| ಕನ್ನಡ ಸಾಹಿತ್ಯ.ಕಾಂ | |
| ಕನ್ನಡದ ಕಣ್ಣಲ್ಲಿ ವಿಶ್ವದ ಕನಸು | |
| ತಿರುಕನಾಗಿ | |
| ತಿರುಕನಾಗಿ | |
| ಅಥವಾ ಮಾತು ಮಾತು ಮಾತುಗಳ | |
| ಶಬ್ದ ಗುಮ್ಮಟವಾದ ಈ ಪ್ರಪಂಚ | |
| ಕವಿಗೆ ತಿಪ್ಪೆಗುಂಡಿಯಂತೆ ಎನ್ನುವುದಾದರೆ | |
| ತಲೆಕೆದರಿದ ತಿರುಕಿಯಂತೆ ಕವಿ | |
| ಈ ತಿಪ್ಪೆಯಲ್ಲಿ ಮರೆತು ಬಿಸಾಕಿದ | |
| ಹರಳು, ಗುಲಗಂಜಿ, ಹೇರ್ಪಿನ್ನು, ಬ್ಲೇಡು | |
| ಸರದ ಹುಕ್ಕು, ಅದೃಷ್ಟವಿದ್ದರೆ ನಿರೀಕ್ಷಿಸದೇ ಇದ್ದ | |
| ಮಗುವಿನ ಬೆಳ್ಳಿ ಒಳಲೆ ಇತ್ಯಾದಿ ವಿಶೇಷ ಹುಡುಕಿ ತೆಗೆದು | |
| ಇಟ್ಟುಕೊಳ್ಳುತ್ತಾನೆ, ಅಥವಾ ರೀಸೈಕಲ್ ಮಾಡುತ್ತಾನೆ, ಅಥವಾ | |
| ಒಡೀ ತಿಪ್ಪೆಯಿಂದ ಬಯೋಗ್ಯಾಸ್ ಮಾಡಿ | |
| ದೀಪವನ್ನೂ ಉರಿಸಬಲ್ಲ ರೈತ ಅವನೆಂದರೂ ಸರಿಯೆ. | |
| ಅಥವಾ ಅದೃಷ್ಟವಶಾತ್ | |
| ಮಣಿಪಾಲದ ನನ್ನ ಗೆಳೆಯ ವಿಜಯನಾಥ ಶೆಣೈರಂತೆ | |
| ಹಕ್ಕಿದ್ದನ್ನು ಹಕ್ಕಿಯಂತೆ ತಂದೂ ತಂದೂ ಜೋಡಿಸಿ | |
| ಮಾಡಿದ ಗೂಡು ಅದ್ಭುತವೆನ್ನಿಸಿಬಿಟ್ಟು | |
| ಏಕಾಂತಕ್ಕೆ ಸಲ್ಲದೆ | |
| ಅಲ್ಲಿ ತಾನೇ ಕಾಣದಂತಾಗಿ | |
| ಎಲ್ಲರಂತೆ ಇನ್ನೊಂದು ಸಾದಾಮನೆ ಬಾಡಿಗೆಗೆ ಹಿಡಿದು | |
| ತಾನು ಕಟ್ಟಿದ್ದನ್ನು ಉಳಿದವರ ಕಣ್ಣಲ್ಲಿ ಕಂಡು ಸುಖಿಸುತ್ತಾನೆ. | |
| ೧೦-೧-೯೨ | |
| ನಿಟ್ಟುಸಿರನೆಳೆದು ದಾಟಿತು ಕೊನೆಯರೈಲು : (ತಕ್ಕೊ ಕೈಮರದ ಕರಡೀಸಲಾಮು !) ಕೈಯ ಚಾಚಿದ ನೆರಳು ಚಲಿಸುತ್ತಿದೆ…..! ಮೆಲ್ಲಮೆಲ್ಲನೆ ಸಂಜೆ ಹಿಂಬಾಲಿಸುತ ಬಂತು! ಅಸ್ಥಿ ಪಂಜರದೊಡಲ ತುಂಬುತ್ತಿದೆ! ಕೈಯಕೋಲನು ಮೀಟಿ ಸೇತುವೆಯ ದಾಟಿ ಕೈಯ ಚಾಚಿದ […] | |
| ಶಬ್ದಗಳು ಯಾತಕ್ಕೆ ಹೀಗೆ ಕಪ್ಪು ತುಂತುರು ಹನಿ! ಬಿಳಿಯ ಅವಕಾಶಕ್ಕೆ ಕೊಟ್ಟ ರೂಪ. ಶಬ್ದಗಳು ಯಾತಕ್ಕೆ ಹೀಗೆ ಕೇಳುವುದಿಲ್ಲ ಕಾಣುತ್ತವೆ, ಶಬ್ದಗಳು ಕಾಣದವೂ ಕೇಳುತ್ತವೆ. ***** | |
| ಸಾಲಾಗಿ ನವಿಲು ಗರಿಗೆದರಿ ನರ್ತಿಸಿದಂತೆ ಮುಂಜಾವದಲಿ ಬೇಲಿತುಂಬ ನೀಲಿಯ ಹೂವುಜೀವನೋತ್ಸಾಹದಲಿ ಎದೆದುಂಬಿಸುವ ರೂಹು! ಭೂಮಿಯಾಳದ ಭಾವ ಮೇಳೈಸಿ ಪುಟಿದಂತೆ ಎಲ್ಲೆಂದರಲ್ಲೆ ಮನಸೇಚ್ಛೆ ಬೆಳೆದಿಹ ಬಳ್ಳಿತೆರೆದಿಹುದು ನೂರು ಸವಿರ ನೀಲ ಬಗೆಗಣ್ಣು!(ನೇಸರನಿಗೂ ಜಗಕು ಇನ್ನೂ ನಿದ್ದೆಗಣ್ಣು) […] | |
| ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ | |
| ಟಿಪ್ಪಣಿ * | |
| ಹೆಸರು * | |
| ಮಿಂಚೆ * | |
| ಜಾಲತಾಣ | |
| ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. | |
| This site uses Akismet to reduce spam. Learn how your comment data is processed. | |
| ಬಿಟ್ಟ್ಯಾ | |
| ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… | |
| ಟಿಪ್ಸ್ ಸುತ್ತ ಮುತ್ತ | |
| "ಕಾಫಿಗೆ ಬರ್ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… | |
| ಮನ್ನಿ | |
| ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… | |
| ಬುಗುರಿ | |
| ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… |