿತ್ಸೆಗಳು, ನವಜಾತ ಶಿಶು ಹಾಗೂ ಚಿಕ್ಕಮಕ್ಕಳ ಖಾಯಿಲೆ, ಸುಟ್ಟಗಾಯ ಮತ್ತು ಅಪಘಾತಗಳಿಗೆ ಸಂಬಂಸಿದಂತೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‍ನ ವತಿಯಿಂದ ಆಸ್ಪತ್ರೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ನಗದು ರಹಿತವಾಗಿ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ಸಂಜೀವಿನಿ ಯೋಜನೆಯನ್ನು 2015ರಿಂದ ಜಾರಿಗೊಳಿಸಿತ್ತು ಎಂದು ತಿಳಿಸಿದರು.
5
+ ಈ ಯೋಜನೆಯನ್ನು ಸರ್ಕಾರಿ ನೌಕರರಿಗೆ ಮಾತ್ರ ರೂಪಿಸಲಾಗಿದೆ. ಯಾವುದೇ ಅನುದಾನಿತ ನೌಕರರು ಯೋಜನೆಯ ವ್ಯಾಪ್ತಿಗೆ ಒಳಪಡುವುದಿಲ್ಲ. ಆದರೆ, ಈ ಸಂಬಂಧ ಪರಿಶೀಲನೆ ನಡೆಸಿ ಬದಲಾವಣೆ ಮಾಡಲಾಗುವುದು ಎಂದು ಅವರುಹೇಳಿದರು.ಅನುದಾನಿತ ಪ್ರಾಥಮಿಕ ಶಾಲೆಗಳು 2686ರಷ್ಟಿದ್ದು, ಅಲ್ಲಿ 11677 ಸಿಬ್ಬಂದಿಗಳಿದ್ದಾರೆ. ಪ್ರೌಢ ಶಾಲೆಗಳು 3756 ಇದ್ದು, 24383 ಸಿಬ್ಬಂದಿಗಳಿದ್ದಾರೆ.ಅದೇ ರೀತಿ ಪದವಿ ಪೂರ್ವ ಕಾಲೇಜುಗಳ ಸಂಖ್ಯೆಯೂ 831 ಇದ್ದು, 5848 ರಷ್ಟು ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಸದನಕ್ಕೆ ತಿಳಿಸಿದರು.
6
+ ಮಾರುತಿ 800 ಕಾರಿಗೆ 40 ವರ್ಷ : ಇಂದಿರಾ, ರಾಜೀವ್ ಕೊಡುಗೆ ಸ್ಮರಿಸಿಕೊಂಡ ಜೈರಾಮ್ ರಮೇಶ್
7
+ ನಿಮ್ಮ ಸರ್ಕಾರವಿದ್ದಾಗ ಏನು ಮಾಡುತ್ತಿದ್ದೀರಿ? ಈ ಹಿಂದೆ ನಿಮ್ಮದೇ ಸರ್ಕಾರವಿತ್ತು. ಇದರ ಬಗ್ಗೆ ಏಕೆ ಪ್ರಸ್ತಾಪ ಮಾಡಿ ಜಾರಿ ಮಾಡಿಸಲಿಲ್ಲ ಎಂದು ್ರ ಸಿದ್ದರಾಮಯ್ಯ ಅವರು ಪ್ರತಿಪಕ್ಷ ಬಿಜೆಪಿ ಸದಸ್ಯರಿಗೆ ಖಾರವಾಗಿ ಪ್ರಶ್ನಿಸಿದರು. ಬಿಜೆಪಿ ಸದಸ್ಯರು ಎದ್ದು ನಿಂತು, ಜ್ಯೋತಿ ಸಂಜೀವಿನಿ ಯೋಜನೆಯನ್ನು ಅನುದಾನಿತ ರಹಿತ, ಅನುದಾನಿತ ನೌಕರರಿಗೂ ವಿಸ್ತರಣೆ ಮಾಡಿ ಎಂದು ಕೋರಿದಾಗ, ಈ ಹಿಂದೆ ಹಿಂದೆ ಸರ್ಕಾರವಿತ್ತು ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.
eesanje/url_46_289_10.txt ADDED
@@ -0,0 +1,6 @@
 
 
 
 
 
 
 
1
+ 34,115 ಕೋಟಿ ಹೂಡಿಕೆಗೆ ಅನುಮೋದನೆ, 13,308 ಉದ್ಯೋಗ ಸೃಷ್ಟಿ ನಿರೀಕ್ಷೆ
2
+ ಬೆಳಗಾವಿ,ಡಿ.13- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮಂಗಳವಾರ ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡುವ ಸಮಿತಿ ಸಭೆಯಲ್ಲಿ, ಒಟ್ಟು 34,115 ಕೋಟಿ ಮೊತ್ತದ ಬಂಡವಾಳ ಹೂಡಿಕೆಯ 14 ಉದ್ಯಮಗಳ ಸ್ಥಾಪನೆಗೆ ಅನುಮೋದನೆ ನೀಡಲಾಯಿತು. ಇದರಿಂದ 13,308 ಜನರಿಗೆ ಉದ್ಯೋಗ ದೊರೆಯುವ ನಿರೀಕ್ಷೆ ಇದೆ.
3
+ ಹೆಚ್ಚುವರಿ 13,911 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆ ಮಾಡುವ ಫಾಕ್ಸ್‍ಕಾನ್ ಪ್ರಸ್ತಾವನೆಯನ್ನು ಸಮಿತಿಯು ಅನುಮೋದಿಸಿದೆ.ಫಾಕ್ಸ್‍ಕಾನ್, ಈಗಾಗಲೇ ರಾಜ್ಯದಲ್ಲಿ ರೂ 8,000 ಕೋಟಿ ಬಂಡವಾಳ ಹೂಡಿಕೆ ಮಾಡಲು ಅನುಮೋದನೆ ಪಡೆದಿದೆ. ಜೆಎಸ್‍ಡಬ್ಲ್ಯು ರಿನ್ಯೂ ಎನರ್ಜಿ ಫೋರ್ ಲಿಮಿಟೆಡ್ (ರೂ 4,960 ಕೋಟಿ ), ಜೆಎಸ್‍ಡಬ್ಲ್ಯು ಸ್ಟೀಲ್ ಲಿಮಿಟೆಡ್ (ರೂ 3,804 ಕೋಟಿ ), ಟೊಯೊಟಾ ಕಿರ್ಲೋಸ್ಕರ್‍ಮೋಟರ್ ಪ್ರೈವೇಟ್ ಲಿಮಿಟೆಡ್ (ರೂ 3237.30 ಕೋಟಿ), ಟಿಆರ್‍ಐಎಲ್ ಬೆಂಗಳೂರು ರಿಯಲ್ ಎಸ್ಟೇಟ್ ಸಿಕ್ಸ್ ಲಿಮಿಟೆಡ್ (ರೂ 3273 ಕೋಟಿ ಹೂಡಿಕೆ), ಜಾನಕಿ ಕಾರ್ಪ್ ಲಿಮಿಟೆಡ್ (ರೂ 607 ಕೋಟಿ ಮೊತ್ತದ ಹೆಚ್ಚುವರಿ ಹೂಡಿಕೆ) ಪ್ರಸ್ತಾವನೆಗಳು ಎಸ್‍ಎಚ್‍ಎಲ್ಸಿಸಿ ಅನುಮೋದನೆ ಪಡೆದಿರುವ ದೊಡ್ಡ ಮೊತ್ತದ ಬಂಡವಾಳ ಹೂಡಿಕೆ ಯೋಜನೆಗಳಲ್ಲಿ ಸೇರಿವೆ.
4
+ ಕೆಇಎ : 40 ಸಾವಿರ ಸೀಟುಗಳ ಭರ್ತಿಗೆ ಫೆ.18ಕ್ಕೆ ಪರೀಕ್ಷೆ , ವಸತಿ ಶಾಲೆಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
5
+ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ 4 ಬಂಡವಾಳ ಹೂಡಿಕೆಯ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಗಳಿಂದ ಒಟ್ಟು 9,461 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆ ಆಗಲಿದೆ. ಇವುಗಳಿಂದ ಈ ಪ್ರದೇಶದಲ್ಲಿ 3538 ಜನರಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಸರ್ಕಾರದ ಕಡೆಯಿಂದ ನಡೆಯುತ್ತಿರುವ ಇಂತಹ ಸಂಘಟಿತ ಪ್ರಯತ್ನಗಳು ಬೆಂಗಳೂರಿನ ಆಚೆ ಉಪಕ್ರಮದ ಭಾಗವಾಗಿವೆ.
6
+ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ , ಸಚಿವರಾದ ಚೆಲುವರಾಯಸ್ವಾಮಿ, ಪ್ರಿಯಾಂಕ್ ಖರ್ಗೆ, ನಾಗೇಂದ್ರ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯೆಲï, ಮುಖ್ಯಮಂತ್ರಿ ಅವರ ಅಪರ ಮುಖ್ಯ ಕಾರ್ಯದರ್ಶಿ ಎಲï.ಕೆ. ಅತೀಕ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಡಾ. ಶಾಲಿನಿ ರಜನೀಶ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್ ಮತ್ತು ಇತರ ಹಿರಿಯ ಅಕಾರಿಗಳು ಭಾಗವಹಿಸಿದ್ದರು.
eesanje/url_46_289_11.txt ADDED
@@ -0,0 +1,7 @@
 
 
 
 
 
 
 
 
1
+ ಕೆಇಎ : 40 ಸಾವಿರ ಸೀಟುಗಳ ಭರ್ತಿಗೆ ಫೆ.18ಕ್ಕೆ ಪರೀಕ್ಷೆ , ವಸತಿ ಶಾಲೆಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
2
+ ಬೆಂಗಳೂರು,ಡಿ.13- ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಕಾರ್ಯ ನಿರ್ವಹಿಸುತ್ತಿರುವ ನಾನಾ ಬಗೆಯ ವಸತಿ ಶಾಲೆಗಳು 2024-25ನೇ ಶೈಕ್ಷಣಿಕ ಸಾಲಿಗೆ ಅನ್ವಯವಾಗುವಂತೆ 6ನೇ ತರಗತಿಯ ಪ್ರವೇಶಕ್ಕೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿವೆ.ಡಿಸೆಂಬರ್ 31ನೇ ತಾರೀಖು ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, 2024ರ ಫೆಬ್ರವರಿ 18ರಂದು ಪ್ರವೇಶ ಪರೀಕ್ಷೆ ನಡೆಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಕಾರವು ತಿಳಿಸಿದೆ.
3
+ ಆನ್ ಲೈನ್ ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿಗಳು ತಾವು ಪ್ರವೇಶ ಬಯಸುವ ವಸತಿ ಶಾಲೆಗಳನ್ನು ಆದ್ಯತಾ ಕ್ರಮದಲ್ಲಿ ಆಯ್ಕೆ ಮಾಡಿಕೊಳ್ಳಬೇಕು. ಈ ಅವಕಾಶದ ಅಡಿಯಲ್ಲಿ, ಆಯಾ ಜಿಲ್ಲೆಯಲ್ಲಿರುವ ಎಲ್ಲ ವಸತಿ ಶಾಲೆಗಳನ್ನೂ ನಮೂದಿಸಬೇಕು. 100 ಅಂಕಗಳಿಗೆ ನಡೆಯುವ ಪ್ರವೇಶ ಪರೀಕ್ಷೆಯಲ್ಲಿ ಗಳಿಸಲಿರುವ ಮೆರಿಟ್, ಮೀಸಲಾತಿ ಮತ್ತು ಅಭ್ಯರ್ಥಿಗಳು ಪ್ರವೇಶ ಕೋರಿ ನಮೂದಿಸುವ ಶಾಲೆಗಳ ಆದ್ಯತಾ ಕ್ರಮದ ಆಧಾರದ ಮೇಲೆ ಸೀಟು ಹಂಚಿಕೆ ಮಾಡಲಾಗುವುದು ಎಂದು ಪ್ರಾಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
4
+ ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(13-12-2023)
5
+ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ, ಅಟಲ್ ಬಿಹಾರಿ ವಾಜಪೇಯಿ, ಇಂದಿರಾ ಗಾಂಧಿ, ಅಂಬೇಡ್ಕರ್, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಸಂಗೊಳ್ಳಿ ರಾಯಣ್ಣ, ಕವಿರನ್ನ, ಗಾಂಧಿತತ್ತ್ವ ಮತ್ತು ಶ್ರೀ ನಾರಾಯಣ ಗುರು ವಸತಿ ಶಾಲೆಗಳ ಪ್ರವೇಶಕ್ಕೆ ಈ ಪರೀಕ್ಷೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ.
6
+ ವಿಶೇಷ ವರ್ಗಗಳ ಮಕ್ಕಳಿಗೆ 10 ಸಾವಿರ ಸೀಟು ಲಭ್ಯ:ಮೇಲ್ಕಂಡ ವಸತಿ ಶಾಲೆಗಳಲ್ಲಿ ಒಟ್ಟು 40 ಸಾವಿರ ಸೀಟುಗಳು ಇದ್ದು, ಇದರಲ್ಲಿ 10 ಸಾವಿರ ಸೀಟುಗಳು ಆಶ್ರಮ ಶಾಲೆಯ ಮಕ್ಕಳು, ಅಲೆಮಾರಿ ಮತ್ತು ಅರೆ ಅಲೆಮಾರಿ, ವಿಕಲಚೇತನ ಮಕ್ಕಳು, ಮಾಜಿ ಸೈನಿಕರ ಮಕ್ಕಳು, ಸಫಾಯಿ ಕರ್ಮಚಾರಿ ಮತ್ತು ಪೌರ ಕಾರ್ಮಿಕರ ಮಕ್ಕಳು, ಸ್ಮಶಾನ ಸಿಬ್ಬಂದಿಯ ಮಕ್ಕಳು ಮತ್ತು ವಿಶೇಷ ದುರ್ಬಲ ವರ್ಗಗಳ ಮಕ್ಕಳಿಗೆ ಲಭ್ಯವಿರುತ್ತವೆ ಎಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘವು ತಿಳಿಸಿದೆ.
7
+ ಈ ಪೈಕಿ ವಿಶೇಷ ದುರ್ಬಲ ವರ್ಗಗಳ ಅಡಿಯಲ್ಲಿ ದೇವದಾಸಿಯರು ಮತ್ತು ಎಚ್‍ಐವಿ ಪೀಡಿತರ ಮಕ್ಕಳು, ಅನಾಥ ಮಕ್ಕಳು, ಏಕ ಪೋಷಕರು, ವಿಧವೆಯರು, ಬಾಲ ಕಾರ್ಮಿಕರು, ಯೋಜನಾ ನಿರಾಶ್ರಿತರು, ಚಿಂದಿ ಆಯುವವರು, ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಮಕ್ಕಳು ಮತ್ತು ಕೋವಿಡ್ ಸೋಂಕಿನಲ್ಲಿ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡಿರುವ ಮಕ್ಕಳು ಬರುತ್ತಾರೆ ಎಂದು ಸಂಘವು ಮಾಹಿತಿ ನೀಡಿದೆ.
eesanje/url_46_289_12.txt ADDED
@@ -0,0 +1,7 @@
 
 
 
 
 
 
 
 
1
+ ಜಾತಿ ಗಣತಿ ಸಮೀಕ್ಷೆ ವೈಜ್ಞಾನಿಕವಾಗಿ ಹಾಗೂ ವ್ಯವಸ್ಥಿತವಾಗಿ ನಡೆಯಬೇಕು : ಡಿಕೆಶಿ
2
+ ಬೆಳಗಾವಿ, ಡಿ.12-ನಾನು ಜಾತಿ ಗಣತಿಗೆ ಎಲ್ಲಿಯೂ ವಿರೋಧ ವ್ಯಕ್ತಪಡಿಸಿಲ್ಲ. ಜಾತಿ ಗಣತಿಯ ಸಮೀಕ್ಷೆಯು ವೈಜ್ಞಾನಿಕವಾಗಿ ಹಾಗೂ ವ್ಯವಸ್ಥಿತವಾಗಿ ನಡೆಯಬೇಕು ಎಂಬುದಷ್ಟೇ ನಮ್ಮ ಅಭಿಮತ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟನೆ ನೀಡಿದರು. ನಿನ್ನೆ ರಾಜ್ಯಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕದಲ್ಲಿ ಜಾತಿ ಗಣತಿ ಜಾರಿ ವಿಚಾರವಾಗಿ ಡಿ.ಕೆ. ಶಿವಕುಮಾರ್ ಹಾಗೂ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಹೇಳಿರುವ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಅವರು ಮೇಲಿನಂತೆ ಉತ್ತರಿಸಿದರು.
3
+ ಜಾತಿ ಗಣತಿ ಸಮೀಕ್ಷೆ ಸರಿಯಾಗಿ ನಡೆದಿಲ್ಲ ಎಂದು ನಮ್ಮ ಅನೇಕ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮನೆ, ಮನೆಗೆ ತೆರಳಿ ಸಮೀಕ್ಷೆ ನಡೆಸಿಲ್ಲ ಎಂದು ದೂರುಗಳು ಬಂದಿವೆ. ಎಲ್ಲಾ ಸಮುದಾಯಗಳು ಅವರ ಜನಸಂಖ್ಯೆಗೆ ಅನುಗುಣವಾಗಿ ತಮ್ಮ ಹಕ್ಕನ್ನು ಪಡೆಯಬೇಕು ಎಂದರು.
4
+ ಇನ್ಷ್ಯೂರೆನ್ಸ್ ಕಂಪೆನಿ ಹೆಸರಲ್ಲಿ ಯಾಮಾರಿಸ್ತಾರೆ ಹುಷಾರ್..!
5
+ ಅಲ್ಪಸಂಖ್ಯಾತರು, ಪರಿಶಿಷ್ಟರು ಸೇರಿದಂತೆ ಎಲ್ಲರೂ ತಮ್ಮ ಜನಸಂಖ್ಯೆ ಅನುಗುಣವಾಗಿ ಹಕ್ಕು ಹಾಗೂ ಅನುದಾನ ಕೇಳುತ್ತಾರೆ. ಈ ಜಾತಿ ಗಣತಿಯನ್ನು ವೈಜ್ಞಾನಿಕವಾಗಿ ಮಾಡಲಾಗಿದೆಯೇ ಎಂಬ ವಿಚಾರವಾಗಿ ನಾವು ಸ್ಪಷ್ಟೀಕರಣ ಕೇಳಿದ್ದೇವೆ. ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಮೇಲೆ ನಾವು ನಂಬಿಕೆ ಇಟ್ಟಿದ್ದೇವೆ. ಸಮಾಜದ ಎಲ್ಲಾ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸಿಕೊಡುವ ಕಾಂಗ್ರೆಸ್ ಪಕ್ಷದ ಬದ್ಧತೆಗೆ ನಾನು ಬೆಂಬಲವಾಗಿ ನಿಲ್ಲುತ್ತೇನೆ. ಕೇಂದ್ರ ಸರಕಾರದ ವರ್ಗಿಕರಣದ ಅನ್ವಯ ನಾನು ಕೂಡ ಇತರೆ ಹಿಂದುಳಿದ ವರ್ಗದ ಸಮುದಾಯದ ನಾಯಕ. ಪಕ್ಷದ ಅಧ್ಯಕ್ಷನಾಗಿ ನಾನು ಎಲ್ಲಾ ವರ್ಗದ ಜನರನ್ನು ಸಮಾನವಾಗಿ ನೋಡಬೇಕು ಎಂದು ಅವರು ತಿಳಿಸಿದರು.
6
+ ಜಾತಿ ಗಣತಿಯ ಕೆಲವು ದಾಖಲೆಗಳು ಕಾಣೆಯಾಗಿರುವ ಬಗ್ಗೆ ವರದಿಗಳಿವೆ ಎಂದು ಕೇಳಿದಾಗ, ಈ ವಿಚಾರ ನನಗೆ ಗೊತ್ತಿಲ್ಲ. ನಾನು ಈ ಬಗ್ಗೆ ಜಯಪ್ರಕಾಶ್ ಹೆಗ್ಡೆ ಅವರೊಂದಿಗೆ ಮಾತನಾಡಿದ್ದು, ಈ ವರದಿಗೆ ಕಾರ್ಯದರ್ಶಿಗಳ ಸಹಿ ಇಲ್ಲವೆಂಬ ಮಾಹಿತಿ ಪಡೆದಿದ್ದೇನೆ. ಕಾರ್ಯದರ್ಶಿಗಳ ಸಹಿ ಇಲ್ಲದೇ ಅದು ಹೇಗೆ ಸಿಂಧುವಾಗುತ್ತದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದು ತಿಳಿಸಿದರು.
7
+ ಬೇರೆ ಪಕ್ಷಕ್ಕೆ ಹೋಗಲು ನಾನು ಹುಚ್ಚನಲ್ಲ:ಲೋಕಸಭೆ ಚುನಾವಣೆ ನಂತರ ಪ್ರಭಾವಿ ಸಚಿವರು 50-60 ಶಾಸಕರ ಸಮೇತ ಬಿಜೆಪಿ ಸೇರುತ್ತಾರೆ ಎಂಬ ಕುಮಾರಸ್ವಾಮಿ ಹೇಳಿಕೆ ನಿಮ್ಮನ್ನೇ ಗುರಿ ಮಾಡಿರುವಂತಿದೆ ಎಂದು ಕೇಳಿದಾಗ, ನಾನು ಹುಟ್ಟುತ್ತಲೇ ಕಾಂಗ್ರೆಸಿಗ. ಬೇರೆ ಪಕ್ಷಕ್ಕೆ ಹೋಗಲು ನಾನು ಹುಚ್ಚನಲ್ಲ. ನನಗೆ ನನ್ನದೇ ಆದ ಮೂಲ ಆದರ್ಶಗಳಿವೆ. ನನಗೆ ಗಾಂ ಕುಟುಂಬ ಹಾಗೂ ಕಾಂಗ್ರೆಸ್ ಪಕ್ಷದ ಮೇಲೆ ಅಪಾರವಾದ ನಂಬಿಕೆ ಇದೆ ಎಂದು ತ��ಳಿಸಿದರು. ಅವರು ಮಾತನಾಡಿದ್ದಕ್ಕೆಲ್ಲ ನಾನು ಬಾಧ್ಯಸ್ಥನಲ್ಲ. ಅವರು ಏನಾದರೂ ಹೇಳಿಕೊಂಡು ತಿರುಗಲಿ, ಆ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.
eesanje/url_46_289_2.txt ADDED
@@ -0,0 +1,8 @@
 
 
 
 
 
 
 
 
 
1
+ ಬೆಂಗಳೂರನ್ನು ವರ್ಲ್ಡ್ ಕ್ಲಾಸ್ ವಾಸಯೋಗ್ಯ ನಗರ ಮಾಡ್ತೀವಿ : ಡಿಕೆಶಿ
2
+ ಬೆಳಗಾವಿ, ಡಿ.14- ಆರೋಗ್ಯ, ಸಂಚಾರ ಸೇರಿದಂತೆ ರಾಜಧಾನಿ ಬೆಂಗಳೂರನ್ನು ಜಾಗತಿಕ ಮಟ್ಟದ ವಾಸಯೋಗ್ಯ ನಗರವನ್ನಾಗಿ ರೂಪಿಸಲು ಉದ್ದೇಶಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಧಾನ ಪರಿಷತ್ತಿನಲ್ಲಿ ತಿಳಿಸಿದ್ದಾರೆ.ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸಿಲಿಕಾನ್ ಸಿಟಿ ಬೆಂಗಳೂರನ್ನು ಉತ್ತಮ ದರ್ಜೆಯ ನಗರವನ್ನಾಗಿಸಲು ಪಣ ತೊಡಲಾಗಿದೆ. ಇದಕ್ಕೆ ಎಲ್ಲರ ಸಹಕಾರ ಬೇಕು. ತ್ಯಾಜ್ಯವಿಲೇವಾರಿ, ಸಂಚಾರ ದಟ್ಟಣೆ, ಸರಗಳ್ಳತನ ಸೇರಿದಂತೆ ಎಲ್ಲ ಸಮಸ್ಯೆಗಳನ್ನು ಒಂದು ವ್ಯವಸ್ಥಿತ ಯೋಜನೆ ಮೂಲಕ ನಿವಾರಿಸಲಾಗುವುದು ಎಂದರು.
3
+ ‘ಬ್ರಾಂಡ್ ಬೆಂಗಳೂರು’ ಪರಿಕಲ್ಪನೆ ಹಾಗೂ ಯೋಜನೆಗೆ ಸಂಬಅಸಿದಂತೆ 70,000ಕ್ಕೂ ಹೆಚ್ಚು ಅಭಿಪ್ರಾಯ, ಸಲಹೆಗಳು ನಾಗರಿಕರು ಮತ್ತು ವಿದೇಶಗಳಿಂದಲೂ ಬಂದಿವೆ. ಇದರಲ್ಲಿ ಆರೋಗ್ಯ, ಸಂಚಾರ, ತ್ಯಾಜ್ಯ- ಹೀಗೆ ಹಂಚಿಕೆ ಮಾಡಿ ಹಲವು ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಅವರು ಹೇಳಿದರು.
4
+ ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-12-2023)
5
+ ಬೆಂಗಳೂರಿನಲ್ಲಿ ವಾಹನ ದಟ್ಟಣೆ ತಪ್ಪಿಸಲು ಒಟ್ಟು 25 ಜಂಕ್ಷನ್‍ಗಳನ್ನು ಅಭಿವೃದ್ಧಿಪಡಿಸುವ 27.90 ಕೋಟಿ ರೂ.ಗಳ ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ. ಸುಗಮ ಸಂಚಾರಕ್ಕೆ ಮೂಲಸೌಕರ್ಯಗಳನ್ನು ಒದಗಿಸಲು ‘ಸಮಗ್ರ ಸಂಚಾರ ಯೋಜನೆ’ಗಾಗಿ ಕಾರ್ಯಸಾಧ್ಯತೆ ಯೋಜನೆ ವರದಿ ತಯಾರಿಸಲು ಅಲ್ವಿನಾಕ್ ಸಂಸ್ಥೆಗೆ ವಹಿಸಲಾಗಿದೆ.
6
+ ಈ ಯೋಜನೆಯನ್ನು ಕಾರ್ಯಗತಗೊಳಿಸುವಲ್ಲಿ ಪೊಲೀಸ್ ಇಲಾಖೆಯ ಸಹಕಾರ ಪಡೆಯಲಾಗುವುದು ಎಂದು ಅವರು ತಿಳಿಸಿದರು.
7
+ ಬೆಂಗಳೂರಿನ ಘನತ್ಯಾಜ್ಯ ನಿರ್ವಹಣೆಗಾಗಿ ಕನಿಷ್ಠ ಮೂರು ದಿಕ್ಕುಗಳಲ್ಲಿ ಸುಮಾರು ತಲಾ 100 ಎಕರೆ ಪ್ರದೇಶದಲ್ಲಿ ಎಲ್ಲಾ ಬಗೆಯ ತ್ಯಾಜ್ಯಗಳ ಸಂಸ್ಕರಣಾ ಘಟಕಗಳನ್ನು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಗಮ ನಿಯಮಿತದ ಮೂಲಕ ಸ್ಥಾಪಿಸಲು ಯೋಜಿಸಲಾಗಿದೆ. ಟೆಕ್ ಬೆಂಗಳೂರು ಅಡಿ ಒಂದು ‘ಸೈ ಡೆಕï’ ನಿರ್ಮಿಸಲು ಸ್ಥಳ ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ.
8
+ ಸ್ವಚ್ಛ ಬೆಂಗಳೂರು ಅಡಿ ನಗರದ 1344.84 ಕಿ.ಮೀ. ಉದ್ದದ ಆರ್ಟಿರಿಯಲ್ ಮತ್ತು ಸಬï- ಆರ್ಟಿರಿಯಲ್ ರಸ್ತೆಗಳಿಗಾಗಿ ಯಾಂತ್ರಿಕ ಕಸ ಗುಡಿಸುವ ಯಂತ್ರವನ್ನು ಬಳಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ವಾರ್ಷಿಕ ಸುಮಾರು 130.00 ಕೋಟಿಗಳ ಯೋಜನಾ ವರದಿಯನ್ನು ಸಿದ್ಧಪಡಿಸಲಾಗಿದೆ ಎಂದು ಡಿಸಿಎಂ ಹೇಳಿದರು.
eesanje/url_46_289_3.txt ADDED
@@ -0,0 +1,5 @@
 
 
 
 
 
 
1
+ ಬೆಂಗಳೂರಲ್ಲಿ 6 ಸ್ಥಳಗಳ ಮೇಲೆ ಎನ್ಐಎ ದಾಳಿ
2
+ ಬೆಂಗಳೂರು, ಡಿ.13- ಭಯೋತ್ಪಾದನೆ ಸಂಚಿನ ಪ್ರಕರಣದ ಹಿನ್ನೆಲೆಯಲ್ಲಿ ಎನ್ಐಎ ನಗರದ 6 ಕಡೆ ದಾಳಿ ನಡೆಸಿದೆ.ಇಸ್ಲಾಮಿಕ್ ಸ್ಟೇಟ್ (ಐಎಸ್) ನೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ನಗರದ ಉದ್ಯಮಿಯೊಬ್ಬರನ್ನು ಕಳೆದ ಶನಿವಾರ ಎನ್ಐಎ ಅಧಿಕಾರಿಗಳು ವಿಚಾರಣೆಗೊಳಪಡಿಸಿ, ಕೆಲವು ಮಾಹಿತಿಗಳನ್ನು ಪಡೆದುಕೊಂಡಿದ್ದರು.
3
+ ಮೂಲಗಳ ಪ್ರಕಾರ, 2008 ರ ಬೆಂಗಳೂರು ಸೋಟದ ಮಾಸ್ಟರ್ ಮೈಂಡ್ ಎಂದು ಗುರುತಿಸಲಾದ ಟಿ.ನಾಸಿರ್, ಜೈಲಿನಲ್ಲಿ ಅಲ್ಲಿನ ಐದಾರು ಮಂದಿ ವಿಚಾರಣಾ ಖೈದಿಗಳ ಮನಪರಿವರ್ತನೆ ಮಾಡಿದ್ದಾನೆಂಬ ಶಂಕೆ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ಗೊತ್ತಾಗಿದೆ.
4
+ ಸ್ನೇಹಿತನ ಜೊತೆ ಸಹಕರಿಸುವಂತೆ ಪೀಡಿಸುತ್ತಿದ್ದ ಪತಿ ವಿರುದ್ಧ ದೂರು
5
+ ನಗರದ ಆರ್.ಟಿ.ನಗರ, ಹೆಬ್ಬಾಳ ಮುಂತಾದ ಪ್ರದೇಶಗಳಲ್ಲಿ ಎನ್ಐಎ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಿನ್ನೆ ಮತ್ತು ಇಂದು ದಾಳಿ ನಡೆಸಿದ್ದಾರೆ.ಈ ದಾಳಿಯ ಸಂದರ್ಭದಲ್ಲಿ ಕೆಲವು ದಾಖಲೆಗಳನ್ನು ಎನ್ಐಎ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.ಕಳೆದ ಶನಿವಾರ ಮಹಾರಾಷ್ಟ್ರ ಮತ್ತು ಬೆಂಗಳೂರು ನಗರದಲ್ಲಿ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದರು.
eesanje/url_46_289_4.txt ADDED
@@ -0,0 +1,5 @@
 
 
 
 
 
 
1
+ ರಾಜಭವನಕ್ಕೆ ತಮಾಷೆಗಾಗಿ ಬಾಂಬ್ ಕರೆ ಮಾಡಿದ್ದ ಆರೋಪಿ ಸೆರೆ
2
+ ಬೆಂಗಳೂರು, ಡಿ.13- ರಾಜಭವನದ ಮುಂದೆ ನಡೆದು ಹೋಗುತ್ತಿದ್ದಾಗ ಪೊಲೀಸರು ಇರುವುದು ಗಮನಿಸಿ ತಮಾಷೆ ಹಾಗೂ ಕುತೂಹಲಕ್ಕಾಗಿ ಬಾಂಬ್ ಇಟ್ಟಿರುವುದಾಗಿ ಕರೆ ಮಾಡಿದ್ದಾಗಿ ಪೊಲೀಸರ ಮುಂದೆ ಆರೋಪಿ ವಿಚಾರಣೆ ವೇಳೆ ಹೇಳಿದ್ದಾನೆ. ಬಿಕಾಂ ಪದವೀಧರನಾಗಿರುವ ಆರೋಪಿ ಭಾಸ್ಕರ್ ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ವಡ್ಡಳ್ಳಿ ಗ್ರಾಮದವನಾಗಿದ್ದು, ಊರಿನಲ್ಲಿ ವ್ಯವಸಾಯ ಮಾಡಿಕೊಂಡಿದ್ದಾನೆ.
3
+ ಮೊನ್ನೆ ಕೋಲಾರದಿಂದ ಬೆಂಗಳೂರಿಗೆ ಬಂದಿದ್ದ ಈತ ರಾಜಭವನದ ಮುಂದೆ ನಡೆದು ಹೋಗುವಾಗ ಪೊಲೀಸರು ಭಾರೀ ಭದ್ರತೆಯಲ್ಲಿರುವುದು ಗಮನಿಸಿ ಕುತೂಹಲಕ್ಕಾಗಿ ಮೊಬೈಲ್ನಿಂದ ಗೂಗಲ್ನಲ್ಲಿ ಎನ್ಐಎ ಸಹಾಯವಾಣಿ ನಂಬರ್ ಹುಡುಕಿ ನಂತರ ಕರೆ ಮಾಡಿ ಬಾಂಬ್ ಇರಿಸಿರುವುದಾಗಿ ಹೇಳಿ ಮೊಬೈಲ್ ಸ್ಥಗಿತಗೊಳಿಸಿದ್ದನು. ಈತನ ಒಂದು ಹುಸಿ ಕರೆಯಿಂದ ಪೊಲೀಸರು ನಿದ್ದೆಗೆಡುವಂತಾಗಿತ್ತು. ಆರೋಪಿಯು ನಂತರ ಮೆಜೆಸ್ಟಿಕ್ಗೆ ಹೋಗಿ ಅಲ್ಲಿಂದ ಆಂಧ್ರಪ್ರದೇಶದ ಚಿತ್ತೂರಿಗೆ ಬಸ್ನಲ್ಲಿ ಹೋಗಿದ್ದನು.
4
+ : ಸಂಸತ್‍ನಲ್ಲಿ ಭದ್ರತಾಲೋಪ, ಆತಂಕ ಸೃಷ್ಟಿಸಿದ ಅಪರಿಚಿತ ವ್ಯಕ್ತಿಗಳು..!
5
+ ಅಲ್ಲಿನ ದೇವಸ್ಥಾನವೊಂದರ ಬಳಿ ಅನುಮಾನಾಸ್ಪದವಾಗಿ ಆರೋಪಿ ತಿರುಗಾಡುತ್ತಿದ್ದಾಗ ಅನುಮಾನಗೊಂಡು ಪೊಲೀಸರು ಆತನನ್ನು ವಶಕ್ಕೆ ಪಡೆದು ಮೊಬೈಲ್ ಪರಿಶೀಲಿಸಿದಾಗ, ಈತನೇ ರಾಜಭವನಕ್ಕೆ ಹುಸಿ ಬಾಂಬ್ ಕರೆ ಮಾಡಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಕುತೂಹಲಕ್ಕೆ ಕರೆ ಮಾಡಿದ್ದಾಗಿ ತಿಳಿಸಿದ್ದಾನೆ. ಬಾಂಬ್ ಕರೆ ಬಂದಾಗ ಪೊಲೀಸರು ಎಷ್ಟರ ಮಟ್ಟಿಗೆ ಅಲರ್ಟ್ ಆಗುತ್ತಾರೆ ಎಂಬುದನ್ನು ತಿಳಿಯಲು ಕರೆ ಮಾಡಿದೆ ಎಂದು ವಿಚಾರಣೆಯ ಸಮಯದಲ್ಲಿ ಆರೋಪಿ ಹೇಳಿದ್ದಾನೆ.
eesanje/url_46_289_5.txt ADDED
@@ -0,0 +1,15 @@
 
 
 
 
 
 
 
 
 
 
 
 
 
 
 
 
1
+ ಜಮೀರ್ ಹೇಳಿಕೆ ಖಂಡಿಸಿ ಮೇಲ್ಮನೆಯಲ್ಲಿ ಸಭಾತ್ಯಾಗ
2
+ ಬೆಳಗಾವಿ,ಡಿ.13- ತೆಲಂಗಾಣ ವಿಧಾನಸಭೆ ಚುನಾವಣಾ ಪ್ರಚಾರದ ವೇಳೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಸ್ಪೀಕರ್ ಸ್ಥಾನದ ಬಗ್ಗೆ ಬಿಜೆಪಿಯವರಿಗೆ ನೀಡಿದಂತಹ ವಿವಾದಾತ್ಮಕ ಹೇಳಿಕೆ ವಿಧಾನಪರಿಷತ್ನಲ್ಲಿಂದು ಭಾರೀ ಗದ್ದಲ ಉಂಟು ಮಾಡಿ ಪ್ರತಿಪಕ್ಷ ಸದಸ್ಯರು ಸಭಾತ್ಯಾಗ ನಡೆಸಿದ ಪ್ರಸಂಗ ಜರುಗಿತು.ಪ್ರಶ್ನೋತ್ತರ ಸಂದರ್ಭದಲ್ಲಿ ಕಾಂಗ್ರೆಸ್ನ ಯು.ಬಿ.ವೆಂಕಟೇಶ್ ಅವರು ವಸತಿ ಸಚಿವ ಜಮೀರ್ ಅಹ್ಮದ್ ಅವರಿಗೆ ರಾಜ್ಯದಲ್ಲಿ ಮುಂಬೈ ಕೊಳಗೇರಿ ಪುನರ್ವಸತಿ ಪ್ರಾಕಾರದ ವತಿಯಿಂದ ವಸತಿ ಸಂಕೀರ್ಣ ರಚಿಸುವ ಕುರಿತು ಪ್ರಶ್ನೆ ಕೇಳಿದರು.
3
+ ಈ ವೇಳೆ ಜಮೀರ್ ಅವರು ಉತ್ತರ ನೀಡಲು ಮುಂದಾಗುತ್ತಿದ್ದಂತೆ ಈ ವೇಳೆ ಕೋಟಾ ಶ್ರೀನಿವಾಸ್ ಪೂಜಾರಿ, ನಾರಾಯಣಸ್ವಾಮಿ ಸೇರಿದಂತೆ ಮತ್ತಿತರ ಸದಸ್ಯರು ಜಮೀರ್ ವಿರುದ್ಧ ತಿರುಗಿ ಬಿದ್ದರು.ಸಭಾಪತಿ ಪೀಠಕ್ಕೆ ಅವರು ಅಗೌರವ ತೋರಿದ್ದಾರೆ ಇಂಥವರಿಂದ ಉತ್ತರ ಕೊಡಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಇದರಿಂದಾಗಿ ಇಡೀ ಸದನದ ಕ್ಕೇ ತಪ್ಪಿ ಹೋಯಿತು.ಸಭಾಪತಿ ಬಸವರಾಜ್ ಹೊರಟ್ಟಿ ಅವರು ಮಾಡಿದ ಪ್ರಯತ್ನ ಫಲ ನೀಡದ ಕಾರಣ ಅಂತಿಮವಾಗಿ ಸದನವನ್ನು ಎರಡು ಬಾರಿ ಮುಂದೂಡಿ ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನ ನಡೆಸಿದರಾದರೂ ಬಿಜೆಪಿ ಸದಸ್ಯರು ಸಭಾ ತ್ಯಾಗ ಮಾಡಿದರು.
4
+ ತಮ್ಮ ಹೇಳಿಕೆಯನ್ನು ಸದನದಲ್ಲಿ ಬಲವಾಗಿ ಸಮರ್ಥಿಸಿಕೊಂಡ ಜಮೀರ್, ನಾನು ಎಲ್ಲಿಯೂ ಸಭಾಪತಿ ಸ್ಥಾನಕ್ಕೆ ಅಗೌರವ ತೋರಿಲ್ಲ. ತೋರಿಸುವುದೂ ಇಲ್ಲ. ಮುಂದೆಯೂ ಕೂಡ ಆ ರೀತಿ ನಡೆದುಕೊಳ್ಳುವುದಿಲ್ಲ. ನನ್ನ ಹೇಳಿಕೆಯನ್ನು ಬಿಜೆಪಿಯವರು ತಿರುಚುತ್ತಿದ್ದಾರೆ. ಸದನಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ನಾನು ಏನು ಹೇಳಿದ್ದೇನೆ ಎಂದು ಮೊದಲು ಸರಿಯಾಗಿ ನೀವೇ ನೋಡಿ ಎಂದು ಸವಾಲು ಹಾಕಿದರು.
5
+ ತೆಲಂಗಾಣದಲ್ಲಿ ಚುನಾವಣಾ ಪ್ರಚಾರದ ವೇಳೆ ನಾನು ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 17 ಮುಸ್ಲಿಮರಿಗೆ ಟಿಕೆಟ್ ನೀಡಿದ್ದರು. ನಾನು, ರಹೀಮ್ ಖಾನ್ ಸಚಿವರಾದರೆ, ಸಲೀಂ ಅಹ್ಮದ್ ಮುಖ್ಯ ಸಚೇತಕರಾಗಿದ್ದಾರೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಯು.ಟಿ.ಖಾದರ್ ಅವರನ್ನು ಸ್ಪೀಕರ್ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಸೇರಿದಂತೆ ಬಿಜೆಪಿಯವರು ಅವರಿಗೆ ಎದ್ದು ನಿಂತು ನಮಸ್ಕರಿಸುತ್ತಾರೆ. ಇಂಥ ನ್ಯಾಯ ಒದಗಿಸಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.ಈ ವೇಳೆ ಸಭಾ ನಾಯಕ ಭೋಸ್ರಾಜ್ ಅವರು, ಜಮೀರ್ ಅವರು ಈಗಾಗಲೇ ಸ್ಪಷ್ಟನೆ ಕೊಟ್ಟಿರುವುದರಿಂದ ಪುನಃ ಈ ವಿಷಯವನ್ನು ಚರ್ಚೆಗೆ ತೆಗೆದುಕೊಳ್ಳುವುದರಲ್ಲಿ ಅರ್ಥವಿಲ್ಲ. ಅಲ್ಲದೆ ಅವರು ಕೆಳಮನೆ ಬಗ್ಗೆ ಮಾತನಾಡಿದ್ದಾರೆ. ಅದಕ್ಕೂ ಇದಕ್ಕೂ ಸಂಬಂಧವೇ ಇಲ್ಲ. ಸಚಿವರು ನಾನು ಪೀಠಕ್ಕೆ ಅಗೌರವ ಕೊಟ್ಟಿಲ್ಲ ಎಂದು ಸ್ಪಷ್ಟನೆ ಕೊಟ್ಟಾಗ ಪುನಃ ಕಲಾಪಕ್ಕೆ ಅಡ್ಡಿಪಡಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
6
+ ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ, ಗದ್ದಲ ಪ್ರಾರಂಭವಾಯಿತು. ಪರಿಸ್ಥಿತಿ ತಹಬದಿಗೆ ಬರದ ಕಾರಣ ಸಭಾಪತಿಗಳು 10 ನಿಮಿಷಗಳ ಕಾಲ ಸದನವನ್ನು ಮುಂದೂಡಿದರು.ಪುನಃ ಸದನ ಸೇರಿದಾಗ ಬಿಜೆಪಿಯವರು ತಮ್ಮ ಆಕ್ಷೇಪವನ್ನು ಮುಂದುವರೆಸಿದರು. ಆಗ ಜೆಡಿಎಸ್ನ ಮರಿತಿಬ್ಬೇ ಗೌಡ ಅವರು ಮಾತನಾಡಿ, ಸದನ ಉಳಿದಿರುವುದೇ ಮೂರೇ ದಿನ. ಈ ಕಲಾಪವನ್ನು ಕರೆದಿರುವ ಉದ್ದೇಶವೇ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕು. ಪರಿಹಾರ ಸಿಗಬೇಕು ಎಂಬ ಉದ್ದೇಶದಿಂದ.
7
+ ಈಗಾಗಲೇ ಸಚಿವರು ಸ್ಪಷ್ಟನೆ ಕೊಟ್ಟಿರುವುದರಿಂದ ಪುನಃ ಪ್ರಶ್ನೆ ಮಾಡುವ ಅಗತ್ಯವಿಲ್ಲ. ಪ್ರಶ್ನೋತ್ತರ ಕಲಾಪವನ್ನು ಆರಂಭಿಸಿ ಎಂದರು.ಆಗ ಕಂದಾಯ ಸಚಿವ ಕೃಷ್ಣಭೈರೇಗೌಡ ಮಾತನಾಡಿ, ಪ್ರಕರಣ ಸಂಬಂಧ ಸಚಿವರು ಹೇಳಿಕೆ ಕೊಟ್ಟಿದ್ದಾರೆ. ಅವರು ಹೇಳಿಕೆ ನೀಡಿದ ನಂತರವೂ ಕಲಾಪಕ್ಕೆ ಅಡ್ಡಿಪಡಿಸುವುದು ಸರಿಯಲ್ಲ. ಒಂದೇ ವಿಷಯವನ್ನು ಮುಂದಿಟ್ಟುಕೊಂಡು ಪದೇ ಪದೇ ಕಲಾಪಕ್ಕೆ ಅಡ್ಡಿಪಡಿಸಿದರೆ ಅದು ಯಾರಿಗೂ ಶೋಭೆ ತರುವುದಿಲ್ಲ. ಪ್ರತಿಷ್ಠೆಯನ್ನು ಬಿಟ್ಟು ಕಲಾಪ ನಡೆಯಲು ಎಲ್ಲರೂ ಸಹಕಾರ ಕೊಡಬೇಕು. ಈ ವಿಷಯವನ್ನು ಪೀಠದಲ್ಲಿರುವ ನೀವೇ ನಿರ್ಧಾರ ಮಾಡಿ ಎಂದು ಸಭಾಪತಿಗಳಿಗೆ ಮನವಿ ಮಾಡಿದರು.
8
+ ಈ ಹಂತದಲ್ಲಿ ನಗರಾಭಿವೃದ್ದಿ ಸಚಿವ ಭೈರತಿ ಸುರೇಶ್ ಅವರು, ಜಮೀರ್ ಎಲ್ಲಿಯೂ ಪೀಠಕ್ಕೆ ಅಗೌರವ ಆಗುವ ರೀತಿಯಲ್ಲಿ ಮಾತನಾಡಿಲ್ಲ. ನಮಗೆ ಅಪಾರವಾದ ಗೌರವವಿದೆ ಎಂದು ಹೇಳಿದ್ದಾರೆ.ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲ ಮುಸ್ಲಿಂ ಸಮುದಾಯಕ್ಕೆ 17 ಮಂದಿಗೆ ಟಿಕೆಟ್ ಕೊಟ್ಟಿದ್ದೇವೆ. ಕಾಂಗ್ರೆಸ್ ಪಕ್ಷ ನಮಗೆ ಎಷ್ಟು ಸ್ಥಾನಮಾನ ನೀಡಿದ್ದಾರೆ ಎಂದು ಹೇಳಿದ್ದಾರೆ. ಸುಖಾಸುಮ್ಮನೆ ಗೂಬೆ ಕೂರಿಸುವ ಪ್ರಯತ್ನ ಮಾಡಬೇಡಿ ಎಂದರು.
9
+ ಸಚಿವರ ಹೇಳಿಕೆಗೆ ಆಕ್ಷೇಪಿಸಿದ ಜೆಡಿಎಸ್ನ ಭೋಜೇಗೌಡ ಮತ್ತು ಶರವಣ ಅವರು, ಲಕ್ಷ್ಮಿಗೂ ಗೂಬೆ ಎಂದು ಕರೆಯುತ್ತಾರೆ. ಹಾಗಾದರೆ ಮನೆಯಲ್ಲಿ ಇದನ್ನೇ ಹೇಳುತ್ತೀರಾ? ಮೊದಲು ಇದನ್ನು ಕಡತದಿಂದ ತೆಗೆದು ಹಾಕುವಂತೆ ಸಭಾಧ್ಯಕ್ಷರಿಗೆ ಮನವಿ ಮಾಡಿದರು.ನಾನು ಗ್ರಾಮೀಣ ಭಾಷೆಯಲ್ಲಿ ಹೇಳಿದ್ದೇನೆ. ಮಾಡದ ತಪ್ಪಿಗೆ ಗೂಬೆ ಕೂರಿಸುವ ಕೆಲಸ ಮಾಡಬೇಡಿ ಎಂದು ಹೇಳುವುದರಲ್ಲಿ ತಪ್ಪೇನಿದೆ ಎಂದು ಸುರೇಶ್ ಸಮರ್ಥಿಸಿಕೊಂಡರು.
10
+ : ಸಂಸತ್‍ನಲ್ಲಿ ಭದ್ರತಾಲೋಪ, ಆತಂಕ ಸೃಷ್ಟಿಸಿದ ಅಪರಿಚಿತ ವ್ಯಕ್ತಿಗಳು.
11
+ ಗದ್ದಲದ ನಡುವೆಯೂ ಬಿಜೆಪಿಯ ರವಿಕುಮಾರ್ ಅವರು ಜಮೀರ್ ಅವರು ರಾಜ್ಯದ ಮಂತ್ರಿ. ಅವರು ಕೇವಲ ಒಂದು ಸಮುದಾಯಕ್ಕೆ ಸಚಿವರಲ್ಲ. ರಾಜ್ಯದಲ್ಲಿ ಮುಸ್ಲಿಂ ಸಮುದಾಯ ಕಾಂಗ್ರೆಸ್ಗೂ ಮತ ಹಾಕುತ್ತಾರೆ, ಬಿಜೆಪಿಗೂ ಹಾಕುತ್ತಾರೆ. ಸ್ಪೀಕರ್ ಸ್ಥಾನಕ್ಕೆ ಪ್ರತಿಯೊಬ್ಬರು ಗೌರವ ಕೊಡಬೇಕು. ಅದರಲ್ಲಿ ಎರಡು ಮಾತಿಲ್ಲ. ಬಿಜೆಪಿಯವರನ್ನು ನಮಸ್ಕಾರ ಮಾಡುವಂತೆ ಮಾಡ��ದ್ದೇವೆ ಎನ್ನುತ್ತಾರೆ. ನಾವು ಮೊದಲು ಆ ಸ್ಥಾನಕ್ಕೆ ಗೌರವ ಕೊಡುತ್ತಿರಲಿಲ್ಲವೇ ಎಂದು ಪ್ರಶ್ನೆ ಮಾಡಿದರು.ನಾನು ಹಾಗೆ ಹೇಳಿರಲಿಲ್ಲ ಎಂದು ಜಮೀರ್ ಹೇಳಿದಾಗ, ಹಾಗಾದರೆ ನೀವು ನೀಡಿದ ಹೇಳಿಕೆಯ ವಿಡಿಯೋಗಳನ್ನು ಬಿಡುಗಡೆ ಮಾಡಿ ಎಂದು ಬಿಜೆಪಿಯವರು ಪ್ರತಿ ಸವಾಲು ಹಾಕಿದರು.
12
+
13
+ ಸಭಾಪತಿಯವರು ಮತ್ತೆ 5 ನಿಮಿಷಗಳ ಕಾಲ ಸದನವನ್ನು ಮುಂದೂಡಿದರು. ಬಳಿಕ ಸಭೆ ಸೇರಿದಾಗ ಸಭಾಪತಿ ಬಸವರಾಜ ಹೊರಟ್ಟಿ ಕಲಾಪವನ್ನು ವೀಕ್ಷಿಸಲು ಶಾಲಾ ಮಕ್ಕಳು ಬಂದಿದ್ದಾರೆ. ಅವರ ಮುಂದೆ ಈ ರೀತಿ ನಡೆದುಕೊಂಡರೆ ನಿಮಗೆ ಮರ್ಯಾದೆ ಇರುತ್ತದೆಯೇ? ಎಲ್ಲರೂ ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡಿ, ಎರಡು ಬಾರಿ ಸದನ ಮುಂದೂಡಿದ್ದೇನೆ. ಸಂಬಂಧಪಟ್ಟ ಸಚಿವರು ಉತ್ತರ ನೀಡಿದ್ದಾರೆ. ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಆಗಬೇಕಿದೆ. ದಯಮಾಡಿ ಕಲಾಪ ನಡೆಸಲು ಸಹಕರಿಸಿ ಜಲ್ವಂತ ಸಮಸ್ಯೆಗಳನ್ನು ಚರ್ಚಿಸಬೇಕಿದೆ ಎಂದರು.
14
+ ಬಿಜೆಪಿಯ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ, ನಿಮ್ಮ ಕಛೇರಿಯಲ್ಲಿ ಜಮೀರ್ ಹೇಳಿಕೆ ವಿಡಿಯೋ ತೋರಿಸಿದ್ದೇವೆ. ಬಿಜೆಪಿಯ ದೊಡ್ಡ ದೊಡ್ಡ ನಾಯಕರು ಖಾದರ್ಗೆ ಕೈಮುಗಿಯುವಂತೆ ಮಾಡಿದ್ದೇವೆ ಅಂತ ಹೇಳಿದ್ದಾರೆ. ಜಮೀರ್ ಸಚಿವ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು. ಇಲ್ಲವೇ ಈ ಸದನಲ್ಲಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದಸರು.
15
+ ಬಿಜೆಪಿಯ ರಘುನಾಥ್ ಮಲ್ಕಾಪುರೆ ಮಾತನಾಡಿ, ಜಮೀರ್ ಅಹಮ್ಮದ್ ಕ್ಷಮೆ ಕೇಳಬೇಕು ಇಲ್ಲವೇ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು. ಇಲ್ಲದಿದ್ದರೆ ನಾವು ಅವರ ಯಾವುದೇ ಪ್ರಶ್ನೆಗಳಿಗೆ ಉತ್ತರವನ್ನು ಬಯಸುವುದಿಲ್ಲ ಬಹಿಷ್ಕಾರ ಮಾಡುತ್ತೇವೆ ಎಂದು ಗುಡುಗಿದರು.ಅಂತಿಮವಾಗಿ ಸಭಾಪತಿಯವರು ಪ್ರಶ್ನೋತ್ತರ ಕಲಾಪ ಆರಂಭಿಸುತ್ತಿದ್ದಂತೆ ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಿದ್ದಾರೆಂದು ಆರೋಪಿಸಿ ಜಮೀರ್ ಅಹಮ್ಮದ್ ವಿರುದ್ಧ ಘೋಷಣೆ ಕೂಗುತ್ತಾ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.
eesanje/url_46_289_6.txt ADDED
@@ -0,0 +1,7 @@
 
 
 
 
 
 
 
 
1
+ ಕಾಂಗ್ರೆಸ್ ವಿರುದ್ಧ ವಿಪಕ್ಷ ನಾಯಕ ಅಶೋಕ್ ವಾಗ್ದಾಳಿ
2
+ ಬೆಳಗಾವಿ,ಡಿ.13- ಕಾಂಗ್ರೆಸ್ ಜಾತಿ ಗಣತಿ ವಿಚಾರ ವಾಗಿ ಎಐಸಿಸಿ ಅಧ್ಯಕ್ಷರು ಒಂದು ರೀತಿ ಹೇಳಿಕೆ ಕೊಟ್ಟರೆ ಅದಕ್ಕೆ ವಿರುದ್ಧವಾಗಿ ಕೆಪಿಸಿಸಿ ಅಧ್ಯಕ್ಷರು ಮತ್ತೊಂದು ಹೇಳಿಕೆ ಕೊಡುತ್ತಾರೆ. ಹೀಗಾಗಿ ಕಾಂಗ್ರೆಸ್ ಈಗ ಒಡೆದ ಮನೆಯಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.
3
+ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಸಭೆಯಲ್ಲಿ ಜಾತಿಗಣತಿಗೆ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷರೇ ವಿರೋಧ ಮಾಡಿದ್ದಾರೆ ಎಂದು ಹೇಳಿದ್ದಾರೆ.
4
+ ಡಿ.ಕೆ.ಶಿವಕುಮಾರ್ ಅವರು, ನಾನು ವಿರೋಧ ವ್ಯಕ್ತಪಡಿಸಿಲ್ಲ. ವೈಜ್ಞಾನಿಕವಾಗಿ ನಡೆಯಬೇಕು ಎಂದಿದ್ದೆ ಎನ್ನುತ್ತಾರೆ. ಹೀಗೆ ವರದಿ ಬಗ್ಗೆಯೇ ಎಐಸಿಸಿ ಅಧ್ಯಕ್ಷ ಮತ್ತು ಕೆಪಿಸಿಸಿ ಅಧ್ಯಕ್ಷರ ನಡುವೇ ಗೊಂದಲಗಳಿರುವುದರಿಂದ ಕಾಂಗ್ರೆಸ್ ಒಡೆದ ಮನೆಯಾಗಿದೆ ಎಂದರು.ಜನ ಸಂಕಷ್ಟದಲ್ಲಿದ್ದಾರೆ. ಬರ ಇದೆ. ಸರ್ಕಾರದಿಂದ ಪರಿಹಾರದ ಮಾತೇ ಇಲ್ಲ ರೈತರ ಸಾಲ ಮನ್ನಾ ಮಾಡುತ್ತಾರೆರೈತರ ಬೆಳೆ ಪರಿಹಾರ 25 ಸಾವಿರ ಕೊಡ್ತಾರೆ ಎಂದುನಾವೆಲ್ಲಾ ಕಾತುರದಿಂದ ಕಾಯುತ್ತಿದ್ದೆವು. ಅವೇಶನದಲ್ಲಿ ಉತ್ತರ ಕೊಡಲಿಲ್ಲ. ಅವೇಶನ ಕರೆದಿರುವುದು ಯಾಕೆ? ಎಂದು ಪ್ರಶ್ನಿಸಿದರು.
5
+ : ಸಂಸತ್‍ನಲ್ಲಿ ಭದ್ರತಾಲೋಪ, ಆತಂಕ ಸೃಷ್ಟಿಸಿದ ಅಪರಿಚಿತ ವ್ಯಕ್ತಿಗಳು..!
6
+ ಉತ್ತರ ಕರ್ನಾಟಕ ಸಮಸ್ಯೆ ಪರಿಹಾರ ಕಂಡುಕೊಳ್ಳಲು, ಸ್ಟ್ಯಾಂಪ್ ಬೆಲೆ ಹೆಚ್ಚಳ ಮಾಡೋಕೆ, ಮನೆಗಳ ತೆರಿಗೆ ಹೆಚ್ಚಳ ಮಾಡೋಕೆ ಅವೇಶನ ಕರೆದಿದ್ದಾರೆ. ಈ ಸರ್ಕಾರಕ್ಕೆ ಹೇಳೋರಿಲ್ಲ, ಕೇಳೋರಿಲ್ಲದಂತಾಗಿದೆ. ಪೊಲೀಸರೇ ರೈತರ ವಿರುದ್ಧ ತೊಡೆ ತಟ್ಟಿ ನಿಂತಿದ್ದಾರೆ ಇದನ್ನು ಯಾರೂ ಕೇಳೋರು ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಭ್ರಷ್ಟಾಚಾರ, ತೆರಿಗೆ ಹೆಚ್ಚಳ ಸೇರಿದಂತೆ ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಹದಿನೈದು ಸಾವಿರ ಜನ ಸೇರಿಸಿ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು.
7
+ ಇಂದು ಸದನದಲ್ಲಿ ಪ್ರಮುಖ ವಿಚಾರ ಚರ್ಚೆ ಮಾಡುತ್ತೇವೆ, ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿರುವುದು, ಚಿಕ್ಕಮಗಳೂರು ವಕೀಲರ ಗಲಾಟೆ, ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ, ಕೋಲಾರದಲ್ಲಿ ತಲ್ವಾರ್ ಹಾಕಿರುವುದು ಇದನ್ನೆಲ್ಲಾ ಖಂಡಿಸಿ ಸದನದಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದರು. ಜೆಡಿಎಸ್ ಮತ್ತು ನಾವೆಲ್ಲಾ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.
eesanje/url_46_289_7.txt ADDED
@@ -0,0 +1,9 @@
 
 
 
 
 
 
 
 
 
 
1
+ ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಶಾಸಕರಿಂದಲೇ ಪ್ರತಿಭಟನೆ
2
+ ಬೆಳಗಾವಿ,ಡಿ.13- ಆಡಳಿತ ಪಕ್ಷವಾಗಿರುವ ಕಾಂಗ್ರೆಸ್ನ ಶಾಸಕರೆ, ಹಿಂದುಳಿದ ವರ್ಗಗಳ ಇಲಾಖೆ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂದು ಟೀಕಾಪ್ರಹಾರ ನಡೆಸಿದ್ದಲ್ಲದೆ, ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದ ಘಟನೆ ವಿಧಾನ ಸಭೆಯಲ್ಲಿ ನಡೆಯಿತು. ಪ್ರಶ್ನೋತ್ತರದ ಅವಧಿಯಲ್ಲಿ ಚನ್ನಗಿರಿ ಕ್ಷೇತ್ರದ ಶಾಸಕ ಬಸವರಾಜು .ವಿ.ಶಿವಗಂಗಾ ಅವರು, ಸದನಕ್ಕೆ ತಡವಾಗಿ ಬಂದಿದ್ದು, ವಿಳಂಬಕ್ಕೆ ಕಾರಣ ಏನು ಎಂದು ಸಭಾಧ್ಯಕ್ಷರು ಪ್ರಶ್ನಿಸಿದರು. ನಾನು ಬಿಳಿ ಶರ್ಟ್ ಧರಿಸಿ ಬಂದಿದ್ದೆ. ಹಿಂದುಳಿದ ವರ್ಗಗಳ ಇಲಾಖೆ ನಿಷ್ಕ್ರಿಯವಾಗಿದೆ. ಅದರ ವಿರುದ್ಧ ಪ್ರತಿಭಟನೆ ನಡೆಸುವ ಸಲುವಾಗಿ ಕಪ್ಪು ಬಣ್ಣದ ಶರ್ಟ್ ಧರಿಸಿ ಬರಲು ವಿಳಂಬವಾಯಿತು ಎಂದರು.
3
+ ಅದಕ್ಕೆ ಪ್ರತಿಕ್ರಿಯಿಸಿದ ಸಭಾಧ್ಯಕ್ಷರು, ಆ ರೀತಿಯೆಲ್ಲಾ ಕಪ್ಪು ಬಟ್ಟೆ ಧರಿಸುವಂತಿಲ್ಲ. ಆದರೂ ಪರವಾಗಿಲ್ಲ. ಕಪ್ಪು ಬಟ್ಟೆ ಚೆನ್ನಾಗಿ ಕಾಣುತ್ತಿದೆ ಎಂದು ಹೇಳಿದರು.ಪ್ರಶ್ನೆಯನ್ನು ಮುಂದುವರೆಸಿದ ಬಸವರಾಜು.ವಿ.ಶಿವಗಂಗಾ, ಹಿಂದುಳಿದ ವರ್ಗಗಳ ಇಲಾಖೆ ವ್ಯಾಪ್ತಿಗೆ ಬರುವ ವಿವಿಧ ಅಭಿವೃದ್ಧಿ ನಿಗಮಗಳ ಸಾಲ ಸೌಲಭ್ಯಕ್ಕೆ ಭೌತಿಕ ಗುರಿ ಈಡೇರದೆ ಬಡವರಿಗೆ ಸೌಲಭ್ಯ ದೊರೆಯದೆ ವಂಚಿತವಾಗುತ್ತಿದೆ ಎಂದು ಆರೋಪಿಸಿದರು.
4
+ ಸಾವಿರಾರು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಗಂಗಾ ಕಲ್ಯಾಣ ಯೋಜನೆಯಡಿ 12, ಸ್ವಯಂ ಉದ್ಯೋಗಕ್ಕಾಗಿ 4, ಸ್ವಾವಲಂಬಿ ಸಾರಥಿ ಯೋಜನೆಯಡಿ 2 ಫಲಾನುಭವಿಗಳಿಗೆ ಮಾತ್ರ ಮಂಜೂರಾತಿ ಸಿಕ್ಕಿದೆ. ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿರುವ ಅಧಿಕಾರಿ, ನಿಮ್ಮದೇ ಸರ್ಕಾರ, ಹೋಗಿ ಮುಖ್ಯಮಂತ್ರಿಯವರನ್ನೇ ಕೇಳಿ ಎಂದು ಉದ್ಧಟತನದಿಂದ ಉತ್ತರಿಸುತ್ತಾರೆ. ನಾನು ಹಿಂದುಳಿದ ವರ್ಗಗಳ ಕಲ್ಯಾಣ ಸಮಿತಿಯ ಸದಸ್ಯನಾಗಿದ್ದೇನೆ. ಇಲಾಖೆ ಅಧಿಕಾರಿಗಳು ಸಂಪೂರ್ಣ ನಿಷ್ಕ್ರಿಯರಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
5
+ ಅಲ್ಲದೆ, ಕೋಟ್ಯಂತರ ರೂ. ಖರ್ಚು ಮಾಡಿ ಸಮಾವೇಶ ಮಾಡಲಾಗುತ್ತದೆ, ಬಡವರಿಗೆ ಸೌಲಭ್ಯ ನೀಡಲು ಹಣವಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.ತತ್ಕ್ಷಣ ಪ್ರತ್ಯುತ್ತರಿಸಿದ ಸಭಾಧ್ಯಕ್ಷರು ಕೋಟ್ಯಂತರ ರೂ. ಖರ್ಚು ಮಾಡಿ ಶಾಸಕರಾಗಲು ಸಾಧ್ಯವಾಗಿರುವಾಗ ಬಡವರಿಗೆ ಕೊಡಲು ಹಣವಿಲ್ಲವೇ ಎಂದು ಶಾಸಕರಿಗೆ ತಿರುಗೇಟು ನೀಡಿದರು.
6
+ : ಸಂಸತ್‍ನಲ್ಲಿ ಭದ್ರತಾಲೋಪ, ಆತಂಕ ಸೃಷ್ಟಿಸಿದ ಅಪರಿಚಿತ ವ್ಯಕ್ತಿಗಳು..!
7
+ ಶಾಸಕ ನರೇಂದ್ರಸ್ವಾಮಿ ಕೂಡ ಇಲಾಖೆಯ ಕಾರ್ಯದರ್ಶಿ ವಿರುದ್ಧ ಆಕ್ರೋಶ ಹೊರಹಾಕಿದರು. ಆಡಳಿತ ಪಕ್ಷದ ಶಾಸಕರ ಅಸಮಾಧಾನಕ್ಕೆ ಧ್ವನಿಗೂಡಿಸಿದ ಬಿಜೆಪಿ ಶಾಸಕ ಶರಣು ಸಲಗಾರ, ಆಡಳಿತ ಪಕ್ಷದ ಶಾಸಕರೇ ಈ ಸರ್ಕಾರ ದಿವಾಳಿಯಾಗಿದೆ, ನಿಷ್ಕ್ರಿಯವಾಗಿದೆ ಎಂದು ಹೇಳುತ್ತಿದ್ದಾರೆ ಎಂದು ಕಿಚಾಯಿಸಿದರು.
8
+ ಆಗ ಕಾಂಗ್ರೆಸ್ನ ಶಾಸಕರಾದ ರೂಪಾ ಶಶಿಧರ್, ಶರತ್ ಬಚ್ಚೇಗೌಡ, ಕೋನರೆಡ್���ಿ ಮತ್ತಿತರರು ಇದು ಆರು ತಿಂಗಳ ಸಮಸ್ಯೆಯಲ್ಲ. ಮೊದಲಿನಿಂದಲೂ ನಡೆದುಕೊಂಡು ಬಂದಿದೆ ಎಂದು ಸಮಜಾಯಿಷಿ ನೀಡಿದರು. ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ಅರ್ಜಿ ಸಲ್ಲಿಸಿದ ಎಲ್ಲರಿಗೂ ಸೌಲಭ್ಯಗಳನ್ನು ಒದಗಿಸಬೇಕೆಂಬುದು ನಮ್ಮ ಅಭಿಲಾಷೆ ಕೂಡ. ಆದರೆ ಹಣಕಾಸಿನ ಇತಿಮಿತಿಗಳು ಅದಕ್ಕೆ ಸಹಕರಿಸುವುದಿಲ್ಲ. ಲಭ್ಯತೆ ಆಧರಿಸಿ ಆದ್ಯತೆ ಮೇರೆಗೆ ಸೌಲಭ್ಯ ನೀಡಲಾಗುವುದು ಎಂದು ತಿಳಿಸಿದರು.
9
+ ಶಾಸಕರು ಪ್ರಸ್ತಾಪಿಸಿದಂತೆ ನಮ್ಮಲ್ಲಿ ಹಾಸ್ಟೆಲ್ ವಾರ್ಡನ್ಗಳ ಕೊರತೆ ಇರುವುದು ನಿಜ. ಒಬ್ಬೊಬ್ಬರಿಗೆ ನಾಲ್ಕು-ಐದು ಹಾಸ್ಟೆಲ್ಗಳ ಉಸ್ತುವಾರಿ ವಹಿಸಲಾಗಿದೆ. ಬೇರೆ ಇಲಾಖೆಗಳಿಂದಲೂ ಕೂಡ ಅಧಿಕಾರಿಗಳನ್ನು ಎರವಲು ಸೇವೆಯ ಮೇಲೆ ಕರೆಸಿಕೊಳ್ಳಲಾಗಿದೆ ಎಂದು ಹೇಳಿದರು.ಕಾರ್ಯದರ್ಶಿ ದೂರಿನ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಹಣಕಾಸು ಕೊರತೆ ಹಿನ್ನೆಲೆಯಲ್ಲಿ ಕೆಲವು ವೇಳೆ ಶಾಸಕರಿಗೆ ನೋವಾಗುವಂತಹ ಘಟನೆಗಳು ನಡೆದಿವೆ ಎಂದು ಸಚಿವರು ವಿಷಾದಿಸಿದರು.
eesanje/url_46_289_8.txt ADDED
@@ -0,0 +1,7 @@
 
 
 
 
 
 
 
 
1
+ ಸಕ್ಕರೆ ಕಾರ್ಖಾನೆಗಳಲ್ಲಿ ತೂಕದ ಯಂತ್ರ ಡಿಜಿಟಲೀಕರಣಕ್ಕೆ ಸೂಚನೆ : ಸಚಿವ ಕೆ.ಎಚ್.ಮುನಿಯಪ್ಪ
2
+ ಬೆಳಗಾವಿ.ಡಿ.13- ಕಬ್ಬಿನ ತೂಕದಲ್ಲಿ ಆಗುತ್ತಿರುವ ಮೋಸವನ್ನು ನಿಯಂತ್ರಿಸಲು ರಾಜ್ಯದ ಸಕ್ಕರೆ ಕಾರ್ಖಾನೆಗಳಲ್ಲಿನ ತೂಕದ ಯಂತ್ರಗಳ ಡಿಜಿಟಲೀಕರಣಕ್ಕೆ ಸರ್ಕಾರ ಸೂಚನೆ ನೀಡಿದ್ದು, ಈ ಸಂಬಂಧ ಕಾರ್ಖಾನೆಗಳ ಮಾಲೀಕರಿಗೆ ಹದಿನೈದು ದಿನಗಳ ಗಡುವು ನೀಡಲಾಗಿದೆ ಎಂದು ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವರಾದ ಕೆ.ಎಚ್.ಮುನಿಯಪ್ಪ ತಿಳಿಸಿದರು.
3
+ ಸಚಿವರಾದ ಶಿವಾನಂದ ಪಾಟೀಲ, ಶಾಸಕ ಲಕ್ಷ್ಮಣ ಸವದಿ ಸೇರಿದಂತೆ ಕಬ್ಬು ಬೆಳೆಯುವ ಪ್ರದೇಶಗಳ ವ್ಯಾಪ್ತಿಯ ಜನಪ್ರತಿನಿಗಳು, ಕಾನೂನು ಮಾಪನಶಾಸ್ತ್ರ ಇಲಾಖೆ ಅಕಾರಿಗಳೊಂದಿಗೆ ಸುವರ್ಣ ವಿಧಾನಸೌಧದಲ್ಲಿ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
4
+ ಪ್ರಸಕ್ತ ಹಂಗಾಮಿನಲ್ಲಿ 78 ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯುತ್ತಿದ್ದು, 24 ಕಾರ್ಖಾನೆಗಳು ಮಾತ್ರ ಡಿಜಿಟಲ್ ತೂಕದ ಯಂತ್ರಗಳನ್ನು ಅಳವಡಿಸಿಕೊಂಡಿವೆ. ಉಳಿದ 54 ಕಾರ್ಖಾನೆಗಳು ಮುಂದಿನ ಹದಿನೈದು ದಿನಗಳಲ್ಲಿ ಡಿಜಿಟಲ್‍ಗೆ ಪರಿವರ್ತನೆ ಆಗಬೇಕು ಅವರು ತಿಳಿಸಿದರು.
5
+ ವಾರದೊಳಗೆ ಬರ ಪೀಡಿತ ತಾಲ್ಲೂಕಿನ ರೈತರಿಗೆ ಪರಿಹಾರ ಬಿಡುಗಡೆ
6
+ ರೈತರು, ಕಾರ್ಖಾನೆಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಯಾವುದೇ ಕಾರಣಕ್ಕೂ ಮೋಸ ಆಗಬಾರದು. ರೈತರ ಗದ್ದೆಗಳಿಂದ ಲಾರಿಯಲ್ಲಿ ಎಷ್ಟು ಕಬ್ಬು ಬಂದಿರುತ್ತದೆಯೋ ಅಷ್ಟೇ ತೂಕದ ಕಬ್ಬು ಕಾರ್ಖಾನೆಗಳಲ್ಲಿ ತೂಕ ಮಾಡಿದಾಗಲೂ ಬರಬೇಕು. ಸರಿಯಾಗಿ ತೂಕ ಮಾಡದಿದ್ದರೆ, ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯ ಆಗಲಿದೆ ಎಂದು ಅವರುಎಚ್ಚರಿಸಿದರು.
7
+ ಡಿಜಿಟಲ್ ತೂಕ ಯಂತ್ರಗಳ ಅಳವಡಿಕೆಗೆ ಸಂಬಂಸಿದಂತೆ ಬೆಳಗಾವಿ ಮತ್ತು ಕಲಬುರಗಿ ಕಂದಾಯ ವಿಭಾಗಗಳ ಮಾಪನಶಾಸ್ತ್ರ ಇಲಾಖೆಯ ಜಂಟಿ ನಿರ್ದೇಶಕರು, ಉಪನಿರ್ದೇಶಕರು, ನಿಯಂತ್ರಕರು ಸೇರಿದಂತೆ ಅಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.ಅನ್ನಭಾಗ್ಯ ಯೋಜನೆಯಡಿ ಪ್ರಸ್ತುತ 5 ಕೆಜಿ ಅಕ್ಕಿ ಬದಲಿಗೆ ಗ್ರಾಹಕರಿಗೆ ನಗದು ನೀಡಲಾಗುತ್ತಿದೆ. ಹಲವು ಪ್ರಯತ್ನಗಳ ನಂತರವೂ ಅಕ್ಕಿ ದೊರೆಯದ ಕಾರಣ ಹಣ ನೀಡಲಾಗುತ್ತಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದೊಂದಿಗೆ ಮತ್ತೊಮ್ಮೆ ಮಾತುಕತೆ ನಡೆಸಿ, ಅಕ್ಕಿ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪತ್ರಕರ್ತರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.
eesanje/url_46_289_9.txt ADDED
@@ -0,0 +1,8 @@
 
 
 
 
 
 
 
 
 
1
+ ವಾರದೊಳಗೆ ಬರ ಪೀಡಿತ ತಾಲ್ಲೂಕಿನ ರೈತರಿಗೆ ಪರಿಹಾರ ಬಿಡುಗಡೆ
2
+ ಬೆಳಗಾವಿ, ಡಿ.13- ಒಂದು ಬರ ಪೀಡಿತ ತಾಲ್ಲೂಕಿನ ರೈತರಿಗೆ ಎರಡು ಸಾವಿರ ರೂ.ವರೆಗಿನ ಬರ ಪರಿಹಾರವನ್ನು ಈ ವಾರದೊಳಗೆ ಪ್ರಾಯೋಗಿಕವಾಗಿ ಬಿಡುಗಡೆ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.ಪ್ರಶ್ನೋತ್ತರ ಕಲಾಪದಲ್ಲಿಂದು ಕಾಂಗ್ರೆಸ್ ಸದಸ್ಯ ರಾಜೇಂದ್ರ ರಾಜಣ್ಣ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬರಗಾಲದಿಂದಾಗಿ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಎರಡು ಸಾವಿರ ರೂ.ವರೆಗಿನ ಬರ ಪರಿಹಾರ ನೀಡುವ ಪ್ರಕ್ರಿಯೆಗೆ ಈ ವಾರದಲ್ಲಿ ಪ್ರಾರಂಭಿಸಲಾಗುವುದು ಎಂದರು.
3
+ ಕೇಂದ್ರ ಸರ್ಕಾರ ರಾಜ್ಯಕ್ಕೆ ಪರಿಹಾರ ನೀಡುವಲ್ಲಿ ವಿಳಂಬ ಮಾಡುತ್ತಿರುವುದರಿಂದ ರಾಜ್ಯ ಸರಕಾರದ ವತಿಯಿಂದಲೇ 2 ಸಾವಿರ ರೂ.ವರೆಗಿನ ಬರ ಪರಿಹಾರವನ್ನು ವಿತರಿಸುವ ಪ್ರಕ್ರಿಯೆಗೆ ಈ ವಾರದಲ್ಲಿ ಒಂದು ತಾಲ್ಲೂಕಿನಿಂದ ಚಾಲನೆ ನೀಡಲಾಗುವುದು. ಕೇಂದ್ರ ಸರ್ಕಾರವು ನಮ್ಮ ನೆರವಿಗೆ ಬಂದಿದ್ದರೆ ಪರಿಸ್ಥಿತಿ ಈ ರೀತಿ ಆಗುತ್ತಿರಲಿಲ್ಲ ಎಂದು ಅವರು ಆಕ್ಷೇಪಿಸಿದರು.
4
+ ಕೇಂದ್ರ ಸರ್ಕಾರಕ್ಕೆ ರಾಜ್ಯದ ಪರಿಸ್ಥಿತಿ ವಿವರಿಸಲು ಮುಖ್ಯಮಂತ್ರಿಗಳು ಮೂರು ಬಾರಿ ಪ್ರಧಾನಿಗೆ ಪತ್ರ ಬರೆದಿದ್ದಾರೆ. ನಾವು ಕೇಂದ್ರದ ಗೃಹ ಹಾಗೂ ಕೃಷಿ ಸಚಿವರ ಭೇಟಿಗೆ ಅವಕಾಶ ಕೋರಿದರೂ ಕಾಲಾವಕಾಶ ಸಿಕ್ಕಿಲ್ಲ. ನಾವು ಸಂಬಂಧಪಟ್ಟ ಇಲಾಖೆಯ ಅಕಾರಿಗಳಿಗೆ ಮನವಿ ಪತ್ರಗಳನ್ನು ನೀಡಿ ಬರುವಂತಾಗಿದೆ. ಕೇಂದ್ರ ಹಣಕಾಸು ಸಚಿವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದೇವೆ ಎಂದು ಅವರು ತಿಳಿಸಿದರು.
5
+ ಕೇಂದ್ರ ಸರ್ಕಾರ ತನ್ನ ಮಾನದಂಡಗಳ ಅನುಸಾರ ರಾಜ್ಯದಲ್ಲಿ ಶೇ.44ರಷ್ಟು ಸಣ್ಣ, ಅತಿ ಸಣ್ಣ ರೈತರು ಇರುವುದಾಗಿ ಭಾವಿಸಿದೆ. ಆದರೆ, ನಮ್ಮ ಮಾಹಿತಿಯ ಪ್ರಕಾರ ಶೇ.70ರಷ್ಟು ಸಣ್ಣ, ಅತಿ ಸಣ್ಣ ರೈತರು ಇದ್ದಾರೆ. ಆಧಾರ್ ಜೋಡಣೆಯೊಂದಿಗೆ ಇರುವ ಈ ಮಾಹಿತಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದೇವೆ. ಎನ್‍ಡಿಆರ್‍ಎಫ್ ಅಡಿಯಲ್ಲಿ ನೀಡುವ ಪರಿಹಾರದ ಮೊತ್ತವನ್ನು ಪರಿಷ್ಕರಿಸುವಂತೆಯೂ ಮನವಿ ಮಾಡಿದ್ದೇವೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
6
+ ಬಿಜೆಪಿ ನಾಯಕರನ್ನು ಜೀವಂತ ಸಮಾಧಿ ಮಾಡಲು ಸಿಪಿಐ(ಎಂ) ನಿರ್ಧರಿಸಿತ್ತು : ಸಹಾ
7
+ ಪ್ರಸಕ್ತ ಸಾಲಿನ ಜೂನ್‍ನಲ್ಲಿ ವಾಡಿಕೆಗಿಂತ ಶೇ.57ರಷ್ಟು (ಕಡಿಮೆ), ಜುಲೈನಲ್ಲಿ ಶೇ.29ರಷ್ಟು(ಹೆಚ್ಚು), ಆಗಸ್ಟ್ ನಲ್ಲಿ ಶೇ.73ರಷ್ಟು(ಕಡಿಮೆ), ಸೆಪ್ಟಂಬರ್ ನಲ್ಲಿ ಶೇ.10ರಷ್ಟು ಹಾಗೂ ಅಕ್ಟೋಬರ್ ನಲ್ಲಿ ಶೇ.65ರಷ್ಟು ಕಡಿಮೆ ಮಳೆಯಾಯಿತು.85.95 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಇತ್ತು. 74 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಯಿತು. 46 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆ ಹಾಗೂ 1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಳೆಯ ಕೊರತೆಯಿಂದ ಬೆಳೆ ನಷ್ಟವಾಯಿತು. ಮೂರು ಹಂತಗಳಲ್ಲಿ ಕ್ರಮವಾಗಿ 223 ತಾಲೂಕುಗಳನ್���ು ಬರಪೀಡಿತ ಎಂದು ಘೋಷಿಸಲಾಯಿತು ಎಂದರು.
8
+ ಮಹಾತ್ಮ ಗಾಂ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ)ಯ ಉದ್ಯೋಗಕ್ಕೆ ಬರುವವರ ಕೂಲಿ ಬಾಕಿ ಇದೆ. ಹೀಗಾಗಿ ಕೇಂದ್ರ ಸರ್ಕಾರ 468 ಕೋಟಿ ರೂ. ಬಿಡುಗಡೆ ಮಾಡಬೇಕು ಎಂದರು. ಬರಪರಿಸ್ಥಿತಿಯ ಹಿನ್ನೆಲೆಯಲ್ಲಿ ಮಾನವ ದುಡಿಯುವ ದಿನಗಳನ್ನು ಹೆಚ್ಚುವರಿ 50 ದಿನ ನೀಡಬೇಕೆಂದು ಕಾನೂನು ಇದ್ದರೂ, ಕೇಂದ್ರ ಸರ್ಕಾರ ಅನುಮತಿಗೆ ಮೀನಾಮೇಷ ಎಣಿಸುತ್ತಿದೆ ಎಂದು ಅವರು ಆರೋಪಿಸಿದರು.