1c60b4ee492712dd639c5d9ae8785c694abf25a07ebc895b13530e94a35cc817
Browse files- eesanje/url_46_315_11.txt +15 -0
- eesanje/url_46_315_12.txt +5 -0
- eesanje/url_46_315_2.txt +9 -0
- eesanje/url_46_315_3.txt +7 -0
- eesanje/url_46_315_4.txt +9 -0
- eesanje/url_46_315_5.txt +9 -0
- eesanje/url_46_315_6.txt +11 -0
- eesanje/url_46_315_7.txt +6 -0
- eesanje/url_46_315_8.txt +8 -0
- eesanje/url_46_315_9.txt +6 -0
- eesanje/url_46_316_1.txt +7 -0
- eesanje/url_46_316_10.txt +10 -0
- eesanje/url_46_316_11.txt +9 -0
- eesanje/url_46_316_12.txt +16 -0
- eesanje/url_46_316_2.txt +5 -0
- eesanje/url_46_316_3.txt +7 -0
- eesanje/url_46_316_4.txt +6 -0
- eesanje/url_46_316_5.txt +6 -0
- eesanje/url_46_316_6.txt +7 -0
- eesanje/url_46_316_7.txt +7 -0
- eesanje/url_46_316_8.txt +8 -0
- eesanje/url_46_316_9.txt +7 -0
- eesanje/url_46_317_1.txt +5 -0
- eesanje/url_46_317_10.txt +9 -0
- eesanje/url_46_317_11.txt +13 -0
- eesanje/url_46_317_12.txt +7 -0
- eesanje/url_46_317_2.txt +17 -0
- eesanje/url_46_317_3.txt +10 -0
- eesanje/url_46_317_4.txt +6 -0
- eesanje/url_46_317_5.txt +15 -0
- eesanje/url_46_317_6.txt +7 -0
- eesanje/url_46_317_7.txt +6 -0
- eesanje/url_46_317_8.txt +13 -0
- eesanje/url_46_317_9.txt +7 -0
- eesanje/url_46_318_1.txt +13 -0
- eesanje/url_46_318_10.txt +11 -0
- eesanje/url_46_318_11.txt +6 -0
- eesanje/url_46_318_12.txt +9 -0
- eesanje/url_46_318_2.txt +9 -0
- eesanje/url_46_318_3.txt +7 -0
- eesanje/url_46_318_4.txt +8 -0
- eesanje/url_46_318_5.txt +13 -0
- eesanje/url_46_318_6.txt +6 -0
- eesanje/url_46_318_7.txt +7 -0
- eesanje/url_46_318_8.txt +6 -0
- eesanje/url_46_318_9.txt +14 -0
- eesanje/url_46_319_1.txt +7 -0
- eesanje/url_46_319_10.txt +7 -0
- eesanje/url_46_319_11.txt +5 -0
- eesanje/url_46_319_12.txt +12 -0
eesanje/url_46_315_11.txt
ADDED
@@ -0,0 +1,15 @@
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
1 |
+
ಉದ್ಯೋಗ ಖಾತ್ರಿ ದಿನಗಳನ್ನು 150ಕ್ಕೆ ಹೆಚ್ಚಿಸಲು ಪ್ರಸ್ತಾವನೆ : ಡಿಸಿಎಂ
|
2 |
+
ಬೆಂಗಳೂರು, ನ.10- ಬರದ ಹಿನ್ನೆಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ನೀಡಲಾಗುತ್ತಿರುವ ಮಾನವ ದಿನಗಳ ಉದ್ಯೋಗವನ್ನು 100ರಿಂದ 150 ದಿನಗಳಿಗೆ ಹೆಚ್ಚಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ, ಅಲ್ಲಿಂದ ಒಪ್ಪಿಗೆ ಸಿಗಬೇಕು, ಇಲ್ಲವಾದರೆ ನಾವೇ ಉದ್ಯೋಗ ದಿನಗಳನ್ನು ಹೆಚ್ಚಿಸುವ ಚಿಂತನೆ ನಡೆಸಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
|
3 |
+
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 200ಕ್ಕೂ ಹೆಚ್ಚು ತಾಲ್ಲೂಕುಗಳನ್ನು ಬರ ಭಾದಿತ ಎಂದು ಘೋಷಿಸಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಮಾನವ ದಿನಗಳ ಉದ್ಯೋಗ 100ದಿನಗಳಿಗೆ ಸೀಮಿತವಾಗಿದೆ. ಅದನ್ನು 150 ದಿನಗಳಿಗೆ ಹೆಚ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಅದಕ್ಕೆ ಕೇಂದ್ರ ಅನುಮತಿ ನೀಡಬೇಕು, ಇಲ್ಲವಾದರೆ ರಾಜ್ಯ ಸರ್ಕಾರವೇ 150 ದಿನಗಳಿಗೆ ಹೆಚ್ಚಿಸಲು ಚಿಂತನೆ ನಡೆಸಿದೆ. ಆದರೆ ಅದಕ್ಕೂ ಮೊದಲು ಕೇಂದ್ರ ಸರ್ಕಾರ ತಮ್ಮಿಂದ ಆಗುವುದಿಲ್ಲ ಎಂದು ಹೇಳಬೇಕು ಎಂದರು.
|
4 |
+
ಬಿಜೆಪಿ, ಜನತಾದಳಕ್ಕೆ ಈಗ ಅನುಕಂಪ ಬಂದು ಬರ ಅಧ್ಯಯನ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರ ಈಗಾಗಲೇ ಉತ್ತಮ ಅಧ್ಯಯನ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಅದನ್ನು ಕೇಂದ್ರ ಸ್ವೀಕರಿಸಿ, ಅಧಿಕಾರಿಗಳ ತಂಡವನ್ನು ಕಳುಹಿಸಿಕೊಟ್ಟಿತ್ತು. ಕೇಂದ್ರ ತಂಡವೂ ಇಲ್ಲಿ ಅಧ್ಯಯನ ಮಾಡಿ ಹೋಗಿದೆ. ಈಗ ಬಿಜೆಪಿ-ಜೆಡಿಎಸ್‍ನವರು ಕಾಟಾಚಾರಕ್ಕೆ ಹೋಗಿ ಗಿಡ ನೋಡುವುದಲ್ಲ, ನಾವು ಈಗಾಗಲೇ ಗಿಡ ನೋಡಿದ್ದೇವೆ. ಬಿಜೆಪಿಯ 66. ಜೆಡಿಎಸ್‍ನ 19 ಶಾಸಕರು ಹಾಗೂ ಬಿಜೆಪಿಯ 26 ಜನ ಸಂಸದರು ದೆಹಲಿಗೆ ಹೋಗಿ ಕೇಂದ್ರ ಸಚಿವರು, ಪ್ರಧಾನಿಯನ್ನು ಭೇಟಿ ಮಾಡಿ ರಾಜ್ಯಕ್ಕೆ ಪರಿಹಾರ ಕೊಡಿಸಲಿ ಎಂದು ಒತ್ತಾಯಿಸಿದರು.
|
5 |
+
ಸಂಪೂರ್ಣ ಕಣ್ಣು ಕಸಿ ಮಾಡುವಲ್ಲಿ ಅಮೆರಿಕ ವೈದ್ಯರು ಯಶಸ್ವಿ
|
6 |
+
ವಿರೋಧ ಪಕ್ಷಗಳು ರಾಜಕಾರಣ ಮಾಡಲಿ ಅಭ್ಯಂತರ ಇಲ್ಲ, ರಾಜ್ಯದ ಹಿತಕ್ಕೆ ಬದ್ಧರಾಗಿದ್ದೇವೆ ಎಂದಾದರೆ ಮೊದಲು ಪರಿಹಾರ ಕೊಡಿಸಿ, ಉದ್ಯೋಗ ಖಾತ್ರಿಯಡಿ 150 ದಿನಗಳನ್ನು ಮಂಜೂರು ಮಾಡಿಸಿ ಎಂದರು. ಬರ ಅಧ್ಯಯನ ನಡೆಸುವವರು ತಮ್ಮಿಂದ ರಾಜ್ಯಕ್ಕೆ ಏನು ಅನುಕೂಲವಾಗಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ. ನಾವು ಪರಿಹಾರಕ್ಕಾಗಿ ಕೇಂದ್ರದ ಬಲಿ ಭಿಕ್ಷೆ ಬೇಡುತ್ತಿಲ್ಲ. ಕಾನೂನು ಪ್ರಕಾರ ಪರಿಹಾರ ನೀಡುವ ಬದ್ಧತೆ ಕೇಂದ್ರ ಸರ್ಕಾರದ ಮೇಲಿದೆ. ಅದರಂತೆ ಹಣ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದ್ದರು.
|
7 |
+
ರಾಜ್ಯ ಸರ್ಕಾರ 800 ಕೋಟಿ ಹಣ ಒದಗಿಸಿದ್ದು, ಅದನ್ನು ಕುಡಿಯುವ ನೀರು, ಮೇವು ಸರಬರಾಜಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರ ಕರ್ನಾಟಕದ ವಿಷಯದಲ್ಲಿ ತಾರತಮ್ಯ ಮಾಡುತ್ತಿ��ೆ. ಬಿಜೆಪಿ ಮತ್ತು ಅದರ ಮಿತ್ರ ಪಕ್ಷ ಜೆಡಿಎಸ್ ಸೇರಿ ಕೇಂದ್ರದ ಮೇಲೆ ಒತ್ತಡ ಹೇರಲಿ ಎಂದರು.
|
8 |
+
ತೆಲಂಗಾಣದ ವಿಧಾನಸಭೆ ಚುನಾವಣೆಗೆ ರಾಜ್ಯ ಸರ್ಕಾರದ ನಾಲೈದು ಜನ ಸಚಿವರನ್ನು ನಿಯೋಜನೆ ಮಾಡಲಾಗಿದೆ. ಹೆಚ್ಚು ಸಚಿವರನ್ನು ನಿಯೋಜನೆ ಮಾಡಿಲ್ಲ. ಕಂದಾಯ ಸಚಿವರನ್ನು ತೆಲಂಗಾಣ ಚುನಾವಣೆಗೆ ನಿಯೋಜಿಸಲಾಗಿತ್ತು. ರಾಜ್ಯದಲ್ಲಿ ಬರ ಇರುವುದರಿಂದ ಅವರಿಗೆ ವಿನಾಯಿತಿ ನೀಡಲಾಗಿದೆ. 40 ಮಂದಿ ಶಾಸಕರನ್ನು ನಿಯೋಜಿಸಲಾಗಿದೆ. ಅವರಲ್ಲಿ ಅನಾರೋಗ್ಯದ ಕಾರಣಕ್ಕೆ ಎನ್.ವೈ.ಗೋಪಾಲಕೃಷ್ಣ ಸೇರಿ ಮೂರು ನಾಲ್ಕು ಜನ ಹೋಗುತ್ತಿಲ್ಲ. ಉಳಿದ ಎಲ್ಲರೂ ಸಕ್ರಿಯವಾಗಿ ಭಾಗವಹಿಸಲಿದ್ದಾರೆ. ಬಿಜೆಪಿಯವರು ಕೂಡ ಚುನಾವಣೆಗೆ ರಾಜ್ಯದ ನಾಯಕರನ್ನು ನಿಯೋಜನೆ ಮಾಡಿದ್ದರು ಎಂದರು.
|
9 |
+
ನಾನು ಇಂದು ವಿಜಯವಾಡ ಮೂಲಕ ತೆಲಂಗಾಣಕ್ಕೆ ಹೋಗುತ್ತಿದ್ದೇನೆ. ಮೂರು ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದೇನೆ. ನಾಳೆ ಶ್ರೀಶೈಲ ದೇವಸ್ಥಾನಕ್ಕೆ ಹೋಗಿ ನಾಡಿದ್ದು ವಾಪಾಸ್ ಬರುತ್ತೇನೆ ಎಂದು ಸ್ಪಷ್ಟ ಪಡಿಸಿದರು.
|
10 |
+
ಹಿಂದುಳಿದ ವರ್ಗಗಳಿಂದ ನಡೆಸಿರುವ ಸಾಮಾಜಿಕ, ಆರ್ಥಿಕ ಸಮೀಕ್ಷೆ ಅವೈಜ್ಞಾನಿಕವಾಗಿದ್ದು, ಮರು ಸಮೀಕ್ಷೆ ನಡೆಸಬೇಕು ಎಂದು ವೀರಶೈವ ಲಿಂಗಾಯಿತ ಮಹಾ ಸಭಾದ ಅಧ್ಯಕ್ಷ ಹಾಗೂ ಕಾಂಗ್ರೆಸ್‍ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನೀಡಿರುವ ಹೇಳಿಕೆ ಕುರಿತು ಬೇರೊಂದು ದಿನ ಚರ್ಚೆ ಮಾಡುವುದಾಗಿ ಹೇಳಿದ ಡಿ.ಕೆ.ಶಿವಕುಮಾರ್, ಸದಸ್ಯಕ್ಕೆ ಬರ ಹಾಗೂ ರಾಜ್ಯದ ಇತರ ಗಂಭೀರ ಸಮಸ್ಯೆಗಳ ಬಗ್ಗೆ ಗಮನ ಹರಿಸುವುದಾಗಿ ತಿಳಿಸಿದರು.
|
11 |
+
ಕಾಂಗ್ರೆಸ್‍ನಲ್ಲಿ ಯಾವ ಗೊಂದಲವೂ ಇಲ್ಲ. ಶಿವಮೊಗ್ಗ ರಾಜಕಾರಣದ ವಿಷಯವಾಗಿ ಯಾವುದೇ ವಿಚಾರಗಳಿದ್ದರೂ ತಮ್ಮೊಂದಿಗೆ ಚರ್ಚೆ ಮಾಡಬಹುದು, ಅದನ್ನು ಬಿಟ್ಟು ಬೀದಿಯಲ್ಲಿ ಮಾತನಾಡುವುದು ಸರಿಯಲ್ಲ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಎಚ್ಚರಿಕೆ ನೀಡಿದರು.
|
12 |
+
ಬೆಂಗಳೂರಿನಲ್ಲಿ ಬೀದಿ ಬದಿ ವ್ಯಾಪಾರಿಗಳು ನೋಂದಣಿ ಮಾಡಿಕೊಳ್ಳಬೇಕು, ಅಗಲ ಇರುವ ಪುಟ್‍ಪಾತ್‍ನ ಪಕ್ಕದಲ್ಲಿ ನಿಂತು ವ್ಯಾಪಾರ ಮಾಡಿಕೊಂಡರೆ ಅಭ್ಯಂತರ ಇಲ್ಲ. ರಸ್ತೆಯಲ್ಲೇ ವ್ಯಾಪಾರ ಮಾಡುತ್ತಿದ್ದಾರೆ. ಮಲ್ಲೇಶ್ವರಂ, ಮಡಿವಾಳದಂತಹ ಪ್ರದೇಶಗಳಲ್ಲಿ ಇದರಿಂದ ತೊಂದರೆಯಾಗುತ್ತಿದೆ. ಅಧಿಕಾರಿಗಳು ಫೋಟೋ ವಿಡಿಯೋ ಸಹಿತಿ ನನಗೆ ಮಾಹಿತಿ ನೀಡಿದ್ದಾರೆ. ಹೈಕೋರ್ಟ್ ಸೂಚನೆ ನೀಡಿದೆ, ಅದರ ಆಧಾರದ ಮೇಲೆ ಪಾಲಿಕೆ ಅಧಿಕಾರಿಗಳು ತೆರವು ಮಾಡುತ್ತಿದ್ದಾರೆ. ಇಲ್ಲಿ ಪಕ್ಷಪಾತ ಇಲ್ಲ. ಎಲ್ಲಾ ಕಡೆ ಒಂದೇ ರೀತಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
|
13 |
+
ಲೋಕ ಚುನಾವಣೆಗೆ ಬಿಜೆಪಿ ರಣತಂತ್ರ, 12 ಹಾಲಿ ಸಂಸದರಿಗೆ ಕೊಕ್
|
14 |
+
ಬೀದಿ ಬದಿ ವ್ಯಾಪಾರಿಗಳು ತಮ್ಮನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ರಸ್ತೆಯಲ್ಲಿ ವ್ಯಾಪಾರ ಮಾಡುವುದರಿಂದ ಸಂಚಾರಕ್ಕೆ ಅಡಚಣೆಯಾಗುತ್ತಿದೆ, ಅಪಘಾತಗಳಾಗುತ್ತಿವೆ. ರಸ್ತೆ ಬದಿಯಲ್ಲಿ ವ್ಯಾಪಾರ ಮಾಡಲು ನಮ್ಮ ಅಕ್ಷೇಪ ಇಲ್ಲ ಎಂದು ಮನವ���ಿಕೆ ಮಾಡಿಕೊಟ್ಟಿದ್ದೇನೆ. ಹಿಂದೊಮ್ಮೆ ಅವರೊಂದಿಗೆ ಚರ್ಚೆ ನಡೆಸಿದ್ದೆ, ಮತ್ತೊಮ್ಮೆಯೂ ಚರ್ಚೆ ಮಾಡುತ್ತೇನೆ. ಅವರ ಜೀವನವೂ ನಡೆಯಬೇಕು, ಅವರಿಗೆ 10 ಸಾವಿರ ರೂಪಾಯಿ ಆರ್ಥಿಕ ನೆರವು ನೀಡಲು ನಾವು ಸಿದ್ಧರಿದ್ದೇವೆ ಎಂದರು.
|
15 |
+
ಬಿಜೆಪಿಯವರು ಆಪರೇಷನ್ ಕಮಲ ಮಾಡುವ ಅವರ ವೃತ್ತಿ ಬಿಡುವುದಿಲ್ಲ. ಸುಮ್ಮನ್ನೆ ನಮ್ಮನ್ನು ಕೆಣಕುತ್ತಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.
|
eesanje/url_46_315_12.txt
ADDED
@@ -0,0 +1,5 @@
|
|
|
|
|
|
|
|
|
|
|
|
|
1 |
+
ತೆಲಂಗಾಣದಲ್ಲಿ ಕರ್ನಾಟಕ ಸಿಎಂ, ಡಿಸಿಎಂ, ಸಚಿವರು ಸೇರಿ ಕಾಂಗ್ರೆಸ್ ನಾಯಕರಿಂದ ಮತಬೇಟೆ
|
2 |
+
ಬೆಂಗಳೂರು, ನ.10- ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಐದು ಮಂದಿ ಸಚಿವರು, ನಲವತ್ತಕ್ಕೂ ಅಧಿಕ ಶಾಸಕರು ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಪ್ರಮುಖ ಕಾಂಗ್ರೆಸಿಗರು ತೆಲಂಗಾಣ ರಾಜ್ಯದ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ.
|
3 |
+
ಇಂದು ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರೊಂದಿಗೆ ವಿಶೇಷ ವಿಮಾನದಲ್ಲಿ ತೆಲಂಗಾಣಕ್ಕೆ ತೆರಳಿದರು. ಡಿ.ಕೆ.ಶಿವಕುಮಾರ್ ಪ್ರತ್ಯೇಕವಾಗಿ ವಿಜಯವಾಡದ ಮೂಲಕ ತೆರಳಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡರು. ಕರ್ನಾಟಕದ ಮಾದರಿಯಲ್ಲಿ ತೆಲಂಗಾಣದಲ್ಲೂ ಗೆಲುವು ಸಾಧಿಸಬೇಕು ಎಂದು ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ತನ್ನಲ್ಲೆಲ್ಲಾ ಬಲವನ್ನೂ ಕ್ರೋಢಿಕರಿಸಿದೆ.
|
4 |
+
ಸಂಪೂರ್ಣ ಕಣ್ಣು ಕಸಿ ಮಾಡುವಲ್ಲಿ ಅಮೆರಿಕ ವೈದ್ಯರು ಯಶಸ್ವಿ
|
5 |
+
ಕೆಪಿಸಿಸಿ ಪದಾಧಿಕಾರಿಗಳು, ಸಚಿವರು, ಶಾಸಕರು ಅಲ್ಲಿನ ಕ್ಷೇತ್ರವಾರು ಉಸ್ತುವಾರಿ ವಹಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರೂ ಸಚಿವರು, ಶಾಸಕರು ಚುನಾವಣೆಯತ್ತ ಗಮನ ಹರಿಸಿದ್ದಾರೆ ಎಂದು ವಿರೋಧ ಪಕ್ಷಗಳು ಟೀಕಿಸುತ್ತವೆ, ಅದಕ್ಕೆ ತಲೆ ಕೆಡಿಸಿಕೊಳ್ಳದ ಕಾಂಗ್ರೆಸಿಗರು ತೆಲಂಗಾಣ ಚುನಾವಣೆ ಗೆಲ್ಲಲು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ.
|
eesanje/url_46_315_2.txt
ADDED
@@ -0,0 +1,9 @@
|
|
|
|
|
|
|
|
|
|
|
|
|
|
|
|
|
|
|
|
|
1 |
+
ವಿಜಯೇಂದ್ರ ನೇಮಕ ನಿರೀಕ್ಷೆ ಇರಲಿಲ್ಲ : ಯಡಿಯೂರಪ್ಪ
|
2 |
+
ಬೆಂಗಳೂರು, ನ.11- ಬಹಳ ದಿನಗಳ ನಂತರ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯ ಬಿಜೆಪಿಗೆ ಸಂಬಂಧಪಟ್ಟಂತೆ ಬಹಳ ಒಳ್ಳೆಯ ತೀರ್ಮಾನ ತೆಗೆದುಕೊಂಡಿದ್ದಾರೆ. ಸೂಕ್ತ ಸಮಯದಲ್ಲಿ ರಾಜ್ಯಾಧ್ಯಕ್ಷರ ನೇಮಕ ಮಾಡಿದ್ದಾರೆ. ವಿಜಯೇಂದ್ರ ನೇಮಕ ನಿರೀಕ್ಷೆಯಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
|
3 |
+
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಿಜಯೇಂದ್ರ ನೇಮಕದ ಬಗ್ಗೆ ನನಗೆ ಗೊತ್ತೇ ಇರಲಿಲ್ಲ. ನೀವು ಯಾರನ್ನು ಬೇಕಾದರೂ ಕೇಳಿ ನೋಡಿ, ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಮಾಡಿ ಎಂದು ನಾನು ಒಂದು ದಿನವೂ ದೆಹಲಿಗೆ ಹೋಗಿ ಕೇಳಿರಲಿಲ್ಲ, ಹೈಕಮಾಂಡ್ ಮುಂದೆ ಮನವಿ ಮಾಡಿರಲಿಲ್ಲ. ಹಲವು ವಿಚಾರಗಳನ್ನು ಅಳೆದು ತೂಗಿ ಹೈಕಮಾಂಡ್ ಸರಿಯಾದ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.’
|
4 |
+
ವೀರಶೈವ ಲಿಂಗಾಯತ ಸಮಾಜ ನಮ್ಮ ಜೊತೆಗಿದೆ, ವಿಜಯೇಂದ್ರ ಅಧ್ಯಕ್ಷರಾದ ಮೇಲೆ ಸಮಾಜದ ಬೆಂಬಲ ಇನ್ನೂ ಹೆಚ್ಚು ಸಿಗಲಿದೆ. ಮುಂದಿನ ಬಾರಿ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಿಂದ ಅತಿಹೆಚ್ಚಿನ ಸ್ಥಾನಗಳನ್ನು ಗೆಲ್ಲಿಸಿ ಅವರಿಗೆ ಒಳ್ಳೆಯ ಉಡುಗೊರೆ ಕೊಡಬೇಕೆಂಬುದು ನಮ್ಮ ಗುರಿಯಾಗಿದೆ. ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆ ನಿಟ್ಟಿನಲ್ಲಿ ಇನ್ನಷ್ಟು ಕೆಲಸ ಮಾಡುವುದಾಗಿ ಯಡಿಯೂರಪ್ಪ ಹೇಳಿದರು.
|
5 |
+
ಅತ್ತೂ ಕರೆದು ಕೊನೆಗೂ ಅಧ್ಯಕ್ಷರ ನೇಮಕ ಮಾಡಿದ್ದಾರೆ : ಶೆಟ್ಟರ್ ಲೇವಡಿ
|
6 |
+
ಬಿ.ವೈ.ವಿಜಯೇಂದ್ರಗೆ ಬಿಜೆಪಿ ರಾಜಾ್ಯಧ್ಯಕ್ಷ ಸ್ಥಾನ ಸಿಗುತ್ತೆ ಅಂತ ನಾವ್ಯಾರು ನಿರೀಕ್ಷೆ ಇಟ್ಟಿರಲಿಲ್ಲ. ದೆಹಲಿಗೆ ಹೋಗಿ ನನ್ನ ಮಗನಿಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಿ ಅಂತಾನೂ ಕೇಳಿರಲಿಲ್ಲ. ದೊಡ್ಡ ಸ್ಥಾನ ಸಿಕ್ಕಿದಾಗ ಸವಾಲುಗಳು ಸಹಜ, ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ಗುರಿ ಮುಟ್ಟಲು ಕಷ್ಟವಿಲ್ಲ. ಆದರೆ ಹಾದಿ ಕಠಿಣ ಇದೆ. ನಾನೂ ಕೂಡ ರಾಜ್ಯ ಪ್ರವಾಸ ಮಾಡಿ ಹೆಚ್ಚಿನ ಸ್ಥಾನ ಗೆಲ್ಲಲು ಶ್ರಮಿಸುತ್ತೇನೆ ಎಂದರು.
|
7 |
+
ಅಮಿತ್ ಶಾ, ನಡ್ಡಾ ಅವರು ಸೂಕ್ತ ಸಮಯಕ್ಕೆ ಒಳ್ಳೆಯ ನಿರ್ಧಾರ ಮಾಡಿದ್ದಾರೆ. ರಾಜ್ಯ ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದ್ದಾರೆ. ರಾಜಾ್ಯದ್ಯಂತ ಪ್ರವಾಸ ಮಾಡಿ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವುದು ನಮ್ಮ ಗುರಿ. ಈ ಬಾರಿ ರಾಜ್ಯದಲ್ಲಿ 25ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು. ಈ ನಿಟ್ಟಿನಲ್ಲಿ ನಾನು ಕೂಡ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ ಎಂದರು.ಮೋದಿ ಅವರಂತಹ ಮಹಾನ್ ವ್ಯಕ್ತಿ ದೇಶದ ಪ್ರಧಾನಿಯಾಗಿದ್ದಾರೆ.
|
8 |
+
ದೆಹಲಿಯಲ್ಲಿ ಕುಳಿತು ವಿಜಯೇಂದ್ರನನ್ನು ಅಧ್ಯಕ್ಷನನ್ನಾಗಿ ಮಾಡಿ ಅಂತ ಯಾರನ್ನೂ ಕೇಳಿಲ್ಲ. ಬೇಕಾದರೆ ನೀವುಗಳು ವಿಚಾರಿಸಿ. ನಾವು ಪ್ರವಾಸ ಮಾಡಿದ ಮೇಲೆ ಜನರ ರೆಸ್ಪಾನ್ಸ್ ಹೇಗಿದೆ ಅಂತ ನೋಡಿದ ಮೇಲೆ ನಮ್ಮ ಬಲ ಗೊತ್ತಾಗಲಿದೆ. 25 ಕ್ಷೇತ್ರ ಗೆಲ್ಲೋದು ಸುಲಭವಲ್ಲ. ರಾಜಾ್ಯದ್ಯಂತ ಓಡಾಡಬೇಕು. ಎಲ್ಲರ��್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು. ಎಲ್ಲರೂ ಒಟ್ಟಾಗಿ ಹೋದಲ್ಲಿ ಯಶಸ್ಸು ಖಚಿತ ಎಂದು ಬಿಎಸ್ವೈ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
|
9 |
+
ನಂತರ ಮಾತನಾಡಿದ ಮಾಜಿ ಸಚಿವ ಮುನಿರತ್ನ, ಮಾಜಿ ಮುಖ್ಯಮಂತ್ರಿ ಬಿ ಎಸ್.ಯಡಿಯೂರಪ್ಪ ಅವರು ಈಗ ಅಧಿಕಾರದಲ್ಲಿ ಇಲ್ಲ. ಹೀಗಾಗಿ ಇದು ವಂಶವಾದ ಆಗೋದಿಲ್ಲ ಎಂದು ವಂಶವಾದ ರಾಜಕೀಯಕ್ಕೆ ಹೊಸ ವ್ಯಾಖ್ಯಾನ ಮಾಡಿದ್ದಾರೆ. ಬಿ.ವೈ.ವಿಜಯೇಂದ್ರ ಅವರನ್ನು ಬಿಜೆಪಿ ರಾಜಾ್ಯಧ್ಯಕ್ಷನನ್ನಾಗಿ ಆಯ್ಕೆ ಮಾಡುವ ಮೂಲಕ ಯುವಕರಿಗೆ ಅವಕಾಶ ನೀಡಿದಂತಾಗಿದೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು, ಆಗ ಯಶಸ್ಸು ಸಿಗಲಿದೆ. ಸದ್ಯ ನಮ್ಮಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
|
eesanje/url_46_315_3.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ರಾಜ್ಯಪಾಲರು ಆತ್ಮವಿಮರ್ಶೆ ಮಾಡಿಕೊಳ್ಳಲಿ : ಸಚಿವ ಗುಂಡೂರಾವ್
|
2 |
+
ಬೆಂಗಳೂರು, ನ.11- ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕವಾದರೂ ಹಲವು ರಾಜ್ಯಗಳ ರಾಜ್ಯಪಾಲರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಸಲಹೆ ನೀಡಿದ್ದಾರೆ.ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೊಸ್ಟ್ ಮಾಡಿರುವ ಅವರು, ಪಂಜಾಬ್ ರಾಜ್ಯಪಾಲರ ನಡೆಯ ವಿರುದ್ಧ ಸುಪ್ರೀಂ ಕೋರ್ಟ್ ಅತ್ಯಂತ ಕಟುವಾದ ಭಾಷೆಯಲ್ಲಿ ಎಚ್ಚರಿಕೆ ನೀಡಿದೆ.
|
3 |
+
ಬೆಂಕಿಯ ಜೊತೆ ಆಟ ಬೇಡ ಎಂಬ ಸುಪ್ರೀಂ ಅಭಿಪ್ರಾಯ ಕೇವಲ ರಾಜ್ಯಪಾಲರಿಗೆ ಕೊಟ್ಟ ಎಚ್ಚರಿಕೆಯಲ್ಲ. ಬದಲಿಗೆ ರಾಜ್ಯಪಾಲರ ಮೂಲಕ ಒಕ್ಕೂಟ ವ್ಯವಸ್ಥೆಯ ಆಶಯವನ್ನೇ ಹಾಳು ಮಾಡಲು ಹೊರಟಿರುವ ಕೇಂದ್ರ ಸರ್ಕಾರಕ್ಕೆ ಪರೋಕ್ಷವಾಗಿ ಕೊಟ್ಟಿರುವ ಎಚ್ಚರಿಕೆಯೂ ಹೌದು ಎಂದಿದ್ದಾರೆ.
|
4 |
+
ರಾಷ್ಟ್ರಪತಿಗಳ ಮೂಲಕ ರಾಜ್ಯಗಳಿಗೆ ನೇಮಕವಾಗುವ ರಾಜ್ಯಪಾಲರು ಸಾಂವಿಧಾನಿಕ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಬೇಕು. ವಿಪರ್ಯಾಸವೆಂದರೆ ಬಿಜೆಪಿಯೇತರ ರಾಜ್ಯಗಳಲ್ಲಿ ರಾಜ್ಯಪಾಲರಾಗಿ ನಿಯುಕ್ತರಾಗಿರುವ ಕೆಲವು ರಾಜ್ಯಪಾಲರು ಬಿಜೆಪಿಯ ಏಜೆಂಟ್ಗಳಾಗಿದ್ದಾರೆ. ಅವೇಶನದಲ್ಲಿ ಅಂಗೀಕಾರವಾದ ಮಸೂದೆಗಳನ್ನು ಅನಗತ್ಯವಾಗಿ ತಡೆ ಹಿಡಿಯುವುದು, ಬಿಕ್ಕಟ್ಟು ಸೃಷ್ಟಿಸುವುದು ಸಾಮಾನ್ಯವಾಗಿದೆ.
|
5 |
+
ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕದ ಬೆನ್ನಲ್ಲೇ ಬದಲಾದ ಕಾಂಗ್ರೆಸ್ ತಂತ್ರಗಾರಿಕೆ
|
6 |
+
ರಾಜ್ಯಪಾಲರ ನಡೆಯ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ಎಚ್ಚರಿಕೆ ಗಂಭೀರವಾಗಿದೆ. ಪಂಜಾಬ್, ಕೇರಳ, ತಮಿಳುನಾಡು ರಾಜ್ಯಪಾಲರು ಕೇಂದ್ರದ ಮರ್ಜಿಗೆ ಬಿದ್ದು ಪಕ್ಷಪಾತವಾಗಿ ನಡೆದುಕೊಳ್ಳದೆ, ಸಂವಿಧಾನದ ಘನತೆ ಎತ್ತಿ ಹಿಡಿದಿದ್ದರೆ ಸುಪ್ರೀಂ ಇಷ್ಟು ಕಟುವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿರಲಿಲ್ಲ. ಸುಪ್ರೀಂ ಕೋರ್ಟ್ನ ಎಚ್ಚರಿಕೆಯ ಹಿನ್ನೆಲೆಯಲ್ಲಿ ಅವರೆಲ್ಲರೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದಿದ್ದಾರೆ.
|
7 |
+
ಈ ವಿಷಯದಲ್ಲಿ ನಮ್ಮ ಕರ್ನಾಟಕದ ರಾಜ್ಯಪಾಲ ಥಾವರ್ಚಂದ್ ಗೆಲ್ಹೋಟ್ ಅವರು ನಿಶ್ಪಕ್ಷಪಾತವಾಗಿ ನಡೆದುಕೊಳ್ಳುತ್ತಿದ್ದಾರೆ. ಅವರ ಸರಳ ಸಜ್ಜನಿಕೆ ನಡವಳಿಕೆಯಿಂದ ಎಲ್ಲರ ವಿಶ್ವಾಸ ಗಳಿಸುವುದರಲ್ಲಿ ಯಶಸ್ವಿಯಾಗಿದ್ದಾರೆ ಎಂದು ದಿನೇಶ್ ಗುಂಡೂರಾವ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
|
eesanje/url_46_315_4.txt
ADDED
@@ -0,0 +1,9 @@
|
|
|
|
|
|
|
|
|
|
|
|
|
|
|
|
|
|
|
|
|
1 |
+
ನೂತನ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮುಂದಿವೆ ಬೆಟ್ಟದಷ್ಟು ಸವಾಲುಗಳು
|
2 |
+
ಬೆಂಗಳೂರು, ನ.11- ಸಾಕಷ್ಟು ಸವಾಲುಗಳ ನಡುವೆಯೇ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನೇಮಕವಾಗಿರುವ ಬಿ.ವೈ.ವಿಜಯೇಂದ್ರ ಅವರಿಗೆ ಭವಿಷ್ಯದಲ್ಲಿ ಬೆಟ್ಟದಷ್ಟು ಸವಾಲುಗಳಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಮುನ್ನಡೆಸುವುದು ಅಷ್ಟು ಸರಳವಾಗಿಲ್ಲ.ವಿಧಾನಸಭಾ ಚುನಾವಣೆ ಸೋಲಿನ ನಂತರ ಬಿಜೆಪಿ ಮನೆಯೊಂದು ಮೂರು ಬಾಗಿಲು ಎನ್ನುವುದಂತಾಗಿದೆ. ಈಗಾಗಲೇ ಅನೇಕರು ಪಕ್ಷ ಬಿಟ್ಟು ಅನ್ಯ ಪಕ್ಷಗಳ ಕಡೆ ಮುಖ ಮಾಡಿದ್ದಾರೆ, ಉಳಿದವರು ಕೂಡಾ ಕಮಲಕ್ಕೆ ಗುಡ್ ಬೈ ಹೇಳುವ ಲೆಕ್ಕಾಚಾರದಲ್ಲಿ ಇದ್ದಾರೆ.
|
3 |
+
ಬಿಜೆಪಿಯಲ್ಲಿ ಬಹಿರಂಗವಾಗಿ ಎಲ್ಲವೂ ಚೆನ್ನಾಗಿದ್ದಂತೆ ಕಾಣಿಸಿದರೂ ಎಲ್ಲ ಪಕ್ಷಗಳಲ್ಲಿ ಇರುವಂತೆ ಇಲ್ಲಿಯೂ ಆಂತರಿಕ ಸಂಘರ್ಷ, ಗುಂಪುಗಾರಿಕೆ ಸಾಕಷ್ಟಿದೆ. ಜಾತಿ, ಸಂಘ ಪರಿವಾರ, ವಲಸೆ ಬಂದವರು.. ಹೀಗೆ ನಾನಾ ಸಂಗತಿಗಳನ್ನು ಅವಲಂಬಿಸಿ ಇರುವ ಈ ಗುಂಪುಗಾರಿಕೆ ನಿಯಂತ್ರಣ ಕೂಡ ವೈಯಕ್ತಿಕ ಸಾಮಥ್ರ್ಯಕ್ಕೆ ಒಂದು ಅಳತೆಗೋಲಿನಂತೆ ಇರುವುದರಿಂದ ಇದು ಕೂಡ ಅವರಿಗೆ ಸವಾಲಾಗಿ ಪರಿಣಮಿಸಲಿದೆ.
|
4 |
+
ರಾಜ್ಯಾಧ್ಯಕ್ಷ ಪಟ್ಟಕ್ಕೇರುತ್ತಿದಂತೆ ವಿಜಯೇಂದ್ರಗೆ ತಲೆನೋವು ಶುರು, ಸ್ವಪಕ್ಷದವರಿಂದಲೇ ಅಸಮಾಧಾನ
|
5 |
+
ಬಿಜೆಪಿ ಎಂದರೆ ಕಾರ್ಯಕರ್ತರ ಪಕ್ಷ ಎಂದೇ ಹೆಸರುವಾಸಿ. ಚುನಾವಣೆ ಸಂದರ್ಭದಲ್ಲಿ ಮಾತ್ರವಲ್ಲ, ಪಕ್ಷಕ್ಕಾಗಿ ಏನೇ ಮಾಡಬೇಕಾಗಿ ಬಂದರೂ ಬಿಜೆಪಿಯ ತಳಮಟ್ಟದ ಕಾರ್ಯಕರ್ತರ ಪಾತ್ರ, ಅವರ ಸಂಘಟಿತ ಪ್ರಯತ್ನ ಮಹತ್ವದ್ದು. ಅಪಾರ ಸಂಖ್ಯೆಯಲ್ಲಿರುವ ಈ ಕಾರ್ಯಕರ್ತರನ್ನು ಒಗ್ಗೂಡಿಸಿ, ಉತ್ಸಾಹ ತುಂಬಿ, ಪಕ್ಷಕ್ಕಾಗಿ ಇನ್ನಷ್ಟು ಪರಿಣಾಮಕಾರಿಯಾಗಿ ಶ್ರಮಿಸುವಂತೆ ಮಾಡುವ ಸವಾಲನ್ನೂ ವಿಜಯೇಂದ್ರ ನಿಭಾಯಿಸಬೇಕಾಗಿದೆ.
|
6 |
+
ಪಕ್ಷದಲ್ಲಿ ಅನೇಕ ಹಿರಿತಲೆಗಳಿದ್ದು, ಪ್ರಭಾವಿಗಳಾಗಿರುವ ಅವರ ಮಾತನ್ನು ಅಷ್ಟು ಸುಲಭದಲ್ಲಿ ತೆಗೆದುಹಾಕಲು ಸಾಧ್ಯವಿಲ್ಲ. ಅಲ್ಲದೆ, ಈಗಾಗಲೇ ಕೆಲವರು ಮಾಜಿ ಸಿಎಂ ಬಿಎಸ್‍ವೈ ಅಕಾರದಲ್ಲಿದ್ದಾಗಲೇ ಬಹಿರಂಗವಾಗಿ ಅಸಮಾಧಾನ ತೋರ್ಪಡಿಸಿದ್ದು, ಅಂಥವರನ್ನು ಬಿಎಸ್‍ವೈ ಪುತ್ರ ನಿಭಾಯಿಸುವುದು ಸುಲಭವಲ್ಲ. ಇನ್ನೊಂದೆಡೆ ಬಿಜೆಪಿ ಹೈಕಮಾಂಡ್ ಹೊಸ ಮುಖಗಳಿಗೆ, ಯುವಕರಿಗೆ ಹೆಚ್ಚಿನ ಆದ್ಯತೆ ನೀಡುವುದರಿಂದ ಯುವ ನಾಯಕರನ್ನೂ ಕಡೆಗಣಿಸುವಂತಿಲ್ಲ. ಹೀಗೆ ಹಿರಿ-ಕಿರಿಯರಿಬ್ಬರನ್ನೂ ಒಟ್ಟಿಗೇ ಸಾಮರಸ್ಯದಲ್ಲಿ ಇರಿಸಿಕೊಂಡು ಪಕ್ಷವನ್ನು ಮುನ್ನಡೆಸುವುದು ಕೂಡ ದೊಡ್ಡ ಸವಾಲೇ.
|
7 |
+
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತು ಅಕಾರ ಕಳೆದುಕೊಂಡಿರುವ ಬಿಜೆಪಿಗೆ ಈ ಲೋಕಸಭಾ ಚುನಾವಣೆಯ ಗೆಲುವು ಮಹತ್ವದ್ದು ಹಾಗೂ ಪ್ರತಿಷ್ಠೆಯ ಸಂಗತಿ ಆಗಿರುವುದರಿಂದ ವಿಜಯೇಂದ್ರ ಅವರಿಗೆ ಸಂಸತ್ ಚುನಾವಣೆ ಸಂಕಟ ಎನಿಸಿದರೂ ಅಚ್ಚರಿ ಏನಿಲ್ಲ. ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ಏನೆಲ್ಲ ತಪ್ಪುಗಳಾದವು, ಹಿನ್ನ���ೆಗೆ ಕಾರಣಗಳು ಏನು ಎಂಬುದನ್ನೆಲ್ಲ ತಿಳಿದು ಲೋಕಸಭೆ ಚುನಾವಣೆಯಲ್ಲಿ ಪಕ್ಷ ಭರ್ಜರಿ ಗೆಲವು ಸಾಸುವಂತೆ ಮಾಡುವ ದೊಡ್ಡ ಸವಾಲು ವಿಜಯೇಂದ್ರ ಮುಂದಿದೆ.
|
8 |
+
ರಾಜ್ಯದಲ್ಲಿ ಸ್ಪಷ್ಟ ಬಹುಮತದಿಂದ ಗೆದ್ದು ಅಕಾರ ಪಡೆದು, ಗ್ಯಾರಂಟಿಗಳ ಜÁರಿಯಿಂದ ಹಿಗ್ಗಿರುವ ಕಾಂಗ್ರೆಸ್ ಪಕ್ಷ ಈ ಸಲ ಬಿಜೆಪಿಗೆ ಭಾರಿ ಪ್ರತಿಸ್ರ್ಪ ಆಗಿರಲಿದೆ. ಅಕಾರದಲ್ಲಿ ಇರುವುದರಿಂದ ಈಗಾಗಲೇ ಒಂದಷ್ಟು ಆಯಕಟ್ಟಿನ ಜಾಗ-ಕ್ಷೇತ್ರಗಳ ಮೇಲೆ ಹಿಡಿತ ಸಾಸಿರುವ ಕಾಂಗ್ರೆಸ್ ವಿರುದ್ಧ ಕಾರ್ಯತಂತ್ರ ಹೆಣೆಯುವುದು ಕೂಡ ಭಾರಿ ಸಂಗತಿಯೇ. ಅದರಲ್ಲೂ ಸಿದ್ದರಾಮಯ್ಯ-ಡಿ.ಕೆ. ಶಿವಕುಮಾರ್ ಅವರಂಥ ಎರಡು ಪ್ರಬಲ ಸಮುದಾಯದ ನಾಯಕರ ನೇತೃತ್ವದಲ್ಲಿ ರಾಜ್ಯದಲ್ಲಿರುವ ಕಾಂಗ್ರೆಸ್ ಪಕ್ಷವನ್ನು ಮಣಿಸಲು ವಿಜಯೇಂದ್ರ ಕೈಮೀರಿದ ಪ್ರಯತ್ನ ಮಾಡಬೇಕಾಗಿರುವುದು ಮತ್ತೊಂದು ಸವಾಲು.
|
9 |
+
ನೂತನ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡುವ ಮೂಲಕ ರಾಜ್ಯ ಬಿಜೆಪಿಯ ಚುಕ್ಕಾಣಿಯನ್ನು ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಮುಂತಾದವರು ವಿಜಯೇಂದ್ರ ಅವರಿಗೆ ನೀಡಿದ್ದಾರೆ. ಪಕ್ಷದ ವರಿಷ್ಠರು, ಕೇಂದ್ರ ನಾಯಕರು ಇಂಥ ದೊಡ್ಡ ಜವಾಬ್ದಾರಿ ಕೊಟ್ಟಿದ್ದು, ಇದನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಅವರು ತಮ್ಮ ಮೇಲೆ ಇರಿಸಿರುವ ವಿಶ್ವಾಸವನ್ನು ಉಳಿಸಿಕೊಳ್ಳಲೇಬೇಕಾದ ಅತ್ಯಂತ ಮಹತ್ವದ ಸವಾಲು ವಿಜಯೇಂದ್ರ ಮುಂದಿದೆ.
|
eesanje/url_46_315_5.txt
ADDED
@@ -0,0 +1,9 @@
|
|
|
|
|
|
|
|
|
|
|
|
|
|
|
|
|
|
|
|
|
1 |
+
ಬಿಜೆಪಿ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಹರಿದು ಬಂದ ಅಭಿನಂದನೆಗಳ ಮಹಾಪೂರ
|
2 |
+
ಬೆಂಗಳೂರು, ನ 11 (ಪಿಟಿಐ) : ಬಿಜೆಪಿ ಪಕ್ಷದ ನೂತನ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಬಿ ವೈ ವಿಜಯೇಂದ್ರ ಅವರನ್ನು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತಿತರ ನಾಯಕರು ಅಭಿನಂದಿಸಿದ್ದಾರೆ. ಬಿಜೆಪಿಯ ಹೊಸ ಪಾಲುದಾರ ಪಕ್ಷವಾಗಿರುವ ಜೆಡಿಎಸ್ ಪಕ್ಷದ ವರಿಷ್ಠ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮತ್ತು ಆ ಪಕ್ಷದ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಅವರು ವಿಜಯೇಂದ್ರ ಅವರಿಗೆ ದೂರವಾಣಿ ಕರೆ ಮಾಡಿ ಅಭಿನಂದಿಸಿದ್ದಾರೆ ಎಂದು ಅವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
|
3 |
+
ಈಗಾಗಲೇ ಯುವ ನಾಯಕರಾಗಿ (ಬಿಜೆಪಿ) ಸಂಘಟನೆಯಲ್ಲಿ ಸಕ್ರಿಯರಾಗಿರುವ ಅವರಿಗೆ ಚಿಕ್ಕವಯಸ್ಸಿನಲ್ಲೇ ಬಹುದೊಡ್ಡ ಜವಾಬ್ದಾರಿ ನೀಡಲಾಗಿದೆ. ತಮಗೆ ವಹಿಸಿರುವ ಈ ಗುರುತರ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ವಿಶ್ವಾಸವಿದೆ ಹೀಗಾಗಿ ವಿಜಯೇಂದ್ರ ಅವರಿಗೆ ನಾನು ಶುಭ ಹಾರೈಸುತ್ತೇನೆ ಎಂದು ಕುಮಾರಸ್ವಾಮಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
|
4 |
+
ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಸೇರಿದಂತೆ ಮೈತ್ರಿಯ ವಿವರಗಳನ್ನು ಉಭಯ ಪಕ್ಷಗಳು ಇನ್ನೂ ಔಪಚಾರಿಕಗೊಳಿಸಬೇಕಾಗಿಲ್ಲ, ಇದರಲ್ಲಿ ವಿಜಯೇಂದ್ರ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆಯಿದೆ.ಯಡಿಯೂರಪ್ಪನವರ ಮಗ ಎಂಬ ಅರ್ಹತೆಯ ಮೇರೆಗೆ ಬಿಜೆಪಿಯ ಹೊಸ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ವಿಜಯೇಂದ್ರ ಅವರಿಗೆ ಅಭಿನಂದನೆಗಳು ಎಂದು ಕಾಂಗ್ರೆಸ್ ಎಕ್ಸ್ ನಲ್ಲಿ ಕಾಲೇಳೆದಿದೆ.
|
5 |
+
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಸೇರಿದಂತೆ ಪ್ರಮುಖ ನಾಯಕರು ವಿಜಯೇಂದ್ರ ಅವರನ್ನು ದೂರವಾಣಿ ಮೂಲಕ ಅಭಿನಂದಿಸಿದರು.
|
6 |
+
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (11-11-2023)
|
7 |
+
ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ನಾಯಕ ಎಸ್ ಎಂ ಕೃಷ್ಣ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಕೂಡ ಅವರಿಗೆ ದೂರವಾಣಿ ಮೂಲಕ ಶುಭಾಶಯಗಳನ್ನು ತಿಳಿಸಿದ್ದಾರೆ ಎಂದು ಅವರ ಕಚೇರಿ ತಿಳಿಸಿದೆ.
|
8 |
+
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಿಂದ ಮೊದಲ ಬಾರಿಗೆ ಶಾಸಕರಾಗಿರುವ 47 ವರ್ಷ ವಯಸ್ಸಿನವರು, ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮೂರು ವರ್ಷಗಳ ಅವಯನ್ನು ಪೂರ್ಣಗೊಳಿಸಿದ ದಕ್ಷಿಣ ಕನ್ನಡದಿಂದ ಮೂರು ಬಾರಿ ಲೋಕಸಭಾ ಸದಸ್ಯರಾಗಿದ್ದ ನಳಿನ್ ಕುಮಾರ್ ಕಟೀಲ್ ಅವರ ಸ್ಥಾನಕ್ಕೆ ಬಂದಿದ್ದಾರೆ. ಮತ್ತು ಮುಂಬರುವ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಕಳೆದ ವರ್ಷ ವಿಸ್ತರಣೆಯನ್ನು ನೀಡಲಾಗಿತ್ತು.
|
9 |
+
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಟೀಲ್, ವಿಜಯೇಂದ್ರ ಅವರ�� ಸಾಮಾನ್ಯ ಕಾರ್ಯಕರ್ತರಿಂದ ಪಕ್ಷದಲ್ಲಿ ಬೆಳೆದ ಸಂಘಟನಾ ಪುರುಷ ಎಂದು ಕರೆದರು ಮತ್ತು ಅವರ ನೇಮಕವು ಪಕ್ಷಕ್ಕೆ ಹೊಸ ಚೈತನ್ಯವನ್ನು ತಂದಿದೆ.ವಿಜಯೇಂದ್ರ ನೇತೃತ್ವದಲ್ಲಿ ಬೂತ್ ಮಟ್ಟದಿಂದ ಪಕ್ಷವನ್ನು ಒಗ್ಗಟ್ಟಿನಿಂದ ಬಲಪಡಿಸಲಾಗುವುದು ಮತ್ತು ಕಾಂಗ್ರೆಸ್ ದುರಾಡಳಿತದ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ ಎಂದರು.
|
eesanje/url_46_315_6.txt
ADDED
@@ -0,0 +1,11 @@
|
|
|
|
|
|
|
|
|
|
|
|
|
|
|
|
|
|
|
|
|
|
|
|
|
1 |
+
ಡಿಕೆಶಿ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ : ಸಿಬಿಐ ಮೇಲ್ಮನವಿ ಅರ್ಜಿ ಹೈಕೋರ್ಟ್ ಅಂಗಳಕ್ಕೆ
|
2 |
+
ನವದೆಹಲಿ,ನ.10- ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧದ ಆದಾಯ ಮೀರಿ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಹೈಕೋರ್ಟ್‍ನಲ್ಲಿ ಇತ್ಯರ್ಥಪಡಿಸಿಕೊಳ್ಳಲು ಸುಪ್ರೀಂಕೋರ್ಟ್ ಸೂಚಿಸಿದೆ.
|
3 |
+
ಪ್ರಕರಣದ ಚಾರಣೆಯನ್ನು ನ್ಯಾ. ಬೇಲಾ ಎಂ ತ್ರಿವೇದಿ ನೇತೃತ್ವದ ದ್ವಿಸದಸ್ಯ ಪೀಠ ನಡೆಸಿತು. ಡಿ.ಕೆ.ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ಹೈಕೋರ್ಟ್ ವಿಭಾಗೀಯ ಪೀಠ ತಡೆ ನೀಡಿತ್ತು. ಇದನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಹೈಕೋರ್ಟ್‍ನಲ್ಲಿ ಇತ್ಯರ್ಥಪಡಿಸಿಕೊಳ್ಳಲು ಸಿಬಿಐಗೆ ಸೂಚನೆ ನೀಡಿದೆ.
|
4 |
+
ಡಿ.ಕೆ.ಶಿವಕುಮಾರ್ ಅವರ ವಿಚಾರಣೆ ನಡೆಸದೆ ಹೈಕೋರ್ಟ್ ತನಿಖೆಗೆ ತಡೆಯಾಜ್ಞೆ ನೀಡಿದೆ ಎಂದು ಈ ಹಿಂದೆ ಸಿಬಿಐ ನ್ಯಾಯಾಲಯಕ್ಕೆ ತಿಳಿಸಿತ್ತು. ಸುಳ್ಳಿನ ಆಧಾರದಲ್ಲಿ ಸಂಪೂರ್ಣ ತನಿಖೆಗೆ ತಡೆ ನೀಡಲಾಗಿದೆ ಎಂದು ಸಿಬಿಐ ಪರ ವಾದ ಮಂಡಿಸಿದ ಎಎಸ್‍ಜಿ ಎಸ್.ರಾಜು ನ್ಯಾಯಾಲಯಕ್ಕೆ ತಿಳಿಸಿದ್ದರು. ಹಿರಿಯ ವಕೀಲ ಮುಕುಲ್ ರೋಹಟಗಿ ಅವರು, ಡಿ.ಕೆ. ಶಿವಕುಮಾರ್ ಪರ ವಾದ ಮಂಡಿಸಿದ್ದರು. ಈ ಪ್ರಕರಣ ಸಂಬಂಧ ಜೂನ್‍ನಲ್ಲಿ ಹೈಕೋರ್ಟ್ ಸಿಬಿಐ ತನಿಖೆಗೆ ತಡೆ ನೀಡಿತ್ತು. ನಂತರ ಸಿಬಿಐ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.
|
5 |
+
ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದ ತನಿಖೆಗೆ ತಡೆ ನೀಡಿರುವ ಕರ್ನಾಟಕ ಹೈಕೋರ್ಟ್‍ನ ಮಧ್ಯಂತರ ಆದೇಶವನ್ನು ತೆರವು ಮಾಡಲು ಅ.17ರಂದು ನ್ಯಾಯಾಲಯ ನಿರಾಕರಿಸಿತ್ತು.ಏಪ್ರಿಲ್ 2013ರಿಂದ ಏಪ್ರಿಲ್ 2018ರ ನಡುವೆ ಡಿ.ಕೆ.ಶಿವಕುಮಾರ್ ಮತ್ತು ಅವರ ಕುಟುಂಬ ಸದಸ್ಯರಿಂದ ಸ್ವಾೀನಕ್ಕೆ ಪಡೆಯಲಾದ ಒಟ್ಟು ಮೌಲ್ಯವು 128 ಕೋಟಿಯಿಂದ 162 ಕೋಟಿಗೆ ಏರಿಕೆಯಾಗಿದೆ.
|
6 |
+
ಇದು ಸುಮಾರು ಶೇ. 45 ಅಥವಾ ರೂ. 75 ಕೋಟಿಯಷ್ಟು ಏರಿಕೆಯಾಗಿದೆ ಎಂದು ಸಿಬಿಐ ತನ್ನ ಅರ್ಜಿಯಲ್ಲಿ ಆರೋಪಿಸಿತ್ತು. ಈಗಲ್ಟನ್ ರೆಸಾರ್ಟ್‍ನಲ್ಲಿ ನಡೆದ ದಾಳಿಯನ್ನು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಸಿಬಿಐ ತನಿಖೆಗೆ ನೀಡಿತ್ತು. ಸರ್ಕಾರದ ನಡೆಯನ್ನು ಪ್ರಶ್ನಿಸಿ ಡಿ.ಕೆ.ಶಿವಕುಮಾರ್ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು.
|
7 |
+
ಒತ್ತಡಕ್ಕೆ ಮಣಿದು ರಾಜಕೀಯ ನಿವೃತ್ತಿ ಘೋಷಿಸಿಲ್ಲ : ಡಿ.ವಿ.ಸದಾನಂದಗೌಡ
|
8 |
+
ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ ಅರ್ಜಿ ವಜಾ ಮಾಡಿತ್ತು. ಇದನ್ನು ಪ್ರಶ್ನೆ ಮಾಡಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ವಿಭಾಗೀಯ ಪೀಠ ತನಿಖೆಗೆ ತಡೆ ನೀಡಿತ್ತು.ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಸಿಬಿಐ ತನಿಖೆ ತಡೆ ಕೋರಿ ಡಿ.ಕೆ ಶಿವಕುಮಾರ್ ಮತ���ತೊಂದು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು. ಈ ಮೊದಲು ತಡೆ ನೀಡಿದ್ದ ಕೋರ್ಟ್ ಇತ್ತಿಚೀಗೆ ತಡೆ ರದ್ದು ಮಾಡಿ ಸಿಬಿಐ ತನಿಖೆಗೆ ಆದೇಶ ನೀಡಿತ್ತು.
|
9 |
+
ಏನಿದು ಪ್ರಕರಣ?2017ರಲ್ಲಿ ಡಿ.ಕೆ ಶಿವಕುಮಾರ್ ವಾಸ್ತವ್ಯವಿದ್ದ ಈಗಲ್ಟನ್ ರೆಸಾರ್ಟ್ ಮತ್ತು ಅವರ ಸಹಚರರ ಮೇಲೆ ದಾಳಿ ಮೇಲೆ ದಾಳಿ ಮಾಡಿದ್ದ ಆದಾಯ ತೆರಿಗೆ ಇಲಾಖೆ ಸುಮಾರು 8.59 ಕೋಟಿ ಹಣ ವಶಪಡಿಸಿಕೊಂಡಿತ್ತು. ಲೆಕ್ಕಕ್ಕೆ ಸಿಗದ ಈ ಹಣವನ್ನು ಡಿ.ಕೆ ಶಿವಕುಮಾರ್ ತಮ್ಮ ಸಹಚರರ ಬಳಿ ಇರಿಸಿದ್ದರು ಎಂದು ಆರೋಪಿಸಿತ್ತು.
|
10 |
+
ಇದೇ ಪ್ರಕರಣದಲ್ಲಿ ಇಡಿ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿತ್ತು. ಐಟಿ ಇಲಾಖೆ ನೀಡಿದ ಮಾಹಿತಿ ಆಧರಿಸಿ ಜಾರಿ ನಿರ್ದೇಶನಾಲಯ ವಿರುದ್ಧ ತನಿಖೆ ಆರಂಭಿಸಿತ್ತು. ಇಡಿ ತನಿಖೆಯನ್ನು ಆಧರಿಸಿ ಡಿಕೆಶಿ ವಿರುದ್ಧ ಎಫ್‍ಐಆರ್ ದಾಖಲಿಸಲು ಸಿಬಿಐ ರಾಜ್ಯ ಸರ್ಕಾರದಿಂದ ಅನುಮತಿ ಕೋರಿತ್ತು.
|
11 |
+
ಸರ್ಕಾರ 2019ರ ಸೆ.25ರಂದು ಅನುಮತಿ ನೀಡಿದ ಬೆನ್ನಲ್ಲೇ 2020ರ ಅಕ್ಟೋಬರ್ 3 ರಂದು ಡಿಕೆ ಶಿವಕುಮಾರ್ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು. 2013ರಿಂದ 2018ರ ವರೆಗಿನ ಆದಾಯಗಳಿಕೆ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ.
|
eesanje/url_46_315_7.txt
ADDED
@@ -0,0 +1,6 @@
|
|
|
|
|
|
|
|
|
|
|
|
|
|
|
1 |
+
ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ, ಮೂವರ ಸೆರೆ
|
2 |
+
ಮದ್ದೂರು,ನ.10- ಮೈಸೂರಿನಲ್ಲಿ ನಡೆದ ಯುವ ದಸರಾ ವೇಳೆ ಅಪ್ರಾಪ್ತ ಯುವತಿಯನ್ನು ಪರಿಚಯಿಸಿಕೊಂಡು, ಪುಸಲಾಯಿಸಿ ಲಾಡ್ಜ್‍ಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ವೆಸಗಿದ್ದ ಇಬ್ಬರು ಅಪ್ರಾಪ್ತ ಯುವಕರು ಸೇರಿದಂತೆ ಮೂವರನ್ನು ಮದ್ದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
|
3 |
+
ಇಬ್ಬರು ಅಪ್ರಾಪ್ತ ಯುವಕರು ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಮತ್ತೊಬ್ಬ ಆರೋಪಿ 19 ವರ್ಷದ ಯುವಕನಾಗಿದ್ದು, ಈತ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಊರಿನಲ್ಲಿದ್ದನು. ಇವರೆಲ್ಲರೂ ಸಂತ್ರಸ್ತೆಯ ಅಕ್ಕಪಕ್ಕದ ಗ್ರಾಮದವರು.ಮೈಸೂರಿನಲ್ಲಿ ಆಯೋಜಿಸಿದ್ದ ಯುವ ದಸರಾ ಕಾರ್ಯಕ್ರಮ ವೀಕ್ಷಿಸಲು ಹೋಗಿದ್ದ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ತಾಲ್ಲೂಕಿನ ಅಪ್ರಾಪ್ತೆಯನ್ನು ಯುವಕ ಪರಿಚಯಿಸಿಕೊಂಡು ಪ್ರೀತಿಸುವುದಾಗಿ ಪೀಡಿಸಿದ್ದಾನೆ.
|
4 |
+
ಒತ್ತಡಕ್ಕೆ ಮಣಿದು ರಾಜಕೀಯ ನಿವೃತ್ತಿ ಘೋಷಿಸಿಲ್ಲ : ಡಿ.ವಿ.ಸದಾನಂದಗೌಡ
|
5 |
+
ನಂತರ ಆಕೆಯನ್ನು ಪುಸಲಾಯಿಸಿ ಇಲ್ಲಿನ ಲಾಡ್ಜ್‍ವೊಂದಕ್ಕೆ ಕರೆದೊಯ್ದು ನಂತರ ಇನ್ನಿಬ್ಬರು ಅಪ್ರಾಪ್ತ ಯುವಕರನ್ನು ಕರೆಸಿಕೊಂಡು ಸಾಮೂಹಿಕವಾಗಿ ಆಕೆ ಮೇಲೆ ಅತ್ಯಾಚಾರವೆಸಗಿದ್ದಾರೆ. ಅಲ್ಲದೆ ಅತ್ಯಾಚಾರದ ವಿಡಿಯೋ ಮಾಡಿಕೊಂಡಿದ್ದ ಕಿರಾತಕರು ಆ ವಿಡಿಯೋವನ್ನು ಆಕೆಗೆ ತೋರಿಸಿ, ನಾವು ಕರೆದಾಗ ಬರಬೇಕೆಂದು ಬೆದರಿಕೆ ಹಾಕಿದ್ದಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ಆ ವಿಡಿಯೋವನ್ನು ವೈರಲ್ ಮಾಡುವುದಾಗಿ ಹೆದರಿಸಿದ್ದಾರೆ.
|
6 |
+
ಅಪ್ರಾಪ್ತೆಯ ಮೊಬೈಲ್‍ಗೂ ಸಹ ವಿಡಿಯೋ ಕಳಿಸಿ ಬೆದರಿಕೆ ಹಾಕಿದ್ದರು. ಇದರಿಂದ ಗಾಬರಿಯಾದ ಸಂತ್ರಸ್ತೆ ತನ್ನ ಪೋಷಕರಿಗೆ ನಡೆದ ವಿಷಯವನ್ನು ತಿಳಿಸಿದ್ದಾಳೆ. ತಕ್ಷಣ ಸಂತ್ರಸ್ತೆಯ ತಂದೆ ಇಲ್ಲಿನ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತಾಲ್ಲೂಕಿನ ಮೂವರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
|
eesanje/url_46_315_8.txt
ADDED
@@ -0,0 +1,8 @@
|
|
|
|
|
|
|
|
|
|
|
|
|
|
|
|
|
|
|
1 |
+
ಸಿಸಿಬಿ ಪೊಲೀಸರ ಕಾರ್ಯಾಚರಣೆ : 10 ಕೋಟಿ ಮೌಲ್ಯದ ಡ್ರಗ್ಸ್ ವಶ
|
2 |
+
ಬೆಂಗಳೂರು,ನ.10- ನಗರದ ಹೊರವಲ ಯದ ಮನೆಯೊಂದರಲ್ಲಿ ಅಡುಗೆ ಮಾಡುವ ಪ್ರೆಜರ್‍ಕುಕ್ಕರ್ ಬಳಸಿ ಸಿಂಥೆಟಿಕ್ ಡ್ರಗ್ಸ್ ತಯಾರು ಮಾಡಿ ದೇಶ-ವಿದೇಶಗಳಿಗೆ ಸರಬರಾಜು ಮಾಡಿ ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯನ್ನು ಸಿಸಿಬಿ ಪೊಲೀಸರು ಬಂಧಿಸಿ 10 ಕೋಟಿ ಮೌಲ್ಯದ ಎಂಡಿಎಂಎ ಮಾದಕವಸ್ತು ಹಾಗೂ ತಯಾರಿಕೆಗೆ ಬಳಸುತ್ತಿದ್ದ ರಾಸಾಯನಿಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
|
3 |
+
ನೈಜೀರಿಯ ದೇಶದ ಪ್ರಜೆ ಬೆಂಜಮಿನ್(40) ಬಂಧಿತ ಡ್ರಗ್ ಪೆಡ್ಲರ್. ಈತ ಬಿಸ್ನೆಸ್ ವೀಸಾದಡಿ ಭಾರತಕ್ಕೆ ಬಂದಿದ್ದನು. ವೀಸಾ ಅವಧಿ ಮುಗಿದಿದ್ದರೂ ಅನಧಿಕೃತವಾಗಿ ನಗರದಲ್ಲಿ ನೆಲೆಸಿದ್ದು,ಬಟ್ಟೆ ವ್ಯಾಪಾರಿ ಎಂದು ಮನೆ ಬಾಡಿಗೆ ಪಡೆದುಕೊಂಡಿದ್ದನು.
|
4 |
+
ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿದೇಶಿ ಮೂಲದ ವ್ಯಕ್ತಿಯೊಬ್ಬ ನಿಷೇಧಿತ ಮಾದಕವಸ್ತು ಮನೋಪರಿಣಾಮಕ ವಸ್ತುವಾದ ಎಂಡಿಎಂಎ ಕ್ರಿಸ್ಟಲ್ ತಯಾರು ಮಾಡಿ ನಗರ ಸೇರಿದಂತೆ ರಾಜ್ಯ ಹಾಗೂ ದೇಶವಿದೇಶಗಳಲ್ಲಿ ಇರುವ ಗಿರಾಕಿಗಳಿಗೆ ಮತ್ತು ಸಬ್ ಪೆಡ್ಲರ್‍ಗಳಿಗೆ ಸರಬರಾಜು ಹಾಗೂ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಲಭಿಸಿದೆ.
|
5 |
+
ರಾಜ್ಯದ 1673 ಸಣ್ಣ ಕೆರೆಗಳಲ್ಲಿ ಭರ್ತಿಯಾಗಿದ್ದು ಕೇವಲ 428 ಮಾತ್ರ
|
6 |
+
ತಕ್ಷಣ ಖಚಿತ ಮಾಹಿತಿ ಮೇರೆಗೆ ಕೇಂದ್ರ ಅಪರಾಧ ವಿಭಾಗದ ಮಾದಕದ್ರವ್ಯ ನಿಗ್ರಹದ ದಳದ ಅಧಿಕಾರಿಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿ ವಿದೇಶಿ ಪ್ರಜೆಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ವಿಚಾರಣೆಗೊಳಪಡಿಸಿ ಆತ ನೀಡಿದ ಮಾಹಿತಿ ಮೇರೆಗೆ ನಗರದ ಹೊರವಲಯದ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತನ್ನ ಮನೆಯಲ್ಲಿ ಕುಕ್ಕರ್ ಬಳಸಿ ಸಿಂಥೆಟಿಕ್ ಡ್ರಗ್ಸ್ ತಯಾರು ಮಾಡಿ ಸಂಗ್ರಹಿಸಿಟ್ಟುಕೊಂಡಿದ್ದ 10 ಕೋಟಿ ರೂ. ಮೌಲ್ಯದ 5 ಕೆಜಿ ಎಂಡಿಎಂಎ ಮಾದಕವಸ್ತು, ಎಂಡಿಎಂಎ ತಯಾರು ಮಾಡಲು ಬೇಕಾದ ಕಚ್ಚಾ ಪದಾರ್ಥಗಳಾದ ಎಂಎಸ್‍ಎಂ 12.450 ಕೆಜಿ, ಸೋಡಿಯಂ ಹೈಡ್ರಾಕ್ಸೈಡ್ ಕ್ರಿಸ್ಟಲ್ 5 ಕೆಜಿ, ಹೈಡ್ರೋಕ್ಲೋರಿಕ್‍ಆ್ಯಸಿಡ್ 5 ಲೀಟರ್, ಅಸೆಟ್‍ಟೊನ್ 2.5 ಲೀಟರ್ ಹಾಗೂ 5 ಲೀಟರ್ ಕುಕ್ಕರ್, ಸ್ಟವ್, ಗ್ಯಾಸ್ ಸಿಲಿಂಡರ್ ಮತ್ತು ಕೃತ್ಯಕ್ಕೆ ಬಳಸುತ್ತಿದ್ದ ಮೊಬೈಲ್, 2 ಡಿಜಿಟಲ್ ತೂಕದ ಯಂತ್ರ, ಒಂದು ಎನ್‍ಟ್ರಾಕ್ ದ್ವಿಚಕ್ರ ವಾಹನ ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
|
7 |
+
ಆರೋಪಿಯು ಡ್ರಗ್ಸ್ ತಯಾರಿಕೆಗೆ ಬಳಸುವ ಕಚ್ಚಾ ಸಾಮಾಗ್ರಿಗಳನ್ನು ದೆಹಲಿ ಹಾಗೂ ಇನ್ನಿತರೆ ಕಡೆಗಳಿಂದ ತರಿಸಿಕೊಳ್ಳುತ್ತಿದುದ್ದು ವಿಚಾರಣೆಯಿಂದ ಗೊತ್ತಾಗಿದೆ. ಆರೋಪಿ ವಿರುದ್ಧ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಎನ್‍ಡಿಪಿಎಸ್ ಕಾಯ್ದೆ ಹಾಗೂ 14 ಫಾರಿರ್ನರ್ಸ್ ಆಕ್ಟ್‍ನಡಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ನ.20ರವರೆಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದ್ದು, ವಿಚಾರಣ�� ಮುಂದುವರೆದಿದೆ.
|
8 |
+
ಪಶ್ಚಿಮ ವಿಭಾಗದ ಅಪರ ಪೊಲೀಸ್ ಆಯುಕ್ತರಾದ ಸತೀಶ್‍ಕುಮಾರ್, ಉಪಪೊಲೀಸ್ ಆಯುಕ್ತರು ಅಪರಾಧ-2 ಶ್ರೀನಿವಾಸ್ ಗೌಡ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಮಾದಕದ್ರವ್ಯ ನಿಗ್ರಹದಳದ ಅಧಿಕಾರಿ ಹಾಗೂ ಸಿಬ್ಬಂದಿ ತಂಡವು ಕಾರ್ಯಾಚರಣೆ ಕೈಗೊಂಡಿರುತ್ತದೆ.
|
eesanje/url_46_315_9.txt
ADDED
@@ -0,0 +1,6 @@
|
|
|
|
|
|
|
|
|
|
|
|
|
|
|
1 |
+
ಶಾಸಕ ಬೇಳೂರು ಗೋಪಾಲಕೃಷ್ಣ ವಿರುದ್ಧ ಡಿಸಿಎಂಗೆ ದೂರು
|
2 |
+
ಬೆಂಗಳೂರು,ನ.10- ಶಿವಮೊಗ್ಗದ ಜಿಲ್ಲಾ ಉಸ್ತುವಾರಿ ಸಚಿವರು ಯಾರಿದ್ದಾರೋ ಗೊತ್ತಿಲ್ಲ ಎಂದು ವಿವಾದಿತ ಹೇಳಿಕೆ ನೀಡಿ, ಗೊಂದಲ ಮೂಡಿಸುತ್ತಿರುವ ಶಾಸಕ ಬೇಳೂರು ಗೋಪಾಲಕೃಷ್ಣ ವಿರುದ್ಧ ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ದೂರು ನೀಡಿದ್ದಾರೆ.
|
3 |
+
ನಂತರ ಸುದ್ದಿಗಾರರೊಂದಿಗೆ ಮಾತನಾಡಿರುವ ಮಧು ಬಂಗಾರಪ್ಪ, ಅಧ್ಯಕ್ಷರ ಬಳಿ ಏನು ಹೇಳಬೇಕೋ ಹೇಳಿದ್ದೇನೆ. ಬಹಿರಂಗವಾಗಿ ಮಾತನಾಡುವುದಿಲ್ಲ ಎಂದಿದ್ದಾರೆ. ಇದೆಲ್ಲ ಪಕ್ಷದ ಆಂತರಿಕ ವಿಚಾರ, ಏನೇ ಇದ್ದರೂ ಪಕ್ಷವೇ ನಿರ್ಣಯ ಕೈಗೊಳ್ಳುತ್ತದೆ, ನನಗೆ ಬೇರೆ ಕೆಲಸ ಕೊಟ್ಟಿದ್ದಾರೆ. ನಾನಾಗಲಿ ಬೇಳೂರಾಗಲಿ ಹುಷಾರಾಗಿ ಮಾತನಾಡುವುದು ಒಳ್ಳೆಯದು. ಬೇಳೂರು ಬಹಿರಂಗ ಪ್ರತಿಕ್ರಿಯೆ ನೀಡುವುದಿಲ್ಲ. ಎಲ್ಲಿ ಉತ್ತರ ಕೊಡಬೇಕೋ ಅಲ್ಲಿ ಕೊಡುತ್ತೇನೆ ಎಂದರು.
|
4 |
+
ಮತ್ತೊಬ್ಬ ಮೋಸ್ಟ್ ವಾಂಟೆಡ್ ಉಗ್ರನನ್ನ ಬೇಟೆಯಾಡಿದ ‘ಅಪರಿಚಿತ’ ಬಂಧೂಕುದಾರಿ
|
5 |
+
ಹಸ್ತದ ಆಶೀರ್ವಾದ, ಪಕ್ಷದ ಅಂಬ್ರೆಲ್ಲಾ ಅಡಿ ನಾವೆಲ್ಲ ಗೆದ್ದು ಬಂದಿದ್ದೇವೆ. ವೈಯಕ್ತಿಕವಾಗಿ ನಾವು ಯಾರೂ ಗೆದ್ದವರಲ್ಲ, ಹೀಗಾಗಿ ಹೇಗಿರಬೇಕು ಅನ್ನೋದು ಮುಖ್ಯವಾಗಿದೆ. ಇಲ್ಲಿ ವ್ಯಕ್ತಿಗಿಂತ ಪಕ್ಷ ಬಹಳ ಮುಖ್ಯ ಎಂದರು.ಅಧ್ಯಕ್ಷರು, ಮುಖ್ಯಮಂತ್ರಿಯವರು ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದಾರೆ. ಅವರ ಮುಂದೆ ನಾನು ಏನು ಹೇಳಬೇಕೋ ಅದನ್ನು ಹೇಳಿದ್ದೇನೆ.
|
6 |
+
ಮಾಧ್ಯಮದ ಮುಂದೆ ಉತ್ತರ ಕೊಡುವ ಅವಶ್ಯಕತೆ ಇಲ್ಲ. ಶಿವಮೊಗ್ಗದಲ್ಲಿ ಈಗಲೂ ಕಾಂಗ್ರೆಸ್ ಪರ ವಾತಾವರಣವಿದೆ. ಮಾಧ್ಯಮದಲ್ಲಿ ಬೇಳೂರುರನ್ನು ಹೆಚ್ಚಾಗಿ ತೋರಿಸಲಾಗುತ್ತದೆ, ಜನ ನೋಡುತ್ತಾರೆ. ಶಿವಮೊಗ್ಗದ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳಬೇಕಿಲ್ಲ. ನಾವು ಸರಿ ಮಾಡಿಕೊಳ್ತೇವೆ, ಪಕ್ಷ ಇದೆ. ಅಲ್ಲಿ ಉತ್ತರ ಕೊಟ್ಟುಕೊಳ್ತೇವೆ ಎಂದರು.
|
eesanje/url_46_316_1.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ರಾಜ್ಯದ 1673 ಸಣ್ಣ ಕೆರೆಗಳಲ್ಲಿ ಭರ್ತಿಯಾಗಿದ್ದು ಕೇವಲ 428 ಮಾತ್ರ
|
2 |
+
ಬೆಂಗಳೂರು,ನ.10-ರಾಜ್ಯದಲ್ಲಿ ಉಂಟಾಗಿರುವ ತೀವ್ರ ಬರ ಪರಿಸ್ಥಿತಿಯಿಂದಾಗಿ ರಾಜ್ಯದ 104 ಸಣ್ಣ ಕೆರೆಗಳಿಗೆ ನೀರಿಲ್ಲದೆ ಬತ್ತಿ ಹೋಗಿವೆ. ಅದರಲ್ಲೂ ಕೋಲಾರ ಜಿಲ್ಲೆಯ 31 ಹಾಗೂ ಬೀದರ್ ಜಿಲ್ಲೆಯ 33 ಕೆರೆಗಳಿಗೆ ನೀರಿಲ್ಲ. ರಾಜ್ಯದಲ್ಲಿ ಈ ಎರಡು ಜಿಲ್ಲೆಯಲ್ಲಿ ಹೆಚ್ಚು ಕೆರೆಗಳು ನೀರಿಲ್ಲದೆ ಒಣಗಿವೆ.
|
3 |
+
ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ನ.4ರವರೆಗೆ ದಕ್ಷಿಣ ಕರ್ನಾಟಕ ಭಾಗದಲ್ಲಿ 48 ಕೆರೆಗಳಿಗೆ ನೀರು ಬಂದಿಲ್ಲ. ಅದೇ ರೀತಿ ಉತ್ತರ ಕರ್ನಾಟಕದ 56 ಕೆರೆಗಳಿಗೆ ನೀರೇ ಬಂದಿಲ್ಲ. ಹೀಗಾಗಿ ರಾಜ್ಯದಲ್ಲಿ ಒಟ್ಟು 104 ಕೆರೆಗಳಿಗೆ ಮುಂಗಾರು ಹಂಗಾಮಿನಲ್ಲಿ ನೀರೇ ಬಂದಿಲ್ಲ.
|
4 |
+
ರಾಜ್ಯದಲ್ಲಿ 3673 ಕೆರೆಗಳಿದ್ದು, 428 ಕೆರೆಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿವೆ. ಅದರಲ್ಲೂ ಚಿಕ್ಕಬಳ್ಳಾಪುರ, ತುಮಕೂರು, ವಿಜಯನಗರ, ಕೊಪ್ಪಳ, ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ಕೆರೆಗಳಲ್ಲಿ ಹೆಚ್ಚು ನೀರು ಸಂಗ್ರಹವಾಗಿದೆ.
|
5 |
+
ಬೆಂಗಳೂರಿನಲ್ಲಿ 3 ದಿನ ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ
|
6 |
+
1297 ಕೆರೆಗಳಲ್ಲಿ ಶೇ.30ರಷ್ಟು ನೀರು ಬಂದಿದ್ದರೆ 991 ಕೆರೆಗಳಲ್ಲಿ ಶೇ.50ರಷ್ಟು ನೀರು ಸಂಗ್ರಹವಾಗಿದೆ. 853 ಕೆರೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ನೀರು ಸಂಗ್ರಹವಾಗಿದೆ. ದಕ್ಷಿಣ ಕರ್ನಾಟಕದ 165 ಕೆರೆಗಳು ಪೂರ್ಣವಾಗಿ ತುಂಬಿದ್ದರೆ, ಉತ್ತರ ಕರ್ನಾಟಕದ 263 ಕೆರೆಗಳು ತುಂಬಿವೆ. ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ಕೆಲವು ಕೆರೆಗಳಿಗೆ ಅಲ್ಪಪ್ರಮಾಣದ ನೀರು ಕೂಡ ಬಂದಿದೆ.
|
7 |
+
ಮುಂಗಾರು ಮಳೆಯಂತೆ ಹಿಂಗಾರು ಕೂಡ ದುರ್ಬಲಗೊಂಡಿದ್ದು, ರಾಜ್ಯದಲ್ಲಿ ಬರಪರಿಸ್ಥಿತಿ ಮುಂದುವರೆದಿದೆ. ಹೀಗಾಗಿ ಸಣ್ಣಪುಟ್ಟ ಕೆರೆಗಳು ಕೂಡ ಭರ್ತಿಯಾಗುವ ಸಾಧ್ಯತೆ ವಿರಳ. ಮುಂಗಾರು ಕೈಕೊಟ್ಟ ಹಿನ್ನಲೆಯಲ್ಲಿ ಪ್ರಮುಖ ಜಲಾಶಯಗಳು ಭರ್ತಿಯಾಗಿಲಿಲ್ಲ. ಹೀಗಾಗಿ ನೀರಾವರಿ ಬೆಳೆಗಳಿಗೆ ತೊಂದರೆ ಉಂಟಾಗಿದೆ.
|
eesanje/url_46_316_10.txt
ADDED
@@ -0,0 +1,10 @@
|
|
|
|
|
|
|
|
|
|
|
|
|
|
|
|
|
|
|
|
|
|
|
1 |
+
ಜನವರಿ 2ನೇ ವಾರದಲ್ಲಿ ಲೋಕಸಭೆ ಚುನಾವಣೆಗೆ ಕೈ ಅಭ್ಯರ್ಥಿಗಳ ಘೋಷಣೆ
|
2 |
+
ಬೆಂಗಳೂರು, ನ.8- ಲೋಕಸಭೆ ಚುನಾವಣೆಗೆ ಮುಂದಿನ ವರ್ಷದ ಜನವರಿ 2ನೇ ವಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆಯಾಗಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲಿಂ ಅಹ್ಮದ್ ತಿಳಿಸಿದ್ದಾರೆ.ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲೆಗಳಿಗೆ ಸಚಿವರುಗಳನ್ನು ನಿಯೋಜನೆ ಮಾಡಲಾಗಿದ್ದು, ಶೇ.75ರಷ್ಟು ಸಚಿವರು ಜಿಲ್ಲೆಗಳಲ್ಲಿ ಸಭೆ ಮಾಡಿದ್ದಾರೆ.
|
3 |
+
ಮುಂದಿನ ಒಂದು ವಾರಗಳಲ್ಲಿ ಮಂತ್ರಿಗಳು ಹಾಗೂ ವೀಕ್ಷಕರುಗಳು ಲೋಕಸಭೆ ಚುನಾವಣೆಯ ಸಂಭಾವ್ಯ ಅಭ್ಯರ್ಥಿ ಕುರಿತು ವರದಿ ಸಲ್ಲಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷರು ಸೂಚನೆ ನೀಡಿದ್ದಾರೆ. ನಂತರ ಕೆಪಿಸಿಸಿ ಅಧ್ಯಕ್ಷರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಉಸ್ತುವಾರಿ ಸಚಿವರಾದ ರಣದೀಪ್ ಸಿಂಗ್ ಸುರ್ಜೆವಾಲ ಅವರು ಚರ್ಚೆ ಮಾಡಿ ನಂತರ ನಮ್ಮ ಹೈಕಮಾಂಡ್ ಗೆ ವರದಿ ಸಲ್ಲಿಸಲಿದ್ದಾರೆ ಎಂದರು.
|
4 |
+
ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ನಾವು ಲೋಕಸಭೆ ಚುನಾವಣೆ ತಯಾರಿ ಮಾಡಿದ್ದೇವೆ. ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ನಮ್ಮ ನಾಲ್ಕು ಗ್ಯಾರಂಟಿ ಯೋಜನೆಗಳು ಜಾರಿ ಆಗಿದ್ದು, ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ನಮ್ಮ ಸರ್ಕಾರ ರಾಜ್ಯವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿ ರೂಪಿಸುತ್ತಿದೆ. ಹೀಗಾಗಿ ರಾಜ್ಯದ ಜನ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡುವ ವಿಶ್ವಾಸವಿದೆ. ನಮ್ಮ ಪಕ್ಷ ಕನಿಷ್ಠ 20 ಸೀಟುಗಳನ್ನು ರಾಜ್ಯದಲ್ಲಿ ಗೆದ್ದು, ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದರು.
|
5 |
+
ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ವಹಣೆಗೆ 17,900 ಕೋಟಿ ಹಣವನ್ನು ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದರೂ ಇದುವರೆಗೂ ಕೇಂದ್ರದಿಂದ ಸ್ಪಂದನೆ ಸಿಗದಿರುವುದು ದುರದೈವ. ರಾಜ್ಯದಿಂದ 25 ಬಿಜೆಪಿ ಸಂಸದರು ಆಯ್ಕೆಯಾಗಿದ್ದರೂ ಹಾಗೂ 5 ಜನ ಕೇಂದ್ರ ಸಚಿವರಿದ್ದು ಇಲ್ಲಿಯವರೆಗೂ ಹಣ ಬಿಡುಗಡೆ ಮಾಡಿಲ್ಲ. ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರು ರಾಜ್ಯದವರೇ ಆಗಿದ್ದರೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ ಎಂಬ ಕಾರಣಕ್ಕೆ ಮಲತಾಯಿ ಧೋರಣೆ ತೋರುತ್ತಿದೆ. ಈ ವಿಚಾರದಲ್ಲಿ ರಾಜಕಾರಣ ಮಾಡದೇ ಪರಿಹಾರ ಬಿಡುಗಡೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
|
6 |
+
ನವೆಂಬರ್ 9ರಂದು ಅರಮನೆ ಮೈದಾನದಲ್ಲಿ ಸೇವಾದಳದ ಶತಮಾನೋತ್ಸವ ಹಾಗೂ ರಾಜ್ಯ ಮಟ್ಟದ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ರಾಷ್ಟ್ರೀಯ ಸೇವಾದಳದ ಅಧ್ಯಕ್ಷರಾದ ಲಾಲ್ ಜಿ ಅವರು ಧ್ವಜಾರೋಹಣ ಮಾಡಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ವಹಿಸಿಕೊಳ್ಳಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಸಚಿವರುಗಳು ಪಕ್���ದ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ ಎಂದರು.
|
7 |
+
ಮದುವೆ ದಿನವೇ ಪ್ರೇಯಸಿಗೆ ಕೈಕೊಟ್ಟು ಪ್ರಿಯಕರ ಪರಾರಿ
|
8 |
+
ಇದೇ ತಿಂಗಳ 28ರಂದು ಸೇವಾದಳ ನೂರು ವರ್ಷಗಳನ್ನು ಪೂರೈಸಲಿದ್ದು, ಈ ಹಿನ್ನೆಲೆಯಲ್ಲಿ ದೇಶದ ಎಲ್ಲಾ ರಾಜ್ಯಗಳಲ್ಲೂ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಆಮೂಲಕ ಸೇವಾದಳದ ಇತಿಹಾಸದ ಬಗ್ಗೆ ದೇಶಕ್ಕೆ ಸಂದೇಶ ರವಾನಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಸೇವಾದಳದ 3 ಸಾವಿರ ಪ್ರತಿನಿಗಳು ಭಾಗವಹಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಸೇವಾದಳ ಯಾವ ರೀತಿ ಕೆಲಸ ಮಾಡಬೇಕು, ಲೋಕಸಭೆ ಚುನಾವಣೆ ಹಾಗೂ ಪಕ್ಷ ಸಂಘಟನೆ ಮಾಡಬೇಕು ಎಂದು ಈ ಕಾರ್ಯಕ್ರಮದಲ್ಲಿ ಚರ್ಚೆಯಾಗಲಿದೆ.
|
9 |
+
ಸೇವಾದಳದ ಅಧ್ಯಕ್ಷರಾದ ರಾಮಚಂದ್ರಪ್ಪ ಮಾತನಾಡಿ, 1923ರಲ್ಲಿ ಸೇವಾದಳ ಸ್ಥಾಪನೆಯಾಗಿದ್ದು, ಹರ್ಡಿಕರ್ ಅವರು ಜೈಲಿನಲ್ಲಿ ಈ ಸಂಘಟನೆ ಆರಂಭಿಸಿದರು. ಆರಂಭದಲ್ಲಿ ಹಿಂದುಸ್ಥಾನಿ ಸೇವಾದಳ ಎಂದು ಸ್ಥಾಪನೆಯಾಗಿತ್ತು. ನಂತರ 1930-31ರಲ್ಲಿ ಗಾಂಜಿ, ನೆಹರೂ ಸೇರಿದಂತೆ ಅನೇಕ ನಾಯಕರು ಸೇವಾದಳವನ್ನು ಕಾಂಗ್ರೆಸ್ ಗೆ ವಿಲೀನ ಮಾಡುತ್ತಾರೆ. ಅಲ್ಲಿಂದ ಇಲ್ಲಿಯವರೆಗೂ ಸೇವಾದಳ ಕಾಂಗ್ರೆಸ್ ವಿಭಾಗವಾಗಿ ಸಂಘಟನೆ ಮಾಡಿಕೊಂಡು ಬಂದಿದೆ ಎಂದರು.
|
10 |
+
ಬ್ರಿಟೀಷರ ಹಿಂಸೆ ತಾಳಲಾರದೆ ಹುಟ್ಟುಕೊಂಡ ಸಂಘಟನೆ ಇದಾಗಿದೆ. ಸ್ವಾತಂತ್ರ್ಯ ಪೂರ್ವದಿಂದ ಇಲ್ಲಿಯವರೆಗೂ ಸೇವಾದಳ ಬೆಳೆದುಕೊಂಡು ಬಂದಿದೆ. ನಾನು ಇದರ ಅಧ್ಯಕ್ಷನಾಗಿ 2 ವರ್ಷಗಳಾಗಿದ್ದು, ಈ ಅವಯಲ್ಲಿ ರಾಜ್ಯಮಟ್ಟದ ಜಿಲ್ಲಾಮಟ್ಟದ ಪದಾಕಾರಿಗಳ ನೇಮಕ ಮಾಡಿ ಈ ಕಾರ್ಯಕ್ರಮವನ್ನು ದೊಡ್ಡ ಮಟ್ಟದಲ್ಲಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
|
eesanje/url_46_316_11.txt
ADDED
@@ -0,0 +1,9 @@
|
|
|
|
|
|
|
|
|
|
|
|
|
|
|
|
|
|
|
|
|
1 |
+
ಜೆಡಿಎಸ್ ಬಿಟ್ಟು ಹೋಗುವವ ಶಾಸಕರು ಯಾರೂ ಇಲ್ಲ : ಹೆಚ್ಡಿಕೆ
|
2 |
+
ಹಾಸನ, ನ.8- ಕಾಂಗ್ರೆಸ್ ಪಕ್ಷದ ಆಮಿಷಗಳಿಗೆ ಒಳಗಾಗಿ ಜೆಡಿಎಸ್ ಬಿಟ್ಟು ಹೋಗುವ ಶಾಸಕರು ಯಾರೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಜೆಡಿಎಸ್ ಶಾಸಕರೊಂದಿಗೆ ಹಾಸನಾಂಬೆ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಶಾಸಕರ ಬಗ್ಗೆ ಅನುಮಾನ ಪಡುವ ಪರಿಸ್ಥಿತಿಯಿಲ್ಲ. ಎಲ್ಲರೂ ಒಂದು ಕುಟುಂಬದ ಸದಸ್ಯರಂತೆ ಇದ್ದೇವೆ. ಪಕ್ಷದಲ್ಲಿ ಅಸಮಾಧಾನಗೊಂಡು ಬಿಟ್ಟು ಹೋಗುವವರು ಯಾರೂ ಇಲ್ಲ. ಆದರೂ ಕಾಂಗ್ರೆಸ್‍ನವರು ವಿನಾಕಾರಣ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆಂದು ಆರೋಪಿಸಿದರು.
|
3 |
+
ಪದೇಪದೇ ಕಾಂಗ್ರೆಸ್‍ನವರು ಇಂತಹ ಗೊಂದಲದ ಸುದ್ದಿಯನ್ನು ಹರಡುತ್ತಿದ್ದಾರೆ ಇದಕ್ಕೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ . ಎಲ್ಲರೂ ಒಗ್ಗಟ್ಟಾಗಿದ್ದೇವೆ. ಗೊಂದಲಗಳಿಗೆ ತೆರೆ ಎಳೆಯುವ ಉದ್ದೇಶದಿಂದಲೇ ಸಭೆ ನಡೆಸಿ ಶಾಸಕರ ಅಭಿಪ್ರಾಯಗಳನ್ನು ಪಡೆಯಲಾಗಿದೆ ಎಂದರು.
|
4 |
+
ರಾಜ್ಯಕ್ಕಾಗಿರುವ ಅನ್ಯಾಯ ಸರಿ ಪಡಿಸಲು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ರಾಜ್ಯದ ಹಿತಕ್ಕಾಗಿ ಹೊಂದಾಣಿಕೆ ಹೊರತು ಬೇರೆನೂ ಇಲ್ಲ. ಈ ಹೊಂದಾಣಿಕೆ ಅಧಿಕಾರ, ಚುನಾವಣೆಗೆ ಮಾತ್ರ ಸೀಮಿತವಾಗಿಲ್ಲ ಎಂದು ಹೇಳಿದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಎಷ್ಟು ಸೀಟು ಗಳಿಸಲಿದೆ ಎಂಬುದು ಮುಖ್ಯವಲ್ಲ. ಜೆಡಿಎಸ್, ಬಿಜೆಪಿ ಸೇರಿ ರಾಜ್ಯದ 28 ಲೋಕಸಭಾ ಕ್ಷೇತ್ರವನ್ನು ಗೆಲ್ಲುವುದೇ ನಮ್ಮ ಮೊದಲ ಗುರಿಯಾಗಿದೆ.
|
5 |
+
ಮುಖ್ಯಮಂತ್ರಿ ನಿವಾಸದಲ್ಲಿ ಉಪಹಾರ ಸಭೆ ನಡೆಸಿ ಕೆಲವು ಮಂತ್ರಿಗಳಿಗೆ ಪಕ್ಷಕ್ಕೆ ಬರುವವರನ್ನು ಕರೆ ಕರಲು ಟಾಸ್ಕ್ ಕೊಟ್ಟಿದ್ದಾರೆ. ಅಲ್ಲದೇ ಉಪಮುಖ್ಯಮಂತ್ರಿಗಳು ಪದೇ ಪದೇ 45 ಮಂದಿ ಬಿಜೆಪಿ, ಜೆಡಿಎಸ್ ಪಕ್ಷದ ಶಾಸಕರು ಕಾಂಗ್ರೆಸ್ ಸೇರುತ್ತಾರೆಂದು ಹೇಳುತ್ತಿದ್ದಾರೆ ಇದನ್ನು ತಡೆಯಲು ಯಾರೂ ಕಸರತ್ತು ಮಾಡುತ್ತಿದ್ದಾರೆಂದು ಪ್ರಶ್ನಿಸಿದರು.
|
6 |
+
ಅಡ್ವಾಣಿ ಹುಟ್ಟುಹಬ್ಬಕ್ಕೆ ಮೋದಿ, ಶಾ ಸೇರಿ ಗಣ್ಯರಿಂದ ಶುಭಾಶಯ
|
7 |
+
ಉಪಮುಖ್ಯ ಮಂತ್ರಿಗಳು, ಮುಖ್ಯಮಂತ್ರಿಯಾಗುವುದಾದರೆ ನಮ್ಮ ಪಕ್ಷದ ಶಾಸಕರನ್ನು ಕಳುಹಿಸುವುದಾಗಿ ನಾನೇ ಹೇಳಿದ್ದೇನೆ. ರಾಜ್ಯದ ಜನ ಬಹುಮತ ಕೊಟ್ಟಿದ್ದರು. ಏಕೆ ಇಂತಹ ಕೆಲಸ ಮಾಡಲಾಗುತ್ತಿದೆ. ಪ್ರಾಮಾಣಿಕವಾಗಿ ನಾಡಿನ ಅಭಿವೃದ್ಧಿ ಕೆಲಸ ಮಾಡಲು ಕಾಂಗ್ರೆಸ್ ನಾಯಕರಿಗೆ ಸಲಹೆ ಮಾಡುವುದಾಗಿ ಹೇಳಿದರು. ಬರ ಪರಿಹಾರ ಕೇಳಲು ನಾವ್ಯಾಕೆ ಹೋಗಬೇಕು. 136 ಶಾಸಕರಿರುವ ನೀವು ಪ್ರಧಾನಿಯವರ ಬಳಿಗೆ ಹೋಗಿ ಪರಿಹಾರ ಕೇಳಿ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ಕೊಟ್ಟರು.
|
8 |
+
ನಾನು ಬರಿ ಸತ್ಯ ಹೇಳುತ್ತೇನೆಂದು ಎದೆ ಮೇಲೆ ಹಾಕಿಕೊಂಡಿಲ್ಲ. ಸತ್ಯಹರಿಶ್ಚಂದ್ರ ಕಾಡಿಗೆ ಹೋಗುವಾಗ ನಿಮ್ಮ ಮನೆ ಹಿತ್ತಲಿನಿಂದಲೇ ಹೋಗಿದ್ದು ಅಲ್ಲವೇ ಎಂದು ವ್ಯಂಗ್ಯವಾಡಿದರು. ತಾನೊಂದು ಬಗೆ���ರೆ ದೈವವೊಂದು ಬಗೆಯುತ್ತದೆ ಎಂಬ ಹಾಡಿದೆ. ನಾಡಿನ ಜನ 136 ಶಾಸಕರನ್ನು ಆಯ್ಕೆ ಮಾಡಿ ನಿಮಗೆ ಕೊಟ್ಟಿದ್ದರೂ ಏಕೆ ಆಪರೇಷನ್ ಹಸ್ತ ಮಾಡುತ್ತೀರೆಂದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರನ್ನು ಪ್ರಶ್ನಿಸಿದರು. ಈ ಸರ್ಕಾರ 5 ವರ್ಷ ಇದ್ದರೆ 10 ಲಕ್ಷ ಕೋಟಿ ಸಾಲ ಮಾಡುತ್ತೀರಿ. ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತಾಗಿದೆ ಗ್ಯಾರಂಟಿ ಯೋಜನೆಗಳು.
|
9 |
+
ಬರವೀಕ್ಷಣೆ ನೆಪದಲ್ಲಿ ಎಲ್ಲೆಲ್ಲಿ ಸಮರ್ಥ ನಾಯಕರು ಇರುತ್ತಾರೋ, ಅವರನ್ನು ಹುಡುಕಿಕೊಂಡು ಕರೆದುಕೊಂಡು ಬನ್ನಿ ಎಂದು ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜಿ.ಟಿ. ದೇವೇಗೌಡರು ಹಾಸನ ಶಾಸಕ ಸ್ವರೂಪ್ ಪ್ರಕಾಶ್ ಸೇರಿದಂತೆ ಪಕ್ಷದ ಶಾಸಕರು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
|
eesanje/url_46_316_12.txt
ADDED
@@ -0,0 +1,16 @@
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
1 |
+
ಸದ್ದು ಗದ್ದಲವಿಲ್ಲದೆ ನಡೆಯುತ್ತಿದೆಯಾ ಆಪರೇಷನ್ ಕಮಲ..?
|
2 |
+
ಬೆಂಗಳೂರು, ನ.8- ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಭಾಗವಾಗಿ ಸದ್ದು ಮಾಡುತ್ತಿರುವ ಆಪರೇಷನ್ ಕಮಲ ತೆರೆಮರೆಯಲ್ಲಿ ಚಾಲ್ತಿಯಲ್ಲಿದ್ದು, ಕಾಂಗ್ರೆಸ್‍ನ 50ಕ್ಕೂ ಹೆಚ್ಚು ಮಂದಿ ಅಸಮಧಾನಿತ ಶಾಸಕರನ್ನು ಬಿಜೆಪಿ ನಾಯಕರು ಸಂಪರ್ಕ ಮಾಡುತ್ತಿದ್ದಾರೆ.
|
3 |
+
ಲೋಕಸಭೆ ಚುನಾವಣೆಗೂ ಮುನ್ನವೇ ಸರ್ಕಾರವನ್ನು ಪತನಗೊಳಿಸಲು ಸಂಚು ನಡೆದಿದ್ದು, ಅದಕ್ಕಾಗಿ ಬೇರೆ ಬೇರೆ ರಾಜ್ಯಗಳ ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರು ಕಾಂಗ್ರೆಸ್‍ನ ಅಸಮಧಾನಿತ ಶಾಸಕರನ್ನು ಸಂಪರ್ಕ ಮಾಡುತ್ತಿದ್ದಾರೆ ಎನ್ನಲಾಗಿದೆ. ರಾಜ್ಯ ಬಿಜೆಪಿಯ ಎಲ್ಲಾ ನಾಯಕರು 17 ತಂಡಗಳನ್ನು ಮಾಡಿಕೊಂಡು ಬರ ಅಧ್ಯಯನ ಮಾಡುತ್ತಿರುವುದರಿಂದ ಕಾಂಗ್ರೆಸ್ ನಿರಾಳವಾಗಿದೆ. ಆದರೆ ಬೆಜೆಪಿ ನಾಯಕರು ಬರ ಅಧ್ಯಯನ ನಡೆಸುತ್ತಿದ್ದರೆ, ಒಳಗೊಳಗೆ ಅನಾಮಧೇಯರು ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ ಎಂಬ ಮಾಹಿತಿಯಿದೆ.
|
4 |
+
ಕಾಂಗ್ರೆಸ್ ಶಾಸಕರ ಬಳಿ ಚರ್ಚೆ ನಡೆಸುವಾಗ ಈಗಾಗಲೇ ತಮ್ಮೊಂದಿಗೆ 50ಕ್ಕೂ ಹೆಚ್ಚು ಶಾಸಕರು ಸಂಪರ್ಕದಲ್ಲಿದ್ದಾರೆ. ನೀವು ಒಪ್ಪಿಕೊಂಡರೆ 51ನೇಯವರಾಗುತ್ತಿರಾ ? ಮುಂದಿನ ದಿನಗಳಲ್ಲಿ ನಿಮ್ಮ ಭವಿಷ್ಯವನ್ನು ರಕ್ಷಣೆ ಮಾಡುವ ಹೊಣೆಗಾರಿಕೆಯನ್ನು ಬಿಜೆಪಿ ನಿರ್ವಹಣೆ ಮಾಡಲಿದೆ, ಯಾವುದೇ ಅನುಮಾನ ಇಲ್ಲದೆ ನಮ್ಮ ಜೊತೆ ಕೈ ಜೋಡಿಸಿ ಎಂದು ಕಾಂಗ್ರೆಸ್‍ನ ಅತೃಪ್ತ ಹಾಗೂ ಹೊಸ ಶಾಸಕರಿಗೆ ಹೇಳಲಾಗುತ್ತಿದೆ ಎಂಬ ಮಾಹಿತಿ ಇದೆ.
|
5 |
+
ಮಹಾರಾಷ್ಟ್ರ ಸೇರಿದಂತೆ ಬೇರೆ ಬೇರೆ ರಾಜ್ಯಗಳ ನಾಯಕರು ರಂಗ ಪ್ರವೇಶ ಮಾಡಿದ್ದಾರೆ. ನೇರವಾಗಿ ದೆಹಲಿಯ ಬಿಜೆಪಿ ನಾಯಕರನ್ನು ಭೇಟಿ ಮಾಡಿಸುವುದಾಗಿ ಹಾಗೂ ಯಾವುದೇ ತೊಂದರೆಯಾಗದಂತೆ ರಕ್ಷಣೆ ಕೊಡಿಸುವುದಾಗಿ ಭರವಸೆ ನೀಡುತ್ತಿದ್ದಾರೆ ಎಂದು ಹೇಳಲಾಗಿದೆ.
|
6 |
+
ಹಿಂದೆ ಮಹಾರಾಷ್ಟ್ರ ಸರ್ಕಾರ ಪತನಗೊಳಿಸುವಾಗಿ ಶಿವಸೇನೆಯ 47ಕ್ಕೂ ಹೆಚ್ಚು ಶಾಸಕರನ್ನು ಕೇಂದ್ರ ಮೀಸಲು ಪಡೆಯ ರಕ್ಷಣೆಯೊಂದಿಗೆ ಅಸ್ಸಾಂನಲ್ಲಿರಿಸಲಾಗಿತ್ತು. ಉಗ್ರ ಹೋರಾಟಕ್ಕೆ ಹೆಸರಾಗಿದ್ದ ಶಿವಸೇನೆಯೇ ಅಸಹಾಯಕತೆ ಸಿಲುಕಿ ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇಲ್ಲಿಯೂ ಅದೇ ಮಾದರಿಯಲ್ಲಿ ಕಾರ್ಯಚರಣೆಯಾಗುತ್ತದೆ, ನಿಮಗೆ ಸಂಪೂರ್ಣ ರಕ್ಷಣೆ ಕೊಡಿಸುತ್ತೇವೆ, ಮಹಾರಾಷ್ಟ್ರ ಅಸ್ಸಾಂ, ಗುಜರಾತ್, ಉತ್ತರ ಪ್ರದೇಶ ಸೇರಿದಂತೆ ನಿಮಗೆ ಬೇಕಾದ ಕಡೆ ಇರಿಸುತ್ತೇವೆ. ಧೈರ್ಯವಾಗಿ ನಮ್ಮ ಜೊತೆ ಬನ್ನಿ ಎಂದು ಹೇಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
|
7 |
+
ಕಾಂಗ್ರೆಸ್‍ನಲ್ಲಿ ಕೆಲವೇ ಕೆಲವು ಕುಟುಂಬಗಳ ಪ್ರಾಬಲ್ಯದಿಂದ ಬೇಸರಗೊಂಡಿರುವವರು, ಸಚಿವ ಸ್ಥಾನ ಸಿಗದೆ ಅತೃಪ್ತಗೊಂಡಿರುವವರು, ಅಭಿವೃದ್ಧಿಗೆ ಹಣ ನೀಡುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಮಾತು ಕೇಳುತ್ತಿಲ್ಲ, ಅಧಿಕಾರಿಗಳ ವರ್ಗಾವಣೆಯಲ್ಲಿ ತಮ್ಮ ಮಾತು ನಡೆಯುತ್ತಿಲ್ಲ ಎಂಬೆಲ್ಲಾ ಆಕ್ಷೇಪಗಳು ಹೊಂದಿರುವವರನ್ನು ಸಂಪರ್ಕಿಸಲಾಗುತ್ತಿದೆ.
|
8 |
+
ದುಗುಡ ಹುಟ್ಟಿಸಿರುವ ಬೆಳವಣಿಗೆ:ಕಾಂಗ್ರೆಸ್ ನಾಯಕರಿಗೆ ದುಗುಡ ಹುಟ್ಟಿಸಿರುವ ಮತ್ತೊಂದು ಬೆಳವಣಿಗೆ ಎಂದರೆ, ಬಿಜೆಪಿ ನಾಯಕರು ತಮ್ಮನ್ನು ಸಂಪರ್ಕಿಸಿರುವ ಬಗ್ಗೆ ಕೆಲವು ಶಾಸಕರು ಹೇಳಿಕೊಳ್ಳದೆ, ತಮಗೆ ಏನು ಗೋತ್ತಿಲ್ಲ ಎಂಬಂತೆ ತಟಸ್ಥವಾಗಿರುವುದು.
|
9 |
+
ಬಿಜೆಪಿಯವರು ಚರ್ಚೆ ಮಾಡುವ ವೇಳೆ ಕಾಂಗ್ರೆಸ್ ಶಾಸಕರ ಬಳಿ, ತಾವು ಯಾರನ್ನೆಲ್ಲಾ ಸಂಪರ್ಕ ಮಾಡಿದ್ದೇವೆ ಎಂದು, ಬಿಜೆಪಿ ಜೊತೆ ಕೈಜೋಡಿಸಲು ಯಾರೆಲ್ಲಾ ಸಿದ್ಧರಿದ್ದಾರೆ ಎಂಬ ವಿಚಾರಗಳನ್ನು ಅನೌಪಚಾರಿಕವಾಗಿ ಹೇಳಿಕೊಳ್ಳುತ್ತಿದ್ದಾರೆ. ಪಕ್ಷ ನಿಷ್ಠ ಹಾಗೂ ಪ್ರಾಮಾಣಿಕ ಶಾಸಕರು ಕಾಂಗ್ರೆಸ್ ನಾಯಕರಿಗೆ ಮಾಹಿತಿ ನೀಡುವಾಗ ಬಿಜೆಪಿಯ ಮುಖಂಡರು ತಮ್ಮನ್ನು ಸಂಪರ್ಕ ಮಾಡಿರುವುದು, ಏನೆಲ್ಲಾ ಆಮಿಶವೊಡ್ಡಿದ್ಧಾರೆ ಎಂಬುದನ್ನು ಹೇಳಿಕೊಳ್ಳುತ್ತಿದ್ದಾರೆ.
|
10 |
+
ಜೊತೆಗೆ ಬಿಜೆಪಿಯವರು ಯಾರನ್ನೆಲ್ಲಾ ಸಂಪರ್ಕ ಮಾಡಿರುವುದಾಗಿ ಹೇಳಿದ್ದಾರೆ ಎಂದನ್ನು ಬಾಯಿ ಬಿಡುತ್ತಿದ್ದಾರೆ. ಪಕ್ಷ ನಿಷ್ಠರು ಹೇಳಿದಂತೆ ಬಿಜೆಪಿಯವರು ಸಂಪರ್ಕ ಮಾಡಿರುವ ಬಗ್ಗೆ ಬಹಳಷ್ಟು ಶಾಸಕರು ಮಾಹಿತಿ ನೀಡದೆ ಇರುವುದು ಕಾಂಗ್ರೆಸ್ ನಾಯಕರ ನಿದ್ದೆ ಗೆಡಿಸಿದೆ. ಬಿಜೆಪಿಯವರು ಉದ್ದೇಶಪೂರ್ವಕವಾಗಿ ಗೊಂದಲ ಮೂಡಿಸಲು ಹೆಸರುಗಳನ್ನು ತೇಲಿ ಬಿಡುತ್ತಿದ್ದಾರೆಯೇ ? ಅಥವಾ ಅದರಲ್ಲೇನ್ನಾದರೂ ಸತ್ಯಾಂಶ ಇದೆಯೇ ಎಂಬ ಗೊಂದಲ ಕಾಂಗ್ರೆಸಿಗರನ್ನು ಕಾಡುತ್ತಿದೆ.
|
11 |
+
ಅಡ್ವಾಣಿ ಹುಟ್ಟುಹಬ್ಬಕ್ಕೆ ಮೋದಿ, ಶಾ ಸೇರಿ ಗಣ್ಯರಿಂದ ಶುಭಾಶಯ
|
12 |
+
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಪರೇಷನ್ ಕಮಲದ ಮೇಲೆ ನಿಗಾವಹಿಸುವಂತೆ ಸಿಐಡಿಗೆ ಆದೇಶಿಸಿದ್ದು, ಬಿಜೆಪಿ ನಾಯಕರ ಚಲನವಲನಗಳ ಮೇಲೆ ನಿಗಾ ವಹಿಸುವ ಜೊತೆಗೆ ಕಾಂಗ್ರೆಸ್ ನಾಯಕರನ್ನು ಯಾರೆಲ್ಲಾ ಸಂಪರ್ಕ ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕುವಂತೆ ಸೂಚಿಸಲಾಗಿದೆ. ಆಪರೇಷನ್ ಕಮಲದ ಪ್ರತಿ ಮಾಹಿತಿ ಮೇಲೂ ಕಣ್ಣಿಡಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಗುಪ್ತಚರ ಇಲಾಖೆಗೆ ತಾಕೀತು ಮಾಡಲಾಗಿದೆ.
|
13 |
+
ಇತ್ತೀಚಿನ ದಿನಗಳಲ್ಲಿ ವಾಟ್ಸ್‍ಅಪ್ ಕಾಲ್‍ಗಳಲ್ಲಿ ಸಮಾಲೋಚನೆಗಳಾಗುತ್ತಿರುವುದರಿಂದ ಮಾಹಿತಿ ಮೇಲೆ ನಿಗಾವಹಿಸುವುದು ದೊಡ್ಡ ಸಲಾವಾಗಿದೆ. ಆದರೂ ತಮ್ಮದೇ ಆದ ಮೂಲದಿಂದ ಚಲನವಲನಗಳ ಮೇಲೆ ಗುಪ್ತದಳ ನಿಗಾ ಇಟ್ಟಿದ್ದಾರೆ ಎಂದು ಹೇಳಲಾಗಿದೆ.
|
14 |
+
ಮೂಲಗಳ ಪ್ರಕಾರ 50 ಮಂದಿ ಶಾಸಕರನ್ನು ಬಿಜೆಪಿ ಪರವಾಗಿ ಅನಾಮದೇಯರು ಸಂಪರ್ಕ ಮಾಡಿದ್ದಾರೆ. ಗುತ್ತಿಗೆ ಟೆಂಡರ್, ವರ್ಗಾವಣೆ ಸೇರಿದಂತೆ ಇತರ ವಿಚಾರಗಳ ನೆಪದಲ್ಲಿ ಶಾಸಕ ಬಳಿ ಬರುವ ಅನಾಮದೇಯರು, ಅಲ್ಲಿಂದ ಬಿಜೆಪಿ ಮತ್ತು ಸಂಘ ಪರಿವಾರದ ಪ್ರಭಾವಿಗಳಿಗೆ ಕರೆ ಮಾಡಿ, ಕಾಂಗ್ರೆಸ್ ಶಾಸಕರೊಂದಿಗೆ ಮಾತನಾಡಿಸುತ್ತಿದ್ದಾರೆ. ಅನಂತರ ಚರ್ಚೆಗಳು ಮುಂದುವರೆಯುತ್ತಿವೆ ಎಂದು ಹೇಳಲಾಗುತ್ತಿದೆ.
|
15 |
+
ಕೆಲವು ಶಾಸಕರು ಮಾಹಿತಿ ಹಂಚಿಕೊಳ್ಳುತ್ತಿರುವುದು, ಇನ್ನೂ ಕೆಲವರು ಏನು ಗೋತ್ತಿಲ್ಲದಂತೆ ಮೌನವಾಗಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಹೆಚ್ಚಿಸಿದೆ. ತಮ್ಮನ್ನು ಭೇಟಿ ಮಾಡಿದವರು ಯಾರು ಎಂಬ ತಲೆಬುಡವೂ ಅರ್ಥವಾಗದೆ ಕೆಲವು ಶಾಸಕರು ಗೊಂದಲದಲ್ಲಿರುವುದಾಗಿಯೂ ಹೇಳಲಾಗುತ್ತಿದೆ.
|
16 |
+
ಬೆಳಗಾವಿ ಅವೇಶನದಲ್ಲಿ ಆಪರೇಶನ್ ಕಮಲ ಚರ್ಚೆ ಮಾಡಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಲೋಕಸಭೆ ಚುನಾವಣೆಯಲ್ಲಿ ಫಲಿತಾಂಶ ಏನಾಗಲಿದೆಯೋ ಗೋತ್ತಿಲ್ಲ, ಅದಕ್ಕೂ ಮುನ್ನಾ ಆಪರೇಷನ್ ಕಮಲ ನಡೆಸಿ ಕರ್ನಾಟಕ ಕಾಂಗ್ರೆಸ್ ಸರ್ಕಾರವನ್ನು ಪತನಗೊಳಿಸಬೇಕು ಎಂಬ ಉಮೇದಿನಲ್ಲಿ ಕಾರ್ಯಚರಣೆ ನಡೆಯುತ್ತಿದೆ. ಕೆಲವು ಶಾಸಕರು ಲೋಕಸಭೆ ಚುನಾವಣೆವರೆಗೂ ತಾವು ಏನನ್ನೂ ಹೇಳುವುದಿಲ್ಲ ಎಂದು ಹೇಳಿ ಕಳುಹಿಸುತ್ತಿದ್ದಾರೆ ಎಂದು ಹೇಳಲಾಗಿದೆ.
|
eesanje/url_46_316_2.txt
ADDED
@@ -0,0 +1,5 @@
|
|
|
|
|
|
|
|
|
|
|
|
|
1 |
+
ಒಳ ಉಡುಪುನಲ್ಲಿ ಚಿನ್ನ ಸಾಗಿಸುತ್ತಿದ್ದ ಮಹಿಳೆಯರ ಬಂಧನ, 5 ಕೆಜಿ ಚಿನ್ನ ವಶ
|
2 |
+
ಬೆಂಗಳೂರು,ನ.10- ಮಹಿಳೆಯರ ಒಳ ಉಡುಪು, ಪರ್ಸ್‍ಗಳಲ್ಲಿ ಅಕ್ರಮವಾಗಿ ಸುಮಾರು ಮೂರು ಕೋಟಿಗೂ ಹೆಚ್ಚು ಮೌಲ್ಯದ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಏಳು ಮಂದಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
|
3 |
+
ಕುವೈತ್, ಸಾರ್ಜಾ, ದುಬೈ, ಅಬುದಾಬಿ, ಬ್ಯಾಂಕಾಕ್‍ನಿಂದ ವಿಮಾನದಲ್ಲಿ ಬಂದಿದ್ದ ಆರೋಪಿಗಳು ನಿಲ್ದಾಣದಿಂದ ಹೊರಗೆ ಹೋಗುವಾಗ ಅನುಮಾನಗೊಂಡ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಅವರ ಬಳಿ 5 ಕೆಜಿ 315 ಗ್ರಾಂ ತೂಕದ ಚಿನ್ನ ಸಿಕ್ಕಿದೆ. ಕೆಲವನ್ನು ಪೇಸ್ಟ್ ರೂಪದಲ್ಲಿ, ಇನ್ನೂ ಕೆಲವನ್ನು ತಂತಿಯ ರೂಪದಲ್ಲಿ ಅಡಗಿಸಿ ತರಲಾಗಿತ್ತು ಎಂದು ಮೂಲಗಳು ತಿಳಿಸಿವೆ.
|
4 |
+
ಆರೋಪಿ ಮಹಿಳೆಯೊಬ್ಬರು ಔಷಧ ತುಂಬುವ ಕ್ಯಾಪ್ಸಿಲ್‍ನಲ್ಲಿ ಚಿನ್ನ ತುಂಬಿ ತಂದಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಾಮಾನ್ಯ ಪ್ರಯಾಣಿಕರ ಪರ್ಸ್‍ಗಳಲ್ಲೂ ಅರ್ಧ ಕೆಜಿಗೂ ಹೆಚ್ಚು ಚಿನ್ನ ಸಿಕ್ಕಿದೆ. ಅನುಮಾನ ಬಾರದ ರೀತಿಯಲ್ಲಿ ಚಿನ್ನಕ್ಕೆ ಹಲವು ಲೇಪನಗಳನ್ನು ಬಳಸಲಾಗಿದೆ. ಅವುಗಳನ್ನು ಸೂಕ್ಷ್ಮವಾಗಿ ಗಮನಿಸಿದ ನಂತರವೇ ಅದು ಚಿನ್ನ ಎಂಬುದು ತಿಳಿದು ಬಂದಿದೆ.
|
5 |
+
ಕೇರಳ ವಿಮಾನ ನಿಲ್ದಾಣದ ಮೂಲಕ ಅತಿ ಹೆಚ್ಚು ಚಿನ್ನ ಕಳ್ಳಸಾಗಾಣಿಕೆ ದಂಧೆ ನಡೆಯುತ್ತಿದ್ದು, ಆದರೆ, ಇದು ಈಗ ಬೆಂಗಳೂರಿಗೂ ವ್ಯಾಪಿಸಿದ್ದು, ಕಸ್ಟಮ್ಸ್ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಿದ್ದಾರೆ. ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಇದನ್ನು ಯಾರಿಗೆ ತಲುಪಿಸಲು ತರಲಾಗುತ್ತಿತ್ತು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದ್ದು, ಇವರೆಲ್ಲರೂ ಕಳ್ಳಸಾಗಾಣಿಕೆ ದಾರರ ಏಜೆಂಟ್‍ಗಳು ಎಂದು ಹೇಳಲಾಗುತ್ತಿದೆ.
|
eesanje/url_46_316_3.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ಮೇಕೆದಾಟು ಯೋಜನೆಯನ್ನು ಆರಂಭಿಸುತ್ತೇವೆ : ಡಿಕೆಶಿ
|
2 |
+
ಬೆಂಗಳೂರು, ನ.9- ಮೇಕೆದಾಟು ಯೋಜನೆಯನ್ನು ನಮ್ಮ ಸರ್ಕಾರ ಆರಂಭಿಸಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ನಗರದಲ್ಲಿಂದು ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ನಾವು ಶುರು ಮಾಡುತ್ತೇವೆ.
|
3 |
+
ವಿಚಾರಣೆಗೆ ಸಮುಯ ನಿಗದಿ ಮಾಡುವುದಾಗಿ ಕಾವೇರಿ ನೀರು ನಿರ್ವಹಣಾ ಮಂಡಳಿ ತಿಳಿಸಿದೆ. 2018ರ ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಬೆಂಗಳೂರಿಗೆ ಕುಡಿಯುವ ನೀರಿಗಾಗಿ 24 ಟಿಎಂಸಿಯನ್ನು ನಿಗದಿ ಮಾಡಿತ್ತು. ಅದನ್ನು ಬಳಸಿಕೊಳ್ಳಲು ನಾವು ಸರ್ಕಾರಿ ಆದೇಶ ಹೊರಡಿಸಿದ್ದೇವೆ. ಮೇಕೆದಾಟು ಯೋಜನೆ ಕುರಿತು ವಿಚಾರಣೆ ನಡೆಯುವ ವೇಳೆ ರಾಜ್ಯಕ್ಕೆ ಎಷ್ಟು ನೀರಿನ ಅಗತ್ಯ ಇದೆ ಎಂದು ಸಮರ್ಥ ವಾದ ಮಂಡಿಸಬೇಕಿದೆ. ಅದಕ್ಕೆ ತಯಾರಿಯಾಗಿ 24 ನೀರು ಬಳಕೆಯ ಆದೇಶ ಹೊರಡಿಸಲಾಗಿದೆ ಎಂದರು.
|
4 |
+
ಪ್ರತಿನಿತ್ಯ ಬೆಳಗ್ಗೆ 10ರಿಂದ 10.30ರವರೆಗೆ ಪಕ್ಷದ ಶಾಸಕರು ಹಾಗೂ ಕಾರ್ಯಕರ್ತರ ಭೇಟಿಗೆ ಸಮಯ ನೀಡುತ್ತೇನೆ. ತಮ್ಮ ಕ್ಷೇತ್ರದಲ್ಲಿನ ಕೆಲಸ ಹಾಗೂ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಅವರಿಗೆ ಅವಕಾಶ ನೀಡಲಾಗುವುದು. ಹೊರಗಡೆ ಹೋಗುವ ದಿನ ಹೊರತಾಗಿ ಬೆಂಗಳೂರಿನಲ್ಲಿರುವ ಎಲ್ಲಾ ದಿನ ಸಮಯಾವಕಾಶ ನೀಡಲಾಗುವುದು, ಶಾಸಕರಿಗೆ ಮೊದಲ ಆದ್ಯತೆ ನೀಡಲು ನಿರ್ಧಸಲಾಗಿದೆ ಎಂದರು.
|
5 |
+
ನನ್ನ ಪ್ರಕಾರ ಭಾರತ ಮತ್ತು ಪಾಕಿಸ್ತಾನ ಸೆಮಿಫೈನಲ್ : ಗಂಗೂಲಿ
|
6 |
+
ಕಾಂಗ್ರೆಸ್ ಪಕ್ಷದಲ್ಲಿ ಯಾರೇಲ್ಲಾ 3ಕ್ಕಿಂತ ಹೆಚ್ಚು ವರ್ಷಗಳಿಂದ ಪದಾಧಿಕಾರಿಗಳಾಗಿದ್ದಾರೆ ಅವರ ಸ್ಥಾನಕ್ಕೆ ಬೇರೆಯವರಿಗೆ ಅವಕಾಶ ನೀಡಬೇಕು ಎಂಬ ಚರ್ಚೆ ಆಗಿದೆ. ಇನ್ನು ಲೋಕಸಭೆ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಶೇ.75ರಷ್ಟು ಮಂತ್ರಿಗಳು ತಮ್ಮ ಜಿಲ್ಲೆಗಳಿಗೆ ಹೋಗಿ ಸಭೆ ಮಾಡಿದ್ದಾರೆ, ಉಳಿದವರು ಸಭೆ ಮಾಡಿ ಆದಷ್ಟು ಬೇಗ ತಮ್ಮ ವರದಿ ನೀಡಲಿದ್ದಾರೆ ಎಂದರು.
|
7 |
+
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಸ್ಥಗಿತಗೊಂಡಿರುವ ಕಾಮಗಾರಿಗಳ ಪರಿಶೀಲನೆ ನಡೆಸುತ್ತಿರುವುದು ಬಹಳ ಸಂತೋಷದ ವಿಷಯ. ಅವರು ಅಲ್ಲಿಗೆ ಹೋಗಲಿ. ಅವರಿಗೆ ಬೇಕಾದರೆ ಬಸವರಾಜ ಬೊಮ್ಮಾಯಿ ಹಾಗೂ ಲೋಕಾಯುಕ್ತ ವರದಿಗಳನ್ನು ಕಳುಹಿಸಿಕೊಡುತ್ತೇನೆ ಎಂದು ತಿಳಿಸಿದರು.
|
eesanje/url_46_316_4.txt
ADDED
@@ -0,0 +1,6 @@
|
|
|
|
|
|
|
|
|
|
|
|
|
|
|
1 |
+
ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ರಜನೀಶ್ ಗೋಯಲ್ ನೇಮಕ ಸಾಧ್ಯತೆ
|
2 |
+
ಬೆಂಗಳೂರು,ನ.9- ರಾಜ್ಯ ಸರ್ಕಾರದ ಮುಂದಿನ ಮುಖ್ಯ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ರಜನೀಶ್ ಗೋಯಲ್ ನೇಮಕಗೊಳ್ಳುವ ಸಾಧ್ಯತೆ ಇದೆ. ಕಳೆದ ವರ್ಷ ಮೇ 31ರಿಂದಲೂ ಮುಖ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿರುವ ವಂದಿತಾ ಶರ್ಮ ಅವರು ಈ ತಿಂಗಳ ಅಂತ್ಯಕ್ಕೆ ನಿವೃತ್ತರಾಗಲಿದ್ದಾರೆ.
|
3 |
+
ಮುಂದಿನ ಮುಖ್ಯ ಕಾರ್ಯದರ್ಶಿಯಾಗಿ ಹರಿಯಾಣ ಮೂಲದ ರಜನೀಶ್ ಗೋಯಲ್ ನೇಮಕವಾಗುವ ಸಾಧ್ಯತೆ ದಟ್ಟವಾಗಿದೆ. ಮುಂದಿನ ವರ್ಷದ ಜುಲೈವರೆಗೂ ಸೇವಾವ ಹೊಂದಿರುವ ರಜನೀಶ್ ಗೋಯಲ್ ಪ್ರಸ್ತುತ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದು, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿಯಾಗಿ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ.
|
4 |
+
ನನ್ನ ಪ್ರಕಾರ ಭಾರತ ಮತ್ತು ಪಾಕಿಸ್ತಾನ ಸೆಮಿಫೈನಲ್ : ಗಂಗೂಲಿ
|
5 |
+
ಸಾರ್ವಜನಿಕ ಆಡಳಿತದಲ್ಲಿ ಡಾಕ್ಟರೇಟ್ ಪಡೆದಿರುವ ಅವರು 1986ರ ಆ.25ರಂದು ಐಎಎಸ್ ಸೇವೆಗೆ ಸೇರ್ಪಡೆಯಾದರು. ಇವರ ಪತ್ನಿ ಶಾಲಿನಿ ರಜನೀಶ್ ಕೂಡ ಪ್ರಸ್ತುತ ಐಎಎಸ್ ಅಧಿಕಾರಿಯಾಗಿದ್ದಾರೆ.ಮುಂದಿನ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಹಿರಿಯ ಐಎಎಸ್ ಅಧಿಕಾರಿಗಳಾದ ವಿ.ಮಂಜುಳ, ಅಜಯ್ ಸೇಠ್, ಡಾ.ಇ.ವಿ.ರಮಣರೆಡ್ಡಿ, ಅನಿಲ್‍ಕುಮಾರ್ ಝಾ ಜೇಷ್ಠತಾ ಪಟ್ಟಿಯಲ್ಲಿದ್ದಾರೆ. ಆದರೆ ಸರ್ಕಾರ ರಜನೀಶ್ ಗೋಯಲ್ ಅವರ ಕುರಿತು ಒಲವು ಹೊಂದಿದೆ ಎಂದು ಹೇಳಲಾಗಿದೆ.
|
6 |
+
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ನೇಮಕಕ್ಕೆ ಸಂಬಂಧಪಟ್ಟಂತೆ ನಿರ್ಧಾರ ಕೈಗೊಳ್ಳಲಿರುವ ಅಧಿಕಾರವನ್ನು ಮುಖ್ಯಮಂತ್ರಿಯವರಿಗೆ ನೀಡುವ ಸಾಧ್ಯತೆಗಳಿರುವುದಾಗಿ ಮೂಲಗಳು ತಿಳಿಸಿವೆ.
|
eesanje/url_46_316_5.txt
ADDED
@@ -0,0 +1,6 @@
|
|
|
|
|
|
|
|
|
|
|
|
|
|
|
1 |
+
ಡಿಸಿಎಂ ಡಿಕೆಶಿ ನಿವಾಸದಲ್ಲಿ ಹತ್ತಕ್ಕೂ ಹೆಚ್ಚು ಶಾಸಕರ ಸಭೆ
|
2 |
+
ಬೆಂಗಳೂರು,ನ.9- ಆಡಳಿತ ಪಕ್ಷದ ಶಾಸಕರಲ್ಲಿ ಇರುವ ಅಸಮಧಾನವನ್ನು ಹೋಗಲಾಡಿಸಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ತಮ್ಮ ನಿವಾಸದಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಶಾಸಕರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶಾಸಕರಿಗೆ ಲಭ್ಯವಾಗುತ್ತಿಲ್ಲ ಎಂಬ ಆಕ್ಷೇಪಗಳು ಇತ್ತೀಚೆಗೆ ಕೇಳಿ ಬರಲಾರಂಭಿಸಿದ್ದವು. ಜಿಲ್ಲೆಗಳ ಮಟ್ಟದಲ್ಲಿ ಸಚಿವರ ಜೊತೆಗೆ ಕೆಲ ಶಾಸಕರು ಅಸಮಧಾನ ಹೊರ ಹಾಕಿದ್ದಾರೆ.
|
3 |
+
ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಶಾಸಕರು, ಸಚಿವರ ಭೇಟಿಗಾಗಿಯೇ ಪ್ರತ್ಯೇಕ ಕೊಠಡಿ ನಿರ್ಮಿಸಿದ್ದಾರೆ. ಡಿ.ಕೆ.ಶಿವಕುಮಾರ್ ತಮ್ಮ ಮನೆಯಲ್ಲಿ ಬೆಳಗ್ಗೆ ಒಂದು ಗಂಟೆ ಕಾಲ ಶಾಸಕರಿಗಾಗಿ ಸಮಯ ಮೀಸಲಿಟ್ಟಿದ್ದಾರೆ.
|
4 |
+
ನನ್ನ ಪ್ರಕಾರ ಭಾರತ ಮತ್ತು ಪಾಕಿಸ್ತಾನ ಸೆಮಿಫೈನಲ್ : ಗಂಗೂಲಿ
|
5 |
+
ಇಂದು ಬೆಳಗ್ಗೆ ಸದಾಶಿವನಗರದ ನಿವಾಸದಲ್ಲಿ ಸಚಿವರಾದ ಶಿವಾನಂದ್ ಪಾಟೀಲ್, ಸಂತೋಷ್ ಲಾಡ್, ಶಾಸಕಾಂಗ ಪಕ್ಷದ ಕಾರ್ಯದರ್ಶಿ ತುಕಾರಾಮ್, ಶಾಸಕರಾದ ಜಿ ಎಸ್ ಪಾಟೀಲ್, ತರೀಕೆರೆ ಶ್ರೀನಿವಾಸ್, ಶಾಂತನಗೌಡ, ದರ್ಶನ್ ಧ್ರುವನಾರಾಯಣ್, ರವಿಶಂಕರ್, ಮಾನಪ್ಪ ವಜ್ಜಲ್, ಡಾ ರಂಗನಾಥ್, ವಿಧಾನ ಪರಿಷತ್ ಸದಸ್ಯ ಸುನಿಲ್ ಪಾಟೀಲ್, ಮಾಜಿ ಸಚಿವರಾದ ಬಾಬುರಾವ್ ಚಿಂಚನಸೂರ್, ಶಿವರಾಮ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮತ್ತಿತರರು ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ.
|
6 |
+
ವರ್ಗಾವಣೆ, ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಕುರಿತಂತೆ ಶಾಸಕರ ಅಹವಾಲುಗಳನ್ನು ಡಿ.ಕೆ.ಶಿವಕುಮಾರ್ ಅಲಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್ ಲೋಕಸಭೆ ಚುನಾವಣೆಗ ತಯಾರಿಗಳನ್ನು ನಡೆಸುವಂತೆಯೂ ಶಾಸಕರಿಗೆ ಸಲಹೆ ನೀಡಿದ್ದಾರೆ.
|
eesanje/url_46_316_6.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ಮುಗಿಯದ `ಕೈ’ ಗೊಂದಲ : ಜಾರಕಿಹೊಳಿ ಸಮಾಧಾನಕ್ಕೆ ತೆರೆಮರೆ ಕಸರತ್ತು
|
2 |
+
ಬೆಂಗಳೂರು,ನ.9- ಸರ್ಕಾರದಲ್ಲಿ ಎಲ್ಲವೂ ಸುಗಮವಾಗಿದೆ ಎಂದು ಹೇಳುತ್ತಲೇ ಒಬ್ಬರಾದ ನಂತರ ಒಬ್ಬರಂತೆ ಬೆಳಗಾವಿಯ ಸಾಹುಕಾರರನ್ನು ಸಮಾಧಾನಪಡಿಸಲು ಯತ್ನಿಸುತ್ತಿರುವುದು ತೀವ್ರ ಕುತೂಹಲ ಕೆರಳಿಸಿದೆ. ನಿನ್ನೆ ರಾತ್ರಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ರಹಸ್ಯ ಮಾತುಕತೆ ನಡೆಸಿದ್ದಾರೆ.
|
3 |
+
ಒಂದೆಡೆ ಆಪರೇಷನ್ ಕಮಲ ಚಾಲ್ತಿಯಲ್ಲಿದೆ. ಮತ್ತೊಂದೆಡೆ ಬೆಳಗಾವಿ ಜಿಲ್ಲೆಯಲ್ಲಿ ಸಮಸ್ಯೆಗಳಿರುತ್ತವೆ, ಬಗೆಹರಿಯುತ್ತವೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳುತ್ತಾರೆ. ಮತ್ತೊಂದೆಡೆ ನಮ್ಮಲ್ಲಿ ಯಾವುದೇ ಸಮಸ್ಯೆಗಳಿಲ್ಲ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಪರಿಸ್ಥಿತಿಯನ್ನು ಸರಿದೂಗಿಸುವ ಪ್ರಯತ್ನ ಮಾಡುತ್ತಿದ್ದಾರೆ.
|
4 |
+
ಎರಡು ದಿನಗಳ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಏಕಾಏಕಿ ಸತೀಶ್ ಜಾರಕಿಹೊಳಿ ಅವರ ಮನೆಗೆ ಭೇಟಿ ನೀಡಿದ್ದರು. ಎಲ್ಲವೂ ಸರಿ ಇದೆ ಎಂದು ಹೇಳುತ್ತಲೇ ತೆರೆಮರೆಯಲ್ಲಿ ಸಾಕಷ್ಟು ಗೊಂದಲಗಳನ್ನು ಕಾಂಗ್ರೆಸ್ ತೋರಿಸಿಕೊಳ್ಳುತ್ತಿದೆ. ಸತೀಶ್ ಜಾರಕಿಹೊಳಿಯವರು ತಮ್ಮ ಕುಟುಂಬದ ಸದಸ್ಯರಿಗೆ ಲೋಕಸಭೆ ಚುನಾವಣೆಗೆ ಟಿಕೆಟ್ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಅದಕ್ಕೆ ಪೂರಕವಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಕೂಡ ತಮ್ಮ ಪುತ್ರನಿಗೆ ಚುನಾವಣೆಯಲ್ಲಿ ಸ್ರ್ಪಸಲು ಅವಕಾಶ ನೀಡಬೇಕೆಂದು ಪ್ರಸ್ತಾವನೆ ಮುಂದಿಡುವ ಮೂಲಕ ಪೈಪೋಟಿಗಿಳಿದಿದ್ದಾರೆ ಎಂದು ಹೇಳಲಾಗಿದೆ.
|
5 |
+
ನನ್ನ ಪ್ರಕಾರ ಭಾರತ ಮತ್ತು ಪಾಕಿಸ್ತಾನ ಸೆಮಿಫೈನಲ್ : ಗಂಗೂಲಿ
|
6 |
+
ಜಾರಕಿಹೊಳಿ ಕುಟುಂಬದ ಜೊತೆ ಲಕ್ಷ್ಮಿಹೆಬ್ಬಾಳ್ಕರ್ ಪೈಪೋಟಿ ನಡೆಸುತ್ತಿರುವುದು ಜಿಲ್ಲಾ ರಾಜಕಾರಣದಲ್ಲಿ ಸಾಕಷ್ಟು ಏರಿಳಿತಗಳಿಗೆ ಕಾರಣವಾಗಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪದೇ ಪದೇ ಜಿಲ್ಲಾ ರಾಜಕಾರಣದಲ್ಲಿ ಹಸ್ತಕ್ಷೇಪ ನಡೆಸುತ್ತಿರುವುದು ಕೂಡ ಬೆಂಕಿಗೆ ತುಪ್ಪ ಸುರಿದಂತಾಗಿವೆ ಎಂಬ ವ್ಯಾಖ್ಯಾನಗಳಿವೆ.
|
7 |
+
ನಿನ್ನೆ ರಾತ್ರಿ ನಡೆದ ಸಭೆಯಲ್ಲಿ ಸತೀಶ್ ಜಾರಕಿಹೊಳಿಯವರು ಮುಖ್ಯಮಂತ್ರಿಯವರಿಗೆ ಪರಿಸ್ಥಿತಿಯನ್ನು ವಿವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
|
eesanje/url_46_316_7.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ಆರೋಗ್ಯ ಕ್ಷೇತ್ರದಲ್ಲಿ ಡಿಜಿಟಲ್ ಪರಿವರ್ತನೆಗೆ ಸಂಶೋಧನೆ ಅಗತ್ಯ : ಸಿಎಂ
|
2 |
+
ಬೆಂಗಳೂರು, ನ.9- ಆರೋಗ್ಯ ಕ್ಷೇತ್ರದಲ್ಲಿ ಡಿಜಿಟಲ್ ಪರಿವರ್ತನೆಯಿಂದ ಮತ್ತಷ್ಟು ಸುಧಾರಣೆ ತರುವ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ನಗರದ ಯಲಹಂಕದಲ್ಲಿ ನಿರ್ಮಿಸಲಾಗಿರುವ ಪಿಲಿಪ್ಸ್‍ನ ಸಂಶೋಧನಾ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ಸುಲಭ ವ್ಯವಹಾರಕ್ಕೆ ಪೂರಕ ವಾತವರಣ ಹೊಂದಿರುವ ರಾಜ್ಯಗಳಲ್ಲಿ ಮುಂಚೂಣಿಯಲ್ಲಿದೆ ಎಂದರು.
|
3 |
+
ಬೆಂಗಳೂರಿನ ಪಿಲಿಪ್ಸ್ ಸಂಶೋಧನಾ ಕೇಂದ್ರ ಆರೋಗ್ಯ ಕ್ಷೇತ್ರದ ಡಿಜಿಟಲ್ ಶಕ್ತಿ ಕೇಂದ್ರವಾಗಿದೆ. ದೇಶದಲ್ಲೇ ಆರೋಗ್ಯ ಕಾಳಜಿಲ್ಲಿ ಮುಂಚೂಣಿ ಸ್ಥಾನದಲ್ಲಿರುವ ಈ ಸಂಸ್ಥೆ, ಬೆಂಗಳೂರಿನಲ್ಲಿ 6.50 ಲಕ್ಷ ಚದುರ ಅಡಿ ಜಾಗದಲ್ಲಿ ಅಸ್ತಿತ್ವದಲ್ಲಿದ್ದು, ಐದು ಸಾವಿರ ಜನ ಕೆಲಸ ಮಾಡುತ್ತಿದ್ದಾರೆ. ಕಳೆದ 27 ವರ್ಷಗಳಿಂದಲೂ ಕರ್ನಾಟಕದಲ್ಲಿ ಪೂರಕ ವಾತಾವಣ ನಿರ್ಮಿಸುವಲ್ಲಿ ಪ್ರಧಾನ ಪಾತ್ರ ವಹಿಸಿದೆ ಎಂದರು.
|
4 |
+
ಜನರ ಆರೋಗ್ಯ ಹಾಗೂ ಕ್ಷೇಮಕ್ಕೆ ಡಿಜಿಟಲ್ ಪರಿವರ್ತನೆ ನೆರವಾಗಲಿದೆ. ರೋಗಿಗಳ ಅನುಭವ ಸುಧಾರಣೆ, ಉತ್ತಮ ಫಲಿತಾಂಶ, ವೆಚ್ಚ ತಗ್ಗಿಸುವಿಕೆ ವಲಯಗಳಲ್ಲಿ ಅನ್ವೇಷಣೆಗಳು ನಡೆಯಬೇಕಿದೆ. ಭಾರತೀಯ ವಿಜ್ಞಾನ ಸಂಸ್ಥೆ, ರಾಷ್ಟ್ರೀಯ ಬಯಾಲಾಜಿಕಲ್ ಸೈನ್ಸ್, ರಾಷ್ಟ್ರೀಯ ಮಾನಸಿಕ ಆರೋಗ್ಯ ಕೇಂದ್ರ ಸೇರಿದಂತೆ ರಾಜ್ಯದಲ್ಲಿ ಹಲವು ವೈದ್ಯಕೀಯ ಸಂಸ್ಥೆಗಳಿವೆ. ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ತರುವ ನವೋದ್ಯಮಗಳಿಗೆ ಪೂರಕ ವಾತವರಣವೂ ಇದೆ. ಜೀವನ ಸುಧಾರಣೆ, ಡಿಜಿಟಲ್ ಆರೋಗ್ಯ, ಅಮೂಲ್ಯ ಔಷಧಿಗಳ ಸಂಶೋಧನೆ ಸೇರಿದಂತೆ ಸಂಶೋಧನೆಗಳು ಹೆಚ್ಚಾಗಬೇಕು ಎಂದು ಸಲಹೆ ನೀಡಿದರು.
|
5 |
+
ಹೃದಯಘಾತದಿಂದ ಬಚಾವ್ ಮಾಡಿದ ಸ್ಮಾರ್ಟ್ ವಾಚ್..!
|
6 |
+
ರಾಜ್ಯ ಸರ್ಕಾರ ಜೈವಿಕ ತಂತ್ರಜ್ಞಾನ ಸೇರಿದಂತೆ ಅನೇಕ ನೀತಿಗಳನ್ನು ಜಾರಿಗೆ ತರುವ ಮೂಲಕ ಆಧುನಿಕ ವಾತಾವರಣ ನಿರ್ಮಿಸಿದೆ. ದೇಶಿಯ ಹಾಗೂ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಗುರಿ ತಲುಪಲು ಗಮನ ನೀಡಿದೆ. ಅದಕ್ಕೆ ಅಗತ್ಯವಾದ ಸೌಲಭ್ಯಗಳನ್ನು ಸೃಷ್ಟಿಸಲಾಗುತ್ತಿದೆ. . 2022ರಲ್ಲಿ ದೇಶದಲ್ಲಿ ಸುಲಭ ವ್ಯವಹಾರಿಕ ವಾತಾವರಣದ ರಾಜ್ಯಗಳಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿತ್ತು. ಕಾಲಕಾಲಕ್ಕೆ ನೀತಿ, ನಿರೂಪಣೆಗಳ ಮೂಲಕ ಬೆಂಬಲ ಮುಂದುವರೆಸಲಾಗಿದೆ ಎಂದರು.
|
7 |
+
2023ರಲ್ಲಿ ನಡೆಯುವ ಬೆಂಗಳೂರು ಟೆಕ್ ಸಮ್ಮೇಳನದಲ್ಲಿ ಭಾಗವಹಿಸುವಂತೆ ಮುಖ್ಯಮಂತ್ರಿಯವರು ಉದ್ಯಮಿಗಳಿಗೆ ಕರೆ ನೀಡಿದರು. ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಸಂಸ್ಥೆಯ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
|
eesanje/url_46_316_8.txt
ADDED
@@ -0,0 +1,8 @@
|
|
|
|
|
|
|
|
|
|
|
|
|
|
|
|
|
|
|
1 |
+
ಆರ್ಯುವೇದ ಪ್ರಚುರಪಡಿಸಲು ಜನಜಾಗೃತಿ ಶಿಬಿರ
|
2 |
+
ಬೆಂಗಳೂರು,ನ.9- ಪ್ರಧಾನಿ ನರೇಂದ್ರಮೋದಿ ಅವರ ಆಶಯದಂತೆ ಆರ್ಯುವೇದ ಪದ್ದತಿಯನ್ನು ಇನ್ನಷ್ಟು ಪ್ರಚುರಪಡಿಸುವ ನಿಟ್ಟಿನಲ್ಲಿ ಆಯುಷ್ ಸಚಿವಾಲಯವು ಹಲವಾರು ಜನಜಾಗೃತಿ ಶಿಬಿರಗಳನ್ನು ಆಯೋಜಿಸಿ ಇದರ ಮಹತ್ವವನ್ನು ಸಾರುವಲ್ಲಿ ಯಶಸ್ವಿಯಾಗಿದೆ.ಕಳೆದ 2016ರಿಂದ ಕೇಂದ್ರ ಸರ್ಕಾರದ ಆಯುಷ್ ಸಚಿವಾಲಯ ನ.10ರಂದು ಆರ್ಯುವೇದ ದಿನಾಚರಣೆಯನ್ನು ಹಮ್ಮಿಕೊಳ್ಳುತ್ತದೆ. ಆರ್ಯುವೇದ ಪದ್ದತಿಯಿಂದ ಜನರಿಗೆ ಆಗಬಹುದಾದ ಅನುಕೂಲಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗುತ್ತದೆ.
|
3 |
+
ಸಂಸ್ಥೆಯಲ್ಲಿ ಲಭ್ಯವಿರುವ ಉಚಿತ ಆರೋಗ್ಯ ಸೇವೆಗಳನ್ನು ಉಪಯೋಗಿಸಿಕೊಳ್ಳುವಂತೆ ಕೇಂದ್ರಿಯ ಆಯುರ್ವೇದ ಸಂಶೋಧನಾ ಸಂಸ್ಥೆಯ (ಆಯುಷ್ ಸಚಿವಾಲಯ, ಭಾರತ ಸರಕಾರ) ಸಹಾಯಕ ನಿರ್ದೇಶಕರಾದ ಡಾ. ಸುಲೋಚನಾ ಭಟ್ಟ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
|
4 |
+
ದೇಶದಾದ್ಯಂತ ಆಯುರ್ವೇದಕ್ಕಾಗಿ ಓಟ 8ನೇ ಆಯುರ್ವೇದ ದಿನಾಚರಣೆಯನ್ನು ರಾಜ್ಯದಲ್ಲೂ ನವೆಂಬರ್ ತಿಂಗಳಿನಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಆಯುರ್ವೇದ ದಿನವನ್ನು ಹೆಚ್ಚು ಅರ್ಥಪೂರ್ಣವಾಗಿಸುವ ಆಚರಿಸಲು ಸಹಕರಿಸಿದ ಕೇಂದ್ರಿಯ ಆಯುರ್ವೇದ ಸಂಶೋಧನಾ ಸಂಸ್ಥೆಯ ಎಲ್ಲ ಸಿಬ್ಬಂದಿವರ್ಗಕ್ಕೂ ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಎಲ್ಲರೂ ಅಭಿನಂದನಾರ್ಹರು ಎಂದು ಹೇಳಿದ್ದಾರೆ.
|
5 |
+
ಕಾರ್ಯಕ್ರಮದಲ್ಲಿ ಪ್ರದರ್ಶನ ಮತ್ತು ಸಣ್ಣ -ಎಕ್ಸ್ ಪೋ, ದೇಶಾದ್ಯಂತ ವೈದ್ಯಕೀಯ ಮತ್ತು ಸ್ವಾಸ್ಥ್ಯ ಶಿಬಿರಗಳು, ಸಾರ್ವಜನಿಕ ಜಾಗೃತಿ ಉಪನ್ಯಾಸಗಳು, ಸಾಮಾನ್ಯ ಔಷೀಯ ಸಸ್ಯಗಳ ವಿತರಣೆ, ಪಾರಂಪರಿಕ ಸ್ಥಳಗಳಲ್ಲಿ ಎಲ್‍ಇಡಿ ಪ್ರದರ್ಶನ (ವಿಷಯಗಳನ್ನು ಆಯುಷ್ ಸಚಿವಾಲಯ ಒದಗಿಸುವುದು), ಶಾಲಾ ಸಂಪರ್ಕ ಕಾರ್ಯಕ್ರಮಗಳು, ಅಂಗನವಾಡಿಗಳ ಒಳಗೊಳ್ಳುವಿಕೆ, ಆಯುರ್ವೇದ ಪೋಷಣೆಯನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷದೊಂದಿಗೆ ಜೋಡಿಸುವುದು, ಆಯುಷ್ ಕ್ಯಾಂಪೇನ್ ಪೋರ್ಟಲ್‍ನಲ್ಲಿ ರಸಪ್ರಶ್ನೆ ಸ್ಪರ್ಧೆಗಳು, ಸಮುದಾಯ ಸೇವಾ ಕೇಂದ್ರಗಳು/ ಸಮುದಾಯ ಆರೋಗ್ಯ ಕೇಂದ್ರಗಳು / ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳನ್ನು ತೊಡಗಿಸಿಕೊಳ್ಳಲಾಗಿತ್ತು.
|
6 |
+
ಆಯುರ್ವೇದದ ಬಳಕೆಗೆ ಸಂಬಂಸಿದಂತೆ ಆನ್‍ಲೈನ್ ಪೋರ್ಟಲ್‍ಗಳ ಮೂಲಕ ಪ್ರಕೃತಿಮೌಲ್ಯಮಾಪನ ಮತ್ತು ಸ್ವಾಸ್ಥ್ಯ ಮೌಲ್ಯಮಾಪನ, ಕೃಷಿ ವಿಶ್ವವಿದ್ಯಾನಿಲಯಗಳು ಇತ್ಯಾದಿ ಸೇರಿದಂತೆ ಇತರ ಅನುಷ್ಠಾನ ಸಂಸ್ಥೆಗಳ ಮೂಲಕ ಸಸ್ಯಗಳ ಔಷೀಯ ಮತ್ತು ಆರ್ಥಿಕ ಮËಲ್ಯದ ಕುರಿತು ಜಾಗೃತಿಕಾರ್ಯಕ್ರಮಗಳನ್ನು ನಡೆಸಲಾಗಿದೆ. ಚಿತ್ರಕಲೆ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಆಯುರ್ವೇದ ಪಾಕವಿಧಾನಗಳ ಜ್ವಾಲೆಯಿಲ್ಲದ ಅಡುಗೆ, ಜಿಂಗಲ್, ಘೋಷಣೆ, ಪೋಸ್ಟರ್ , ಕಿರು ವಿಡಿಯೋ ಚಿತ್ರ ಸ್ಪರ್ಧೆ, ಪ್ರಬಂಧ, ಔಷೀಯ ಸಸ್ಯ ಸಂಬಂತ ಸ್ಪರ್ಧೆ ಮತ್ತು ಚರ್ಚಾ ಮತ್ತು ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
|
7 |
+
ಸಾಮಾಜಿಕ ಮಾಧ್ಯಮಗಳ���್ಲಿ ಪ್ರಚಾರ, ಗಣ್ಯ ವ್ಯಕ್ತಿಗಳಿಂದ ವೀಡಿಯೊ ಸಂದೇಶಗಳು, ಆಯುರ್ವೇದದ ಮೇಲೆ ಮಾಹಿತಿ ಪತ್ರಗಳ ಪ್ರಸರಣ, ಆಕಾಶವಾಣಿ /ಟಿವಿ ಸಂದೇಶಗಳು , ಕಿರುಚಿತ್ರಗಳು/ ಜಾಹಿರಾತು ಫಲಕಗಳು / ಎಲ್‍ಇಡಿ ಪ್ರದರ್ಶಕಗಳು / ಯೂಟ್ಯೂಬ್ ದೃಶ್ಯ ಸಂದೇಶಗಳು /ಪತ್ರಿಕಾ ಜಾಹೀರಾತುಗಳು, ಆಯುರ್ವೇದದಲ್ಲಿ ರೇಡಿಯೋ ಮತ್ತು ಟಿವಿ ವಿಚಾರವಿನಿಮಯ ಕಾರ್ಯಕ್ರಮಗಳು,
|
8 |
+
ಆಯುರ್ವೇದ ದಿನದಂದು ಇ-ಕಿಟ್ ಪ್ರಸಾರ, ಒಣ ಭೂಮಿಗೆ ಸೂಕ್ತವಾದ ಔಷೀಧಿಯ ಸಸ್ಯಗಳನ್ನು ಒಳಗೊಂಡಂತೆ (ರಾಜ್ಯವಾರು) ಕೃಷಿಗೆ ಸೂಕ್ತವಾದ ಔಷೀಯ ಸಸ್ಯಗಳ ಪಟ್ಟಿಯ ಪ್ರಸರಣ, ರಾಷ್ಟ್ರೀಯ ಔಷೀಧಿಯ ಸಸ್ಯ ಮಂಡಳಿ ಅಭಿವೃದ್ಧಿಪಡಿಸಿರುವ ಕೃಷಿ-ತಂತ್ರಜ್ಞಾನಗಳ ಪ್ರಸರಣ, ವಿವಿಧ ಪಾಲುದಾರರು, ರೈತ ಉತ್ಪಾದಕರ ಸಂಸ್ಥೆಗಳು, ಇತ್ಯಾದಿಗಳೊಂದಿಗೆ ಔಷೀಯ ಸಸ್ಯಗಳು/ ಇ-ಚರಕ್‍ಗಳ ಮಾರುಕಟ್ಟೆಯ ಅರಿವು ಮೂಡಿಸುವಿಕೆ ಮತ್ತು ರೈತರಲ್ಲಿ ಉತ್ತಮ ಕೃಷಿ ಪದ್ಧತಿ (ಜಿಎಪಿ) ಮತ್ತು ಉತ್ತಮ ಕ್ಷೇತ್ರ ಸಂಗ್ರಹ ಪದ್ಧತಿಗಳ (ಜಿಎಫ್‍ಸಿಪಿ) ಪರಿಕಲ್ಪನೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು.
|
eesanje/url_46_316_9.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ಬಿಬಿಎಂಪಿಯಲ್ಲಿ 10 ಸಾವಿರ ಕೋಟಿ ರೂ. ಅವ್ಯವಹಾರ: ಪ್ರಧಾನಿಗೆ ದೂರು ಸಲ್ಲಿಕೆ
|
2 |
+
ಬೆಂಗಳೂರು, ನ.8- ಬಿಬಿಎಂಪಿ ಯಲ್ಲಿ ನಡೆದಿದೆ ಎನ್ನಲಾದ 10 ಸಾವಿರ ಕೋಟಿ ರೂ.ಗಳ ಬಿಗ್ ಸ್ಕ್ಯಾಮ್ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ದೂರು ನೀಡಲಾಗಿದೆ. ಬಿಬಿಎಂಪಿಯಲ್ಲಿ ಅಧಿಕಾರಿಗಳು ಬ್ರಹ್ಮಾಂಡ ಭ್ರಷ್ಟಾಚಾರ ನಡೆಸುತ್ತಿ ದ್ದಾರೆ ಆದರೂ ಸಂಬಂಧಪಟ್ಟವರು ಅವರ ಮೇಲೆ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವುದರಿಂದ ಈ ವಿಚಾರದಲ್ಲಿ ಮೋದಿ ಅವರು ಮಧ್ಯ ಪ್ರವೇಶಿಸಬೇಕು ಎಂದು ಆಗ್ರಹಿಸಿ ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ವೀರೇಶ್ ಎಂಬುವರು ಪ್ರಧಾನಿ ಕಾರ್ಯಲಯಕ್ಕೆ ಪತ್ರ ಬರೆದಿದ್ದಾರೆ.
|
3 |
+
ಅಡ್ವಾಣಿ ಹುಟ್ಟುಹಬ್ಬಕ್ಕೆ ಮೋದಿ, ಶಾ ಸೇರಿ ಗಣ್ಯರಿಂದ ಶುಭಾಶಯ
|
4 |
+
ಬೆಂಗಳೂರಿನಲ್ಲಿ ರಾಜಕಾಲುವೆ ನಿರ್ವಹಣೆ ನೆಪದಲ್ಲಿ ಹಣ ದುರು ಪಯೋಗದ ಮೆಗಾ ಸ್ಕ್ಯಾಮ್ ಬಗ್ಗೆ ಮೋದಿಯಂಗಳಕ್ಕೆ ದೂರು ಸಲ್ಲಿಸಲಾಗಿದೆ. ಕಳೆದ 10 ವರ್ಷ ದಿಂದ ಬಿಬಿಎಂಪಿಯಲ್ಲಿ ರಾಜ ಕಾಲುವೆ ದುರಸ್ತಿ, ನಿರ್ವಹಣೆ ಹೆಸರಲ್ಲಿ 10 ಸಾವಿರ ಕೋಟಿ ರೂ.ಗಳನ್ನು ದುರುಪಯೋಗಪಡಿಸಿಕೊಂಡಿರುವ ಬಗ್ಗೆ ಪ್ರಧಾನಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ವೀರೇಶ್ ತಿಳಿಸಿದ್ದಾರೆ.
|
5 |
+
ಹತ್ತು ಸಾವಿರ ಕೋಟಿ ಹಣ ವಿನಿಯೋಗ ಮಾಡಿ ಅಭಿವೃದ್ಧಿ ಕಾರ್ಯ ನಡೆಸಿದ್ದರೆ ಒಂದು ಸಣ್ಣ ಮಳೆಗೆ ನಗರ ಅಧ್ವಾನಾವಾಗುವುದು ಏಕೆ ಎಂದು ಅವರು ಪ್ರಶ್ನಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರಾಜಕಾಲುವೆ ನಿರ್ವಹಣೆಗಾಗಿ ಕೋಟಿ ಕೋಟಿ ಹಣ ಮೀಸಲಿಡುತ್ತವೆ ಆದರೆ, ಹಣ ವಿನಿಯೋಗವಾಗುತ್ತಿಲ್ಲ ಬಿಬಿಎಂಪಿಯ ಈ ಕರ್ಮಕಾಂಡದ ಬಗ್ಗೆ ಈಗಾಗಲೇ ಸಿಎಜಿ ರಿಪೋರ್ಟ್ ನಲ್ಲಿಯೂ ಬಹಿರಂಗಗೊಂಡಿದೆ ಎಂದು ಅವರು ಮಾಹಿತಿ ನೀಡಿದರು.
|
6 |
+
ಸಾವಿರಾರು ಕೋಟಿ ರೂ.ಗಳ ಈ ಹಗರಣವನ್ನು ಗಂಭೀರವಾಗಿ ಪರಿಗಣಿಸಿ ಕೇಂದ್ರ ಸರ್ಕಾರ ಇಡಿ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ದೂರಿನಲ್ಲಿ ಮನವಿ ಮಾಡಿಕೊಂಡಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ. ಬಿಬಿಎಂಪಿಯಲ್ಲಿ ನಡೆಯುತ್ತಿ ರುವ ಕಾಮಗಾರಿಗಳ ಬಗ್ಗೆ ವಿಶೇಷ ತನಿಖಾ ಸಂಸ್ಥೆ ನಿಯೋಜನೆ ಮಾಡಲಾಗಿದೆ. ಸಾರ್ವಜನಿಕರು ಎಸ್‍ಐಟಿ ಅಕಾರಿಗಳಿಗೆ ದೂರು ನೀಡಬಹುದು ಆದರೂ ಕೆಲವರು ಪ್ರಧಾನ ಮಂತ್ರಿಗಳಿಗೆ ದೂರು ನೀಡಿದ್ದಾರೆ.
|
7 |
+
ಅವರು ಏನು ದೂರು ನೀಡಿದ್ದಾರೆ ಎನ್ನುವುದು ನಮಗೆ ತಿಳಿದಿಲ್ಲ. ಪ್ರಧಾನಿ ಕಾರ್ಯಲಯದಿಂದ ಬರುವ ಆದೇಶದಂತೆ ಮುಂದಿನ ಕ್ರಮ ವಹಿಸಲಿದ್ದೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
|
eesanje/url_46_317_1.txt
ADDED
@@ -0,0 +1,5 @@
|
|
|
|
|
|
|
|
|
|
|
|
|
1 |
+
ಪೋಕ್ಸೋ ಪ್ರಕರಣದಲ್ಲಿ ಬಂಧನದಲ್ಲಿದ್ದ ಮುರುಘಾ ಶರಣರಿಗೆ ಜಾಮೀನು ಮಂಜೂರು
|
2 |
+
ಬೆಂಗಳೂರು,ನ.8- ಮಹತ್ವದ ಬೆಳವಣಿಗೆಯಲ್ಲಿ ಮುರುಘ ಮಠದ ಡಾ. ಶ್ರೀ ಶಿವಮೂರ್ತಿ ಮುರುಘ ಶರಣರಿಗೆ ನ್ಯಾಯಾಲಯ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಪೋಕ್ಸೊ ಪ್ರಕರಣದಲ್ಲಿ ಬಂಧಿಯಾಗಿದ್ದ ಮುರುಘ ಮಠದ ಶ್ರೀಗಳಿಗೆ ಹೈಕೋರ್ಟ್ ಇಂದು ಷರತ್ತು ಬದ್ದ ಮಧ್ಯಂತರ ಜಾಮೀನು ನೀಡಿದೆ.
|
3 |
+
ಜಾಮೀನು ಪಡೆದ ನಂತರ ಅವರು ಯಾವುದೇ ಕಾರಣಕ್ಕೂ ಚಿತ್ರದುರ್ಗ ಜಿಲ್ಲೆ ಪ್ರವೇಶಿಸುವಂತಿಲ್ಲ ಮತ್ತು ಸಾಕ್ಷಿ ನಾಶ ಮಾಡುವಂತಹ ಪ್ರಕರಣ ಕಂಡು ಬಂದಲ್ಲಿ ಜಾಮೀನು ರದ್ದುಗೊಳ್ಳಲಿದೆ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.
|
4 |
+
ಮಾನವಕಳ್ಳ ಸಾಗಾಣಿಕೆ ದಂಧೆ : ಬೆಂಗಳೂರು ಸೇರಿ ದೇಶದ ಹಲವೆಡೆ ದಾಳಿ
|
5 |
+
ಪ್ರಸ್ತುತ ಒಂದು ಪ್ರಕರಣದಲ್ಲಿ ಅವರಿಗೆ ಜಾಮೀನು ಸಿಕ್ಕಿದ್ದು, ಇನ್ನೊಂದು ಪ್ರಕರಣ ವಿಚಾರಣೆ ಹಂತದಲ್ಲಿ ಇರುವುದರಿಂದ ಅವರು ಜೈಲಿನಿಂದ ಬಿಡುಗಡೆಯಾಗುವುದು ಅನುಮಾನ ಎನ್ನಲಾಗಿದೆ. ಪಾಸ್ ಪೋರ್ಟ್ ವಶಕ್ಕೆ ನೀಡುವುದರ ಜೊತೆಗೆ ಒಟ್ಟು ಏಳು ಷರತ್ತುಗಳನ್ನ ನ್ಯಾಯಾಲಯ ವಿಧಿಸಿದೆ. ಸದ್ಯದಲ್ಲಿಯೇ ಮೊತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಾಮೀಜಿಗಳ ಪರವಾಗಿ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದಾರೆ
|
eesanje/url_46_317_10.txt
ADDED
@@ -0,0 +1,9 @@
|
|
|
|
|
|
|
|
|
|
|
|
|
|
|
|
|
|
|
|
|
1 |
+
ರಾಜ್ಯದಲ್ಲಿ ಇನ್ನೂ ಮೂರು ದಿನ ಮಳೆ ಮುಂದುವರಿಕೆ
|
2 |
+
ಬೆಂಗಳೂರು,ನ.7- ಕಳೆದ ನಾಲ್ಕೈದು ದಿನಗಳಿಂದ ಚೇತರಿಕೆ ಕಂಡಿರುವ ಹಿಂಗಾರು ನಿನ್ನೆ ಸಂಜೆ ಹಾಗೂ ರಾತ್ರಿ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ರಾಜಧಾನಿ ಬೆಂಗಳೂರು, ರಾಮನಗರ, ಮಂಡ್ಯ ಸೇರಿದಂತೆ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಿ ತಗ್ಗುಪ್ರದೇಶಗಳಿಗೆ ನೀರು ನುಗ್ಗಿದೆ. ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಪ್ರಮಾಣದ ಉತ್ತಮ ಮಳೆಯಾಗಿದ್ದರೆ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಚದುರಿದಂತೆ ಮಳೆಯಾಗಿದೆ.
|
3 |
+
ಬೆಂಗಳೂರಿನ ಜಕ್ಕೂರಿನಲ್ಲಿ 164 ಮಿ.ಮೀನಷ್ಟು ಭಾರೀ ಮಳೆಯಾಗಿದೆ. ಉತ್ತರಕರ್ನಾಟಕ ಭಾಗದಲ್ಲಿ ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಿದೆ. ರಾಜ್ಯದ ಒಳನಾಡಿನಲ್ಲೂ ಮಳೆಯಾಗಿದೆ. ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ತುಮಕೂರು, ಚಿತ್ರದುರ್ಗ, ಹಾವೇರಿ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ದಾವಣಗೆರೆ ಚಿಕ್ಕಮಗಳೂರು, ದಕ್ಷಿಣ ಕನ್ನಡ, ವಿಜಯನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ.
|
4 |
+
: ಅಮೆರಿಕದ ಒತ್ತಡಕ್ಕೆ ಮಣಿದ ಇಸ್ರೇಲ್, ಯುದ್ಧದ ಅಲ್ಪ ವಿರಾಮಕ್ಕೆ ಒಪ್ಪಿಗೆ
|
5 |
+
ನಿನ್ನೆ ಸಂಜೆ ಆರಂಭವಾದ ಮಳೆ ತಡರಾತ್ರಿಯವರೆಗೂ ಹಲವು ಕಡೆಗಳಲ್ಲಿ ನಿರಂತರವಾಗಿ ಸುರಿದಿದೆ. ಇದರಿಂದ ರಸ್ತೆಗಳು ಕಾಲುವೆಗಳಂತೆ ನೀರು ತುಂಬಿದ್ದು, ವಾಹನ ಸವಾರರು ಪರದಾಡುವ ಪರಿಸ್ಥಿತಿ ಉಂಟಾಗಿತ್ತು. ರಾಜ್ಯದ ಒಳನಾಡಿನ ಬಹುತೇಕ ಕಡೆಗಳಲ್ಲಿ ಭಾರೀ ಮಳೆಯಾಗಿರುವುದರಿಂದ ಸಣ್ಣ ಕೆರೆ-ಕಟ್ಟೆಗಳಿಗೂ ನೀರು ಬಂದಿದ್ದು, ಜನರು ನಿಟ್ಟುಸಿರು ಬಿಡುವಂತಾಗಿದೆ. ಕೆಲವೆಡೆ ಹಳ್ಳ-ಕೊಳ್ಳಗಳು ಕೂಡ ತುಂಬಿ ಹರಿದಿವೆ.
|
6 |
+
ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿ ಗಾಳಿಯಿಂದಾಗಿ ರಾಜ್ಯದ ಒಳನಾಡಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಸಂಜೆ ಹಾಗೂ ರಾತ್ರಿ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
|
7 |
+
ಹವಾಮಾನ ಮುನ್ಸೂಚನೆ ಪ್ರಕಾರ ಇನ್ನು ಮೂರು ದಿನಗಳ ಕಾಲ ಮಳೆ ನಿರೀಕ್ಷಿಸಬಹುದಾಗಿದೆ. ರಾಜ್ಯಾದ್ಯಂತ ಉತ್ತಮ ಮಳೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ ಎಂದು ತಜ್ಞರು ತಿಳಿಸಿದ್ದಾರೆ. ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯು ವಾಯುಭಾರ ಕುಸಿತವಾಗಿ ಮಾರ್ಪಡಾಗುವ ಸಾಧ್ಯತೆಗಳಿವೆ.
|
8 |
+
ಅಲ್ಲದೆ ಬಂಗಾಳಕೊಲ್ಲಿಯಲ್ಲಿ ಟ್ರಫ್ ನಿರ್ಮಾಣ ವಾಗಿರುವುದರಿಂದ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಕರಾವಳಿ ಹಾಗೂ ಮಳೆನಾಡು ಭಾಗದಲ್ಲಿ ಇಂದು ಸಂಜೆ ಹಾಗೂ ರಾತ್ರಿ ವ್ಯಾಪಕ ಪ್ರಮಾಣದ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಅವರು ಹೇಳಿದ್ದಾರೆ.
|
9 |
+
ಹಿಂಗಾರು ಮಳೆಯ ನಿರೀಕ್ಷೆಯಲ್ಲಿದ್ದ ರೈತ ಸಮುದಾಯಕ್ಕೆ ನಿರಂತರವಾಗಿ ಬೀಳುತ್ತಿರುವ ಮಳೆಯಿಂದ ಸಂತಸವಾಗಿದೆ. ಹಿಂಗಾರು ಬೆಳೆಗಳಿಗೆ ಈ ಮಳೆ ಅನುಕೂಲವಾಗಿದ್ದರೆ ಕೊಯ್ಲಿಗೆ ಬಂದಿದ್ದ ಮುಂಗಾರು ಬೆಳೆಗಳಿಗ��� ಹಾನಿ ಉಂಟಾಗಿದೆ.
|
eesanje/url_46_317_11.txt
ADDED
@@ -0,0 +1,13 @@
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
1 |
+
ಮಾಜಿ ಸಚಿವ, ರಾಜಕೀಯ ಮುತ್ಸದ್ದಿ ಡಿ.ಬಿ.ಚಂದ್ರೇಗೌಡ ಇನ್ನಿಲ್ಲ
|
2 |
+
ಚಿಕ್ಕಮಗಳೂರು, ನ.7- ಮಾಜಿ ಸಚಿವ, ಹಿರಿಯ ರಾಜಕೀಯ ಮುತ್ಸದ್ದಿ ಡಿ.ಬಿ.ಚಂದ್ರೇಗೌಡರು(87) ಇಂದು ಮುಂಜಾನೆ 12.20 ಕ್ಕೆ ದಾರದಹಳ್ಳಿಯ ತಮ್ಮ ನಿವಾಸದಲ್ಲಿ ವಯೋಸಹಜ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ.ಮಂಗಳವಾರ ಮಧ್ಯಾಹ್ನ 2 ರಿಂದ ಸಂಜೆ 6ರ ವರೆಗೆ ಮೂಡಿಗೆರೆ ಅಡ್ಯಂತಾಯ ರಂಗದಮಂದಿರದಲ್ಲಿ ಡಿ.ಬಿ. ಚಂದ್ರೇಗೌಡರ ಪಾರ್ಥಿವ ಶರೀರವನ್ನು ಸಾರ್ವಜನಿಕ ಅಂತಿಮ ದರ್ಶನಕ್ಕೆ ಇಡಲಾಗುವುದು.
|
3 |
+
ಬುಧವಾರ ಮಧ್ಯಾಹ್ನ ದಾರದಹಳ್ಳಿಯ ಅವರ ಪೂರ್ಣಚಂದ್ರ ಎಸ್ಟೇಟ್ ನಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.ಪತ್ನಿ ಶ್ರೀಮತಿ ಪೂರ್ಣಿಮಾ, ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
|
4 |
+
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ದಾರದಹಳ್ಳಿಯಲ್ಲಿ 26 ಆಗಸ್ಟ್ 1936 ರಂದು ಜನಿಸಿದರು . ಬೆಂಗಳೂರಿನ ರೇಣುಕಾಚಾರ್ಯ ಕಾಲೇಜಿನಲ್ಲಿ ತಮ್ಮ ಬಿಎಸ್ಸಿ ಶಿಕ್ಷಣವನ್ನು ಮತ್ತು ಬೆಳಗಾವಿಯ ಆರ್ಎಲ್ ಕಾನೂನು ಕಾಲೇಜಿನಲ್ಲಿ ಎಲ್‌ಎಲ್‌ಬಿಯನ್ನು ಪಡೆದರು . 22 ಮೇ 1966 ರಂದು ಪೂರ್ಣ ಚಂದ್ರೇಗೌಡರನ್ನು ವಿವಾಹವಾದರು ಮತ್ತು ನಾಲ್ಕು ಹೆಣ್ಣು ಮಕ್ಕಳನ್ನು ಹೊಂದಿದ್ದರು.
|
5 |
+
ತಮ್ಮ ಕಾಲೇಜು ದಿನಗಳಲ್ಲಿ ಸುದೀರ್ಘ ರಾಜಕೀಯ ವೃತ್ತಿಜೀವನಕ್ಕೆ ದಾರಿ ಮಾಡಿಕೊಡುವ ಮೂಲಕ ತಮ್ಮ ನಾಯಕತ್ವ ಕೌಶಲ್ಯಗಳನ್ನು ಕಲಿತರು; ರೇಣುಕಾಚಾರ್ಯ ಕಾಲೇಜು ವಿದ್ಯಾರ್ಥಿಗಳ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಆರ್ ಎಲ್ ಲಾ ಕಾಲೇಜಿನಲ್ಲಿದ್ದಾಗ ಕಾಲೇಜಿನ ಪ್ರಧಾನ ಕಾರ್ಯದರ್ಶಿಯಾದರು .
|
6 |
+
1967 ರವರೆಗೆ ಪ್ರಜಾ ಸೋಷಿಯಲಿಸ್ಟ್ ಪಕ್ಷದಲ್ಲಿದ್ದರು. 1971 ರಲ್ಲಿ, ಅವರು – ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸುವ ಚಿಕ್ಕಮಗಳೂರು ಕ್ಷೇತ್ರದಿಂದ 5 ನೇ ಲೋಕಸಭೆಗೆ ಆಯ್ಕೆಯಾದರು . ಚಿಕ್ಕಮಗಳೂರಿನಿಂದ 6 ನೇ ಲೋಕಸಭೆಗೆ ಮರು ಆಯ್ಕೆಯಾದರು , ಆದರೆ ಇಂದಿರಾ ಗಾಂಧಿಯವರು ಅಲ್ಲಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಮತ್ತು ಗೆಲ್ಲಲು ಅವಕಾಶ ಮಾಡಿಕೊಡಲು ನಂತರ ತಮ್ಮ ಸ್ಥಾನವನ್ನು ತೆರವು ಮಾಡಿದರು.
|
7 |
+
1978 ಮತ್ತು 1983 ರ ನಡುವೆ ಅವರು ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾದರು ಮತ್ತು 1979 ರಿಂದ 1980 ರವರೆಗೆ ಕರ್ನಾಟಕ ಸರ್ಕಾರದಲ್ಲಿ ಕ್ಯಾಬಿನೆಟ್ ಮಂತ್ರಿಯಾಗಿ ಕೆಲಸ ಮಾಡಿದರು. 1980 ರಲ್ಲಿ ಅವರು ಕಾಂಗ್ರೆಸ್ಗೆ ರಾಜೀನಾಮೆ ನೀಡಿದರು ಮತ್ತು ಕರ್ನಾಟಕ ಕ್ರಾಂತಿ ರಂಗಕ್ಕೆ ಸೇರಿದರು, ಕರ್ನಾಟಕ ರಾಜ್ಯ ಕಾಂಗ್ರೆಸ್ (ಯು) ಅಧ್ಯಕ್ಷರಾದರು . ಮತ್ತು 1980 ರಿಂದ 1981 ರವರೆಗೆ ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದರು.
|
8 |
+
ಬೆಂಗಳೂರು : ಲಿವಿಂಗ್ ಟು ಗೆದರ್‌ನಲ್ಲಿದ್ದ ಪ್ರೇಮಿಗಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ
|
9 |
+
1983 ರಲ್ಲಿ ತೀರ್ಥಹಳ್ಳಿ ಕ್ಷೇತ್ರವನ್ನು ಪ್ರತಿನಿಧಿಸಿ ಶಾಸಕರಾಗಿ ಕರ್ನಾಟಕ ವಿಧಾನಸಭ��ಗೆ ಪ್ರವೇಶಿಸಿದರು ಮತ್ತು 1983 ರಿಂದ 1985 ರವರೆಗೆ ವಿಧಾನಸಭೆಯಲ್ಲಿ ಸ್ಪೀಕರ್ ಆಗಿ ಸೇವೆ ಸಲ್ಲಿಸಿದರು. 1986 ರಲ್ಲಿ ಅವರು ಜನತಾ ದಳದ ರಾಜಕೀಯ ಪಕ್ಷವನ್ನು ಪ್ರತಿನಿಧಿಸಿ ರಾಜ್ಯಸಭೆಯಲ್ಲಿ ಸಂಸದರಾಗಿ ಆಯ್ಕೆಯಾದರು. 1989ರಲ್ಲಿ ತೀರ್ಥಹಳ್ಳಿ ಕ್ಷೇತ್ರದಿಂದ ಶಾಸಕರಾಗಿ ಪುನರಾಯ್ಕೆಗೊಂಡು ವಿರೋಧ ಪಕ್ಷದ ನಾಯಕರಾದರು. 1999 ರಲ್ಲಿ, ಅವರು ಶೃಂಗೇರಿ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕರಾಗಿ ಮೂರನೇ ಅವಧಿಗೆ ಆಯ್ಕೆಯಾದರು ಮತ್ತು 2004 ರವರೆಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದರು.
|
10 |
+
2008 ರಲ್ಲಿ ಅವರು ಕಾಂಗ್ರೆಸ್ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದರು ; ತರುವಾಯ, ಅವರು 2009 ರಲ್ಲಿ ಬಿಜೆಪಿಯಿಂದ ಬೆಂಗಳೂರು ಉತ್ತರವನ್ನು ಪ್ರತಿನಿಧಿಸುವ 15 ನೇ ಲೋಕಸಭೆಯಲ್ಲಿ ಸಂಸದರಾದರು. ಸಾರ್ವಜನಿಕ ಕುಂದುಕೊರತೆಗಳು, ಕಾನೂನು ಮತ್ತು ನ್ಯಾಯ ಸಮಿತಿಯ ಸದಸ್ಯರಾಗಿದ್ದರು.
|
11 |
+
1971 : ಚಿಕ್ಕಮಗಳೂರಿನ ಲೋಕಸಭಾ ಸದಸ್ಯ (ಕಾಂಗ್ರೆಸ್) 1977 : ಚಿಕ್ಕಮಗಳೂರಿನ ಲೋಕಸಭಾ ಸದಸ್ಯ (ಕಾಂಗ್ರೆಸ್) 1978 ರಲ್ಲಿ ಇಂದಿರಾ ಗಾಂಧಿಯವರು ಲೋಕಸಭೆಗೆ ಸ್ಪರ್ಧಿಸಲು ಮತ್ತು ಪ್ರವೇಶಿಸಲು ರಾಜೀನಾಮೆ ನೀಡಿದರು 1978-1983 : ಕರ್ನಾಟಕ ವಿಧಾನ ಪರಿಷತ್ತಿನಲ್ಲಿ (ಕಾಂಗ್ರೆಸ್) ದೇವರಾಜ್ ಅರಸರ ಕರ್ನಾಟಕ ಕ್ರಾಂತಿ ರಂಗಕ್ಕೆ ಕಾಂಗ್ರೆಸ್ ತೊರೆದರು
|
12 |
+
1983-1985 : 1983 ರಲ್ಲಿ ತೀರ್ಥಹಳ್ಳಿ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕ (ಜನತಾ ಪಕ್ಷ) 1986 : ರಾಜ್ಯಸಭಾ ಸಂಸದ (ಜನತಾ ಪಕ್ಷ, ನಂತರ ಜನತಾದಳ ಎಂದು ಮರುನಾಮಕರಣ ಮಾಡಲಾಯಿತು ) 1989 : ತೀರ್ಥಹಳ್ಳಿ ಕ್ಷೇತ್ರವನ್ನು ಪ್ರತಿನಿಧಿಸುವ ಕರ್ನಾಟಕ ವಿಧಾನಸಭಾ ಸದಸ್ಯ (ಜನತಾ ದಳ) 1999 : ಶೃಂಗೇರಿ (ಕಾಂಗ್ರೆಸ್) ಪ್ರತಿನಿಧಿಸುವ ಶಾಸಕ 2009 : ಬಿಜೆಪಿಗೆ ಬೆಂಗಳೂರು (ಉತ್ತರ) ಲೋಕಸಭಾ ಸದಸ್ಯ.
|
13 |
+
ಸಮಾಜವಾದಿ ಚಿಂತಕರಾಗಿದ್ದ ಡಿ.ಬಿ.ಚಂದ್ರೇಗೌಡರು ನಾಲ್ಕೂವರೆ ದಶಕಗಳ ಕಾಲ ರಾಜ್ಯ ಮತ್ತು ರಾಷ್ಟ್ರ ಮಟ್ಟದ ರಾಜಕೀಯ ಮತ್ತು ಸಾರ್ವಜನಿಕ ಜೀವನದಲ್ಲಿ ತಮ್ಮನ್ನು ವೈವಿದ್ಯಮಯವಾಗಿ ತೊಡಗಿಸಿಕೊಂಡಿದ್ದರು. 2014 ರಿಂದೀಚೆಗೆ ಸಕ್ರಿಯ ರಾಜಕೀಯದಿಂದ ಹಿಂದೆ ಸರಿದಿದ್ದರು. ದಾರದಹಳ್ಳಿಯ ತಮ್ಮ ಪೂರ್ಣಚಂದ್ರ ನಿವಾಸದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು.
|
eesanje/url_46_317_12.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ಪರೀಕ್ಷಾ ಅಕ್ರಮದಲ್ಲಿ 32 ಮಂದಿ ಸೆರೆ : ಸಚಿವ ಪ್ರಿಯಾಂಕ್ ಖರ್ಗೆ
|
2 |
+
ಕಲ್ಬುರ್ಗಿ,ನ.6- ಸರ್ಕಾರದ ವಿವಿಧ ಹುದ್ದೆಗಳಿಗೆ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲಾದ ಪರೀಕ್ಷೆಯಲ್ಲಿನ ಅಕ್ರಮಗಳಿಗೆ ಸಂಬಂಧಪಟ್ಟಂತೆ ಕಲ್ಬುರ್ಗಿಯಲ್ಲಿ 13 ಜನ, ಯಾದಗಿರಿಯಲ್ಲಿ 19 ಮಂದಿಯನ್ನು ಬಂಧಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಅಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
|
3 |
+
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರೀಕ್ಷೆ ಅಕ್ರಮ ತಡೆಗೆ ಸಾಕಷ್ಟು ಮುಂಜಾಗ್ರತೆ ವಹಿಸಲಾಗಿತ್ತು. 24 ಗಂಟೆಗೂ ಮುನ್ನ ಸುತ್ತಮುತ್ತಲಿನ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಿಸಲಾಗಿತ್ತು. 200 ಮೀಟರ್ ಅಂತರದಲ್ಲಿ ವಾಹನ ನಿಲುಗಡೆ ನಿಷೇಧ, ಪ್ರತಿಯೊಂದು ವಸತಿ ಗೃಹ ಹಾಗೂ ವಾಹನಗಳ ತಪಾಸಣೆ, ಪರೀಕ್ಷಾ ಕೇಂದ್ರದಲ್ಲಿ ಮೆಟಲ್ ಡಿಟಕ್ಟರ್ ಮತ್ತು ಹ್ಯಾಂಡ್‍ಹೆಲ್ಡ್ ಡಿಟಕ್ಟರ್‍ಗಳನ್ನು ಅಳವಡಿಸಲಾಗಿತ್ತು.
|
4 |
+
ಅದರ ಹೊರತಾಗಿಯೂ ಅಕ್ರಮ ನಡೆಸುವವರು ವಿಶೇಷವಾದ ಶರ್ಟ್‍ಗಳನ್ನು ಧರಿಸಿದ್ದಾರೆ. ಬ್ಲೂಟೂತ್ ಸಲಕರಣೆ ಅತ್ಯಂತ ಚಿಕ್ಕದಾಗಿದ್ದು, ಪತ್ತೆಹಚ್ಚಲು ಕಷ್ಟಸಾಧ್ಯವಾಗುವಂತೆ ಬಳಕೆ ಮಾಡಿದ್ದಾರೆ. ಆದರೂ ಪೊಲೀಸರು ಮತ್ತು ಪರೀಕ್ಷಾ ಕೇಂದ್ರದ ಉಸ್ತುವಾರಿಗಳು ತೀವ್ರ ತಪಾಸಣೆ ನಡೆಸಿದಾಗ ನಗರದಲ್ಲಿ ಒಂದು ಪ್ರಕರಣ, ಯಾದಗಿರಿಯಲ್ಲಿ ಮೂರ್ನಾಲ್ಕು ಕಡೆ ಅಕ್ರಮಗಳು ಪತ್ತೆಯಾಗಿವೆ. ಕಲ್ಬುರ್ಗಿಯಲ್ಲಿ 13, ಯಾದಗಿರಿಯಲ್ಲಿ 19 ಮಂದಿಯನ್ನು ಬಂಸಲಾಗಿದೆ ಎಂದು ತಿಳಿಸಿದರು.
|
5 |
+
ಮುಖ್ಯಸ್ಥರಾಗಿ ನೇಮಕಗೊಂಡ ದೇಶದ ಮೊದಲ ದಲಿತ ಅಧಿಕಾರಿ
|
6 |
+
ಹಿಂದಿನ ಸರ್ಕಾರದ ಅವಧಿಯಲ್ಲಿ ಪರೀಕ್ಷಾ ಅಕ್ರಮಗಳ ತಡೆಗೆ ಮುಂಜಾಗ್ರತೆ ವಹಿಸಿರಲಿಲ್ಲ. ನಾವು ಬಿಗಿ ಕ್ರಮ ಕೈಗೊಂಡಿದ್ದರಿಂದಾಗಿ ಅಕ್ರಮಗಳು ಕಡಿಮೆಯಾಗಿವೆ. ಸಾಮಾನ್ಯವಾಗಿ ಪರೀಕ್ಷೆಗೆ ಶೇ.15ರಿಂದ 20ರಷ್ಟು ಜನ ಗೈರು ಹಾಜರಾಗುತ್ತಾರೆ. ಪರೀಕ್ಷಾ ಅಕ್ರಮ ನಡೆಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಈ ಬಾರಿ ಗೈರು ಹಾಜರಿಯ ಪ್ರಮಾಣ ಶೇ.40ರಷ್ಟಾಗಿದೆ ಎಂದು ಹೇಳಿದರು.
|
7 |
+
ಮೂಲಗಳ ಪ್ರಕಾರ ಪರೀಕ್ಷಾ ಅಕ್ರಮಗಳಲ್ಲಿ ಬಂತರಾಗಿರುವವರ ಪೈಕಿ ಶೇ.90ರಷ್ಟು ಅಫ್ಜಲಪುರ ತಾಲ್ಲೂಕಿನವರಾಗಿದ್ದಾರೆ. ಬಹುತೇಕ ಆರೋಪಿಗಳ ವಾಟ್ಸಪ್‍ಗೆ ಪರೀಕ್ಷೆಯ ಹಿಂದಿನ ದಿನ ಕರೆ ಬಂದಿದೆ. ಕೆಲವರು ಆ ಸಂಖ್ಯೆಯನ್ನು ಸರ್ಕಾರ್ ಎಂದು ಸೇವ್ ಮಾಡಿಕೊಂಡಿದ್ದಾರೆ. ಪ್ರಮುಖ ಆರೋಪಿ ಆರ್.ಡಿ.ಪಾಟೀಲ್ ಜತೆಗೂ ಈ ಸಂಖ್ಯೆಯಲ್ಲಿ ಸಂವಹನ ನಡೆದಿರುವ ಸಾಕ್ಷ್ಯಗಳು ಲಭ್ಯವಾಗಿದೆ ಎಂದು ಹೇಳಲಾಗುತ್ತಿದೆ.
|
eesanje/url_46_317_2.txt
ADDED
@@ -0,0 +1,17 @@
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
1 |
+
ನಮ್ಮ ಗ್ಯಾರಂಟಿಗಳು ಪ್ರಧಾನಿಯ ನಿದ್ದೆಗೆಡಿಸಿದೆ : ಡಿಕೆಶಿ
|
2 |
+
ಬೆಂಗಳೂರು,ನ.8- ಲೋಕಸಭೆ ಚುನಾವಣೆಗೂ ಮುನ್ನಾ ರಾಜ್ಯ ಸರ್ಕಾರದಲ್ಲಿ ಗೊಂದಲ ಮೂಡಿಸಬೇಕು ಎಂದು ಬಿಜೆಪಿಯ ಕೆಲಸವಿಲ್ಲದ ನಾಯಕರು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ನಮ್ಮ ಒಬ್ಬನೆ ಒಬ್ಬ ಶಾಸಕನನ್ನು ಕರೆದುಕೊಳ್ಳಲು ಅವರಿಗೆ ಸಾಧ್ಯವಾಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಮಗೆ ಬಹಳಷ್ಟು ಮಾಹಿತಿಗಳಿವೆ. ಸದ್ಯಕ್ಕೆ ನಾವು ಏನನ್ನು ಬಹಿರಂಗ ಪಡಿಸುವುದಿಲ್ಲ ಎಂದರು.
|
3 |
+
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಪಡ್ನಾವೀಸ್ ನಡೆಸಿರುವ ಸಭೆಗೆ ರಾಜ್ಯದ ಕಾಂಗ್ರೆಸ್ ಶಾಸಕರು ಹೋಗಿಲ್ಲ. ಆದರೆ ಬಿಜೆಪಿಯವರು ಲೋಕಸಭೆ ಚುನಾವಣೆಗೂ ಮುನ್ನಾ ಗೊಂದಲ ಮಾಡಲು ಯತ್ನಿಸುತ್ತಿದ್ದಾರೆ. ಅವರ ಪಕ್ಷದಲ್ಲಿಯೇ ಸಾಕಷ್ಟು ಗೊಂದಲ ಇದೆ, ನಾಯಕತ್ವ ಇನ್ನೂ ತೀರ್ಮಾನವಾಗಿಲ್ಲ. ಅದರ ನಡುವೆ ನಮ್ಮ ಶಾಸಕರ ಕುಶಲ ವಿಚಾರಿಸಲು, ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುವಂತೆ ಬಂದು, ಹೊರ ಹೋಗುವಾಗ ರಾಜಕೀಯ ಮಾತನಾಡಿದ್ದಾಗಿ ಬಿಂಬಿಸುತ್ತಿದ್ದಾರೆ.
|
4 |
+
ಇಂತಹ ನೂರು ಪ್ರಯತ್ನ ಮಾಡಲಿ, ಮಾಡದಿರಲಿ, ನಮಗೆ ಎಲ್ಲಾ ಮಾಹಿತಿ ಗೋತ್ತಿದೆ. ಬಿಜೆಪಿಯ ಕೆಲವು ನಿರೋದ್ಯೋಗಿಗಳು, ಏಜೆಂಟರು ಓಡಾಡುತ್ತಿದ್ದಾರೆ. ಬಿಜೆಪಿಯವರು ಸಂಪರ್ಕ ಮಾಡಿ ಚರ್ಚೆ ಮಾಡಿದ ಬಳಿಕ ನಮ್ಮ ಶಾಸಕರು ನಮಗೆ ಮಾಹಿತಿ ನೀಡುತ್ತಿದ್ದಾರೆ ಎಂದರು.
|
5 |
+
ಮಹಿಳೆಯರ ಕುರಿತು ಹೊಲಸು ನಾಲಿಗೆ ಹರಿಬಿಟ್ಟಿದ್ದ ನಿತೀಶ್ ಕುಮಾರ್ ಕ್ಷಮೆಯಾಚನೆ
|
6 |
+
ನಾನು ಮನೆಯ ಮುಖ್ಯಸ್ಥ:ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮನೆಗೆ ನಿನ್ನೆ ದಿಡೀರ್ ಭೇಟಿ ನೀಡಿದ ಬಗ್ಗೆ ಪತಿಕ್ರಿಯಿಸಿದ ಅವರು, ನಾನು ಮನೆಯ ಮುಖ್ಯಸ್ಥ, ಎಲ್ಲರ ಮನೆಗೂ ಹೋಗುತ್ತೇನೆ. ಕೆಲವರನ್ನು ನಮ್ಮ ಮನೆಗೆ ಕರೆಸಿಕೊಳ್ಳುತ್ತೇನೆ. ಅದರಲ್ಲಿ ವಿಶೇಷವೇನು ಇಲ್ಲ. ರಾಮಲಿಂಗಾರೆಡ್ಡಿ ಮನೆಗೆ ಹೋಗಿದ್ದೇನೆ, ಪರಮೇಶ್ವರ್ ನಮ್ಮ ಮನೆಗೆ ಬರುತ್ತೇನೆ ಎಂದಿದ್ದರು ನಾನೇ ಬರುತ್ತೇನೆ ಎಂದು ಹೇಳಿದ್ದೇನೆ. ಸತೀಶ್ ಜಾರಕಿಹೊಳಿ ನಮ್ಮ ಮನೆಗೆ ಬರುವುದಾಗಿ ಹೇಳಿದರು, ಬೇಡ ನಾನೇ ಬರುತ್ತೇನೆ ಎಂದು ಹೋಗಿದ್ದೆ ಎಂದರು.
|
7 |
+
ನಮ್ಮ ಮನೆಯಲ್ಲಿ ಜಾಗವೇ ಇರುವುದಿಲ್ಲ. ಜನ ಒಬ್ಬರ ಮೇಲೆ ಒಬ್ಬರು ನುಗ್ಗುತ್ತಿರುತ್ತಾರೆ. ಮನೆಯಲ್ಲಿ ಸಮಯವೂ ಇರುವುದಿಲ್ಲ, ಜಾಗವೂ ಇಲ್ಲ. ನಮ್ಮ ಪಕ್ಷದ ಕಾರ್ಯಕರ್ತರಿಗೆ ಸಮಯವನ್ನೇ ನೀಡಲಾಗುತ್ತಿಲ್ಲ, ಇದಕ್ಕಾಗಿ ಕ್ಷಮೆ ಕೇಳುತ್ತೇನೆ ಎಂದರು.
|
8 |
+
ಕಾಂಗ್ರೆಸ್‍ನಲ್ಲಿಲ ಸತೀಶ್ ಜಾರಕಿಹೊಳಿ ಮೂರನೇ ಶಕ್ತಿ ಕೇಂದ್ರವಾಗುತ್ತಿದ್ದಾರೆಯೇ ಎಂಬ ಪ್ರಶ್ನೆ ಪ್ರತಿಕ್ರಿಯಿಸಿದ ಅವರು, ಒಬ್ಬರೆ ಕೆಪಿಸಿಸಿ ಅಧ್ಯಕ್ಷ ಹಾಗೂ ಒಬ್ಬರೆ ಮುಖ್ಯಮಂತ್ರಿ ಮಾತ್ರ. ಮೂರನೇ ಶಕ್ತಿ ಕೇಂದ್ರ ಇಲ್ಲ. ರಾಜ್ಯದ ಐದು ವರ್ಷ ಆಡಳಿತ ನಡೆಸಲು ಅವಕಾಶ ನೀಡಿದ್ದಾರೆ, ಅದು ಮುಗಿದ ಬಳಿಕ 2028ಕ್ಕೆ ಮತ್ತೆ ಅಧಿಕಾರಕ್ಕೆ ತರುತ್ತೇವೆ ಎಂಬ ವಿಶ್ವಾಸ ಇದೆಯಲ್ಲಾ ಅದೇ ಸಂತೋಷ ಎಂದರು.
|
9 |
+
ಸಂಪುಟದಲ್ಲಿ ಬದಲಾವಣೆ ಇಲ್ಲ:ಪಂಚರಾಜ್ಯಗಳ ಚುನಾವಣೆಯ ನಂತರ ರಾಜ್ಯ ಸಚಿವ ಸಂಪುಟ ಪುನಃರಚನೆಯಾಗಲಿದೆ ಎಂಬುದು ಆಧಾರ ರಹಿತ. ಸದ್ಯಕ್ಕೆ ಅಂತಹ ಯಾವ ಬದಲಾವಣೆಗಳು ಇಲ್ಲ. ನಿಗಮ ಮಂಡಳಿಗೆ ನೇಮಕಾತಿ ಕುರಿತು ಚರ್ಚೆ ನಡೆಸಲು ನವೆಂಬರ್ 15ರ ಬಳಿಕ ಎಐಸಿಸಿ ನಾಯಕರು ರಾಜ್ಯಕ್ಕೆ ಬರುತ್ತಾರೆ ಎಂದರು. ಕೆಪಿಸಿಸಿ ಅಧ್ಯಕ್ಷರಾಗಿರುವ ಸತೀಶ್ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ಈಶ್ವರ್ ಖಂಡ್ರೆ ಸಚಿವರಾಗಿದ್ದಾರೆ. ಹೊಸ ತಂಡ ಬರಬೇಕು ಎಂದು ಹೈಕಮಾಂಡ್‍ನವರೊಂದಿಗೆ ಚರ್ಚೆ ಮಾಡಿದ್ದೇವೆ. ಎಐಸಿಸಿ ಅಧ್ಯಕ್ಷರು ನಮ್ಮ ರಾಜ್ಯದವರೆ ಇದ್ದಾರೆ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.
|
10 |
+
ಪ್ರಧಾನಿ ನಿದ್ದೆ ಕೆಟ್ಟಿದೆ:ಮಧ್ಯ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರವನ್ನು ಪ್ರಧಾನಮಂತ್ರಿಯವರು ಟೀಕೆ ಮಾಡಿರುವುದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಪ್ರಧಾನಿ ನಮ್ಮನ್ನು ಅಷ್ಟು ನೆನೆಸಿಕೊಳ್ಳುತ್ತಿದ್ದಾರಲ್ಲ ಸಂತೋಷ, ನಮ್ಮ ಗ್ಯಾರಂಟಿ, ರಾಜ್ಯದ ಜನರ ತೀರ್ಮಾನ ಪ್ರಧಾನಿಯವರ ನಿದ್ದೆ ಗೆಡಿಸಿದೆ ಎಂದರು. ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಐದರಲ್ಲೂ ಗೆಲ್ಲುತ್ತದೆ. ಮಿಜೋರಾಂನ ಬಗ್ಗೆ ಮಾಹಿತಿ ಇಲ್ಲ. ಉಳಿದಂತೆ ಎಲ್ಲಾ ಕಡೆ ಗೆಲ್ಲುತ್ತೇವೆ. ಉತ್ತರ ಭಾರತದಲ್ಲೆ ರಾಜಸ್ಥಾನದಲ್ಲಿ ಉತ್ತಮ ಅಭಿವೃದ್ಧಿಯ ಕೆಲಸಗಳಾಗಿವೆ ಎಂದರು.
|
11 |
+
ಜೆಡಿಎಸ್ ಶಾಸಕರು ಒಗ್ಗಟ್ಟು ಪ್ರದರ್ಶನ ಮಾಡುವ ಅಂತಹ ಪರಿಸ್ಥಿತಿ ಯಾಕೆ ಬಂತು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಬೇಕು. ನಮಗೆ 136 ಶಾಸರಕ ಹಾಗೂ ಪಕ್ಷೇತರರ ಬೆಂಬಲ ಇದೆ. ಜೆಡಿಎಸ್‍ನವರು ಒಗ್ಗಟ್ಟು ಪ್ರದರ್ಶನ ಮಾಡುವ ಪರಿಸ್ಥಿತಿ ಬಂದಿರುವುದು ಏಕೆಂದು ಆ ಪಕ್ಷದ ನಾಯಕರೇ ಹೇಳಬೇಕು ಎಂದರು.
|
12 |
+
ಮುಖ್ಯಮಂತ್ರಿಯವರು ಹೇಳಿದಂತೆ ಬಿಜೆಪಿ-ಜೆಡಿಎಸ್‍ನ ಬಹಳಷ್ಟು ಮಂದಿ ಕಾಂಗ್ರೆಸ್‍ಗೆ ಬರುತ್ತಾರೆ. ಇದೇ 15ಕ್ಕೆ ಅಡ್ಮಿಷನ್ ದಿನಾಂಕ ನಿಗದಿಯಾಗಿದೆ ಎಂದು ಡಿ.ಕೆ.ಶಿವಕುಮಾರ ಜೇಬು ತಡಕಾಡಿದರು.ಬಹುಶಃ ಮನೆಯಲ್ಲಿ ಅಪಾಯಿಂಟ್ ಮೆಂಟ್ ಕಾರ್ಡ್ ಅನ್ನು ಮನೆಯಲ್ಲಿ ಬಿಟ್ಟಿರಬಹುದು. ಎಷ್ಟು ಜನ ಅಡ್ಮಿಷನ್ ತೆಗೆದುಕೊಳ್ಳುತ್ತಾರೆ ಎಂದು 14ರ ಸಂಜೆ ತಿಳಿಸುತ್ತೇನೆ ಎನ್ನುವ ಮೂಲಕ ನವೆಂಬರ್ 15ರಂದು ಪ್ರಭಾವಿ ನಾಯಕರು ಕಾಂಗ್ರೆಸ್ ಸೇರುತ್ತಿರುವ ಸುಳಿವು ನೀಡಿದರು.
|
13 |
+
ಎಲ್ಲಾ ಜಾತಿಗಳು ನ್ಯಾಯ:ಸದಾಶಿವ ಆಯೋಗದ ವರದಿ ಜಾರಿ ಸೇರಿದಂತೆ ಪರಿಶಿಷ್ಟರ ಬೇಡಿಕೆಗಳ ಈಡೇರಿಕೆ ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವುದು. ನಮ್ಮ ಪಕ್ಷದಲ್ಲಿ ಕೆಲವು ಬದ್ಧತೆಗಳಿವೆ. ಚಿತ್ರದುರ್ಗದ ಸಮಾವೇಶದಲ್ಲಿ ಕಾಂಗ್ರೆಸ್ ನಿರ್ಣಯ ಕೈಗೊಂಡಿದೆ. ಎಲ್ಲವನೂ ಹಂತ ಹಂತವಾಗಿ ಜಾರಿ ಮಾಡುತ್ತೇವೆ. ಎಲ್ಲ��� ಸಮಾಜಕ್ಕೂ ನ್ಯಾಯ ಕೊಡಿಸುತ್ತೇವೆ, ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ ಎಂದರು.ಬಿಬಿಎಂಪಿ ಇಂಜಿನಿಯರ್ ಇನ್ ಛೀಪ್ ಪ್ರಹ್ಲಾದ್ ಅವರ ವಿರುದ್ಧ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಬರೆದಿರುವ ಪತ್ರವನ್ನು ಗಂಭೀರವಾಗಿ ಪರಿಗಣಿಸಿ ಖಂಡಿತವಾಗಿಯೂ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
|
14 |
+
ರಾಜ್ಯದಲ್ಲಿ ಅಭಿವೃದ್ಧಿಯಲ್ಲಿ ಹಿನ್ನೆಡೆಯಾಗಿಲ್ಲ. ಬಜೆಟ್ ಘೋಷಿತ ಯೋಜನೆಗಳ ಪ್ರಕಾರ ಕೆಲಸ ನಡೆಯುತ್ತಿದೆ. ಹೊಸ ಬಜೆಟ್ ಕೊಟ್ಟಿಲ್ಲ, ಡಿಸೆಂಬರ್‍ಗೆ ವೇಳೆಗೆ ಹಣಕಾಸು ಹೊಂದಾಣಿಕೆ ಮಾಡುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ ಎಂದರು.
|
15 |
+
ಅದಾನಿ ಸಂಸ್ಥೆಯಲ್ಲಿ ಅಮೆರಿಕದಿಂದ 553 ಮಿಲಿಯನ್ ಡಾಲರ್ ಹೂಡಿಕೆ
|
16 |
+
ರಾಜ್ಯದಲ್ಲಿ ಹೊಸ ಕಾರು ಖರೀದಿ ಸೇರಿದಂತೆ ಅನಗತ್ಯ ವೆಚ್ಚಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು,ಡಿಸೇಲ್ ಕಾರುಗಳನ್ನು ಬದಲಾವಣೆ ಮಾಡಬೇಕು ಎಂದು ಸರ್ಕಾರ ಸೂಚನೆ ನೀಡಿದೆ. ದೆಹಲಿಯಲ್ಲಿ ಇರುವ ನನ್ನ ಕಾರನ್ನು ಬದಲಾಯಿಸಬೇಕಿದೆ. ಇಲ್ಲಿ ಹೊಸ ಬುಕ್ಕಿಂಗ್‍ಗೆ ಅವಕಾಶ ಇಲ್ಲ. ಬೆಂಗಳೂರಿಗೆ ಹೋಗಿ ಕಾರು ಬುಕ್ ಮಾಡಿ ಬದಲಾವಣೆ ಮಾಡಬೇಕಿದೆ. ಡಿಸೇಲ್ ಕಾರು ದಲಾಯಿಸಿ ಪೆಟ್ರೋಲ್ ಕಾರು ಖರೀದಿಸಲು ಅಕಾರಿಗಳು ಕ್ರಮ ಕೈಗೊಂಡಿದ್ದಾರೆ ಎಂದರು.
|
17 |
+
ರಾಜ್ಯದಲ್ಲಿ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡಲಾಗಿದೆ. ಮೈಸೂರು ದಸರಾಗೆ ಜನವೋ ಜನ. ಜಂಬು ಸವಾರಿ ದಿನ ನಾನು ಮುಖ್ಯಮಂತ್ರಿಯವರ ಜೊತೆ ಬಸ್‍ನಲ್ಲಿ ಬಂದು ಬಿಟ್ಟೆ. ನನ್ನ ಪತ್ನಿ ಅವರ ಮನೆಯಲ್ಲಿದ್ದರು. ನನ್ನ ಮಾವನ ಮನೆಗೂ ಅರಮನೆಗೂ ಒಂದು ಕಿಲೋ ಮೀಟರ್. ನನ್ನ ಪತ್ನಿಯನ್ನು ಕರೆ ತರುವಂತೆ ಪೆÇಲೀಸ್ ಗಾಡಿ ಕಳುಹಿಸಿದೆ ಆದರೆ ಜನರ ನಡುವೆ ಕರೆ ತರಲಾಗಲಿಲ್ಲ, ನಾನು ಹೋಗಿ ಬಟ್ಟೆ ಬದಲಾಯಿಸಿಕೊಂಡು ಬರಬೇಕು ಎಂದು ಕೊಂಡಿದ್ದೆ, ಅದು ಆಗಲಿಲ್ಲ ಅಷ್ಟು ಜನ. ಉಚಿತ ಪ್ರಯಾಣ ಎಂದು ಮಹಿಳೆಯರು ಮಾತ್ರ ಬರುತ್ತಿಲ್ಲ, ಜೊತೆಗೆ ಪತಿ, ಮಕ್ಕಳನ್ನು ಕರೆ ತರುತ್ತಾರೆ. ಪ್ರಯಾಣ ದರ 500 ರೂಪಾಯಿ ಉಳಿಸಿದರೆ ಊಟ, ವಸತಿ ಎಂದು ಒಂದುವರೆ ಸಾವಿರ ರೂಪಾಯಿ ಖರ್ಚು ಮಾಡುತ್ತಿದ್ದಾರೆ ಎಂದರು.
|
eesanje/url_46_317_3.txt
ADDED
@@ -0,0 +1,10 @@
|
|
|
|
|
|
|
|
|
|
|
|
|
|
|
|
|
|
|
|
|
|
|
1 |
+
ಬೆಂಗಳೂರಿಗೆ 24 ಟಿಎಂಸಿ ನೀರು ಮೀಸಲಿಡಲು ಆದೇಶ : ಡಿಸಿಎಂ
|
2 |
+
ಬೆಂಗಳೂರು, ನ.8- ಕಾವೇರಿ ನ್ಯಾಯಾೀಧಿಕರಣ ಹಾಗೂ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಹಂಚಿಕೆಯಾಗಿರುವಂತೆ ಬೆಂಗಳೂರು ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ 24 ಟಿಎಂಸಿ ನೀರನ್ನು ಮೀಸಲಿಡಲು ರಾಜ್ಯ ಸರ್ಕಾರ ಆದೇಶ ಮಾಡಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
|
3 |
+
ಬೆಂಗಳೂರು ನಗರಾಭಿವೃದ್ಧಿ, ಜಲಸಂಪನ್ಮೂಲ ಸಚಿವರು ಆಗಿರುವ ಅವರು ದೆಹಲಿ ಪ್ರವಾಸದಲ್ಲಿದ್ದಾರೆ. ಅಲ್ಲಿ ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ನಮ್ಮ ಅಧಿಕಾರಿಗಳು ಮೇಕೆದಾಟು ವಿಚಾರ ಪ್ರಸ್ತಾಪ ಮಾಡಿದ್ದಾರೆ.
|
4 |
+
ಈ ಬಗ್ಗೆ ವಿಚಾರಣೆ ನಡೆಸಲು ದಿನಾಂಕ ನಿಗದಿ ಮಾಡುವುದಾಗಿ ಪ್ರಾಧಿಕಾರದವರು ಭರವಸೆ ನೀಡಿದ್ದಾರೆ. ಬಹುಶಃ ಮುಂದಿನ ವಾರ ವಿಚಾರಣೆಗೆ ಸಮಯ ನಿಗದಿಯಾಗಬಹುದು. ನಾವು ಅದಕ್ಕೆ ಎಲ್ಲಾ ರೀತಿಯ ತಯಾರಿಗಳನ್ನು ನಡೆಸಿದ್ದೇವೆ. ನಮಗೆ ಎಷ್ಟು ನೀರು ಬೇಕು, ಎಷ್ಟು ಉಳಿತಾಯವಾಗಲಿದೆ, ಸಮುದ್ರಕ್ಕೆ ಎಷ್ಟು ಹರಿದು ಹೋಗುತ್ತದೆ ಎಂಬ ಮಾಹಿತಿಯನ್ನು ಸಲ್ಲಿಸಲಿದ್ದೇವೆ.
|
5 |
+
ನಮಗೆ ಕುಡಿಯುವ ನೀರಿಗೆ 24 ಟಿಎಂಸಿ ಬೇಕು ಎಂದು ಸುಪ್ರೀಂಕೋರ್ಟ್ ಆದೇಶದ ಪ್ರಕಾರವೇ ಮೀಸಲಿಟ್ಟಿದ್ದೇವೆ. ಅದನ್ನು ಬಿಡಬ್ಯೂಎಸ್‍ಎಸ್‍ಬಿ ಬಳಸಿಕೊಳ್ಳಬೇಕು ಎಂದು ನಿನ್ನೆ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಈ ಮೊದಲು 18 ಟಿಎಂಸಿ ನಿಗದಿ ಮಾಡಲಾಗಿತ್ತು. ಉಳಿಕೆ ಆರು ಟಿಎಂಸಿಯನ್ನು ಬಳಕೆ ಮಾಡಲು ಪರಿಶೀಲನೆ ನಡೆಸಿ ಅನುಮತಿ ನೀಡಲಾಗಿದೆ. ಗರಿಷ್ಠ 24 ಟಿಎಂಸಿಗೆ ಮಿತಿಗೊಳಿಸಿ ಆದೇಶಿಸಲಾಗಿದೆ. ಇನ್ನೂ ಮುಂದೆ ಅಣೆಕಟ್ಟೆಗಳಲ್ಲಿ 24 ಟಿಎಂಸಿಯನ್ನು ಮೀಸಲಿರಿಸಿ ನಂತರ ಉಳಿದ ನೀರನ್ನು ಬಳಕೆ ಮಾಡಿಕೊಳ್ಳಬೇಕಿದೆ ಎಂದರು.
|
6 |
+
3ನೇ ಬಾರಿಗೆ ನ್ಯೂಜೆರ್ಸಿ ಸೆನೆಟ್‍ಗೆ ಆಯ್ಕೆಯಾದ ವಿನ್ ಗೋಪಾಲ್
|
7 |
+
ಕೆಆರ್‍ಎಸ್‍ನಲ್ಲಿ ನೀರಿದೆ ನಮಗೆ ಬಿಡಿ ಎಂದು ತಮಿಳುನಾಡಿನವರು ಕೇಳುತ್ತಾರೆ. ಇನ್ನೂ ಮುಂದೆ ಕುಡಿಯುವ ನೀರಿಗೆ 24 ಟಿಎಂಸಿಯನ್ನು ಮೀಸಲಿಡಬೇಕು. ಇದು 2018ರ ಸುಪ್ರೀಂಕೋರ್ಟ್ ಆದೇಶದಲ್ಲೇ ಉಲ್ಲೇಖವಿದೆ. ನಮ್ಮ ಹಕ್ಕನ್ನು ನಾವು ಕಳೆದುಕೊಳ್ಳುವುದಿಲ್ಲ. ತಮಿಳುನಾಡು ಆಕ್ಷೇಪ ವ್ಯಕ್ತಪಡಿಸುವುದಾದರೆ ನಮ್ಮ ಅಭ್ಯಂತರ ಇಲ್ಲ. ನ್ಯಾಯಾಲಯದ ಆದೇಶದ ಪ್ರಕಾರವೇ ನಿರ್ಧಾರ ಕೈಗೊಂಡು ಸರ್ಕಾರಿ ಆದೇಶ ಹೊರಡಿಸಲಾಗಿದೆ. ಬೆಂಗಳೂರು ನೀರು ಸರಬರಾಜು, ಒಳಚರಂಡಿ ಮಂಡಳಿ 24 ಟಿಎಂಸಿ ಬಳಸಿಕೊಳ್ಳಲು ಅನುಮತಿಸಿಸಲಾಗಿದೆ ಎಂದರು.
|
8 |
+
ಬೆಂಗಳೂರು ಸುತ್ತಮುತ್ತಾ ಆನೆಕಲ್‍ನಲ್ಲಿ ಬೆಂಗಳೂರು ಬೆಳೆದಿದೆ, ವಿಮಾನ ನಿಲ್ದಾಣಕ್ಕೆ ನೀರು ಪೂರೈಸಲೇಬೇಕು.ಹಿಂದೆ ತಾವು ನಗರಾಭಿವೃದ್ಧಿ ಸಚಿವರಾಗಿದ್ದಾಗ ಹೆಬ್ಬಾಳದ ಮುಂದಕ್ಕೆ ನೀರು ಕೊಡಬಾರದು ಎಂದು ನಿರ್ಧರಿಸಲಾಗಿತ್ತು. ನಂತರ ಬಂದ ಸರ್ಕಾರಗಳು ಆದೇಶ ಬದಲಿಸಿವೆ, ಹೀಗಾಗಿ ಎಲ್ಲಾ ಕಡೆ���ೂ ನೀರು ಹಂಚಿಕೆ ಮಾಡಬೇಕಿದೆ, ಬೆಂಗಳೂರು ಉತ್ತರ ಭಾಗದಲ್ಲಿ ಬೆಳೆಯುತ್ತಿದೆ ಎಂದರು.
|
9 |
+
ಅದಾನಿ ಸಂಸ್ಥೆಯಲ್ಲಿ ಅಮೆರಿಕದಿಂದ 553 ಮಿಲಿಯನ್ ಡಾಲರ್ ಹೂಡಿಕೆ
|
10 |
+
ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಅನುಕೂಲವಾಗಲಿದೆ. ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ತಮಿಳುನಾಡಿನಲ್ಲಿ ಕೆಲ ನದಿಗಳ ಅಂತರ್ ಜೋಡಣೆಯ ಪ್ರಸ್ತಾವನೆ ಮಾಡಿರುವುದರ ಬಗ್ಗೆ ಸದ್ಯಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ. ತಮಿಳುನಾಡಿಗೆ ಪ್ರತಿ ವರ್ಷ 177 ಟಿಎಂಸಿ ನೀರನ್ನು ಬಿಡುತ್ತೇವೆ ಅದರ ಬಗ್ಗೆ ಅವರಿಗೆ ಚಿಂತೆ ಬೇಡ. ನಾವು ನಮ್ಮ ರಾಜ್ಯದಲ್ಲಿ ಆಂತರಿಕವಾಗಿ ನದಿ ಜೋಡಣೆ ಮಾಡುತ್ತೇವೆಯೋ, ಅಣೆಕಟ್ಟುತ್ತೇವೆಯೋ ಅದರ ಬಗ್ಗೆ ತಮಿಳುನಾಡು ತಲೆ ಕೆಡಿಕೊಳ್ಳುವ ಅಗತ್ಯ ಇಲ್ಲ. ಮಳೆ ಇಲ್ಲದೆ ಸಂಕಷ್ಟ ಸಂದರ್ಭದಲ್ಲೂ ತಮಿಳುನಾಡಿಗೆ 2 ಸಾವಿರ ಎರಡುವರೆ ಸಾವಿರ ಬಿಡಿ ಎನ್ನುತ್ತಾರೆ, ಸಂಕಷ್ಟ ಕಾಲದಲ್ಲಿ ಇದನ್ನು ಪಾಲನೆ ಮಾಡುವುದು ಕಷ್ಟವಾಗುತ್ತದೆ. ನಿನ್ನೆ ಮೊನ್ನೆ ಮಳೆಯಾಗಿದ್ದರಿಂದ ಕೆಆರ್‍ಎಸ್‍ಗೆ ಒಳ ಸ್ವಲ್ಪ ಹರಿವು ಹೆಚ್ಚಾಗಿದೆ ಎಂದರು.
|
eesanje/url_46_317_4.txt
ADDED
@@ -0,0 +1,6 @@
|
|
|
|
|
|
|
|
|
|
|
|
|
|
|
1 |
+
ಮದುವೆ ದಿನವೇ ಪ್ರೇಯಸಿಗೆ ಕೈಕೊಟ್ಟು ಪ್ರಿಯಕರ ಪರಾರಿ
|
2 |
+
ತುಮಕೂರು, ನ.8- ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿ ನಂತರ ಪ್ರೀತಿ ಹುಟ್ಟಿ ಜೊತೆಯಾಗಿ ಓಡಾಡಿಗೊಂಡಿದ್ದ ಪ್ರಿಯಕರ ಇದೀಗ ಮದುವೆ ದಿನವೇ ಪ್ರೇಯಸಿಯನ್ನು ನಡು ರಸ್ತೆಯಲ್ಲಿ ಬಿಟ್ಟು ಎಸ್ಕೇಪ್ ಆಗಿದ್ದಾನೆ. ಇದೀಗ ಪ್ರೇಯಸಿ ಪೊಲೀಸ್ ಠಾಣೆ ಮೆಟ್ಟಿಲೇರಿ ನ್ಯಾಯ ಒದಗಿಸುವಂತೆ ಕಣ್ಣೀರಿಟ್ಟಿದ್ದಾಳೆ. ಎರಡೂವರೆ ವರ್ಷಗಳಿಂದ ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡು ಇದೀಗ ಮದುವೆಯಾಗದೆ ಪರಾರಿಯಾಗಿದ್ದಾನೆಂದು ತುಮಕೂರು ಮೂಲದ ಯುವತಿ ಬೆಂಗಳೂರು ಮೂಲದ ಪ್ರಿಯಕರ ಗಜೇಂದ್ರ ವಿರುದ್ದ ಇಲ್ಲಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
|
3 |
+
ಬೆಂಗಳೂರಿನ ನೆಲಗದರನಹಳ್ಳಿ ವಾಸವಾಗಿರುವ ಗಜೇಂದ್ರ ಹಾಗು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ನಿವಾಸಿ, ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಯುವತಿ ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾಗಿದ್ದು, ಬಳಿಕ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಕಳೆದ ಎರಡು ವರ್ಷಗಳಿಂದ ಇವರಿಬ್ಬರು ಪ್ರೀತಿಸುತ್ತಿದ್ದರು ಮತ್ತು ಹಲವೆಡೆ ಜೊತೆಯಾಗಿ ಸುತ್ತಾಡಿದ್ದರು.
|
4 |
+
3ನೇ ಬಾರಿಗೆ ನ್ಯೂಜೆರ್ಸಿ ಸೆನೆಟ್‍ಗೆ ಆಯ್ಕೆಯಾದ ವಿನ್ ಗೋಪಾಲ್
|
5 |
+
ಮದುವೆಯಾಗುತ್ತೇನೆ ಎಂದು ಪುಸಲಾಯಿಸಿ ತನ್ನ ಪ್ರೇಯಸಿಯನ್ನು ಇತ್ತೀಚೆಗೆ ಲಾಡ್ಜ್ ಗೆ ಕರೆದೊಯ್ದು ಲೈಂಗಿಕವಾಗಿ ಬಳಸಿಕೊಂಡಿದ್ದ ಗಜೇಂದ್ರ, ಈಗ ಏಕಾಏಕಿ ಮನೆಯಲ್ಲಿ ಒಪ್ಪುತ್ತಿಲ್ಲ ನಾವಿಬ್ಬರು ಬೇರೆಯಾಗೋಣ ಎಂದು ಹೊಸ ವರಸೆ ತೆಗೆದಿದ್ದ. ಇದರಿಂದ ಆತಂಕಗೊಂಡು ಯುವತಿ ತುಮಕೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಗಜೇಂದ್ರನನ್ನು ಕರೆಸಿದ ಪೊಲೀಸರು ಆತನಿಗೆ ಬುದ್ಧಿ ಹೇಳಿದ್ದರು. ನಂತರ ಆತ ಯುವತಿಯನ್ನು ಮದುವೆಯಾಗುವುದಾಗಿ ಒಪ್ಪಿಕೊಂಡು ಠಾಣೆಯಲ್ಲೇ ಮುಚ್ಚಳಿಕೆ ಪತ್ರವನ್ನೂ ಸಹ ಬರೆದುಕೊಟ್ಟಿದ್ದ.
|
6 |
+
ಬೆಂಗಳೂರಿನ ಪೀಣ್ಯಾದ ದುಗ್ಗಾಲಮ್ಮ ದೇವಾಲಯ ಬಳಿ ಇವರಿಬ್ಬರ ಮದುವೆಗಾಗಿ ಎಲ್ಲಾ ತಯಾರಿ ಮಾಡಲಾಗಿತ್ತು. ಇಬ್ಬರೂ ತುಮಕೂರಿನಿಂದ ಕಾರಿನಲ್ಲಿ ಬರುವಾಗ ನೆಲಗದರನಹಳ್ಳಿ ಬಳಿ ಕಾರು ನಿಲ್ಲಿಸಿ ಅಲ್ಲಿಂದ ಇಳಿದು ಗಜೇಂದ್ರ ಎಸ್ಕೇಪ್ ಆಗಿದ್ದಾನೆ. ಗಜೇಂದ್ರ ಊರಿನಲ್ಲಿ ವ್ಯವಸಾಯ ಮಾಡಿಕೊಂಡಿದ್ದ. ಈತ ಯುವತಿಗೆ ದೂರದ ಸಂಬಂಧಿ ಆಗಿದ್ದಾನೆ. ಈ ಬಗ್ಗೆ ಗಜೇಂದ್ರನ ವಿರುದ್ಧ ಕ್ರಮ ಕೈಗೊಳ್ಳುವಂತೆ ಮತ್ತೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
|
eesanje/url_46_317_5.txt
ADDED
@@ -0,0 +1,15 @@
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
1 |
+
ರಾಜ್ಯದಲ್ಲಿ ಇನ್ನೂ 3 ದಿನ ಮಳೆ
|
2 |
+
ಬೆಂಗಳೂರು, ನ.8- ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಹಿಂಗಾರು ಚುರುಕಾಗಿದ್ದು, ಶುಕ್ರವಾರದವರೆಗೆ ಮಳೆ ಮುಂದು ವರೆಯಲಿದೆ. ಆದರೆ, ಮಳೆ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ವಾತಾವರಣದಲ್ಲಿ ಉಂಟಾಗಿರುವ ಬದಲಾವಣೆಯಿಂದಾಗಿ ರಾಜ್ಯದಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಕಂಡು ಬರುತ್ತಿದ್ದು, ಸಂಜೆ ಹಾಗೂ ರಾತ್ರಿ ವೇಳೆ ಮಳೆಯಾಗುವ ಸಾಧ್ಯತೆಗಳಿವೆ. ಹಿಂಗಾರು ಚೇತರಿಸಿಕೊಂಡಿದ್ದರೂ ರಾಜ್ಯಾದ್ಯಂತ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ. ಚದುರಿದಂತೆ ಅಲ್ಲಲ್ಲಿ ಮಾತ್ರ ಮಳೆಯಾಗಿದೆ.
|
3 |
+
ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿ ಪಾತ್ರದ ಜಲಾಶಯಗಳ ಒಳ ಹರಿವು ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ದಕ್ಷಿಣ ಒಳನಾಡು, ಕರಾವಳಿ, ಮಲೆನಾಡು ಭಾಗದಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗಿದ್ದರೆ, ಉತ್ತರ ಒಳನಾಡಿನಲ್ಲಿ ಚದುರಿದಂತೆ ಕೆಲವೆಡೆ ಮಳೆಯಾಗಿದೆ.
|
4 |
+
ಸೋಮವಾರಕ್ಕೆ ಹೋಲಿಸಿದರೆ ನಿನ್ನೆ ಮಳೆ ಪ್ರಮಾಣ ಇಳಿಕೆಯಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ನಿನ್ನೆ ಮಧ್ಯಾಹ್ನವೇ ಮಳೆ ಆರಂಭಗೊಂಡು ಜನ ಜೀವನ ಅಸ್ತವ್ಯಸ್ತಗೊಳಿಸಿತ್ತು. ಬಹಳಷ್ಟು ಕಡೆಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಣ್ಣ ಕೆರೆ-ಕಟ್ಟೆಗಳಿಗೂ ನೀರು ಬಂದಿದೆ.
|
5 |
+
ತೀವ್ರ ಬರಪರಿಸ್ಥಿತಿ ಎದುರಿಸುತ್ತಿದ್ದ ರಾಜ್ಯಕ್ಕೆ ಹಿಂಗಾರು ಚೇತರಿಕೆಯಾಗಿ ಮಳೆಯಾಗುತ್ತಿರುವುದು ಜನರಲ್ಲಿ ಅದರಲ್ಲೂ ರೈತರಿಗೆ ಖುಷಿ ತಂದಿದೆ. ಆದರೆ, ಕೊಯ್ಲಿಗೆ ಬಂದಿದ್ದ ಮುಂಗಾರು ಹಂಗಾಮಿನ ವಿವಿಧ ಬೆಳೆಗಳಿಗೆ ಈ ಮಳೆಯಿಂದ ತೊಂದರೆಯಾಗಿದೆ. ಕೆಲವೆಡೆ ಅಗಾಗ್ಗೆ ಮಳೆ ಬಂದರೆ, ಮತ್ತೆ ಕೆಲವೆಡೆ ಜಿಟಿ-ಜಿಟಿ ಮಳೆಯಾಗಿದೆ.
|
6 |
+
ತೆಲಂಗಾಣದಲ್ಲಿ ಮೋದಿ ಬೆಂಬಲಕ್ಕೆ ನಿಂತ ಪವನ್ ಕಲ್ಯಾಣ್
|
7 |
+
ಹವಾಮಾನ ಮುನ್ಸೂಚನೆ ಪ್ರಕಾರ ರಾಜ್ಯದಲ್ಲಿ ಇನ್ನೂ ಮೂರು ದಿನ ಮಳೆ ಮುಂದುವರೆಯಲಿದ್ದು, ಆನಂತರ ಇಳಿಮುಖವಾಗಲಿದೆ. ಅರಬ್ಬೀ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಹಾಗೂ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಟ್ರಪ್‍ನಿಂದಾಗಿ ರಾಜ್ಯದಲ್ಲಿ ಮೋಡ ಕವಿದ ವಾತಾವರಣವಿದ್ದು, ಕೆಲವೆಡೆ ಚದುರಿದಂತೆ ಮಳೆಯಾಗುತ್ತಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
|
8 |
+
ಮಳೆಯ ಅಬ್ಬರ ಕಡಿಮೆಯಾದರೂ ಹಗುರದಿಂದ ಸಾಧಾರಣ ಮಳೆ ಮುಂದುವರೆಯಲಿದೆ. ದಕ್ಷಿಣ ಕರ್ನಾಟಕಕ್ಕಿಂತ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಮಳೆಯಾಗಲಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಂಸ್ಥಾಪಕ ಹಾಗೂ ನಿವೃತ್ತ ವಿಶೇಷ ನಿರ್ದೇಶಕ ವಿ.ಎಸ್.ಪ್ರಕಾಶ್ ತಿಳಿಸಿದರು.
|
9 |
+
ಮುಂದಿನ ಮೂರು ದಿನಗಳ ಅವಯಲ್ಲಿ ದಾವಣಗೆರೆ, ಹರಪನಹಳ್ಳಿ, ಚನ್ನಗಿರಿ, ಹಾವೇರಿ, ಗದಗ, ಹುಬ್ಬಳ್ಳಿ, ಸವದತ್ತಿ, ಬಾಗಲಕೋಟೆ, ಜಮಖಂಡಿ, ವಿಜಯಪುರ, ಇಂಡಿ ಭಾಗದಲ್ಲಿ ಮಳೆಯಾಗಲಿದೆ. ರಾಜ್ಯದ ದಕ್ಷಿಣ ಒಳನಾಡಿನಲ್ಲಿ 15ರಿ���ದ 20 ಮಿ.ಮೀ., ಉತ್ತರ ಒಳನಾಡಿನಲ್ಲಿ 25ರಿಂದ 40 ಮಿ. ಮೀ. ನಷ್ಟು ಮಳೆಯಾಗುವ ಸೂಚನೆಗಳಿವೆ.
|
10 |
+
ಗಾಜಾ ಹೃದಯಭಾಗ ತಲುಪಿದ ಇಸ್ರೇಲ್ ಸೇನೆ
|
11 |
+
ಅದೇ ರೀತಿ ಮುಂದಿನ ಹತ್ತು ದಿನಗಳ ಅವಯಲ್ಲಿ ದಕ್ಷಿಣ ಒಳನಾಡಿನಲ್ಲಿ 20ರಿಂದ 40 ಮಿ.ಮೀ., ಮಲೆನಾಡಿನಲ್ಲಿ 30ರಿಂದ 60 ಮಿ.ಮೀ., ಕರಾವಳಿಯಲ್ಲಿ 35ರಿಂದ 50 ಮಿ.ಮೀ. ಹಾಗೂ ಉತ್ತರ ಒಳನಾಡಿನಲ್ಲಿ 20ರಿಂದ 50 ಮಿ.ಮೀ.ನಷ್ಟು ಮಳೆಯಾಗಲಿದೆ ಎಂದು ಅವರು ವಿವರಿಸಿದರು.
|
12 |
+
ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, ಅಕ್ಟೋಬರ್‍ನಲ್ಲಿ 131ಮಿ.ಮೀ. ವಾಡಿಕೆ ಮಳೆಗೆ ಕೇವಲ 47 ಮಿ.ಮೀ.ನಷ್ಟು ಮಾತ್ರ ಮಳೆಯಾಗಿದ್ದು, ಶೇ.65 ರಷ್ಟು ಮಳೆ ಕೊರತೆ ಉಂಟಾಗಿತ್ತು. ಸೋಮವಾರ ರಾಜ್ಯದಲ್ಲಿ ವಾಡಿಕೆಗಿಂತ ನಾಲ್ಕು ಪಟ್ಟು ಮಳೆಯಾಗಿದೆ.
|
13 |
+
ಕಳೆದೊಂದು ವಾರದಲ್ಲಿ 30 ಮಿ.ಮೀ. ಮಳೆಯಾಗಿದ್ದು, ವಾಡಿಕೆಗಿಂತ ದುಪ್ಪಟ್ಟು ಮಳೆಯಾಗಿದೆ. ಆದರೂ ದಕ್ಷಿಣ ಒಳನಾಡಿನಲ್ಲಿ ನವೆಂಬರ್ ಒಂದರಿಂದ 7ರ ನಡುವಿನ ಅವಯಲ್ಲಿ ವಾಡಿಕೆಗಿಂತ ಶೇ.160ರಷ್ಟು ಅಧಿಕ ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ ಶೇ.29ರಷ್ಟು ಕಡಿಮೆಯಾಗಿದೆ. ಮಲೆನಾಡಿನಲ್ಲಿ ಶೇ.132 ಹಾಗೂ ಶೇ.208ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.
|
14 |
+
ತೆಲಂಗಾಣದಲ್ಲಿ ಮೋದಿ ಬೆಂಬಲಕ್ಕೆ ನಿಂತ ಪವನ್ ಕಲ್ಯಾಣ್
|
15 |
+
ಹಿಂಗಾರು ಹಂಗಾಮಿನ ಅವಯ ಅಕ್ಟೋಬರ್ ಒಂದರಿಂದ ನವೆಂಬರ್ 7ರ ನಡುವಿನ ಅವಯಲ್ಲಿ ವಾಡಿಕೆಗಿಂತ ಶೇ.47ರಷ್ಟು ಮಳೆ ಕೊರತೆ ರಾಜ್ಯದಲ್ಲಿ ಕಂಡುಬಂದಿತ್ತು. ಅದೇ ರೀತಿ ಜೂನ್ ನಿಂದ ಈವರೆಗೆ ಶೇ.28ರಷ್ಟು, ಏಪ್ರಿಲ್‍ನಿಂದ ಇಲ್ಲಿವರೆಗೆ ಶೇ.25ರಷ್ಟು ಹಾಗೂ ಜನವರಿಯಿಂದ ಈತನಕ ಶೇ.25ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.
|
eesanje/url_46_317_6.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ರೇಸಾರ್ಟ್‍ನಲ್ಲಿ ಜೆಡಿಎಸ್ ಶಾಸಕರ ವಾಸ್ತವ್ಯ
|
2 |
+
ಬೆಂಗಳೂರು, ನ.8-ಆಪರೇಷನ್ ಹಸ್ತ ನಡೆಸುವ ಸುಳಿವಿನ ಬೆನ್ನಲೇ ಜೆಡಿಎಸ್ ಶಾಸಕರು ಒಗ್ಗಟ್ಟು ಪ್ರದರ್ಶನ ಮಾಡುತ್ತಿದ್ದಾರೆ. ನಿನ್ನೆಯಿಂದ ಹಾಸನದ ರೆಸಾರ್ಟ್‍ನಲ್ಲಿ ಬೀಡು ಬಿಟ್ಟಿರುವ ಜೆಡಿಎಸ್ ಶಾಸಕರು ಪಕ್ಷ ಸಂಘಟನೆ, ಬಿಜೆಪಿಯೊಂದಿಗಿನ ಮೈತ್ರಿ, ಮುಂಬರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ, ಲೋಕಸಭಾ ಚುನಾವಣೆ ಸಿದ್ಧತೆ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದಾರೆ.
|
3 |
+
ಹಾಸನಾಂಬೆಯ ದರ್ಶನ ಪಡೆದಿರುವ ಜೆಡಿಎಸ್ ಶಾಸಕರು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನೇತೃತ್ವದಲ್ಲಿ ಒಗ್ಗಟ್ಟಿನ ಪ್ರದರ್ಶನ ಮಾಡಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ಪಕ್ಷದ ಶಾಸಕರಿಗೆ ಮಾರ್ಗದರ್ಶನ ಮಾಡಿದ್ದಾರೆ.
|
4 |
+
ತೆಲಂಗಾಣದಲ್ಲಿ ಮೋದಿ ಬೆಂಬಲಕ್ಕೆ ನಿಂತ ಪವನ್ ಕಲ್ಯಾಣ್
|
5 |
+
ಆಸೆ, ಆಮಿಷಗಳಿಗೆ ಒಳಗಾಗಬೇಡಿ, ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಜನಪರ ಹೋರಾಟ ಮಾಡಿ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡೋಣ. ಮುಂದೆ ಪಕ್ಷಕ್ಕೆ ಉತ್ತಮ ಭವಿಷ್ಯವಿದೆ ಎಂಬ ಸಂದೇಶ ನೀಡಿದ್ದಾರೆ.
|
6 |
+
ಇತ್ತೀಚಿನ ರಾಜಕೀಯ ಬೆಳವಣಿಗೆಗಳು, ರಾಷ್ಟ್ರೀಯ ಪಕ್ಷಗಳಲ್ಲಾಗುತ್ತಿರುವ ಬದಲಾವಣೆ ಸೇರಿದಂತೆ ಹಲವು ಪ್ರಚಲಿತ ವಿದ್ಯಾಮಾನಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ. ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿಕೂಟ ಸೇರ್ಪಡೆಯಿಂದ ಪಕ್ಷಕ್ಕೆ ಆಗುತ್ತಿರುವ ಲಾಭ, ನಷ್ಟದ ಲೆಕ್ಕಾಚಾರವನ್ನು ಮಾಡಲಾಗಿದೆ. ಲೋಕಸಭಾ ಚುನಾವಣೆಯ ಸಾಧಕ-ಬಾಧಕಗಳ ಬಗ್ಗೆ ಸಮಾಲೋಚಿಸಿ ಒಗ್ಗಟ್ಟಿನಿಂದ ಪಕ್ಷದ ಬೆಳವಣಿಗೆಗೆ ಶ್ರಮಿಸಲು ತೀರ್ಮಾನಿಸಲಾಗಿದೆ. ಯಾವುದೇ ಕಾರಣಕ್ಕೂ ಪಕ್ಷಾಂತರಕ್ಕೆ ಮುಂದಾಗಿ ಶಾಸಕ ಸ್ಥಾನ ಕಳೆದುಕೊಳ್ಳಬೇಡಿ ಎಂಬ ಕಿವಿ ಮಾತು ಹೇಳಿದ್ದಾರೆ.
|
7 |
+
ಆಪರೇಷನ್ ಹಸ್ತ ಮಾಡಲಾಗುತ್ತದೆ ಎಂಬ ಉಹಾಪೋಹದ ಹಿನ್ನೆಲೆಯಲ್ಲಿ ಜೆಡಿಎಸ್ ಶಾಸಕರು ಹಾಸನಾಂಬೆ ಸನ್ನಿಯಲ್ಲಿ ಒಟ್ಟಾಗಿದ್ದೇವೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
|
eesanje/url_46_317_7.txt
ADDED
@@ -0,0 +1,6 @@
|
|
|
|
|
|
|
|
|
|
|
|
|
|
|
1 |
+
ಬೆಳಗಾವಿ ಅಧಿವೇಶನದಲ್ಲಿ ಸದಾಶಿವ ಆಯೋಗದ ವರದಿ ಮಂಡನೆ : ಪರಮೇಶ್ವರ್
|
2 |
+
ಬೆಂಗಳೂರು,ನ.7- ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸುವ ಸದಾಶಿವ ಆಯೋಗದ ವರದಿಯನ್ನು ಬೆಳಗಾವಿಯ ಅಧಿವೇಶನದಲ್ಲಿ ಮಂಡಿಸಲು ಪ್ರಯತ್ನಗಳು ನಡೆದಿವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
|
3 |
+
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್‍ನ ಎಸ್‍ಸಿ-ಎಸ್‍ಟಿ ಘಟಕದಿಂದ ಚಿತ್ರದುರ್ಗದಲ್ಲಿ ಸಮಾವೇಶ ನಡೆಸಿ ಹತ್ತು ಘೋಷಣೆ ಮಾಡಲಾಯಿತು. ಚಿತ್ರದುರ್ಗದ ಘೋಷಣೆ ಪ್ರಕಾರ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಮೊದಲ ಅಧಿವೇಶನದಲ್ಲೇ ಸದಾಶಿವ ಆಯೋಗದ ವರದಿ ಮಂಡಿಸುವುದಾಗಿ ಭರವಸೆ ನೀಡಲಾಗಿತ್ತು.
|
4 |
+
ಮಿಜೋರಾಂನಲ್ಲಿ ಬಿಜೆಪಿ ಜೊತೆ ಮೈತ್ರಿಯಿಲ್ಲ : ಝೋರಾಮ್‍ತಂಗ
|
5 |
+
ಈಗ ನಾವು ಅಧಿಕಾರಕ್ಕೆ ಬಂದಿದ್ದೇವೆ. ಮೊದಲ ಅಧಿವೇಶನದಲ್ಲಿ ವರದಿ ಮಂಡಿಸಲಾಗಿಲ್ಲ. ಬೆಳಗಾವಿಯಲ್ಲಿ ನಡೆಯುತ್ತಿರುವ 2ನೇ ಅಧಿವೇಶನದಲ್ಲಿ ಮಂಡನೆ ಮಾಡಲು ಒತ್ತಡ ಹೇರುತ್ತಿದ್ದೇವೆ ಎಂದರು. ಸಚಿವರಾದ ಕೆ.ಎಚ್.ಮುನಿಯಪ್ಪ, ಎಚ್.ಸಿ. ಮಹದೇವಪ್ಪ, ಪ್ರಿಯಾಂಕ್ ಖರ್ಗೆ ಮತ್ತು ತಾವು ಮುಖ್ಯಮಂತ್ರಿಯರ ಜೊತೆ ಚರ್ಚೆ ನಡೆಸಿದ್ದು, ವರದಿ ಮಂಡನೆಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದೇವೆ. ಇತರ ಸಮುದಾಯಗಳ ಮುಖಂಡರ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿಎಂ ಭರವಸೆ ನೀಡಿದ್ದಾರೆ.
|
6 |
+
ವರದಿ ಮಂಡನೆ ಯಾಗಬೇಕು, ಚರ್ಚೆಯಾಗಬೇಕು ಎಂಬುದು ಎಲ್ಲರ ಒತ್ತಾಸೆ. ಆದರೆ ಅದಕ್ಕೂ ಮುನ್ನ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಖ್ಯಮಂತ್ರಿಯವರು, ಶಾಸಕರು, ಸಚಿವರು, ಮುಖಂಡರೊಂದಿಗೆ ಚರ್ಚೆ ಮಾಡಲಿದ್ದಾರೆ ಎಂದು ತಿಳಿಸಿದರು.
|
eesanje/url_46_317_8.txt
ADDED
@@ -0,0 +1,13 @@
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
1 |
+
ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಡಿಸಿಎಂ ಹಸ್ತಕ್ಷೇಪ ಮಾಡಿಲ್ಲ : ಸತೀಶ್ ಜಾರಕಿಹೊಳಿ
|
2 |
+
ಬೆಂಗಳೂರು, ನ.7- ಕೆಪಿಸಿಸಿ ಅಧ್ಯಕ್ಷರ ಸ್ಥಾನಕ್ಕೆ ತಾವು ಆಕಾಂಕ್ಷಿಯಲ್ಲ. ತಮ್ಮ ಸಾಮಥ್ರ್ಯಕ್ಕೆ ತಕ್ಕಷ್ಟು ಜವಾಬ್ದಾರಿ (ಲೋಡ್ ) ಇದೆ. ಸದ್ಯಕ್ಕೆ ನಾನು ಅಷ್ಟಕ್ಕೇ ಸೀಮಿತವಾಗಿದ್ದೇನೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದು ಬೆಳಗ್ಗೆ ಸತೀಶ್ ಜಾರಕಿಹೊಳಿ ಅವರ ಮನೆಗೆ ದಿಢೀರ್ ಭೇಟಿ ನೀಡಿ ಚರ್ಚೆ ನಡೆಸಿದರು.
|
3 |
+
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಉಪಮುಖ್ಯ ಮಂತ್ರಿಗಳು ರಾಜಕೀಯ ವಿಚಾರವಾಗಿ ಚರ್ಚೆ ನಡೆಸಿದ್ದಾರೆ. ಲೋಕಸಭೆ ಚುನಾವಣೆ, ಕೆಲವು ಜಿಲ್ಲಾಧ್ಯಕ್ಷರ ಬದಲಾವಣೆ ಕುರಿತು ಮಾಲೋಚನೆಗಳಾಗಿವೆ. ಬಂದಷ್ಟೇ ವೇಗವಾಗಿ ವಾಪಸ್ ಹೋಗಿದ್ದಾರೆ. ನಮ್ಮ ಚರ್ಚೆಯ ವೇಳೆ ಬೆಳಗಾವಿ ಜಿಲ್ಲಾ ರಾಜಕಾರಣ ಕುರಿತು ಚರ್ಚೆ ನಡೆದಿಲ್ಲ ಎಂದರು.
|
4 |
+
ಬೆಳಗಾವಿ ಜಿಲ್ಲಾ ಮಟ್ಟದಲ್ಲಿ ಕೆಲ ಸಮಸ್ಯೆಗಳಿವೆ. ಕಾಲಕಾಲಕ್ಕೆ ಅವು ಉದ್ಭವಿಸು ತ್ತವೆ ಮತ್ತು ಬಗೆಹರಿಯುತ್ತದೆ. ಅದನ್ನು ನಾವು ಸ್ಥಳೀಯವಾಗಿಯೇ ಬಗೆಹರಿಸಿಕೊಳ್ಳುತ್ತೇವೆ. ಉಪಮುಖ್ಯಮಂತ್ರಿಯವರು ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಈ ಬಗ್ಗೆ ಅವರೊಂದಿಗೆ ಚರ್ಚಿ ಸುವ ಅಗತ್ಯವೂ ಇಲ್ಲ. ಬೆಳಗಾವಿ ಯೊಂದೇ ಅಲ್ಲ ಎಲ್ಲ ಜಿಲ್ಲೆಗಳಲ್ಲೂ ಸ್ಥಳೀಯ ಸಮಸ್ಯೆಗಳು ಇದ್ದೇ ಇರುತ್ತವೆ. ನಮ್ಮ ಸರ್ಕಾರವಷ್ಟೇ ಅಲ್ಲ ಹಿಂದಿನ ಸರ್ಕಾರದಲ್ಲೂ ಆ ರೀತಿಯ ಸಮಸ್ಯೆಗಳಿದ್ದವು ಎಂದು ಹೇಳಿದರು.
|
5 |
+
ಸದ್ಯಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷರ ಬದಲಾವಣೆ ಇಲ್ಲ ಎಂದು ದೆಹಲಿ ಮಟ್ಟದಲ್ಲಿ ಹೈಕಮಾಂಡ್ ನಿರ್ಧರಿಸಿದೆ. ಲೋಕಸಭೆ ಚುನಾವಣೆವರೆಗೂ ಯಥಾಸ್ಥಿತಿಯೇ ಮುಂದುವರೆಯುವ ಸಾಧ್ಯತೆಗಳಿವೆ. ಚಂದ್ರಪ್ಪ ಅವರನ್ನು ಹೊರತುಪಡಿಸಿದರೆ ಉಳಿದ ನಾಲ್ವರು ಕಾರ್ಯಾಧ್ಯಕ್ಷರು ಒಂದಲ್ಲ ಒಂದು ಹುದ್ದೆಯಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುವವರಿಗೆ ಅವಕಾಶ ಮಾಡಿಕೊಡಿ ಎಂದು ಎಲ್ಲರೂ ಹೇಳಿದ್ದಾರೆ. ಅದು ಚರ್ಚೆಯ ಹಂತದಲ್ಲೂ ಇದೆ ಎಂದು ಹೇಳಿದರು.
|
6 |
+
ಮಿಜೋರಾಂನಲ್ಲಿ ಬಿಜೆಪಿ ಜೊತೆ ಮೈತ್ರಿಯಿಲ್ಲ : ಝೋರಾಮ್‍ತಂಗ
|
7 |
+
ಕೆಪಿಸಿಸಿ ಅಧ್ಯಕ್ಷರ ರೇಸ್‍ನಲ್ಲಿ ನನ್ನ ಹೆಸರಿಲ್ಲ. ನಾನು ಆಕಾಂಕ್ಷಿಯೂ ಅಲ್ಲ. ನನ್ನ ಸಾಮಥ್ರ್ಯಕ್ಕೆ ಅನುಗುಣವಾಗಿ ಕಾರ್ಯಭಾರಗಳಿವೆ. ಅವುಗಳನ್ನೇ ನಿಭಾಯಿಸುತ್ತೇನೆ. ನಾವಿನ್ನು ಬಹಳಷ್ಟು ದೂರ ಪ್ರಯಾಣ ಮಾಡಬೇಕು. ಟ್ರಾಕ್‍ಗೆ ಬರಬೇಕು. ಆವರೆಗೂ ಇರುವ ಜವಾಬ್ದಾರಿಗಳನ್ನೇ ನಿಭಾಯಿಸುತ್ತೇನೆ. ಸದ್ಯಕ್ಕೆ ನಮ್ಮ ಗಾಡಿ ಆರಾಮಾಗಿ ಚಲಿಸುತ್ತಿದೆ ಎಂದು ತಮ್ಮದೇ ಶೈಲಿಯಲ್ಲಿ ಹೇಳಿದರು.
|
8 |
+
ಬೆಂಗಳೂರಿನಲ್ಲಿ ಸುರಂಗಮಾರ್ಗ ರಸ್ತೆಗಳ ನಿರ್ಮಾಣದ ಮೂಲಕ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಬಗ್ಗೆ ಚರ್ಚೆಗಳು ನಡೆದಿವೆ. ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಯೋಜನೆ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಆದರೆ ಯಾವ ಇಲಾಖೆ ಕಾಮಗಾರಿಯನ್ನು ಕೈಗೊಳ್ಳಬೇಕು ಎಂಬ ಬಗ್ಗೆ ನಿರ್ಧಾರವಾಗಿಲ್ಲ.
|
9 |
+
ಬಿಬಿಎಂಪಿಯೇ ಅಥವಾ ಲೋಕೋಪಯೋಗಿ ಇಲಾಖೆಯೇ ಎಂಬುದನ್ನು ಸರ್ಕಾರದ ಮಟ್ಟದಲ್ಲಿ ಮುಖ್ಯಮಂತ್ರಿಯವರು ಚರ್ಚಿಸಿ ನಿರ್ಧರಿಸಬೇಕಾಗುತ್ತದೆ. ಈ ವಿಷಯದಲ್ಲಿ ತಮ್ಮ ಹಾಗೂ ಡಿ.ಕೆ.ಶಿವಕುಮಾರ್ ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
|
10 |
+
ಸದಾಶಿವ ಆಯೋಗದ ವರದಿ ಜಾರಿಯಾಗ ಬೇಕು ಎಂಬುದು ಹಲವು ವರ್ಷಗಳ ಬೇಡಿಕೆ. ಒಮ್ಮೆ ಈ ಬಗ್ಗೆ ನಿರ್ಧಾರ ತೆಗೆದುಕೊಂಡು ಆ ಸಮುದಾಯಗಳಿಗೆ ನ್ಯಾಯ ದೊರಕಿಸಬೇಕಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಅವರು ವರದಿ ಜಾರಿಗೆ ಒತ್ತಾಯಿಸಿ ಮಾದಿಗ ಸಮುದಾಯದ ಮುಖಂಡರು, ಶಾಸಕರು ಮತ್ತು ಸಚಿವರ ಮನೆಗಳಿಗೆ ಮುತ್ತಿಗೆ ಹಾಕಬೇಕು ಎಂದು ಕರೆ ನೀಡಿರುವುದು ತಪ್ಪಲ್ಲ.
|
11 |
+
ಮಾಹಿತಿ ಆಯುಕ್ತರ ನೇಮಕದಲ್ಲಿ ಲೋಪ : ರಾಷ್ಟ್ರಪತಿಗಳಿಗೆ ಪತ್ರ ಬರೆದ ಚೌಧರಿ
|
12 |
+
ಸಚಿವರಾಗಿದ್ದರೂ ಕೆಲವೊಮ್ಮೆ ಸಮುದಾಯದ ಜೊತೆಯಲ್ಲೂ ನಿಲ್ಲಬೇಕಾಗುತ್ತದೆ. ಇದನ್ನು ಸರ್ಕಾರದ ವಿರುದ್ಧ ಎಂದು ಭಾವಿಸಲಾಗುವುದಿಲ್ಲ ಎಂದರು. ಮಾದಿಗ ಸಮುದಾಯದವರು ಶಾಸಕರ ಮನೆಗೆ ಮುತ್ತಿಗೆ ಹಾಕುವುದು ಹೊಸದೇನಲ್ಲ. ಎಷ್ಟು ಜನ ಬರುತ್ತಾರೋ ಬರಲಿ ನಾನು ಸಿದ್ದನಿದ್ದೇನೆ. ಊಟ ಉಪಚಾರ ಎಲ್ಲವನ್ನು ತಯಾರಿ ಮಾಡಿಕೊಂಡು ಅವರ ಜೊತೆ ಒಂದು ಗಂಟೆ ನಾನು ಕೂಡ ಸಾಂಕೇತಿಕವಾಗಿ ಧರಣಿ ಮಾಡುತ್ತೇನೆ ಎಂದು ಹೇಳಿದರು.
|
13 |
+
ಕಾಂತರಾಜು ಆಯೋಗದ ವರದಿಯಿಂದ ಯಾರಿಗೂ ಅನ್ಯಾಯವಾಗುವುದಿಲ್ಲ. ಮೊದಲು ಅದು ಸರ್ಕಾರಕ್ಕೆ ಸಲ್ಲಿಕೆಯಾಗಲಿ. ಆ ಬಳಿಕ ವಿಧಾನಸಭೆಯಲ್ಲಿ ಒಂದು ವಾರ ಕಾಲ ನಿರಂತರ ಚರ್ಚೆಯಾಗಲಿ ಎಲ್ಲ ಸಮುದಾಯಗಳು ಅಭಿಪ್ರಾಯ ಹೇಳುವ ಮೂಲಕ ಯಾರಿಗೂ ಅನ್ಯಾಯವಾಗದಂತೆ ನಿರ್ಧಾರ ತೆಗೆದುಕೊಳ್ಳಬೇಕಿದೆ. ಲೋಪವಿದ್ದರೆ ಸಾರಸಗಟಾಗಿ ತಿರಸ್ಕಾರ ಮಾಡಬಹುದು ಇಲ್ಲವಾದರೆ ಅಂಗೀಕಾರದ ಬಗ್ಗೆ ಚರ್ಚೆಯಾಗಲಿ ಎಂದು ಹೇಳಿದರು.
|
eesanje/url_46_317_9.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ಪರೀಕ್ಷಾ ಅಕ್ರಮ ಪ್ರಕರಣ ಸಿಐಡಿ ತನಿಖೆ
|
2 |
+
ಬೆಂಗಳೂರು,ನ.7-ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ನಡೆಸಲಾದ ಪರೀಕ್ಷಾ ಅಕ್ರಮ ಕುರಿತು ಅಗತ್ಯಬಿದ್ದರೆ ಸಿಐಡಿ ತನಿಖೆ ನಡೆಸಲು ಸಿದ್ದ ಇರುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮದ ಪ್ರಮುಖ ಆರೋಪಿ ಆರ್.ಡಿ.ಪಾಟೀಲ್ ಗೋಡೆ ಹಾರಿ ತಪ್ಪಿಸಿಕೊಂಡು ಹೋಗಲು ಅಧಿಕಾರಿಗಳೇ ಸಹಕರಿಸಿದ್ದಾರೆ.
|
3 |
+
ಆತ ಇರುವ ಬಗ್ಗೆ ಐಪಿಎಸ್ ಅಧಿಕಾರಿಯೇ ಮಾಹಿತಿ ನೀಡಿದರೂ ಬಂಧಿಸದೆ ನಾಪತ್ತೆಯಾಗಲು ನೆರವು ನೀಡಲಾಗಿದೆ ಎಂಬ ಕುರಿತು ತನಿಖೆ ನಡೆಸುತ್ತೇವೆ. ಯಾವುದೇ ಅಧಿಕಾರಿ ಶಾಮೀಲಾಗಿದ್ದರೆ ಕಠಿಣ ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಸಿದರು.
|
4 |
+
ಈಗಾಗಲೇ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆರ್.ಡಿ.ಪಾಟೀಲ್ ಹೆಸರು ಪದೇ ಪದೇ ಇಂಥ ಪ್ರಕರಣಗಳಲ್ಲಿ ಕೇಳಿಬರುತ್ತಿದೆ. ಇನ್ನು ಮುಂದೆ ಕಠಿಣ ಕ್ರಮ ಕೈಗೊಂಡು ಆರೋಪಿಗಳಿಗೆ ಭಯ ಹುಟ್ಟುವಂತೆ ಮಾಡಲಾಗುವುದು. ನಮ್ಮ ಸರ್ಕಾರದಲ್ಲಿ ಇಂಥದ್ದಕ್ಕೆಲ್ಲ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
|
5 |
+
5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕತ್ತು ಸೀಳಿ ಕೊಂದ ಕಾಮುಕ
|
6 |
+
ಅಕ್ರಮದ ಹಿನ್ನಲೆಯಲ್ಲಿ ಮರುಪರೀಕ್ಷೆ ನಡೆಸುವ ಬಗ್ಗೆ ಗೃಹ ಇಲಾಖೆ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಅದು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸಂಬಂಧಿಸಿದ ವಿಷಯ ಎಂದು ಸ್ಪಷ್ಟಪಡಿಸಿದರು. ತನಿಖೆ ಉತ್ತಮ ಹಾದಿಯಲ್ಲಿದೆ ಎಲ್ಲ ರೀತಿಯ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ.
|
7 |
+
ಒಂದು ವೇಳೆ ಸಿಐಡಿ ತನಿಖೆ ಅಗತ್ಯವಾದರೆ ಅದಕ್ಕೂ ಸರ್ಕಾರ ಕ್ರಮ ಕೈಗೊಳ್ಳಲಿದೆ. ನಮಗೆ ಪ್ರಕರಣದಲ್ಲಿ ಸತ್ಯಾಂಶ ಗೊತ್ತಾಗಬೇಕು. ಮುಂದಿನ ದಿನಗಳಲ್ಲಿ ಇಂತಹ ಕೃತ್ಯಗಳು ಮರುಕಳಿಸಬಾರದು ಎಂಬ ನಿಟ್ಟಿನಲ್ಲಿ ಎಚ್ಚರಿಕೆ ವಹಿಸುತ್ತಿದ್ದೇವೆ ಎಂದು ಹೇಳಿದರು.
|
eesanje/url_46_318_1.txt
ADDED
@@ -0,0 +1,13 @@
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
1 |
+
ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸಕ್ಕೆ ಬ್ರೇಕ್
|
2 |
+
ಬೆಂಗಳೂರು, ನ.6- ಕಾಂಗ್ರೆಸ್‍ನ ಶಾಸಕರ ವಿದೇಶಿ ಪ್ರವಾಸ ಸದ್ಯಕ್ಕಿಲ್ಲ. ಮುಂದೆ ಅವಕಾಶ ಬಂದಾಗ ನೋಡೋಣ, ವರಿಷ್ಠರ ಗಮನಕ್ಕೆ ತಂದು ಪ್ರವಾಸ ಮಾಡುತ್ತೇವೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾನಮನಸ್ಕರು ಸೇರಿದಾಕ್ಷಣ ಅದನ್ನು ಗುಂಪು ಅಥವಾ ಪಕ್ಷ ವಿರೋಧಿ ಚಟುವಟಿಕೆ ಎಂದು ಬಿಂಬಿಸಲಾಗುವುದಿಲ್ಲ. ಸದ್ಯಕ್ಕೆ ಕದನ ವಿರಾಮ ಜಾರಿಯಲ್ಲಿದೆ, ಎಲ್ಲವೂ ತಣ್ಣಗಿದೆ, ಬಹಳಷ್ಟು ಕೆಲಸ ಮಾಡಬೇಕಿದೆ ಎಂದರು.
|
3 |
+
ದಲಿತ ಮುಖ್ಯಮಂತ್ರಿ ವಿಚಾರ 2013ರಲ್ಲೂ ಚಾಲನೆಯಲ್ಲಿತ್ತು, ಐದು ವರ್ಷ ಪೂರ್ತಿ ಚರ್ಚೆಯಲ್ಲಿತ್ತು. ಕೊನೆಗೆ ಫಿಚ್ಚರ್ ರಿಲೀಸ್ ಆಗಲಿಲ್ಲ, ಹಾಗಿದೆ ನಮ್ಮ ಪರಿಸ್ಥಿತಿ. 2008ರಿಂದ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಬೇಕು ಎಂದಿತ್ತು ಅವಕಾಶ ಸಿಗಲಿಲ್ಲ, ಪರಮೇಶ್ವರ್ ಎಂಟು ವರ್ಷ ಕೆಪಿಸಿಸಿ ಅಧ್ಯಕ್ಷರಾಗಿದ್ದರೂ ಸಿಎಂ ಆಗಲಿಲ್ಲ. ಆ ಸಮುದಾಯದಲ್ಲಿ ಅವಕಾಶಕ್ಕಾಗಿ ಕೂಗು ಕೇಳಿ ಬರುತ್ತಲೇ ಇದೆ. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡಬೇಕಿದೆ ಎಂದರು.
|
4 |
+
ವಾಲ್ಮಿಕಿ ಸಮುದಾಯದ ಸ್ವಾಮೀಜಿ ಯವರು ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಯಾಗಬೇಕು ಎಂದು ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದಾರೆ. ಸಮುದಾಯದ ಸಭೆ ನಡೆದಾಗಲೆಲ್ಲಾ ಈ ವಿಚಾರ ಚರ್ಚೆಯಾಗುತ್ತದೆ. ಅದೇ ರೀತಿ ದಲಿತರಲ್ಲಿ, ಲಿಂಗಾಯಿತರಲ್ಲಿ, ಒಕ್ಕಲಿಗರಲ್ಲೂ ಮುಖ್ಯಮಂತ್ರಿ ಹುದ್ದೆಗೆ ಬೇಡಿಕೆ ಇದೆ. ಅದೇ ರೀತಿ ನನ್ನ ಹೆಸರು ರೇಸ್‍ನಲ್ಲಿ ಇದೆ, ಅದರಲ್ಲಿ ವಿಶೇಷವೇನು ಇಲ್ಲ ಎಂದರು.
|
5 |
+
ಮುಖ್ಯಮಂತ್ರಿಯವರು ಕರೆದಿದ್ದ ಉಪಹಾರ ಕೂಟದಲ್ಲಿ ಭಾಗವಹಿಸಲು ಆಗಲಿಲ್ಲ. ಅಂದು ನನಗೆ ಆರೋಗ್ಯ ಸರಿ ಇರಲಿಲ್ಲ, ಹಾಗಾಗಿ ಭಾಗವಹಿಸಲಿಲ್ಲ. ಸಭೆಯಲ್ಲಿ ಇರಲಿಲ್ಲ ಎಂದಾಕ್ಷಣ ನಾವು ಹೊರಗಿದ್ದೇವೆ ಎಂದರ್ಥವಲ್ಲ. ಏನೇ ತೀರ್ಮಾನವಾದರೂ ಅದಕ್ಕೆ ನಾವು ಬದ್ಧರಾಗಿರುತ್ತೇವೆ, ತೀರ್ಮಾನಗಳನ್ನು ಪಾಲನೆ ಮಾಡುತ್ತೇವೆ ಎಂದು ಹೇಳಿದರು.
|
6 |
+
ಕಾಂಗ್ರೆಸ್‍ನಲ್ಲಿ ಎರಡು ಮೂರು ಶಕ್ತಿ ಕೇಂದ್ರಗಳು ಇವೆ ಎಂಬುದು ವದ್ಧಂತಿ ಮಾತ್ರ. ನಮ್ಮಲ್ಲಿ ಇರುವುದು ಒಂದೇ ಶಕ್ತಿ ಕೇಂದ್ರ, ಅದು ದೆಹಲಿಯಲ್ಲಿದೆ. ಅಧಿಕಾರ ಹಂಚಿಕೆಯ ಬಗ್ಗೆ ಯಾರು ಚರ್ಚೆ ಮಾಡಬಾರದು ಎಂಬದಕ್ಕೆ ಎಲ್ಲರೂ ಬದ್ಧರಾಗಿಬೇಕಿದೆ ಎಂದರು.
|
7 |
+
ಪ್ರಧಾನಿ ನರೇಂದ್ರ ಮೋದಿ ಪಂಚರಾಜ್ಯಗಳ ಚುನಾವಣಾ ಪ್ರಚಾರದಲ್ಲಿ ರಾಜಕೀಯ ಕಾರಣಕ್ಕಾಗಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಪ್ರಸ್ತಾಪಿಸಿದ್ದಾರೆ. ಕಾಂಗ್ರೆಸ್ ಲೂಟಿ ಮಾಡುತ್ತಿದೆ ಎಂದು ಪ್ರಧಾನಿ ಮಾಡಿರುವ ಆರೋಪದಲ್ಲಿ ಹುರುಳಿಲ್ಲ, ಹಿಂದೆ ನಾವು ಬಿಜೆಪಿ ಸರ್ಕಾರದ ವಿರುದ್ಧ ಶೇ.40ರಷ್ಟು ಕಮಿಷನ್ ಪಡೆದ ಹಾಗೂ ಪೇ ಸಿಎಂ ಆರೋಪ ಮಾಡಿದ್ದೇವು. ಪ್ರಧಾನಿಯವರು ಅದನ್ನು ಒಪ್ಪಿಕೊಳ್ಳುತ್ತಾರೆಯೇ, ರಾಜಕೀಯದಲ್ಲಿ ಆರೋಪ ಮಾಡುವುದು ಸುಲಭ ಸಾಬ��ತು ಪಡಿಸುವುದು ಕಷ್ಟ ಎಂದು ಪ್ರಶ್ನಿಸಿದರು.
|
8 |
+
ರಾಜಕೀಯದಲ್ಲಿ ಮಾತನಾಡುವವರಿಗೆ ಪ್ರಾಮುಖ್ಯತೆ ಸಿಗಬಾರದು. ಟಿವಿ ಮುಂದೆ ಬಂದವರು ಮಾತ್ರವೇ ನಾಯಕರಲ್ಲ. ಮಾತನಾಡದವರಿಗೂ ಅವಕಾಶಗಳು ಸಿಗಬೇಕು. ಕೆಲವರಿಗೆ ಪ್ರಾಕ್ಟಿಕಲ್ ಗೋತ್ತಿರುತ್ತದೆ, ಇನ್ನೂ ಕೆಲವರಿಗೆ ಥಿಯೆರಿ ಗೋತ್ತಿರುತ್ತದೆ. ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕು ಎಂದರು.
|
9 |
+
ಜಾತಿ ಜನಗಣತಿ ವರದಿ ಇನ್ನೂ ಸರ್ಕಾರಕ್ಕೆ ಸಲ್ಲಿಸಬೇಕಿದೆ. ಬಳಿಕ ಸಂಪುಟದಲ್ಲಿ ಚರ್ಚೆಯಾಗಬೇಕು. ಒಮ್ಮೇಲೆ ಒಪ್ಪಿಕೊಳ್ಳುವುದಿಲ್ಲ. ವಿಧಾನಮಂಡಲದ ಉಭಯ ಸದನಗಳಲ್ಲೂ ಚರ್ಚೆಯಾಗಬೇಕು. ಅಲ್ಲಿ ಸಮುದಾಯಗಳವಾರು ಇರುವ ಆಕ್ಷೇಪಗಳನ್ನು ಹೇಳಬಹುದಾಗಿದೆ, ಸರಿ ಇದ್ದರೆ ಒಪ್ಪಿಕೊಳ್ಳಬಹುದು, ಇಲ್ಲವಾದರೆ ಮರು ಸಮೀಕ್ಷೆ ನಡೆಸಬಹುದು ಎಂದರು.
|
10 |
+
ಪ್ಲಾಟ್‍ಫಾರ್ಮ್ ಮೇಲೆ ಬಸ್ ಉರುಳಿ ಇಬ್ಬರ ಸಾವು
|
11 |
+
ಎಂಟು ವರ್ಷಗಳ ಹಿಂದೆ ನಡೆಸಿದ ಸಮೀಕ್ಷೆ ಸರಿಯಾಗಿತ್ತು. ಜನಗಣತಿ ವರದಿಗಳನ್ನು ಸಾಮಾನ್ಯವಾಗಿ ಐದಾರು ವರ್ಷಗಳ ಹಿಂದಿನದವುಗಳನ್ನೇ ಪರಿಗಣಿಸಲಾಗುತ್ತದೆ. ಒಕ್ಕಲಿಗ, ಲಿಂಗಾಯಿತ ಸಮುದಾಯಕ್ಕೆ ತಮ್ಮ ಜನಸಂಖ್ಯೆ ಕಡಿಮೆ ತೋರಿಸಲಾಗಿದೆ ಎಂಬ ಆತಂಕ ಇದೆ, ಉಪಜಾತಿಗಳನ್ನು ಕೈ ಬಿಡಲಾಗಿದೆ ಎಂಬ ಆಕ್ಷೇಪ ಇದೆ.
|
12 |
+
ಈಗಲೂ ಉಪಜಾತಿಗಳನ್ನು ಸೇರಿಸಿ ಲೆಕ್ಕ ಮಾಡಬಹುದು. ವರದಿ ಜಾರಿಯಾದರೆ ರಾಜಕೀಯವಾಗಿ ಮಹತ್ವದ ಬದಲಾವಣೆಯೇನು ಆಗುವುದಿಲ್ಲ. ಹೆಚ್ಚೆಂದರೆ ಜನಸಂಖ್ಯೆಗೆ ಅನುಗುಣವಾಗಿ ಕಾರ್ಯಕ್ರಮಗಳನ್ನು ರೂಪಿಸಬಹುದು. ಬಹಳಷ್ಟು ಸಣ್ಣಪುಟ್ಟ ಜಾತಿಗಳು ಪರಿಗಣನೆಯಾಗಿ ಉಳಿದಿಲ್ಲ. ಎಸ್‍ಸಿ ಎಂದರೆ ನಾಲ್ಕೈದು ಜಾತಿ, ಪರಿಶಿಷ್ಟ ಪಂಗಡ ಎಂದರೆ ಮೂರ್ನಾಲ್ಕು ಸಮುದಾಯಗಳ ಹೆಸರುಗಳಷ್ಟೆ ಕೇಳಿ ಬರುತ್ತವೆ.
|
13 |
+
50 ಸಾವಿರ, ಲಕ್ಷದಷ್ಟು ಜನಸಂಖ್ಯೆ ಹೊಂದಿರುವ ಬಹಳಷ್ಟು ಸಮುದಾಯಗಳು ಪರಿಗಣನೆಗೆ ಒಳಗಾಗುತ್ತಿಲ್ಲ. ಈ ಕಾರಣಕ್ಕಾಗಿ ಜಾತಿ ಜನಗಣತಿ ವರದಿ ಚರ್ಚೆಯಾಗಿ ದಾಖಲೆಯಾಗಿ ಉಳಿಯಬೇಕು, ವರದಿಯಿಂದ ಸಾಮಾಜಿಕ ನ್ಯಾಯ ಸಿಗಲಿದೆ ಎಂಬ ನಂಬಿಕೆ ಇದೆ, ಅದರಿಂದ ಯಾರಿಗೂ ತೊಂದರೆಯಾಗುವುದಿಲ್ಲ ಎಂದರು.
|
eesanje/url_46_318_10.txt
ADDED
@@ -0,0 +1,11 @@
|
|
|
|
|
|
|
|
|
|
|
|
|
|
|
|
|
|
|
|
|
|
|
|
|
1 |
+
ದತ್ತಪೀಠವನ್ನು ಹಿಂದೂ ಪೂಜಾ ಕೇಂದ್ರವಾಗಿ ಉಳಿಸಲು ಸಿಎಂ ಮಧ್ಯಸ್ಥಿಕೆಗೆ ಮುತಾಲಿಕ್ ಆಗ್ರಹ
|
2 |
+
|
3 |
+
ಚಿಕ್ಕಮಗಳೂರು,ನ.5- ತಾಲೂಕಿನ ದತ್ತಪೀಠ ಹಿಂದೂಗಳ ಪೂಜಾ ಕೇಂದ್ರವಾಗಿ ಉಳಿಸುವಂತೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಸ್ಥಿಕೆ ವಹಿಸಬೇಕೆಂದು ರಾಷ್ಟ್ರೀಯ ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕರೆ ನೀಡಿದರು.20ನೇ ವರ್ಷದ ದತ್ತಮಾಲಾ ಅಭಿಯಾನದ ಅಂಗವಾಗಿ ನಗರದ ಶಂಕರ ಮಠದ ಮುಂಭಾಗ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲಾ ದಾಖಲೆಗಳು ಹಾಗೂ ಸರ್ಕಾರಿ ದಾಖಲೆಗಳ ಪ್ರಕಾರ ದತ್ತಪೀಠ ಹಿಂದೂಗಳಿಗೆ ಸೇರಿದ್ದಾಗಿದೆ. ಈಗಾಗಲೇ ಇಬ್ಬರೂ ಹಿಂದು ಅರ್ಚಕರ ನೇಮಕಗೊಂಡು ತ್ರಿಕಾಲ ಪೂಜೆ ನಡೆಯುತ್ತಿದೆ ಎಂದರು.
|
4 |
+
ಮುಸ್ಲಿಮರ ಪವಿತ್ರ ಗ್ರಂಥ ಖುರಾನ್ ನ ಪ್ರಕಾರ ವಿವಾದವಿರುವ ಸ್ಥಳದಲ್ಲಿ ದರ್ಗಾ ಪ್ರಾರ್ಥನೆ ಸಲ್ಲಿಸುವಂತಿಲ್ಲ ಹಾಗಾಗಿ ದತ್ತ ಪೀಠದಿಂದ ಸ್ವಲ್ಪವೇ ದೂರದಲ್ಲಿರುವ ನಾಗೇನಹಳ್ಳಿ ಯಲ್ಲಿ ದರ್ಗಾ ಇದ್ದು ಅಲ್ಲಿ ಉರುಸ್ ಮಾಡಿಕೊಳ್ಳಲು ನಮ್ಮ ಯಾವುದೇ ಅಭ್ಯಂತರ ಇಲ್ಲ ದತ್ತ ಪೀಠದ ಆವರಣದಲ್ಲಿರುವ ಗೋರಿಗಳನ್ನ ಸ್ಥಳಾಂತರಿಸಿ ಸಂಪೂರ್ಣ ಹಿಂದೂ ಭಕ್ತರ ಶ್ರದ್ಧಾ ಕೇಂದ್ರವಾಗಿ ಪರಿವರ್ತಿಸಲು ಹಿಂದೂ ಮುಸ್ಲಿಂ ಮುಖಂಡರನ್ನು ಚಿಕ್ಕಮಗಳೂರಿನಲ್ಲಿ ಸಭೆ ಸೇರಿಸಿ ಸೌಹಾರ್ದವಾಗಿ ಬಗೆಹರಿಸಲು ಮುಖ್ಯಮಂತ್ರಿಗಳು ಮಧ್ಯಸ್ಥಿಕೆ ವಹಿಸಬೇಕೆಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.
|
5 |
+
ಬಿಗಿ ಪೊಲೀಸ್ ಸರ್ಪಗಾವಲಿನಲ್ಲಿ ಶೋಭ ಯಾತ್ರೆ
|
6 |
+
ದತ್ತಮಾಲಾ ಅಭಿಯಾನದ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್ ಬಂದು ಬಸ್ತ್‍ನೊಂದಿಗೆ ಶೋಭ ಯಾತ್ರೆ ಹಾಗೂ ದತ್ತಪೀಠದಲ್ಲಿ ದತ್ತಮಾಲಾ ವಿಸರ್ಜನೆ ನಡೆಯಿತು. ದತ್ತ ಮಾಲೆ ಧರಿಸಿದ ನೂರಾರು ಕಾರ್ಯಕರ್ತರು ಹಾಗೂ ದತ್ತ ಭಕ್ತರು ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು ರಾಜ್ಯದ ಹುಬ್ಬಳ್ಳಿ, ಬೆಳಗಾಂ, ಬಾಗಲಕೋಟೆ, ಕೋಲಾರ, ಉಡುಪಿ, ಮಂಗಳೂರು, ಚಿಕ್ಕಮಗಳೂರು, ಸೇರಿದಂತೆ ವಿವಿಧ ಜಿಲ್ಲೆಗಳಿಂದ ಹಾಗೂ ಜಿಲ್ಲೆಯ ತಾಲೂಕುಗಳಿಂದ ದತ್ತ ಮಾಲೆ ಧರಿಸಿ ದತ್ತಮಾಲಾಧಾರಿಗಳು ಯಾತ್ರೆಯಲ್ಲಿ ಭಾಗವಹಿಸಿದ್ದರು.
|
7 |
+
ನಗರದ ಶಂಕರ ಮಠದಿಂದ ಹೊರಟ ಶೋಭಾ ಯಾತ್ರೆಯಲ್ಲಿ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಚಿಕ್ಕಮಗಳೂರು ವಿಭಾಗದ ಅಧ್ಯಕ್ಷ ರಂಜಿತ್ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ನವೀನಾ ರಂಜಿತ್, ಜೇವರ್ಗಿ ಮಠದ ಸಿದ್ದಲಿಂಗ ಸ್ವಾಮೀಜಿ, ಅಲ್ಲಂ ಪುರದ ರಾಜೇಂದ್ರ ಸೇರಿದಂತೆ ಪಾಲ್ಗೊಂಡಿದ್ದರು.
|
8 |
+
ಸಿಎಂ ಕುರ್ಚಿ ಕಿತ್ತಾಟಕ್ಕೆ ಮತ್ತೊಂದು ಟ್ವಿಸ್ಟ್ ಕೊಟ್ಟ ಡಿಕೆಶಿ
|
9 |
+
ಶಂಕರ್ ಮಠದಿಂದ ಹೊರಟ ಮೆರವಣಿಗೆ ಬಸವನಹಳ್ಳಿ ಮುಖ್ಯ ರಸ್ತೆಯ ಮೂಲಕ ಆಜಾದ್ ಪಾರ್ಕ್ ತಲುಪಿತು. ಬೆಳಿಗ್ಗೆನಿಂದ ಸಂಜೆವರೆಗೂ ಬಸವನಹಳ್ಳಿ ಮುಖ್ಯರಸ್ತೆ ಹಾಗೂ ಎ��ಜಿ ರಸ್ತೆಯಲ್ಲಿ ವಾಹನಗಳ ನಿಲುಗಡೆ ಹಾಗೂ ಸಂಚಾರ ನಿಷೇಸಲಾಗಿತ್ತು .ಎರಡು ರಸ್ತೆಗಳ ಅಡ್ಡ ರಸ್ತೆಗಳಿಗೆ ಬ್ಯಾರಿಕೆಡ್ ಹಾಕಲಾಗಿತ್ತು. ಶೋಭ ಯಾತ್ರೆ ಯುದ್ಧಕ್ಕೂ ದತ್ತ ಭಕ್ತರು ಭಜನೆ ಹಾಗೂ ಜಯ ಘೋಷಗಳನ್ನು ಕೂಗಿದರು. ಮೆರವಣಿಗೆಯಲ್ಲಿ ಶ್ರೀರಾಮನ ಸ್ತಬ್ಧಚಿತ್ರ ಗಮನ ಸೆಳೆಯಿತು.
|
10 |
+
ಆಜಾದ್ ಪಾರ್ಕಿನಿಂದ ವಿವಿಧ ವಾಹನಗಳಲ್ಲಿ ದತ್ತಪೀಠಕ್ಕೆ ತೆರಳಿದ ದತ್ತ ಭಕ್ತರು ಜಿಲ್ಲಾಡಳಿತ ವ್ಯವಸ್ಥೆ ಮಾಡಿರುವ ಬ್ಯಾರಿಕ್ಯಾಡ್‍ನಲ್ಲಿ ಸಾಲಿನಲ್ಲಿ ನಿಂತು ದತ್ತ ಗುಹೆ ಪ್ರವೇಶಿಸಿ ದತ್ತಪಾದಿಕೆಗಳ ದರ್ಶನ ಪಡೆದರು.
|
11 |
+
ದತ್ತಪೀಠ ಮುಳ್ಳಯ್ಯನಗಿರಿ ಸೀತಾಳಯನ್ ಗಿರಿ, ಹೊನ್ನಮ್ಮನ ಹಳ್ಳ, ಗಾಳಿಕೆರೆ ಹಾಗೂ ಮಾಣಿಕ್ಯದಾರ ವಿವಿಧ ಪ್ರದೇಶಗಳಿಗೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಸಲಾಗಿತ್ತು. ಅತ್ತಿ ಗುಂಡಿ ಮಾಣಿಕ್ಯದಾರ ಹಾಗೂ ನಗರದಲ್ಲಿ ಮೆರವಣಿಗೆ ಹೋಗುವ ಸೂಕ್ಷ್ಮ ಪ್ರದೇಶಗಳಲ್ಲಿ ಡ್ರೋನ್ ಕ್ಯಾಮೆರಾ ಕಾರ್ಯಾಚರಣೆ ಮಾಡಲಾಗಿತ್ತು.
|
eesanje/url_46_318_11.txt
ADDED
@@ -0,0 +1,6 @@
|
|
|
|
|
|
|
|
|
|
|
|
|
|
|
1 |
+
ಬರ ಪರಿಹಾರಕ್ಕಾಗಿ ಕೇಂದ್ರದ ಬಳಿ ಸರ್ವಪಕ್ಷ ನಿಯೋಗ ಕರೆದೊಯ್ಯಲು ಜೆಡಿಎಸ್ ಸಹಕಾರ ಕೇಳಿದ ಸಿಎಂ
|
2 |
+
ಬೆಂಗಳೂರು, ನ.5- ರಾಜ್ಯದ ಬರ ನಿರ್ವಹಣೆಗೆ ಹೆಚ್ಚಿನ ನೆರವು ಪಡೆದುಕೊಳ್ಳಲು ಕೇಂದ್ರದ ಬಳಿ ಸರ್ವ ಪಕ್ಷ ನಿಯೋಗ ಕರೆದುಕೊಂಡು ಹೋಗಲು ಸಹಕಾರ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಜೆಡಿಎಸ್ ನಾಯಕರಲ್ಲಿ ಮನವಿ ಮಾಡಿದ್ದಾರೆ. ಜಾತ್ಯತೀತ ಜನತಾ ದಳ ನಾಡಿನ ಬರಪರಿಸ್ಥಿತಿಯ ವೀಕ್ಷಣೆಗೆ ರೈತ ಸಾಂತ್ವನ ಯಾತ್ರೆ ಕೈಗೊಳ್ಳುವುದನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಇದು ಒಂದು ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಮಾಡಬೇಕಾದ ಕೆಲಸ. ಈ ಯಾತ್ರೆಯ ನಂತರ ಅವರು ಕೊಡುವ ವರದಿಯನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಶೀಲಿಸಲಿದೆ ಎಂದು ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ತಿಳಿಸಿದ್ದಾರೆ.
|
3 |
+
ರೈತ ಸಾಂತ್ವನ ಯಾತ್ರೆಯ ನಂತರ ತಮ್ಮ ಅನುಭವವನ್ನು ರಾಜ್ಯ ಸರ್ಕಾರದ ಜೊತೆಯಲ್ಲಿ ಮಾತ್ರವಲ್ಲ ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರದ ಜೊತೆಯಲ್ಲಿಯೂ ಹಂಚಿಕೊಂಡರೆ ರಾಜ್ಯಕ್ಕೆ ಅನುಕೂಲವಾಗಬಹುದು. ಒಂದು ಪ್ರಾದೇಶಿಕ ಪಕ್ಷದ ಮುಖ್ಯಸ್ಥರಾಗಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಅವರಿಗೆ ಬರಪರಿಹಾರದ ವಿಷಯದಲ್ಲಿ ನಿರಂತರವಾಗಿ ಕರ್ನಾಟಕ ರಾಜ್ಯಕ್ಕೆ ಕೆಂದ್ರ ಸರ್ಕಾರದಿಂದ ಆಗುತ್ತಿರುವ ಅನ್ಯಾಯದ ವಿವರ ಖಂಡಿತ ತಿಳಿದಿದೆ ಎಂದು ಭಾವಿಸುವೆ ಎಂದಿದ್ದಾರೆ.
|
4 |
+
ಹಿಂಗಾರು ಚೇತರಿಕೆ : ರಾಜ್ಯದಲ್ಲಿ 10 ದಿನ ಮಳೆ ಸಾಧ್ಯತೆ
|
5 |
+
ಹೊಸ ಬೆಳವಣಿಗೆಯಲ್ಲಿ ಕುಮಾರಸ್ವಾಮಿಯವರು ಅವರು ಈಗ ಕೇಂದ್ರದಲ್ಲಿ ಅಕಾರದಲ್ಲಿರುವ ಭಾರತೀಯ ಜನತಾ ಪಕ್ಷದ ಜೊತೆ ತಮ್ಮ ಪಕ್ಷದ ಮೈತ್ರಿಗೆ ಮುಂದಾಗಿದ್ದಾರೆ. ರಾಜ್ಯದ ಬಿಜೆಪಿ ನಾಯಕರನ್ನು ದೂರ ಇಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮತ್ತು ಕುಟುಂಬದ ಸದಸ್ಯರ ಜೊತೆ ಆತ್ಮೀಯವಾಗಿ ಸಂಬಂಧ ಇಟ್ಟುಕೊಂಡಿದ್ದಾರೆ. ಈ ಸೌಹಾರ್ದ ಸಂಬಂಧವನ್ನು ಬಳಸಿಕೊಂಡು ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ನ್ಯಾಯ ದೊರಕಿಸಿಕೊಟ್ಟರೆ ಕನ್ನಡಿಗರು ಋಣಿಯಾಗಿರುತ್ತಾರೆ ಎಂದಿದ್ದಾರೆ.
|
6 |
+
ಬರಪರಿಹಾರಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಲು ನಮ್ಮ ಸರ್ಕಾರ ಸರ್ವಪಕ್ಷಗಳ ನಿಯೋಗವನ್ನು ಕರೆದೊಯ್ಯಲು ಸಿದ್ಧ ಇದೆ. ತಮ್ಮದೇ ಪಕ್ಷಕ್ಕೆ ಸೇರಿರುವ ಪ್ರಧಾನಮಂತ್ರಿಯವರನ್ನು ಭೇಟಿ ಮಾಡುವ ಧೈರ್ಯ ರಾಜ್ಯದ ಬಿಜೆಪಿ ನಾಯಕರಲ್ಲಿ ಇಲ್ಲ, ಕೇಂದ್ರದ ಬಿಜೆಪಿ ನಾಯಕರು ಕೂಡಾ ರಾಜ್ಯದ ಬಿಜೆಪಿ ನಾಯಕರನ್ನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ಈ ವಿಷಯದಲ್ಲಿ ಸನ್ಮಾನ್ಯ ಹೆಚ್.ಡಿ.ದೇವೇಗೌಡರು ಮತ್ತು ಅವರ ಪಕ್ಷ ಹೆಚ್ಚಿನ ಮುತುವರ್ಜಿ ವಹಿಸಿದರೆ ಇದು ಸಾಧ್ಯವಾಗಬಹುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
|
eesanje/url_46_318_12.txt
ADDED
@@ -0,0 +1,9 @@
|
|
|
|
|
|
|
|
|
|
|
|
|
|
|
|
|
|
|
|
|
1 |
+
ಹಿಂಗಾರು ಚೇತರಿಕೆ : ರಾಜ್ಯದಲ್ಲಿ 10 ದಿನ ಮಳೆ ಸಾಧ್ಯತೆ
|
2 |
+
ಬೆಂಗಳೂರು, ನ.5-ಈಶಾನ್ಯ ಹಿಂಗಾರು ಮಳೆ ಚೇತರಿಕೆಯಾಗಿದ್ದು ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ಚದುರಿದಂತೆ ಮಳೆಯಾಗುತ್ತಿದೆ. ರಾಜಧಾನಿ ಬೆಂಗಳೂರು, ರಾಮನಗರ, ಮಂಡ್ಯ ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆಯಾಗಿದೆ. ನಿನ್ನೆ ಸಂಜೆ ಸುರಿದ ಮಳೆಗೆ ರಾಮನಗರದ ಬಳಿ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಗಳಲ್ಲಿನ ಅಂಡರ್ ಪಾಸ್‍ಗಳಲ್ಲಿ ನೀರು ನಿಂತು ವಾಹನ ಸವಾರರಿಗೆ ತೊಂದರೆ ಉಂಟಾಗಿತ್ತು.
|
3 |
+
ನಿನ್ನೆ ಸಂಜೆ ಹಾಗೂ ರಾತ್ರಿ ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಚದುರಿದಂತೆ ಮಳೆಯಾಗಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಇನ್ನೂ ಐದುರಿಂದ ಹತ್ತು ದಿನಗಳ ಕಾಲ ರಾಜ್ಯದಲ್ಲಿ ಮಳೆ ಮುಂದುವರೆಯುವ ಸಾಧ್ಯತೆಗಳಿವೆ. ಅಕ್ಟೋಬರ್ ಕೊನೆಯ ವಾರದಲ್ಲಿ ಆರಂಭಗೊಂಡ ಹಿಂಗಾರು ದುರ್ಬಲವಾಗಿತ್ತು. ಇದರಿಂದ ರಾಜ್ಯದಲ್ಲಿ ಮಳೆ ಕೊರತೆ ಉಂಟಾಗಿತ್ತು. ನವೆಂಬರ್ ಒಂದರಿಂದ ಈ ತನಕ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.
|
4 |
+
ಮುಂಗಾರಿನಂತೆ ಹಿಂಗಾರು ಕೈಕೊಟ್ಟಿದೆ ಎಂದು ಜನರು ಅದರಲ್ಲೂ ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಕಳೆದ ಎರಡು ದಿನಗಳಿಂದ ಕೆಲವೆಡೆ ಉತ್ತಮ ಮಳೆ ಹಾಗೂ ಉಳಿದೆಡೆ ಹಗುರದಿಂದ ಸಾಧಾರಣ ಮಳೆಯಾಗುತ್ತಿರುವುದು ಸದ್ಯಕ್ಕೆ ನಿಟ್ಟುಸಿರು ಬಿಡುವಂತಾಗಿದೆ.
|
5 |
+
ವಾತಾವರಣದಲ್ಲಿ ಕೆಲವೊಂದು ಬದಲಾವಣೆಗಳಾಗಿರುವ ಹಿನ್ನೆಲೆಯಲ್ಲಿ ಹಿಂಗಾರು ಚೇತರಿಸಿಕೊಂಡಿದ್ದು, ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಮುನ್ಸೂಚನೆಗಳು ಇವೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಂಸ್ಥಾಪಕ ಹಾಗೂ ನಿವೃತ್ತ ವಿಶೇಷ ನಿರ್ದೇಶಕ ವಿ.ಎಸ್.ಪ್ರಕಾಶ್ ಅವರು ತಿಳಿಸಿದರು.
|
6 |
+
ಅರಣ್ಯ ಸಿಬ್ಬಂದಿ-ಕಳ್ಳಬೇಟೆಗಾರರ ನಡುವೆ ಗುಂಡಿನ ಚಕಮಕಿ, ಒಬ್ಬ ಬೇಟೆಗಾರ ಸಾವು
|
7 |
+
ರಾಜ್ಯದಲ್ಲಿ ಮುಂದಿನ ಹತ್ತು ದಿನಗಳ ಕಾಲ ಸಾಧಾರಣ ಮಳೆಯಾಗುವ ಲಕ್ಷಣಗಳಿವೆ. ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮುಂದಿನ 5ದಿನಗಳ ಕಾಲ ಹೆಚ್ಚು ಮಳೆಯಾಗಲಿದೆ. ಐದು ದಿನಗಳ ನಂತರ ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಅವರು ಹೇಳಿದರು. ಹಿಂಗಾರು ಮಳೆ ಮುಂದಿನ ಹತ್ತು ದಿನಗಳಲ್ಲಿ ರಾಜ್ಯದ ದಕ್ಷಿಣ ಒಳನಾಡಿನಲ್ಲಿ 75ರಿಂದ 100 ಮಿ.ಮೀ.ವರೆಗೂ ಮಳೆಯಾಗುವ ಸೂಚನೆಗಳಿವೆ.
|
8 |
+
ಉತ್ತರ ಒಳನಾಡಿನಲ್ಲಿ 16ರಿಂದಿ 65 ಮಿ.ಮೀ., ಕರಾವಳಿ 50-75 ಮಿ.ಮೀ. ಮಳೆಯಾಗಲಿದ್ದು, ಮಲೆನಾಡಿನಲ್ಲಿ 40ರಿದ 65 ಮಿ.ಮೀ.ನಷ್ಟು ಮಳೆಯಾಗುವ ಸಾಧ್ಯತೆಗಳಿವೆ ಎಂದು ಅವರು ವಿವರಿಸಿದರು.
|
9 |
+
ಉತ್ತರ ಕರ್ನಾಟಕದ ವಿಜಯಪುರ, ಬಾಗಲಕೋಟೆ ಭಾಗದಲ್ಲಿ ನಾಲ್ಕೈದು ದಿನಗಳ ನಂತರ ಉತ್ತಮ ಮಳೆಯಾಗುವ ಸಾಧ್ಯತೆಗಳಿವೆ. ತಡವಾಗಿ ಹಿಂಗಾರು ಚೇತರಿಸಿಕೊಂಡಿರುವುದರಿಂದ ಕಟಾವಿಗೆ ಬಂದಿರುವ ಬೆಳೆಗಳಿಗೆ ತೊಂದರೆಯಾಗಲಿದೆ. ನೀರಿನ ಅವಶ್ಯಕತೆ ಇದ್ದ ಬೆಳಗಳಿಗೆ ಅನುಕೂಲವಾಗಲಿದೆ. ಜಾನ��ವಾರಗಳ ಮೇವು, ಕುಡಿಯುವ ನೀರಿಗೂ ಸಹಕಾರಿಯಾಗಲಿದೆ ಎಂದರು.
|
eesanje/url_46_318_2.txt
ADDED
@@ -0,0 +1,9 @@
|
|
|
|
|
|
|
|
|
|
|
|
|
|
|
|
|
|
|
|
|
1 |
+
ರೈತರ ಪಂಪ್ ಸೆಟ್‍ಗಳಿಗೆ ಪ್ರತಿದಿನ 7 ತಾಸು ವಿದ್ಯುತ್ ಪೂರೈಕೆ
|
2 |
+
ಬೆಂಗಳೂರು,ನ.6- ರಾಜ್ಯದಲ್ಲಿ ಸೃಷ್ಟಿಯಾಗಿರುವ ವಿದ್ಯುತ್ ಅಭಾವವನ್ನು ನೀಗಿಸಲು 1500 ಕೋಟಿ ರೂ.ಗಳ ಅಗತ್ಯವಿದ್ದು, ಅದನ್ನು ಅನುದಾನದ ಉಳಿತಾಯ ಹಾಗೂ ಮರು ಹಂಚಿಕೆ ಮೂಲಕ ಭರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
|
3 |
+
ಸಚಿವ ಕೆ.ಜೆ.ಜಾರ್ಜ್ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಇಂದು ಗೃಹಕಚೇರಿ ಕೃಷ್ಣಾದಲ್ಲಿ ಇಂಧನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಈ ಸಂದರ್ಭದಲ್ಲಿ ವಿದ್ಯುತ್ ಬೇಡಿಕೆ ಮತ್ತು ಪೂರೈಕೆ ನಡುವಿನ ವ್ಯತ್ಯಾಸದ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಲಾಗಿದೆ. ರಾಜ್ಯದಾದ್ಯಂತ ಐಪಿ ಸೆಟ್‍ಗಳಿಗೆ ನಿರಂತರ ಏಳು ಗಂಟೆಗಳ ಅವಧಿಗೆ ವಿದ್ಯುತ್ ಒದಗಿಸಲು ಗಂಟೆಗೆ 600 ಮೆಗಾವ್ಯಾಟ್ ಹಾಗೂ ಪ್ರತಿದಿನಕ್ಕೆ 14 ಮಿಲಿಯನ್ ಯುನಿಟ್‍ಗಳ ಅಗತ್ಯವಿದೆ. ಸರ್ಕಾರದ ಮೇಲೆ ಹೆಚ್ಚಿನ ಹೊರೆಯಾಗದಂತೆ ಪ್ರತಿದಿನ ಏಳು ತಾಸು ವಿದ್ಯುತ್ ನೀಡಲು ಇಂದಿನ ಸಭೆಯಲ್ಲಿ ನಿರ್ಧರಿಸಲಾಯಿತು.
|
4 |
+
2022ನೇ ಇಸವಿಗೆ ಹೋಲಿಸಿದರೆ 2023 ರಲ್ಲಿ ವಿದ್ಯುತ್ ಬೇಡಿಕೆ ಸರಾಸರಿ ಶೇ. 43 ರಷ್ಟು ಹೆಚ್ಚಿದೆ. ಅಕ್ಟೋಬರ್ ತಿಂಗಳಲ್ಲಿ 15,978 ಮೆಗಾವ್ಯಾಟ್ ಬೇಡಿಕೆ ದಾಖಲಾಗಿದೆ. ವಿದ್ಯುತ್ ಬಳಕೆಯಲ್ಲಿ ಕಳೆದ ವರ್ಷಕ್ಕಿಂತ ಶೇ.45ರಷ್ಟು ಹೆಚ್ಚಿದೆ.
|
5 |
+
ಗಣಿ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣದಲ್ಲಿ ಕಾರು ಚಾಲಕ ವಶಕ್ಕೆ
|
6 |
+
ಕೃಷಿ ಬಳಕೆಯಲ್ಲಿ ಶೇ. 55ರಿಂದ 119 ರಷ್ಟು ಹೆಚ್ಚಳವಾಗಿದೆ. ಇತರ ವಿಭಾಗಗಳಲ್ಲಿ ಶೇ. 9 ರಿಂದ 14 ರಷ್ಟು ಹೆಚ್ಚಳವಾಗಿದೆ. ಮಳೆ ಕೊರತೆ, ವಾಡಿಕೆಗಿಂತ ಮೊದಲೇ ಐಪಿ ಸೆಟ್ ಗಳ ಬಳಕೆ ಪ್ರಾರಂಭವಾಗಿರುವುದು ಹಾಗೂ ಕೋವಿಡ್ 19 ರ ನಂತರದ ಆರ್ಥಿಕ ಪುನಶ್ಚೇತನ ಇದಕ್ಕೆ ಕಾರಣವಾಗಿದೆ ಎಂದರು.ಕಳೆದ ಬಾರಿ ಪ್ರಗತಿ ಪರಿಶೀಲನೆಯ ನಂತರ ರಾಯಚೂರು, ಬಳ್ಳಾರಿ ಉಷ್ಣವಿದ್ಯುತ್ ಸ್ಥಾವರಗಳ ಉತ್ಪಾದನೆ ಹೆಚ್ಚಾಗಿದೆ.
|
7 |
+
ಉತ್ತರ ಪ್ರದೇಶ, ಪಂಜಾಬ್ ಮತ್ತು ಹಿಮಾಚಲ ಪ್ರದೇಶಗಳಿಂದ ವಿದ್ಯುತ್ ಪಡೆಯಲಾಗುತ್ತಿದೆ ಎಂದು ತಿಳಿಸಿದರು.ಸೆಕ್ಷನ್ 11 ಅಡಿ ಬೇರೆ ರಾಜ್ಯಗಳಿಗೆ ವಿದ್ಯುತ್ ನೀಡದಂತೆ ಆದೇಶ ಹೊರಡಿಸಿ, ವಿದ್ಯುತ್ ಪಡೆಯಲಾಗುತ್ತಿದೆ. ಆ ಮೂಲಕ ವಿದ್ಯುತ್ ವಿತರಣೆ ಸಹಜ ಸ್ಥಿತಿಗೆ ಬಂದಿದೆ. ನೋಡಲ್ ಅಧಿಕಾರಿಗಳು ನಿರಂತರವಾಗಿ ಪರಿಸ್ಥಿತಿಯನ್ನು ಗಮನಿಸುತ್ತಿದ್ದಾರೆ ಎಂದರು.
|
8 |
+
ವಿವಿಧ ವಿದ್ಯುತ್ ಸರಬರಾಜು ಕಂಪೆನಿಗಳ ವ್ಯಾಪ್ತಿಯಲ್ಲಿ ರೈತರ ಅಗತ್ಯತೆಗನುಗುಣವಾಗಿ ಐದರಿಂದ ಏಳು ಗಂಟೆಗಳ ಅವಗೆ ನಿರಂತರ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದು ಸಭೆಯಲ್ಲಿ ವಿವರಿಸಲಾಗಿದೆ.ಮುಂದಿನ ವರ್ಷದಲ್ಲಿ ಐಪಿ ಸೆಟ್‍ಗಳಿಗೆ ವಿದ್ಯುತ್ ಪೂರೈಕೆಯನ್ನು ಸೌರವಿದ್ಯುತ್ ಮೂಲದಿಂದ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಮುಂದಿನ ವರ್ಷದ ವೇಳೆಗೆ ಹಗಲು ವೇಳೆಯಲ್ಲಿಯೇ ರೈತರಿಗೆ ವಿದ್ಯುತ್ ನೀಡಲು ���ದರಿಂದ ಅನುಕೂಲವಾಗಲಿದೆ ಎಂದು ಹೇಳಿದರು.
|
9 |
+
ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್, ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್ ಮತ್ತು ಸರ್ಕಾರದ ಇತರ ಹಿರಿಯ ಅಕಾರಿಗಳು ಭಾಗವಹಿಸಿದ್ದರು.
|
eesanje/url_46_318_3.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ಪ್ರತಿ ತಿಂಗಳು 20ರೊಳಗೆ ಸಂದಾಯವಾಗಲಿದೆ ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆ ಹಣ
|
2 |
+
ಬೆಂಗಳೂರು,ನ.6- ರಾಜ್ಯ ಸರ್ಕಾರದ ಬಹುನಿರೀಕ್ಷಿತ ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆಗಳಿಗೆ ಪ್ರತಿ ತಿಂಗಳ 20ರೊಳಗೆ ಹಣ ಸಂದಾಯ ಮಾಡುವುದಾಗಿ ಆರ್ಥಿಕ ಇಲಾಖೆ ತಿಳಿಸಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಿಂದ ಜಾರಿಗೊಳಿಸುತ್ತಿರುವ ಅನ್ನಭಾಗ್ಯಯೋಜನೆಯಲ್ಲಿ ಅಕ್ಕಿ ಬದಲಾಗಿ ನಗದು ಪಾವತಿ ಸಲಾಗುತ್ತಿದೆ. ಅದನ್ನು ತಿಂಗಳ ಆರಂಭದ 10ರಿಂದ 15ರೊಳಗೆ ಪಾವತಿಸಬೇಕು.
|
3 |
+
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವ ಗೃಹಲಕ್ಷ್ಮಿ ಯೋಜನೆಯಲ್ಲಿ ಪಡಿತರಚೀಟಿ ಹೊಂದಿರುವ ಪ್ರತಿ ಕುಟುಂಬದ ಮನೆಯ ಯಜಮಾನಿಗೆ ಪ್ರತಿ ತಿಂಗಳು ಎರಡು ಸಾವಿರ ನಗದನ್ನು ಏಕೀಕೃತ ನೇರ ನಗದು ರೂಪದಲ್ಲಿ ವರ್ಗಾವಣೆ ಮಾಡಲಾಗುತ್ತಿದ್ದು ಅದನ್ನು 15ರಿಂದ 20ರೊಳಗೆ ಪಾವತಿಸಬೇಕಿದೆ. ಈ ಎರಡೂ ಯೋಜನೆಗಳಿಗೂ ಆರ್ಥಿಕ ಇಲಾಖೆ ಪ್ರತಿ ತಿಂಗಳ 20ರೊಳಗೆ ಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದಾಗಿ ತಿಳಿಸಲಾಗಿದೆ.
|
4 |
+
ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಡಿ ನೀಡಲಾಗುತ್ತಿರುವ ಹಲವಾರು ಮಾಸಾಶನಗಳನ್ನು 1ರಿಂದ 5ನೇ ತಾರೀಖಿನೊಳಗೆ ಪಾವತಿ ಪ್ರಕ್ರಿಯೆಯನ್ನು ನಡೆಸಲಾಗುವುದು ಎಂದು ತಿಳಿಸಲಾಗಿದೆ. ಪ್ರತಿ ಕಲ್ಯಾಣ ಯೋಜನೆಯ ಹಾಗೂ ಸಬ್ಸಿಡಿ ಸ್ಕೀಮ್‍ಗಳಲ್ಲಿ ಫಲಾನುಭವಿಗಳ ಆಧಾರ್ ಮತ್ತು ಬ್ಯಾಂಕ್ ಖಾತೆಗಳ ಜೋಡನೆ ಮಾಡಿ ಡಿಬಿಟಿ ಮೂಲಕ ಅಡೆತಡೆ ಇಲ್ಲದೆ ಹಣ ಪಾವತಿಸಲಾಗುತ್ತಿದೆ.
|
5 |
+
ಗಣಿ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣದಲ್ಲಿ ಕಾರು ಚಾಲಕ ವಶಕ್ಕೆ
|
6 |
+
ಸರ್ಕಾರ ನೌಕರರ ವೇತನ ಪಾವತಿ ಸಮಯದಲ್ಲಿ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಬಿಲ್‍ಗಳನ್ನು ಪಾವತಿಸಬೇಕಾದರೆ ಒತ್ತಡ ಹೆಚ್ಚಾಗುತ್ತದೆ. ಡಿಬಿಟಿಯಲ್ಲಿ ವಿಳಂಬವಾಗುತ್ತಿದೆ. ಪ್ರತಿ ಕಡತದ ಪರಿಶೀಲನೆಗೂ ವಿಳಂಬವಾಗುತ್ತದೆ ಎಂದು ವಿವರಿಸಲಾಗಿದೆ.
|
7 |
+
ಪಾವತಿ ಮತ್ತು ವಿತರಣೆ ವ್ಯವಸ್ಥೆಗಳ ನಡುವೆ ಸಮನ್ವಯೀಕರಣ ಅಗತ್ಯವಿದೆ ಗೃಹಲಕ್ಷ್ಮಿ, ಅನ್ನಭಾಗ್ಯಮತ್ತು ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳ ಫಲಾನುಭವಿಗಳ ಸಂಖ್ಯೆಹೆಚ್ಚಾಗಿದೆ. ಆದ್ದರಿಂದ ಆರ್ಥಿಕ ಇಲಾಖೆಯ ಖಜಾನೆ ಘಟಕಕ್ಕೆ ಫಲಾನುಭವಿಗಳ ಪಟ್ಟಿಯನ್ನು ನಿಗದಿತ ಅವಯೊಳಗೆ ತಲುಪಿಸಬೇಕು. ಸದರಿ ಬಿಲ್‍ಗಳನ್ನು ಸೃಷ್ಟಿಸಿ ಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಲಾಗಿದೆ.
|
eesanje/url_46_318_4.txt
ADDED
@@ -0,0 +1,8 @@
|
|
|
|
|
|
|
|
|
|
|
|
|
|
|
|
|
|
|
1 |
+
ಬಸ್ ಪ್ರಯಾಣ ದರ ಏರಿಕೆ ಸದ್ಯಕ್ಕಿಲ್ಲ : ಸಚಿವ ರಾಮಲಿಂಗಾರೆಡ್ಡಿ
|
2 |
+
ಬೆಂಗಳೂರು,ನ.6-ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರ ಏರಿಕೆ ಪ್ರಸ್ತಾವ ಸದ್ಯಕ್ಕಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ನಾಲ್ಕು ಸಾರಿಗೆ ನಿಗಮಗಳನ್ನು ಆರ್ಥಿಕವಾಗಿ ಸ್ವಾಲಂಬಿಯಾಗಿ ರೂಪಿಸಲು ಅಧ್ಯಯನ ನಡೆಸಿ ವರದಿ ನೀಡುವಂತೆ ಸರ್ಕಾರದ ಮಾಜಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಎಂ.ಆರ್.ಶ್ರೀನಿವಾಸ್ ಮೂರ್ತಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದರು. ಸಮಿತಿ ಹಲವು ಶಿಫಾರಸ್ಸುಗಳನ್ನೊಳಗೊಂಡ ವರದಿಯನ್ನು ಆಗಿನ ಮುಖ್ಯಮಂತ್ರಿಯವರಿಗೂ ನೀಡಿದೆ. ತಾವು ಸಚಿವರಾದ ಮೇಲೆ ತಮಗೂ ತಲುಪಿಸಿದೆ ಎಂದು ಹೇಳಿದರು.
|
3 |
+
ಸಮಿತಿಯ ಶಿಫಾರಸ್ಸಿನಲ್ಲಿ ಪ್ರಮುಖವಾಗಿ ಪ್ರಯಾಣ ದರ ಪರಿಷ್ಕರಣೆಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಸಮಿತಿ ಮಾದರಿಯಲ್ಲಿ ಪ್ರತ್ಯೇಕವಾದ ಸ್ವಾಯತ್ತ ಸಮಿತಿ ರಚಿಸುವಂತೆ ಶಿಫಾರಸ್ಸು ಮಾಡಲಾಗಿದೆ. 2015ರಲ್ಲಿ ದರ ಪರಿಷ್ಕರಣೆಯಾಗಿತ್ತು. ಆ ವೇಳೆ ಡೀಸೆಲ್ ಬೆಲೆ 50ರಿಂದ 60 ರೂ.ನಷ್ಟಿತ್ತು. ಈಗ ತೀವ್ರವಾಗಿ ಏರಿಕೆಯಾಗಿದೆ. ಸಾರಿಗೆ ಸಿಬ್ಬಂದಿಗಳ ವೇತನ 2017 ಮತ್ತು 2022ರಲ್ಲಿ ಪರಿಷ್ಕರಣೆಯಾಗಿದೆ.
|
4 |
+
ಬಿಡಿಭಾಗಗಳ ಬೆಲೆ ಕೂಡ ಹೆಚ್ಚಾಗಿದೆ. ಆದರೂ ಯಾವುದೇ ಸರ್ಕಾರಗಳು ಬಸ್ ಪ್ರಯಾಣ ದರ ಪರಿಷ್ಕರಣೆಗೆ ಅನುಮತಿ ನೀಡುತ್ತಿಲ್ಲ. ಹೀಗೇ ಆದರೆ ಸಾರಿಗೆ ನಿಗಮಗಳು ಶಾಶ್ವತವಾಗಿ ನಷ್ಟದಲ್ಲಿರಬೇಕಾಗುತ್ತದೆ. ಆ ಕಾರಣಕ್ಕೆ ದರ ಪರಿಷ್ಕರಣೆಗೆ ಸ್ವಾಯತ್ತವಾಗಿ ನಿರ್ಣಯ ಕೈಗೊಳ್ಳುವ ಸಮಿತಿ ರಚಿಸುವಂತೆ ಶ್ರೀನಿವಾಸ್‍ಮೂರ್ತಿಯವರು ಶಿಫಾರಸ್ಸು ಮಾಡಿದ್ದಾರೆ.
|
5 |
+
“ಭಾರತ-ಕೆನಡಾ ಮುನಿಸು ಸದ್ಯಕ್ಕೆ ಮುಗಿಯಲ್ಲ”
|
6 |
+
ಆ ವರದಿ ಸರ್ಕಾರದ ಮುಂದಿದೆ. ಮುಖ್ಯಮಂತ್ರಿ ಹಾಗೂ ಸಂಪುಟದಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು. ಸದ್ಯಕ್ಕೆ ನಮ್ಮ ಮುಂದೆ ದರ ಏರಿಕೆಯ ಪ್ರಸ್ತಾವನೆ ಇಲ್ಲ ಎಂದು ಹೇಳಿದರು. ರಾಜ್ಯದಲ್ಲಿರುವ 25 ಸಾವಿರ ಹಳ್ಳಿಗಳ ಪೈಕಿ 300ರಿಂದ 400 ಗ್ರಾಮಗಳನ್ನು ಹೊರುತಪಡಿಸಿ ಉಳಿದೆಲ್ಲ ಕಡೆ ಬಸ್ ಸೇವೆ ಒದಗಿಸಲಾಗುತ್ತಿದೆ. ನಷ್ಟವಾದರೂ ಕೂಡ ಜನರಿಗೆ ಸೇವೆ ನೀಡಬೇಕು ಎಂಬ ಕಾರಣಕ್ಕೆ ಸರ್ಕಾರ ಸಾರಿಗೆ ಸಂಸ್ಥೆಗಳ ಬಸ್ ಸಂಚಾರ ಮುಂದುವರೆಸುತ್ತದೆ.ಇದರಿಂದಾಗಿ ನಷ್ಟ ಸಹಜ. ಖಾಸಗಿ ಸಾರಿಗೆಯವರು ನಷ್ಟವಾಗುವ ಕಡೆ ಬಸ್ ಸೇವೆ ಒದಗಿಸುವುದಿಲ್ಲ ಎಂದರು.
|
7 |
+
ಬಿಬಿಎಂಪಿಗೆ ಚುನಾವಣೆ ನಡೆಸಲು ಎಲ್ಲ ರೀತಿಯ ತಯಾರಿಗಳಾಗಿವೆ. ಆದರೆ ಹಿಂದುಳಿದ ವರ್ಗಗಳ ಮೀಸಲಾತಿ ವಿಷಯ ಇತ್ಯರ್ಥವಾಗದ ಹಿನ್ನಲೆಯಲ್ಲಿ ವಿಳಂಬವಾಗುತ್ತಿದೆ ಎಂದು ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು. ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಮಹಾರಾಷ್ಟ್ರದವರು ಹಿಂದುಳಿದ ವರ್ಗಗಳ ಮೀಸಲಾತಿ ಇಲ್ಲದೆ ಚುನಾವಣೆ ನಡೆಸಿದ್ದಾರೆ. ಮಧ್ಯಪ್ರದೇಶದಲ್ಲಿ ಹಿಂದುಳಿದ ವರ್ಗಗಳ ಆಯೋಗದ ವರದಿ ಆಧರಿಸಿ ಮೀಸಲಾತಿ ನೀಡಲಾಗಿದೆ. ನಮ್ಮಲ್ಲಿ ಕಾಂತರಾಜು ಆಯೋಗದ ವರದಿ ಸಲ್ಲಿಕೆಯಾದ ಬಳಿಕ ಹಿಂದುಳಿದ ಸಮುದಾಯಗಳ ಜನಸಂಖ್ಯೆ ಎಷ್ಟು ಎಂಬುದು ಗೊತ್ತಾಗಲಿದೆ. ಅದನ್ನು ಆಧರಿಸಿ ಮೀಸಲಾತಿ ನೀಡಬಹುದು.
|
8 |
+
ಪ್ರಸ್ತುತ ಸಂದರ್ಭದಲ್ಲಿ ಒಬಿಸಿ ಮೀಸಲಾತಿ ಇಲ್ಲದೆ ಬಿಬಿಎಂಪಿ ಚುನಾವಣೆ ನಡೆಸಬೇಕಾಗುತ್ತದೆ. ಅದು ಸಾಧ್ಯವಿಲ್ಲ. ಈ ತಿಂಗಳೊಳಗೆ ಒಬಿಸಿ ಮೀಸಲಾತಿ ವಿಷಯ ಇತ್ಯರ್ಥವಾದರೆ ಒಂದು ತಿಂಗಳೊಳಗೆ ಚುನಾವಣೆ ನಡೆಸಲು ಆಯೋಗ ಸಿದ್ದವಿದೆ ಎಂದರು.
|
eesanje/url_46_318_5.txt
ADDED
@@ -0,0 +1,13 @@
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
1 |
+
ಬರಕ್ಕಿಂತ ಜೆಡಿಎಸ್-ಬಿಜೆಪಿ ಮೈತ್ರಿಯೇ ಸರ್ಕಾರಕ್ಕೆ ದೊಡ್ಡ ಸಂಕಷ್ಟವಾಗಿದೆ : ಹೆಚ್‌ಡಿಕೆ
|
2 |
+
ಬೆಂಗಳೂರು,ನ.6- ನಾವು ಹಮ್ಮಿಕೊಳ್ಳಲಿರುವ ರೈತ ಸಾಂತ್ವನ ಯಾತ್ರೆ ಬಗ್ಗೆ ಲಘುವಾಗಿ ಹೇಳಿಕೆ ಕೊಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ತೀವ್ರ ತಿರುಗೇಟು ಕೊಟ್ಟಿದ್ದಾರೆ. ಈ ಬಗ್ಗೆ ಜಾಲತಾಣ ಎಕ್ಸ್‍ನಲ್ಲಿ ಪೋಸ್ಟ್ ಮಾಡಿರುವ ಅವರು, ನಿಮಗೆ ರಾಜ್ಯದ ಬರ ಮತ್ತಿತರೆ ಸಂಕಷ್ಟಗಳಿಗಿಂತ ಜೆಡಿಎಸ್-ಬಿಜೆಪಿ ಮೈತ್ರಿಯೇ ಬಹುದೊಡ್ಡ ಸಂಕಷ್ಟವಾಗಿ ಪರಿಣಮಿಸಿದಂತೆ ತೋರುತ್ತಿದೆ ಎಂದು ಕಾಲೆಳೆದಿದ್ದಾರೆ.
|
3 |
+
ಅಲ್ಲದೆ, ವಿಶ್ವ ವಿಖ್ಯಾತ ವಿತ್ತತಜ್ಞ ಎಂದು ಹಾಲಿ ಸಿಎಂಗೆ ಮಾಜಿ ಮುಖ್ಯಮಂತ್ರಿ ಟಾಂಗ್ ನೀಡಿದ್ದಾರೆ. ಪ್ರತಿಪಕ್ಷಗಳ ಕೆಲಸ ಗುರುತಿಸುವ ನಿಮ್ಮ ಹೃದಯ ವೈಶಾಲ್ಯತೆಗೆ ನಾನು ಆಭಾರಿ. ರೈತ ಸಾಂತ್ವನ ಯಾತ್ರೆಯನ್ನು ಸ್ವಾಗತ ಮಾಡಿರುವ ನಿಮ್ಮ ದೊಡ್ಡ ಗುಣವನ್ನು ಮನಸಾರೆ ಕೊಂಡಾಡುತ್ತೇನೆ. ಜೆಡಿಎಸ್ ಸಲ್ಲಿಸಲಿರುವ ಬರ ಅಧ್ಯಯನ ವರದಿಯನ್ನು ಗಂಭೀರವಾಗಿ ಪರಿಗಣಿಸುವುದಾಗಿ ಹೇಳಿದ್ದೀರಿ, ಬಹಳ ಸಂತೋಷ ಎಂದು ವ್ಯಂಗ್ಯವಾಡಿದ್ದಾರೆ.
|
4 |
+
ರೈತ ಸಾಂತ್ವನ ಯಾತ್ರೆಯ ಅನುಭವವನ್ನು ಕೇಂದ್ರದ ಜತೆಗೂ ಹಂಚಿಕೊಳ್ಳುತ್ತೇವೆ. ನಿಮಗೆ ಸಂಶಯ ಬೇಡ. ರಾಜ್ಯದ ಅಗತ್ಯಗಳಿಗೆ ಕೇಂದ್ರ ಸರ್ಕಾರ ಹೇಗೆ ಸ್ಪಂದಿಸುತ್ತಿದೆ, ಅದಕ್ಕೆ ನಿಮ್ಮ ನೇತೃತ್ವದ ಸರ್ಕಾರ ಎಷ್ಟು ಗಂಭೀರ ಪ್ರಯತ್ನ ಮಾಡಿದೆ, ಮಾಡುತ್ತಿದೆ ಎನ್ನುವುದು ನನಗೂ ತಿಳಿದಿದೆ. ಬರದ ಜತೆಗೆ, ವಿದ್ಯುತ್ ಬಿಕ್ಕಟ್ಟು, ಕಾವೇರಿ ಸಂಕಷ್ಟದ ವಿಷಯದಲ್ಲಿ ನಿಮ್ಮ ಸರ್ಕಾರ ದ ಅಪರಿಮಿತ ಅಸಡ್ಡೆಯನ್ನು ಅರಿಯದಷ್ಟು ಮುಗ್ಧನೇ ನಾನು ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
|
5 |
+
ದೆಹಲಿಯ ಬಿ, ಸಿ ಗ್ರೂಪ್ ನೌಕರರಿಗೆ ದೀಪಾವಳಿ ಬೋನಸ್ ಘೋಷಣೆ
|
6 |
+
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮತ್ತವರ ಕುಟುಂಬಕ್ಕೆ ಆತ್ಮೀಯತೆ ಇದೆ ಎಂಬುದರಲ್ಲಿ ಎರಡು ಮಾತಿಲ್ಲ. ಬಿಜೆಪಿ-ಜೆಡಿಎಸ್ ನಡುವೆ ಮೈತ್ರಿ ಏರ್ಪಟ್ಟಿದೆ ಎನ್ನುವುದೂ ನಿಜ. ರಾಜ್ಯದ ಹಿತಕ್ಕಾಗಿ ನಾವು ಪ್ರಧಾನಿಯವರ ಮುಂದೆಯೂ ದನಿ ಎತ್ತುತ್ತೇವೆ, ಅದು ನಮ್ಮ ಬದ್ಧತೆ. ಆದರೆ, ನಿಮಗೆ ರಾಜ್ಯದ ಬರ ಮತ್ತಿತರೆ ಸಂಕಷ್ಟಗಳಿಗಿಂತ ಈ ಮೈತ್ರಿಯೇ ಬಹುದೊಡ್ಡ ಸಂಕಷ್ಟವಾಗಿ ಪರಿಣಮಿಸಿದಂತೆ ತೋರುತ್ತಿದೆ ಅಲ್ಲವೇ ಎಂದು ಅವರು ಕುಟುಕಿದ್ದಾರೆ.
|
7 |
+
236 ತಾಲೂಕುಗಳಲ್ಲಿ 216 ಬರಪೀಡಿತ ಎಂದು ಲೆಕ್ಕ ಕೊಟ್ಟಿದ್ದೀರಿ. 33,710 ಕೋಟಿ ರೂ. ಮËಲ್ಯದ ಬೆಳೆಹಾನಿ ಆಗಿದ್ದು, ಕೇಂದ್ರಕ್ಕೆ 17,901 ಕೋಟಿ ರೂ. ಪರಿಹಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದ್ದೀರಿ, ಸರಿ. ಜತೆಗೆ 343 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ ಎಂದೂ ತಿಳಿಸಿದ್ದೀರಿ. ಅದನ್ನು ಯಾರಿಗೆ ಹಂಚಿದ್ದೀರಿ ಎಂದು ಅವರು ಪ್ರಶ್ನಿಸಿದ್ದಾರೆ.
|
8 |
+
ರಾಜ್ಯದಲ್ಲಿ ಅತಿ ���ೆಚ್ಚು ಬಜೆಟ್ ಮಂಡಿಸಿ ವಿಶ್ವವಿಖ್ಯಾತ ವಿತ್ತತಜ್ಞರಾಗಿ ಮೆರೆಯುತ್ತಿರುವವರು ನೀವು. ಅಕಾರಕ್ಕೆ ಬಂದೊಡನೆ ವಿಶೇಷವಾಗಿ ವಿತ್ತಖಾತೆಯನ್ನು ತಮ್ಮಲ್ಲಿಯೇ ಜೋಪಾನ ಮಾಡಿಕೊಳ್ಳುವ ನಿಮಗೆ, ಕೇಂದ್ರ ಸರ್ಕಾರವು ಬರಕ್ಕೆ, ಪ್ರವಾಹಕ್ಕೆ ಯಾವ ರೀತಿ ಪರಿಹಾರ ಕೊಡುತ್ತದೆ ಎನ್ನುವ ಸಾಮಾನ್ಯ ತಿಳಿವಳಿಕೆಯೂ ಇಲ್ಲವೇ ಎಂದು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.
|
9 |
+
ನೀವು ಕರೆದೊಯ್ಯುವ ಸರ್ವಪಕ್ಷ ನಿಯೋಗದಲ್ಲಿ ಜೆಡಿಎಸ್ ಪಕ್ಷವೂ ಇರುತ್ತದೆ, ನಮ್ಮ ಮಿತ್ರಪಕ್ಷ ಬಿಜೆಪಿಯೂ ಇರುತ್ತದೆ. ಇನ್ನೊಬ್ಬರ ಧೈರ್ಯದ ಬಗ್ಗೆ ಮಾತನಾಡುವ ನೀವು, ನಿಮ್ಮ ಸ್ಥೆ ೈರ್ಯದ ಬಗ್ಗೆಯೂ ಕೊಂಚ ಹೇಳಬೇಕಲ್ಲವೇ ಎಂದು ಪ್ರಶ್ನಿಸಿದರು.
|
10 |
+
ರಾಜ್ಯದ ನೆಲ-ಜಲ, ಇನ್ನಿತರೆ ಸಂಕಷ್ಟದ ವೇಳೆ ಈ ಇಳಿವಯಸ್ಸಿನಲ್ಲಿಯೂ ಮಾನ್ಯ ದೇವೇಗೌಡರು ನಡೆಸುತ್ತಿರುವ ಹೋರಾಟ ನಿಮಗೆ ಕಾಣಿಸಿಲ್ಲವೇ? ಕಾವೇರಿ ಬಗ್ಗೆ ಅವರು ಸಂಸತ್ತಿನಲ್ಲಿ ಸಿಡಿದೆದ್ದಾಗ ನಿಮ್ಮ ಪಕ್ಷದ ಸದಸ್ಯರೆಲ್ಲರೂ ಎಲ್ಲಿ ಅವಿತು ಕುಳಿತಿದ್ದರು ಎಂದುಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
|
11 |
+
ಡಿನ್ನರ್-ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿಕೊಂಡು ಆಪರೇಷನ್ ಹಸ್ತದ ಬಗ್ಗೆಯೇ ನಿಮ್ಮ ಸಚಿವರ ಬಳಿ ಅಲವತ್ತುಕೊಳ್ಳುತ್ತಿದ್ದೀರಿ. ಪಂಚರಾಜ್ಯಗಳಿಗೆ ಹಣ ಹೊಂಚಲು ರಾಜ್ಯವನ್ನು ದೋಚುವುದು ಹೇಗೆಂದು ಗುಟ್ಟು ಗುಟ್ಟಾಗಿ ಪಾಠ ಮಾಡುತ್ತಿದ್ದೀರಿ. ಜೆಡಿಎಸ್, ಬಿಜೆಪಿ ಶಾಸಕರು ಹಾಗೂ ಸೋತ ಅಭ್ಯರ್ಥಿಗಳನ್ನು ಆಪರೇಷನ್ ಮಾಡಲು ಗುಳ್ಳೆನರಿಗಳಂತೆ ಅವರ ಮನೆಗಳ ಮುಂದೆ ಕತ್ತಲಾದ ಮೇಲೆ ಹೊಂಚು ಹಾಕಿ ಕೂರುತ್ತಿದ್ದೀರಿ ಎಂದು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
|
12 |
+
ಜರ್ಮನ್ ವಿದೇಶಾಂಗ ಸಚಿವೆಯನ್ನು ಚುಂಬಿಸಲೆತ್ನಿಸಿದ ಕ್ರೋವೆಷಿಯನ್ ಸಚಿವ
|
13 |
+
ಕುತ್ತಿಗೆಗೆ ಗ್ಯಾರಂಟಿ ಬೋರ್ಡ್ ಹಾಕಿಕೊಂಡು ಹಾದಿ-ಬೀದಿಯಲ್ಲಿ ಓಡಾಡುತ್ತಿದ್ದೀರಿ. ಐದು ತಿಂಗಳಿಗೇ ಭದ್ರತೆಯ ಗ್ಯಾರಂಟಿ ಇಲ್ಲದೆ ಬಾಲಗ್ರಹಪೀಡಿತ ನಿಮ್ಮ ಸರ್ಕಾರ ಭಿನ್ನಮತಪೀಡಿತವಾಗಿದೆ. ಕುರ್ಚಿ ಉಳಿಸಿಕೊಳ್ಳಲು ನೀವೂ ಹೆಣಗಾಡುತ್ತಿದ್ದೀರಿ. ಹೌದಲ್ಲವೇ? ಉತ್ತರ ನೀಡಿ ಸನ್ಮಾನ್ಯ ಸಿದ್ದರಾಮಯ್ಯನವರೇ ಎಂದು ಕುಮಾರಸ್ವಾಮಿ ಕೇಳಿದ್ದಾರೆ.
|
eesanje/url_46_318_6.txt
ADDED
@@ -0,0 +1,6 @@
|
|
|
|
|
|
|
|
|
|
|
|
|
|
|
1 |
+
ಬೆಂಗಳೂರಿಗೆ ಪ್ರತ್ಯೇಕ ಚಿರತೆ ಕಾರ್ಯಪಡೆ : ಸಚಿವ ಈಶ್ವರ ಖಂಡ್ರೆ
|
2 |
+
ಬೆಂಗಳೂರು,ನ.6- ನಗರದ ವಸತಿ ಪ್ರದೇಶಗಳಲ್ಲಿ ಪದೇ ಪದೇ ಚಿರತೆಗಳು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಗರಕ್ಕೆ ಪ್ರತ್ಯೇಕ ಸಮರ್ಪಿತ ಕ್ಷಿಪ್ರ ಚಿರತೆ ಕಾರ್ಯಪಡೆ ರಚಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.
|
3 |
+
ಈ ಬಾರಿ ಮಳೆಯ ಅಭಾವ ಇರುವ ಹಿನ್ನೆಲೆಯಲ್ಲಿ ಆಹಾರ ಹುಡುಕಿಕೊಂಡು ವನ್ಯ ಮೃಗಗಳು ಕಾಡಿನಿಂದ ನಾಡಿಗೆ ಹೆಚ್ಚಾಗಿ ಬರುತ್ತಿವೆ. ಅದರಲ್ಲೂ ಬೆಂಗಳೂರು ನಗರದ ಹೊರವಲಯದಲ್ಲಿ ಕಾಡು ಮತ್ತು ಬೆಟ್ಟಗುಡ್ಡ ಇರುವ ಪ್ರದೇಶದಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು, ಜನರಲ್ಲಿ ಆತಂಕ ಮೂಡಿದೆ. ಕೂಡಲೇ ಬೆಂಗಳೂರಿನಲ್ಲಿ ಒಂದು ಕ್ಷಿಪ್ರ ಚಿರತೆ ಕಾರ್ಯಪಡೆ ರಚಿಸಿ, ವನ್ಯಮೃಗಗಳು ನಾಡಿಗೆ ಬಂದರೆ ಕೂಡಲೇ ಸೆರೆ ಹಿಡಿದು ಕಾಡಿಗೆ ಅಥವಾ ಪುನರ್ವಸತಿ ಕೇಂದ್ರಕ್ಕೆ ಕಳುಹಿಸುವ ಕಾರ್ಯವನ್ನು ತ್ವರಿತವಾಗಿ ಮಾಡುವಂತೆ ಸೂಚನೆ ನೀಡಿದ್ದಾರೆ.
|
4 |
+
ದೆಹಲಿಯ ಬಿ, ಸಿ ಗ್ರೂಪ್ ನೌಕರರಿಗೆ ದೀಪಾವಳಿ ಬೋನಸ್ ಘೋಷಣೆ
|
5 |
+
ಈಗಾಗಲೇ ಹಾಲಿ ಇದ್ದ 5 ಆನೆ ಕ್ಷಿಪ್ರಕಾರ್ಯಪಡೆಗಳ ಜೊತೆಗೆ ಬೆಂಗಳೂರು (ಬನ್ನೇರುಘಟ್ಟ) ಮತ್ತು ರಾಮನಗರದಲ್ಲಿ ತಲಾ ಒಂದರಂತೆ 2 ಕಾರ್ಯಪಡೆಯನ್ನು ಹೆಚ್ಚುವರಿಯಾಗಿ ರಚಿಸಲಾಗಿದೆ. ಅದೇ ರೀತಿ ಹೆಚ್ಚು ಕಾಡಿರುವ ಮತ್ತು ಚಿರತೆಗಳು, ಕರಡಿಗಳು ಇರುವ ಬೆಟ್ಟಗುಡ್ಡದ ಪ್ರದೇಶದಲ್ಲಿ ಕನಿಷ್ಠ 3 ಜಿಲ್ಲೆಗೆ ಒಂದರಂತೆ ಕ್ಷಿಪ್ರ ಕಾರ್ಯಪಡೆ ರಚಿಸಿ, ಅತ್ಯಾಧುನಿಕ ಸಲಕರಣೆಗಳನ್ನು ಒದಗಿಸಲು ಸೂಚಿಸಿದ್ದಾರೆ.
|
6 |
+
ಚಿರತೆ ಕಾರ್ಯಪಡೆಯ ಸಿಬ್ಬಂದಿಗೆ ಸೂಕ್ತ ತರಬೇತಿ ಕೊಡಿಸುವಂತೆ ಮತ್ತು ಅಣಕು ಕಾರ್ಯಾಚರಣೆಗಳನ್ನೂ ನಡೆಸಿ ಸಿಬ್ಬಂದಿಯನ್ನು ಸಜ್ಜುಗೊಳಿಸುವಂತೆ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.
|
eesanje/url_46_318_7.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ಗಣಿ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣದಲ್ಲಿ ಕಾರು ಚಾಲಕ ವಶಕ್ಕೆ
|
2 |
+
ಬೆಂಗಳೂರು, ನ.6-ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕಿ ಪ್ರತಿಮಾ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಅವರ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾರು ಚಾಲಕನನ್ನು ಸುಬ್ರಮಣ್ಯಪುರ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಐದು ವರ್ಷಗಳಿಂದ ಪ್ರತಿಮಾ ಅವರ ಕಾರು ಚಾಲಕನಾಗಿದ್ದ ಕಿರಣ್‍ನನ್ನು ಚಾಮರಾಜನಗರ ಜಿಲ್ಲೆಯಲ್ಲಿ ವಶಕ್ಕೆ ಪಡೆದು ನಗರಕ್ಕೆ ಕರೆ ತಂದಿದ್ದಾರೆ. ಗುತ್ತಿಗೆ ಆಧಾರದಲ್ಲಿ ಕಳೆದ ಐದು ವರ್ಷಗಳಿಂದ ಕಿರಣ್ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಇವರ ತಂದೆ ಸುರೇಶ್ ಸಹ ಇದೇ ಇಲಾಖೆಯಲ್ಲಿ ಕಾರು ಚಾಲಕರಾಗಿದ್ದಾರೆ.
|
3 |
+
ಕೆಲ ವಿಚಾರದಲ್ಲಿ ಪ್ರತಿಮಾ ಹಾಗೂ ಕಿರಣ್ ನಡುವೆ ಭಿನ್ನಾಭಿಪ್ರಾಯ ಇದ್ದುದರಿಂದ ಹತ್ತು ದಿನಗಳ ಹಿಂದೆಯಷ್ಟೇ ಕಿರಣ್‍ನನ್ನು ಕೆಲಸದಿಂದ ತೆಗೆದು ಹಾಕಿ ಬೇರೆ ಚಾಲಕ ಚೇತನ್‍ನನ್ನು ನಿಯೋಜಿಸಿಕೊಂಡಿದ್ದರು. ಇದೇ ಕಾರಣಕ್ಕೆ ಕಿರಣ್ ಮಹಿಳಾ ಅಧಿಕಾರಿ ಪ್ರತಿಮಾ ಅವರ ಮೇಲೆ ದ್ವೇಷ ಸಾಧಿಸಿ ಈತನೇ ಅವರನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಳಿಸಿ ಆತನ ಹುಡುಕಾಟ ನಡೆಸುತ್ತಿದ್ದಾಗ ಕಿರಣ್ ಮೊಬೈಲ್ ಸ್ವಿಚ್‍ಆಫ್ ಮಾಡಿಕೊಂಡು ಚಾಮರಾಜನಗರ ಜಿಲ್ಲೆಯಲ್ಲಿ ತಲೆಮರೆಸಿಕೊಂಡಿರುವ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದರು.ಖಚಿತ ಮಾಹಿತಿ ಮೇರೆಗೆ ಪೊಲೀಸರು ಚಾಮರಾಜನಗರ ಜಿಲ್ಲೆಗೆ ತೆರಳಿ ಕಿರಣ್‍ನನ್ನು ವಶಕ್ಕೆ ಪಡೆದು ನಗರಕ್ಕೆ ಕರೆ ತಂದು ತೀವ್ರ ವಿಚಾರಣೆಗೊಳಪಡಿಸಿ ಹಲವು ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ.
|
4 |
+
ಯಾತ್ರಾರ್ಥಿಗಳಿಗೆ ಚಹಾ ವಿತರಿಸಿ ಗಮನ ಸೆಳೆದ ರಾಹುಲ್ ಗಾಂಧಿ
|
5 |
+
ಹಿನ್ನೆಲೆ: ಮೊನ್ನೆ ಸಂಜೆ ಪ್ರತಿಮಾ ಅವರು ಕೆಲಸ ಮುಗಿಸಿಕೊಂಡು ಇಲಾಖೆ ಕಾರಿನಲ್ಲಿ ದೊಡ್ಡಕಲ್ಲಸಂದ್ರದ ಗೋಕುಲ ಅಪಾರ್ಟ್‍ಮೆಂಟ್ ಪಕ್ಕದ ತಮ್ಮ ಮನೆಗೆ ಡ್ರಾಪ್ ಪಡೆದ ಕೆಲವೇ ನಿಮಿಷದಲ್ಲಿ ಅವರ ಕೊಲೆ ನಡೆದು ಹೋಗಿತ್ತು.
|
6 |
+
ಪ್ರತಿಮಾ ಅವರ ಕುತ್ತಿಗೆಗೆ ಹಗ್ಗದಿಂದ ಬಿಗಿದು ಬಳಿಕ ಚಾಕುವಿನಿಂದ ಕತ್ತು ಇರಿದು ಭೀಕರವಾಗಿ ಕೊಲೆ ಮಾಡಲಾಗಿತ್ತು. ಪ್ರತಿಮಾ ಅವರ ಅಣ್ಣ, ಬಿಬಿಎಂಪಿ ಗುತ್ತಿಗೆದಾರರಾಗಿರುವ ಪ್ರತೀಶ್ ಅವರು ಸಹೋದರಿಯ ಮೊಬೈಲ್‍ಗೆ ಮೊನ್ನೆ ರಾತ್ರಿ ಕರೆ ಮಾಡಿದಾಗ ಸ್ವೀಕರಿಸಿಲ್ಲ. ಎರಡು-ಮೂರು ಬಾರಿ ಕರೆ ಮಾಡಿದರೂ ಸ್ವೀಕರಿಸದಿದ್ದಾಗ ಬೆಳಗ್ಗೆ ಹೋಗಿ ವಿಚಾರಿಸೋಣ ಎಂದು ಸುಮ್ಮನಾಗಿದ್ದಾರೆ.
|
7 |
+
ನಿನ್ನೆ ಬೆಳಗ್ಗೆ ಸಹೋದರಿ ಪ್ರತಿಮಾ ಅವರ ಮನೆಗೆ ಅಣ್ಣ ಪ್ರತೀಶ್ ಬಂದು ನೋಡಿದಾಗಲೇ ಸಹೋದರಿ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ತನಿಖೆಗಾಗಿ ರಚಿಸಲಾಗಿದ್ದ ಮೂರು ತಂಡಗಳು ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ. ವೈಯಕ್ತಿಕ ಜೀವನ, ವೃತ್ತಿ ಜೀವನ, ಹಣಕಾಸು ಈ ಮೂರು ಆಯಾಮಗಳಲ್ಲಿ ತನಿಖೆ ��ೈಗೊಂಡಿರುವ ಪೊಲೀಸರು ಹೆಚ್ಚಿನ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.
|
eesanje/url_46_318_8.txt
ADDED
@@ -0,0 +1,6 @@
|
|
|
|
|
|
|
|
|
|
|
|
|
|
|
1 |
+
ಧೈರ್ಯ ಮತ್ತು ದಕ್ಷತೆಯೇ ಪ್ರತಿಮಾ ಪ್ರಾಣಕ್ಕೆ ಮುಳುವಾಯ್ತಾ..?
|
2 |
+
ಬೆಂಗಳೂರು,ನ.5- ಪ್ರತಿಮಾ ಅವರು ಧಕ್ಷ ಹಾಗೂ ಧೈರ್ಯವಂತ ಅಕಾರಿಯಾಗಿದ್ದರು. ಅವರ ಸಾವು ನಿಜಕ್ಕೂ ಆಘಾತ ತಂದಿದೆ ಎಂದು ಬೆಂಗಳೂರು ನಗರ ಜಿಲ್ಲಾಕಾರಿ ದಯಾನಂದ್ ತಿಳಿಸಿದ್ದಾರೆ. ಇಂದು ಸುಬ್ರಹ್ಮಣ್ಯಪುರದ ದೊಡ್ಡಕಲ್ಲಸಂದ್ರದ ಬಳಿ ಮನೆಯಲ್ಲಿ ಕೊಲೆಯಾದ ಪ್ರತಿಮಾ ಅವರ ನಿವಾಸಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
|
3 |
+
ಗಣಿಗಾರಿಕೆ ವಿಭಾಗದಲ್ಲಿ ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ಅಕ್ರಮಗಳನ್ನು ತಡೆಯುವುದು ಮತ್ತು ಪರಿಸರ ಸಂರಕ್ಷಣೆ ಜವಾಬ್ದಾರಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಪ್ರತಿಮಾ ಅವರು ನಿರ್ಭೀತಿಯಿಂದ ಕೆಲಸ ಮಾಡಿದ್ದರು ಎಂದು ತಿಳಿಸಿದ್ದಾರೆ.
|
4 |
+
ಸಾವಯವ ಕೃಷಿಯಾಯ್ತು ಈಗ ಅಡುಗೆಗೂ ಸಾವಯವ
|
5 |
+
ರಾಮನಗರದಲ್ಲಿ ಕೆಲಸ ಮಾಡಿ ಸುಮಾರು ಮೂರು ವರ್ಷಗಳ ಹಿಂದೆ ಬೆಂಗಳೂರಿಗೆ ವರ್ಗಾವಣೆಯಾಗಿದ್ದರು. ಇತ್ತೀಚೆಗೆ ಅಕ್ರಮ ಗಣಿಗಾರಿಕೆ ಕುರಿತಂತೆ ಅಕಾರಿಗಳ ಸಭೆ ನಡೆಸಲಾಗಿತ್ತು ಅಲ್ಲಿ ಅವರು ಭಾಗವಹಿಸಿದ್ದರು. ಎಲ್ಲರಿಗೂ ಅಕ್ರಮ ಗಣಿಗಾರಿಕೆ ತಡೆಯುವಂತೆ ಸೂಚನೆ ನೀಡಲಾಗಿತ್ತು. ಅದರಂತೆ ಅವರು ಪ್ರಕರಣವೊಂದರಲ್ಲಿ ತನಿಖೆ ನಡೆಸಿ ನನಗೆ ವರದಿ ನೀಡಿದ್ದರು ಎಂದು ತಿಳಿಸಿದ್ದಾರೆ.
|
6 |
+
ಪ್ರತಿಮಾ ಅವರಿಗೆ ಕೆಲಸದ ವೇಳೆ ಯಾರಾದರೂ ಅಡಚಣೆ ಉಂಟು ಮಾಡಿದ್ದಾರಾ? ಬೆದರಿಕೆ ಹಾಕಿದ್ದರಾ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಿಲ್ಲಾಕಾರಿಗಳು, ಈ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಕೆಲವರು ಅಡ್ಡಿಪಡಿಸುತ್ತಾರೆ ಆದರೆ ಈ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದಿದ್ದಾರೆ. ಪೊಲೀಸರು ಎಲ್ಲ ಹಂತದಲ್ಲೂ ತನಿಖೆ ನಡೆಸಿ ತಪ್ಪಿತಸ್ಥರನ್ನು ಪತ್ತೆಹಚ್ಚುತ್ತಾರೆ ಶಿಕ್ಷೆಯಾಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
|
eesanje/url_46_318_9.txt
ADDED
@@ -0,0 +1,14 @@
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
1 |
+
ಹಾಸನಾಂಬೆ ವಿಶೇಷ ದರ್ಶನ ಪಾಸ್‌ಗಳಿಂದ ಎರಡೇ ದಿನಗಳಲ್ಲಿ ಭಕ್ತರಿಂದ 24 ಲಕ್ಷ ರೂ. ಸಂಗ್ರಹ
|
2 |
+
ಹಾಸನ, ನ.5- ಹಾಸನಾಂಬ ದರ್ಶನೋತ್ಸವ ಹಿನ್ನೆಲೆಯಲ್ಲಿ ನ.3 ಹಾಗೂ ನ.4ರ ವಿಶೇಷ ದರ್ಶನಕ್ಕೆ 1000ರೂ. ಮುಖ ಬೆಲೆಯ 860 ಪಾಸ್ ಮಾರಾಟವಾಗಿದ್ದು 8,60,000 ರೂ. ಸಂಗ್ರಹಿಸಲಾಗಿದೆ.300 ಮುಖ ಬೆಲೆಯ 5178 ಪಾಸ್ ಮಾರಾಟ ಮಾಡಲಾಗಿ 15,53,400ರೂ. ಸಂಗ್ರಹಿಸಲಾಗಿದ್ದು, ಒಟ್ಟು 23,13,400ರೂ. ಸಂಗ್ರಹವಾಗಿದೆ ಎಂದು ಎಡಿಎಲ್ ಆರ್.ಸುಜಯ್ ಮಾಹಿತಿ ನೀಡಿದ್ದಾರೆ. ಲಾಡು ಮಾರಾಟದಿಂದ 5,12,340 ಸಂಗ್ರಹಿಸಲಾಗಿದೆ. ಆಳ್ವಾಸ್ ಸಾಂಸ್ಕøತಿಕ ಕಾರ್ಯಕ್ರಮ: ನಗರದ ಕಲಾ ಕಾಲೇಜಿನಲ್ಲಿ ಸಂಜೆ 7 ಗಂಟೆಗೆ ಹಮ್ಮಿಕೊಂಡಿರುವ ಆಳ್ವಾಸ್ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಸುಮಾರು 20 ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸುವ ನಿರೀಕ್ಷೆ ಇದೆ.
|
3 |
+
ರಾಜ್ಯದಲ್ಲಿ ವಿಶೇಷವಾದ ಸಾಂಸ್ಕøತಿಕ ಕಾರ್ಯಕ್ರಮ ಆಯೋಜನೆಯಲ್ಲಿ ಪ್ರಖ್ಯಾತಿ ಪಡೆದಿರುವ ಆಳ್ವಾಸ್ ನುಡಿಸಿರಿ ತಂಡವು ಹಾಸನಾಂಬ ದರ್ಶನೋತ್ಸವ ಹಿನ್ನೆಲೆಯಲ್ಲಿ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಯೋಜನೆ ಮಾಡುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವ ನಿರೀಕ್ಷೆ ಇದೆ. ಈ ಸಂಬಂಧ ಪೊಲೀಸ್ ಇಲಾಖೆಯಿಂದಲೂ ಅಗತ್ಯ ಬಂದೋಬಸ್ತ ವ್ಯವಸ್ಥೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
|
4 |
+
ಸ್ಕೌಟ್ಸ್ ಮತ್ತು ಗೈಡ್ಸ್ ತಂಡದಿಂದ ಅಳಿಲು ಸೇವೆ:
|
5 |
+
ಹಾಸನಾಂಬ ದರ್ಶನೋತ್ಸವ ಪ್ರಾರಂಭವಾದ ದಿನದಿಂದ ಸ್ಕೌಟ್ಸ್ ಮತ್ತು ಗೈಡ್ಸ್ ತಂಡದ ಸದಸ್ಯರು ಭಕ್ತಾದಿಗಳಿಗೆ ದರ್ಶನಕ್ಕೆ ನೆರವಾಗುವ ಮೂಲಕ ಅಳಿಲು ಸೇವೆ ನೀಡುತ್ತಿದ್ದು , ಸುಮಾರು 200 ಮಂದಿ ನಿಯೋಜನೆಗೊಂಡಿದ್ದಾರೆ.
|
6 |
+
ಪ್ರತಿದಿನ ಭಕ್ತಾದಿಗಳಿಗೆ ನೀರು- ಮಜ್ಜಿಗೆ ವಿತರಿಸುತ್ತಿರುವ ಇವರ ತಂಡ ವಿಕಲಚೇತನ, ವೃದ್ಧ ಭಕ್ತಾದಿಗಳಿಗೆ ವೀಲ್ ಚೇರ್‍ಗಳ ಮೂಲಕ ದೇವಾಲಯದ ಆವರಣಕ್ಕೆ ಕರೆದುಕೊಂಡು ಬಂದು ದೇವರ ದರ್ಶನ ಮಾಡಿಸಿ ಪುನಃ ನಿಗದಿತ ಸ್ಥಳಕ್ಕೆ ತಲುಪಿಸುತ್ತಿದ್ದಾರೆ.
|
7 |
+
ಮಡಿಕೇರಿಯ ಬಾಂಬ್ ಸ್ಕ್ವಾಡ್‍ನಿಂದ ಪರಿಶೀಲನೆ:ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ದೇವಾಲಯದ ಆವರಣಕ್ಕೆ ಅಲಂಕಾರಕ್ಕೆ ಬಳಸುವ ಹೂವು ಹಾಗೂ ಇತರ ವಸ್ತುಗಳ ಪರಿಶೀಲನೆಗಾಗಿಯೇ ಪೊಲೀಸ್ ಇಲಾಖೆಯಿಂದ ನಿಯೋಜನೆಗೊಂಡಿರುವ ತಂಡವು ಇಂದು ಪರಿಶೀಲನೆ ನಡೆಸಿತು.ಮಡಿಕೇರಿಯಿಂದ ಆಗಮಿಸಿರುವ 8 ಮಂದಿಯ ತಂಡ ಇಂದು ಹಾಸನಾಂಬ ದೇವಾಲಯದ ಆವರಣ ಹಾಗೂ ದೇವಾಲಯದ ಸುತ್ತಮುತ್ತ ಹೊರಗಡೆಯಿಂದ ತಂದು ಅಲಂಕಾರಕ್ಕೆ ಬಳಸಲಾಗುತ್ತಿರುವ ಹೂವಿನ ಹಾರ ಹಾಗೂ ಇತರೆ ವಸ್ತುಗಳನ್ನು ಬಾಂಬ ಪತ್ತೆ ಉಪಕರಣದ ಮೂಲಕ ಎಎಸ್‍ಐ ಶಿವಾನಂದಾ ಹಾಗೂ ರಂಗನಾಥ್ ಪರಿಶೀಲನೆ ನಡೆಸಿದರು.
|
8 |
+
ದರ್ಶನೋತ್ಸವ ಹಿನ್ನೆಲೆ ವಿವಿಧ ಕಾರ್ಯಕ್ರಮ:
|
9 |
+
ಹಾಸನಾಂಬ ದರ್ಶನೋತ್ಸವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಈ ಬಾರಿ ವಿಶೇಷವಾಗಿ ಆಯೋಜಿಸಲಾಗಿದ್ದ ಆಗಸದಿಂದ ಹಾಸನ ಹೆಲಿ ಟೂರಿಸಂ, ಪ್ಯಾರಾಸೆಲಿಂಗ್, ಪ್ಯಾರಾ ಮೋಟರಿಂಗ್, ಪ್ಯಾಕೇಜ್ ಸಾರಿಗೆ ಪ್ರವಾಸದಲ್ಲಿ ಬಹುತೇಕ ಮಂದಿ ಪ್ರಯೋಜನ ಪಡೆದಿದ್ದಾರೆ.
|
10 |
+
ಹೆಲಿ ಟೂರಿಸಂನಲ್ಲಿ ನ.3ರಂದು 85 ಮಂದಿ ಆಗಸದಲ್ಲಿ ಹಾರಾಟ ನಡೆಸಿದ್ದಾರೆ. ಇಂದು 135 ಮಂದಿ ಹೆಲಿಕ್ಯಾಪ್ಟರ್‍ನಲ್ಲಿ ಹಾಸನ ನಗರ ಸೇರಿದಂತೆ ಹಾಸನಾಂಬ ದೇವಾಲಯ ವೀಕ್ಷಣೆ ಮಾಡಿದ್ದು, ಪ್ರತಿ ಬಾರಿಯೂ ಐದರಿಂದ ಆರು ಮಂದಿ ಹೆಲಿಕ್ಯಾಪ್ಟರ್‍ನಲ್ಲಿ ಸಂಚರಿಸಿದ್ದು ಇದುವರೆಗೆ ಒಟ್ಟು 210 ಮಂದಿ ಕಾರ್ಯಕ್ರಮದ ಪ್ರಯೋಜನ ಪಡೆದಿದ್ದಾರೆ.
|
11 |
+
ಪ್ರತಿ ವ್ಯಕ್ತಿಗೆ 4300ರೂ. ದರ ನಿಗದಿ ಮಾಡಲಾಗಿದ್ದು, ಇನ್ನು ಎರಡು ದಿನಗಳ ಕಾಲ ಕಾರ್ಯಕ್ರಮ ಮುಂದುವರೆಯಲಿದ್ದು ಇಂದು ಮತ್ತು ನಾಳೆ ಹೆಚ್ಚಿನ ಸಂಖ್ಯೆಯಲ್ಲಿ ಹೆಲಿಕ್ಯಾಪ್ಟರ್ ಮೂಲಕ ಹಾಸನ ನಗರ ವೀಕ್ಷಣೆ ಮಾಡಲಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ಅಭಿಯಂತರ ಮನು ತಿಳಿಸಿದ್ದಾರೆ.
|
12 |
+
ನ.3ರಂದು ಪ್ಯಾರಾ ಸೈಲಿಂಗ್‍ನಲ್ಲಿ 50 ಮಂದಿ, ಪ್ಯಾರಾ ಮೋಟರಿಂಗ್‍ನಲ್ಲಿ 15 ಮಂದಿ ಆಗಸದಲ್ಲಿ ಹಾರಾಟ ನಡೆಸಿದ್ದು, 30 ಮಂದಿ ಕಾರ್ಯಕ್ರಮದ ಪ್ರಯೋಜನ ಪಡೆದಿದ್ದಾರೆ ಎಂದು ಅಕಾರಿ ನಂದಕುಮಾರ್ ಮಾಹಿತಿ ನೀಡಿದ್ದಾರೆ.
|
13 |
+
ಕೆಎಸ್‍ಆರ್‍ಟಿಸಿ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಪ್ರಕೃತಿ ಪ್ರವಾಸೋದ್ಯಮ ಪ್ಯಾಕೇಜ್ ಟೂರ್ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಹೆಚ್ಚಿನ ಉತ್ಸಾಹ ಕಂಡಂತೆ ಕಾಣುತ್ತಿಲ್ಲ. ಇಂದು ಸಕಲೇಶಪುರ ಮಾರ್ಗ 425 ರೂ.ಗಳ ಪ್ಯಾಕೇಜ್ ಟೂರ್‍ಗೆ ಹಾಗೂ ಬೇಲೂರು ಮಾರ್ಗದ 350 ರೂ.ನ ಪ್ಯಾಕೇಜ್ ಸ್ಟೋರಿಗೆ ಎರಡು ಬಸ್‍ಗಳನ್ನು ನಿಯೋಜನೆ ಮಾಡಲಾಗಿದ್ದು, ಎರಡು ಮಾರ್ಗಗಳಿಂದ 45 ಮಂದಿ ಪ್ರವಾಸ ಮಾಡಿದ್ದಾರೆ ಎಂದು ಸಾರಿಗೆ ಇಲಾಖೆಯ ಅಧಿಕಾರಿ ರಕ್ಷಿತ್ ಮಾಹಿತಿ ನೀಡಿದ್ದಾರೆ.
|
14 |
+
ಇಂದು ಹಾಗೂ ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.ಜಿಲ್ಲಾಡಳಿತದಿಂದ ನ.2ರಂದು ನಗರದ ಹಾಸನಾಂಬ ಕಲಾ ಕ್ಷೇತ್ರದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಂಗೋಲಿ ಸ್ಪರ್ಧೆಯಲ್ಲಿ ಸುಮಾರು 40 ಮಂದಿ ಮಹಿಳೆಯರು ಭಾಗವಹಿಸಿದ್ದು, ಇವರಲ್ಲಿ ಪ್ರಥಮ ಬಹುಮಾನ 5000, ದ್ವಿತೀಯ ಬಹುಮಾನ 2000 ಹಾಗೂ ತೃತೀಯ 1000 ಬಹುಮಾನ ವಿತರಣೆ ಮಾಡಲಾಗಿದೆ. ಉಳಿದ 32 ಸ್ರ್ಪಗಳಿಗೆ ತಲಾ 500 ರೂ. ಸಮಾಧಾನಕರ ಬಹುಮಾನ ವಿತರಿಸಲಾಗಿದೆ ಎಂದು ಅಕಾರಿ ಸುಧಾ ಅವರು ತಿಳಿಸಿದ್ದಾರೆ.
|
eesanje/url_46_319_1.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ಅತ್ತಿಗೆ, ಇಬ್ಬರು ಮಕ್ಕಳನ್ನು ಬರ್ಬರವಾಗಿ ಕೊಂದ ಮೈದುನ
|
2 |
+
ಬೆಂಗಳೂರು,ನ.4- ಮೈದುನನೇ ತನ್ನ ಅತ್ತಿಗೆ ಮತ್ತು ಇಬ್ಬರು ಮಕ್ಕಳನ್ನು ಬರ್ಬರವಾಗಿ ಕೊಲೆ ಮಾಡಿರುವ ಭೀಕರ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕು ಯಳ್ಳೂರು ಗ್ರಾಮದಲ್ಲಿ ನಡೆದಿದೆ. ಯಳ್ಳೂರು ಗ್ರಾಮದ ನಿವಾಸಿಗಳಾದ ಗೀತಾ ಮರಿಗೌಡ (35), ಇವರ ಮಕ್ಕಳಾದ ಅಕುಲ್(10) ಮತ್ತು ಅಂಕಿತಾ (7) ಕೊಲೆಯಾದ ದುರ್ದೈವಿಗಳು.
|
3 |
+
ಗೀತಾ ಅವರ ಪತಿ ಹೊನ್ನಗೌಡ ಮರಿಗೌಡ ಅವರು ದುಬೈನಲ್ಲಿ ಮೆಕ್ಯಾನಿಕಲ್ ವೃತ್ತಿ ಮಾಡುತ್ತಿದ್ದು, ಯಳ್ಳೂರಿನಲ್ಲಿ ಇವರ ಕುಟುಂಬ ನೆಲೆಸಿದ್ದು, ಇವರ ಜೊತೆ ಮೈದುನ ಕುಮಾರ ಗೌಡ ಮರಿಗೌಡ (32) ವಾಸವಿದ್ದು ಈತ ಅವಿವಾಹಿತ. ಮನೆ ಹಾಗೂ ಅಂಗಡಿಯನ್ನು ಹೊನ್ನಗೌಡ ಅವರು ಬಾಡಿಗೆಗೆ ಕೊಟ್ಟಿದ್ದು, ಬಾಡಿಗೆ ಹಣವನ್ನು ಸಹೋದರ ಕುಮಾರ ಗೌಡನೇ ಪಡೆದುಕೊಳ್ಳುತ್ತಿದ್ದನು.
|
4 |
+
ಇತ್ತೀಚೆಗಷ್ಟೇ ದುಬೈನಿಂದ ಹೊನ್ನಗೌಡ ಅವರು ಮನೆಗೆ ಬಂದಿದ್ದರು. ಆ ಸಂದರ್ಭದಲ್ಲಿ ಕುಮಾರ ಗೌಡ ಬಾಡಿಗೆ ಹಣವನ್ನು ದುಂದುವೆಚ್ಚ ಮಾಡಿ ದುಶ್ಚಟ ಕಲಿತಿದ್ದಾನೆಂದು ಪತಿಗೆ ಗೀತಾ ಅವರು ತಿಳಿಸಿದ್ದಾರೆ. ತನ್ನ ಸಹೋದರ ಹಾಳಾಗುತ್ತಿದ್ದಾನೆಂದು ತಿಳಿದು ಅಂಗಡಿ ಹಾಗೂ ಮನೆಗಳು ಬಾಡಿಗೆದಾರರಿಗೆ ಬಾಡಿಗೆ ಹಣವನ್ನು ಪತ್ನಿಗೆ ಕೊಡಿ ಎಂದು ಹೇಳಿ ನಂತರದ ದಿನಗಳಲ್ಲಿ ಹೊನ್ನಗೌಡ ಅವರು ದುಬೈಗೆ ಹೋಗಿದ್ದಾರೆ.
|
5 |
+
ದೆಹಲಿಗೆ ಹೊಂದಿಕೊಂಡ ಹಲವು ನಗರಗಳಲ್ಲಿ ಕಂಪಿಸಿದ ಭೂಮಿ
|
6 |
+
ಇದರಿಂದ ಅತ್ತಿಗೆ ಮೇಲೆ ಕೋಪಗೊಂಡ ಮೈದುನ ಕುಮಾರಗೌಡ ಮಧ್ಯರಾತ್ರಿ ಎದ್ದು, ನಿದ್ರೆಗೆ ಜಾರಿದ್ದ ಅತ್ತಿಗೆ ಮತ್ತು ಇಬ್ಬರು ಮಕ್ಕಳ ತಲೆ ಮತ್ತು ಕುತ್ತಿಗೆ ಭಾಗಕ್ಕೆ ಮನಬಂದಂತೆ ಕತ್ತಿಯಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಈ ವಿಷಯ ಹಾನಗಲ್ ಠಾಣೆ ಪೊಲೀಸರಿಗೆ ಗೊತ್ತಾಗಿದೆ.
|
7 |
+
ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿದಾಗ ತಾಯಿ ಹಾಗೂ ಇಬ್ಬರು ಮಕ್ಕಳು ರಕ್ತದ ಮಡುವಿನಲ್ಲಿ ಕೊಲೆಯಾಗಿರುವುದು ಕಂಡು ಬಂದಿದೆ. ಈ ಬಗ್ಗೆ ಹಾನಗಲ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರ ಮೃತದೇಹಗಳನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಆರೋಪಿಗಾಗಿ ಶೋಧ ಕೈಗೊಂಡಿದ್ದಾರೆ.
|
eesanje/url_46_319_10.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ಕುಡಿಯುವ ನೀರಿನ ಸಮಸ್ಯೆ ಯಾಗದಂತೆ ನೋಡಿಕೊಳ್ಳಿ : ಸಿಎಂ ಎಚ್ಚರಿಕೆ
|
2 |
+
ಬೆಂಗಳೂರು,ನ.3- ರಾಜ್ಯದಲ್ಲಿ ಸೃಷ್ಟಿಯಾಗಿರುವ ಬರ ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರದ ಅನುದಾನದ ಹೊರತಾಗಿಯೂ ರಾಜ್ಯ ಸರ್ಕಾರ ಮುಂದಾಗಿದ್ದು, ಕುಡಿಯುವ ನೀರಿನ ಬವಣೆ ನೀಗಿಸಲು 900 ಕೋಟಿ ರೂ.ಗೂ ಹೆಚ್ಚು ಅನುದಾನ ನೀಡಿದೆ. ಯಾವುದೇ ಭಾಗದಲ್ಲಿ ಸಮಸ್ಯೆಯಾಗದಂತೆ ಕಟ್ಟೆಚ್ಚರ ವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ತಾಕೀತು ಮಾಡಿದ್ದಾರೆ.
|
3 |
+
ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯಾದ್ಯಂತ ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳುತ್ತಿದೆ. ಮಳೆ ಕೊರತೆಯಿಂದಾಗಿ ಜಲಮೂಲಗಳು ಬತ್ತಿದ್ದು, ಹಾಹಾಕಾರ ಹೆಚ್ಚಾಗಿದೆ. ಸುಮಾರು ಸಾವಿರಕ್ಕೂ ಹೆಚ್ಚು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಬೇಕಾದಂತಹ ಪರಿಸ್ಥಿತಿ ಇದೆ. ಈ ನಿಟ್ಟಿನಲ್ಲಿ ಈಗಾಗಲೇ ಸರ್ಕಾರ 900 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, ಜಿಲ್ಲಾಧಿಕಾರಿಗಳ ವೈಯಕ್ತಿಕ ಖಾತೆಯಲ್ಲಿ ಸಾಕಷ್ಟು ಹಣ ಲಭ್ಯವಿದೆ. ಜೊತೆಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಗೆ ತಲಾ ಒಂದು ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
|
4 |
+
ಅದರ ಹೊರತಾಗಿಯೂ ಅನುದಾನದ ಕೊರತೆ ಎಂದು ಹಲವು ಕಡೆ ಆಕ್ಷೇಪಗಳು ಕೇಳಿಬರುತ್ತಲೇ ಇವೆ. ರಾಜ್ಯ ಸರ್ಕಾರ ಪಂಚ ಖಾತ್ರಿ ಯೋಜನೆಗಳಿಗೆ ಹಣ ಬಳಕೆ ಮಾಡಿ ಕುಡಿಯುವ ನೀರಿಗೆ ಸಂಕಷ್ಟದ ಸ್ಥಿತಿ ನಿರ್ಮಿಸಿದೆ ಎಂದು ವಿರೋಧ ಪಕ್ಷಗಳು ಟೀಕೆ ಮಾಡುತ್ತಿವೆ.
|
5 |
+
ಬಂಡೆಗೆ ಉಂಡೆ ನಾಮ ಗ್ಯಾರಂಟಿ : ಯತ್ನಾಳ್ ವ್ಯಂಗ್ಯ
|
6 |
+
ಬಿಜೆಪಿ ಹಲವಾರು ತಂಡಗಳನ್ನು ರಚಿಸಿಕೊಂಡು ಬರ ಅಧ್ಯಯನಕ್ಕೆ ಮುಂದಾಗಿದೆ. ಈ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಬರ ಪರಿಹಾರ ಕಾಮಗಾರಿಗಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
|
7 |
+
ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಅಗತ್ಯವಿರುವ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಲು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಬರಗಾಲ ಮತ್ತು ಅದರ ಪರಿಣಾಮಗಳ ಬಗ್ಗೆ ತೀವ್ರ ನಿಗಾ ಇಡಬೇಕು. ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕು, ನರೇಗಾ ಯೋಜನೆಯಡಿ ಕೇಂದ್ರದಿಂದ ಆರ್ಥಿಕ ನೆರವು ದೊರೆಯುವುದು ವಿಳಂಬವಾದರೂ ಕೂಡ ರಾಜ್ಯದ ಬೊಕ್ಕಸದಿಂದಲೇ ಉದ್ಯೋಗ ಸೃಷ್ಟಿಗೆ ಹಣ ನೀಡಬೇಕು. ಕುಡಿಯುವ ನೀರಿನ ವಿಚಾರದಲ್ಲಿ ಯಾವುದೇ ಕಾರಣಕ್ಕೂ ತಡೆ ನೀಡಬಾರದು ಎಂದು ಕಟ್ಟಪ್ಪಣೆ ಮಾಡಿದ್ದಾರೆ.
|
eesanje/url_46_319_11.txt
ADDED
@@ -0,0 +1,5 @@
|
|
|
|
|
|
|
|
|
|
|
|
|
1 |
+
ಹಾಸನಾಂಬೆ ದರ್ಶನ ಪಡೆದ ಎಚ್‍ಡಿಡಿ
|
2 |
+
ಹಾಸನ, ನ.3- ಪರಮೇಶ್ವರನ ಅನುಗ್ರಹದಿಂದ ಮುಂದಿನ ಬಾರಿ ಮೆಟ್ಟಿಲು ಹತ್ತಿ ಬರಲು ತಾಯಿ ಹಾಸನಾಂಬೆ ಶಕ್ತಿ ನೀಡುವ ನಂಬಿಕೆ ಇದೆ ಎಂದು ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡರು ಹೇಳಿದರು. ಹಾಸನಾಂಬೆಯ ದರ್ಶನದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಆರೋಗ್ಯವಾಗಿ ಮುಂದಿನ ಬಾರಿ ಬರುವಂತೆ ತಾಯಿಯಲ್ಲಿ ಆಶೀರ್ವಾದ ಬೇಡುತ್ತೇನೆ ಎಂದು ಹೇಳಿದರು.
|
3 |
+
ಶ್ರೀಕ್ಷೇತ್ರ ಐತಿಹಾಸಿಕವಾಗಿದ್ದು, ಬಹಳ ವಿಜೃಂಭಣೆಯಿಂದ ದೀಪದ ಅಲಂಕಾರವನ್ನು ಬೀದಿ ಬೀದಿಗಳಲ್ಲಿ ಸೊಗಸಾಗಿ ಮಾಡಿದ್ದಾರೆ. ಕುಡಿಯುವ ನೀರು ಸೇರಿದಂತೆ ಎಲ್ಲ ರೀತಿಯ ಸೌಲಭ್ಯ ಒದಗಿಸಿ ಬಹಳ ಶ್ರದ್ಧೆಯಿಂದ ಕೆಲಸ ಮಾಡಿದ್ದಾರೆ. ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಉಸ್ತುವಾರಿ ಸಚಿವರಾದ ರಾಜಣ್ಣನವರು ಮುಂದೆ ನಿಂತು ಅಧಿಕಾರಿಗಳ ಸಹಕಾರದಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ಆಡಳಿತ ಮಂಡಳಿ ಹಾಗೂ ಜನತೆ ಪರವಾಗಿ ಎಲ್ಲರಿಗೂ ಅಭಿನಂದಿಸುವುದಾಗಿ ಹೇಳಿದರು.
|
4 |
+
ಡಿಎಂಕೆ ಸಚಿವ ವೇಲು ಮನೆ ಮೇಲೆ ಐಟಿ ದಾಳಿ
|
5 |
+
ಅಂತಾರಾಷ್ಟ್ರೀಯ ಮಟ್ಟದಲ್ಲಿ ಶ್ರೀಕ್ಷೇತ್ರದ ಪ್ರಚಾರ ಮಾಡಿರುವುದರಲ್ಲಿ ಮಾಧ್ಯಮದ ಕೊಡುಗೆ ಅಪಾರವಾಗಿದೆ ಎಂದು ದೇವೇಗೌಡರು ತಿಳಿಸಿದರು. ಶಾಸಕ ಸ್ವರೂಪ್, ಜಿಲ್ಲಾಧಿಕಾರಿ ಸತ್ಯಭಾಮ, ಎಸ್‍ಪಿ ಸುಜಿತಾ ಶಾಂತಲಾ, ಎಸಿ ಮಾರುತಿ, ತಹಸೀಲ್ದಾರ್ ಶ್ವೇತಾ ಎಲ್ಲರೂ ಒಂದೇ ಮನಸ್ಸಿನಲ್ಲಿ ದೇಗುಲದ ಬಾಗಿಲು ಮುಚ್ಚುವವರೆಗೆ ಭಕ್ತಿಪೂರ್ವಕವಾಗಿ ಕಾರ್ಯ ನಡೆಸಿಕೊಡಬೇಕು ಎಂದು ದೇವೇಗೌಡರು ಹೇಳಿದರು.
|
eesanje/url_46_319_12.txt
ADDED
@@ -0,0 +1,12 @@
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
|
1 |
+
ದೀಪಾವಳಿ ವೇಳೆ ಪಟಾಕಿ ಸಿಡಿಸಲು ಮಾರ್ಗಸೂಚಿ ಬಿಡುಗಡೆ
|
2 |
+
ಬೆಂಗಳೂರು,ನ.3- ಅತ್ತಿಬೆಲೆ ಪಟಾಕಿ ದುರಂತದ ಬಳಿಕ ಎಚ್ಚೆತ್ತುಕೊಂಡಿರುವ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ನಗರದಲ್ಲಿ ಪಟಾಕಿ ಸಿಡಿಸಲು ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಹಸಿರು ಪಟಾಕಿಗಳ ಮೇಲೆ ಹಾಗು ಅವುಗಳ ಪ್ಯಾಕೆಟ್ ಮೇಲೆ ಹಸಿರು ಪಟಾಕಿಯ ಚಿಹ್ನೆಯಿರಬೇಕು ಹಾಗು ಕ್ಯೂಆರ್ ಕೋಡ್ ಸಹಾ ಇರುತ್ತದೆ, ಸದರಿ ಚಿಹ್ನೆಯ ಬಗ್ಗೆ ಸಂಬಂಧಪಟ್ಟ, ಜಿಲ್ಲೆಯ ಪರಿಸರ ಅಧಿಕಾರಿಗಳಿಂದ ಖಚಿತ ಪಡಿಸಿಕೊಳ್ಳುವುದು, ಸದರಿ ಚಿಹ್ನೆ ಇಲ್ಲದ ಯಾವುದೇ ಪಟಾಕಿ ಹಸಿರು ಪಟಾಕಿಯೆನಿಸುವುದಿಲ್ಲ. ಮತ್ತು ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ.
|
3 |
+
ಯಾವುದೇ ಹಸಿರು ಪಟಾಕಿಗಳ ಪ್ಯಾಕೆಟ್ಟುಗಳನ್ನು ರ್ಯಾಂಡಮ್ ಆಗಿ ಸಂಗ್ರಹಿಸಿ ನಿಗತ ವಿಧಿ ವಿಧಾನಗಳ ಮೂಲಕ ಅವುಗಳ ಶಬ್ದ ಮಟ್ಟವನ್ನು ಮಾಪನ ಮಾಡಬೇಕು ಮತ್ತು ನಿಗದಿತ ಗುಣಮಾಪನಗಳಿಗೆ ಸರಿಹೊಂದಿದ್ದಲ್ಲಿ, ಅವುಗಳನ್ನು ಸಹಾ ಕೂಡಲೆ ಮುಟ್ಟುಗೋಲು ಹಾಕಿಕೊಳ್ಳಬೇಕು.
|
4 |
+
ದೀಪಾವಳಿ ಹಬ್ಬದ ಆಚರಣೆಯ ಸಂದರ್ಭದಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು ಹಾಗು ಇವುಗಳನ್ನು ಬಳಸುವಾಗ ಯಾವುದೇ ಪ್ರಾಣಿ, ಪಕ್ಷಿಗಳು, ಮಕ್ಕಳು ಹಾಗು ವೃದ್ಧರಿಗೆ ತೊಂದರೆಯಾಗದಂತೆ ಬಳಸಬೇಕು.
|
5 |
+
ಮಾನ್ಯ ಸರ್ವೋಚ್ಛ ನ್ಯಾಯಾಲಯದ ನಿರ್ದೇಶನಗಳ ಕುರಿತಂತೆ ಸಾರ್ವಜನಿಕರಿಗೆ ಮತ್ತು ಮಕ್ಕಳಲ್ಲಿ ಅರಿವು ಮೂಡಿಸಲು ಪರಿಣಾಮಾಕಾರಿಯಾಗಿ ಜಾಗೃತಿ ಕಾರ್ಯಕ್ರಮಗಳನ್ನು ಜಿಲ್ಲಾಡಳಿತ ಮತ್ತು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳುವುದು.
|
6 |
+
ಮೂವರು ಮುಖ್ಯನ್ಯಾಯಮೂರ್ತಿಗಳ ನೇಮಕಕ್ಕೆ ಕೊಲಿಜಿಯಂ ಶಿಫಾರಸು
|
7 |
+
ಯಾವುದೇ ಸ್ಥಳೀಯ ಆಸ್ಪತ್ರೆ ಹಾಗು ಶಿಕ್ಷಣ ಸಂಸ್ಥೆಗಳ ಸುತ್ತಮುತ್ತಲಿನ ಹಾಗು ಇನ್ನಾವುದೇ ನಿಷೇತ ಪ್ರದೇಶದಲ್ಲಿ ಯಾವುದೇ ರೀತಿಯ ಪಟಾಕಿಗಳನ್ನು ಸೋಟಿಸುವಂತಿಲ್ಲ ಅಥವಾ ಬಳಸುವಂತಿಲ್ಲ. ಇದನ್ನು ಎಲ್ಲಾ ಸ್ಥಳೀಯ ಸಂಸ್ಥೆ ಹಾಗು ಪೊಲೀಸ್ ಇಲಾಖೆಗಳು ಇದನ್ನು ಕಡ್ಡಾಯವಾಗಿ ಪಾಲಿಸಬೇಕು.
|
8 |
+
ಪರಿಸರ ಸ್ನೇಹಿ ದೀಪಾವಳಿ ಹಬ್ಬದ ಕುರಿತು ಸಾರ್ವಜನಿಕ ಸ್ಥಳಗಳಾದ ಮೆಟ್ರೋ ನಿಲ್ದಾಣ, ರೈಲು, ಬಸ್ ನಿಲ್ದಾಣ, ಮಾಲ್‍ಗಳಲ್ಲಿ ಕರಪತಭಿತ್ತಿಪತ್ರಗಳನ್ನು ಹಂಚುವ ಮೂಲಕ ಆಡಿಯೋ ಮತ್ತು ಆಡಿಯೋ ಮುಖಾಂತರ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕ್ರಮವಹಿಸುವುದು.
|
9 |
+
ಸ್ಥಳೀಯ ಟಿ.ವಿ. ಹಾಗೂ ರೇಡಿಯೋ ಮುಖಾಂತರ ಸಾರ್ವಜನಿಕರಿಗೆ ಪರಿಸರ ಸ್ನೇಹಿ ದೀಪಾವಳಿ ಹಬ್ಬ ಆಚರಿಸುವ ಬಗ್ಗೆ ಜಾಗೃತಿ ಮೂಡಿಸುವುದು. ದೀಪಾವಳಿಯ ಸಮಯದಲ್ಲಿ ಉತ್ಪಾದನೆಯಾಗುವಂತಹ ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಅಗತ್ಯ ಕ್ರಮವಹಿಸುವುದು.
|
10 |
+
ಹೊರ ರಾಜ್ಯಗಳಿಂದ ಅನಧಿಕೃತವಾಗಿ ಯಾವುದೇ ರೀತಿಯ ನಿಷೇಧಿತ ಪಟಾಕಿಗಳನ್ನು ಸಾಗಾಣೆ ಮಾಡುತ್ತಿದ್ದಲ್ಲಿ ಕೂಡಲೆ ವಾಣಿಜ್ಯ ತೆರಿಗೆ ಇಲಾಖೆಯವತಿಯಿಂದ ರಾಜ್ಯದ ಗಡಿಗಳಲ್ಲಿರುವ ತಮ್ಮ ತನಿಖಾ ಠಾಣೆಗಳ ಮುಖಾಂತರ ನಿಷೇಧಿತ ಪಟಾಕಿಗಳು ಹಾಗು ಸಂಬಂಧಿತ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಹಾಗು ಸಾಗಾಣೆ ಮಾಡುವ ವಾಹನಗಳನ್ನು ಸಾರಿಗೆ ಇಲಾಖೆಯಿಂದ ಮುಟ್ಟುಗೋಲು ಹಾಕಿಕೊಳ್ಳುವುದು.
|
11 |
+
ಇದಕ್ಕೆ ಅವಶ್ಯಕತೆಯಿದ್ದಲ್ಲಿ ಸಂಬಂಧಪಟ್ಟ ಇಲಾಖೆಗಳ ಸಹಯೋಗವನ್ನು ಪಡೆದುಕೊಳ್ಳಬಹುದು.ಸದರಿ ಆದೇಶದಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯವು ಸಮಯ: ರಾತ್ರಿ 8.00 ಗಂಟೆಯಿಂದ ರಾತ್ರಿ 10.00 ಗಂಟೆಯವರೆಗೆ ಮಾತ್ರ ಪಟಾಕಿಗಳನ್ನು ಸ್ಪೋಟಿಸಲು ಅವಕಾಶ ನೀಡಿದೆ. ಉಳಿದ ಸಮಯದಲ್ಲಿ ಪಟಾಕಿಗಳ ಸ್ಪೋಟವನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಇದಲ್ಲದೆ ಮಾನ್ಯ ಸರ್ವೋಚ್ಛ ನ್ಯಾಯಾಲಯವು ಮೇಲ್ಯಾಣಿಸಿದ ನಿರ್ದೇಶನಗಳಲ್ಲಿ ಅನುಮತಿಸಿರುವ ಹಸಿರು ಪಟಾಕಿಗಳನ್ನು, ಬಿಟ್ಟು ಉಳಿದ ಯಾವುದೇ ಇತರೆ ಪಟಾಕಿಗಳ ಮಾರಾಟ ಹಾಗೂ ಬಳಕೆಯನ್ನು ಸಹ ನಿಷೇಸಿರುತ್ತದೆ.
|
12 |
+
ತಮ್ಮ ವ್ಯಾಪ್ತಿಯಲ್ಲಿನ ಎಲ್ಲಾ ಪಟಾಕಿ ಮಾರಾಟಗಾರರ ಗೋದಾಮುಗಳನ್ನು ಪರಿಶೀಲಿಸಬೇಕು ಹಾಗು ಅಲ್ಲಿ ಹಸಿರು ಪಟಾಕಿಯಲ್ಲದೆ, ಇನ್ನಾವುದಾದರೂ ನಿಷೇತ ಪಟಾಕಿಗಳನ್ನು ದಾಸ್ತಾನು ಮಾಡಿದ್ದಲ್ಲಿ ಅಂತಹ ಗೋದಾಮನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಹಾಗು ಸಂಬಂಧಿತ ವ್ಯಕ್ತಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ಹೊಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
|