CoolCoder44's picture
Upload folder using huggingface_hub
94fcbe1 verified
raw
history blame
5.16 kB
ಕನ್ನಡ ಸಾಹಿತ್ಯ.ಕಾಂ
ಕನ್ನಡದ ಕಣ್ಣಲ್ಲಿ ವಿಶ್ವದ ಕನಸು
ನಿತ್ಯ ಸುಡುವ ಸೂರ್ಯನಡಿ ನೆತ್ತಿ ಬಿರಿದರೂ
ಕಾಲು ಕೊಂಡೊಯ್ಯುತ್ತದೆ ನಡೆದ ದಾರಿಯಲ್ಲೇ
ಮತ್ತೆ ಮತ್ತೆ ನಡೆದು,
ಮೈಲಿಗಟ್ಟಲೆ ದೂರ ಹುಲ್ಲುಗಾವಲ ಹಾಗೆ
ಬಿದ್ದುಕೊಂಡಿದೆ ನೋಡಿ ಬೇಕು ಬೇಡಗಳು.
ರಾತ್ರಿ ಮಲ್ಲಿಗೆ ಹೂವ,
ಕಂಪು ಸುರಿಸಿದ ಮಳೆಯ
ಹುಣ್ಣಿಮೆಯ ಹೊನ್ನ ನೆನಪು,
ನೀವು ಜೊತೆಗಿದ್ದರೆ;
ಹರಿವ ನದಿಗೆ ಮೈ ಕೊಟ್ಟು
ಆಕಾಶಕ್ಕೂ ಮುತ್ತಿಟ್ಟು
ವಿಶಾಲ ವೃಕ್ಷದ ತಂಪಿನಲಿ ತಂಗಬೇಕು
ಕೊಂಚ ಮರೆಯಬೇಕು
ದಿನನಿತ್ಯ ತಿಂದು, ತೇಗಿ, ಮಲಗುವುದು.
ಕೊರೆವ ಛಳಿ, ಸುರಿವ ಮಳೆ
ಸುಮ್ಮನೆ ಜೊತೆಗಿದ್ದು ಭುಜಕ್ಕೆ ಭು ತಾಗಿಸಿ
ತಿಳಿಸಿದರೆ ಸಾಕು.
ಮುತ್ತುಗಳು ಮತ್ತುಗಳು ಸತ್ತು ಹೋಗಲಿ ಎಲ್ಲ
ಸುಟ್ಟು ಹೋಗಲಿ ಸ್ವಪ್ನ ಸಿಡಿಲಿನಲ್ಲಿ.
ಯಾವ ದೀಪದ ಬೆಳಕೊ
ಯಾವ ಚುಕ್ಕಿಯ ಹೊಳಪೊ
ಯಾವ ಬೆಂಕಿಯ ಕಾವೊ
ತಣ್ಣಗೆ ಎದೆ ಸುಟ್ಟು,
ಅಲ್ಲಿ ಹುಟ್ಟಲಿ ಮತ್ತೆ
ಹೊಸದೊಂದು ಪುಟ್ಟ ಹಾಡು.
*****
ನಶ್ಯದಲ್ಲಿ ನಾನಾ ನಮೂನೆಗಳಿವೆ. ಬಣ್ಣ, ದರ, ತರತಮ ಘಮಘಮ ಸಣ್ಣ, ನುಣ್ಣಗೆ, ದಪ್ಪ, ಇನ್ನೂ ಅನೇಕ ತರ- ಮದ್ರಾಸಿನಾರ್ಮುಗಂ ನಶ್ಯ, ಬೆಂಗ್ಳೂರು ಮಗಳಗೌರಿ ನಶ್ಯ, ಹಳ್ಳಿಹಳ್ಳಿಯ ದೇಶೀನಶ್ಯ, ಕೆಲವರಿಗಂತು ಪ್ಯಾರಿಸ್, ಕೊನೇಪಕ್ಷ ಲಂಡನ್ ಪಿಸ್ತೂಲ್ […]
ಇರುಳು ಇನ್ನೂ ಹೊದ್ದಿಲ್ಲ ಧರೆಯ ಇಂದ್ರನ ಸಹಸ್ರ ಸಹಸ್ರ ನಯನ ತಾರೆ,ತೆರೆದಿಲ್ಲ ಪೂರ್ಣ ಬುದ್ಧಿರಾಗಸದ ಮೈಯ ಹೆಡೆಯೆತ್ತದ ರಭಸಕ್ಕಲ್ಲದ ಗಾಳಿ ತೂಗಿ , ನಿತ್ಯ ಹರಿತ್ತಿನ ಮಳೆಕಾಡು ಭವ್ಯ ಸುಳಿದಾಡುವ ವನ್ಯ ಅದೋ ಬೂದಿ […]
ಸಾಲಾಗಿ ನವಿಲು ಗರಿಗೆದರಿ ನರ್‍ತಿಸಿದಂತೆ ಮುಂಜಾವದಲಿ ಬೇಲಿತುಂಬ ನೀಲಿಯ ಹೂವುಜೀವನೋತ್ಸಾಹದಲಿ ಎದೆದುಂಬಿಸುವ ರೂಹು! ಭೂಮಿಯಾಳದ ಭಾವ ಮೇಳೈಸಿ ಪುಟಿದಂತೆ ಎಲ್ಲೆಂದರಲ್ಲೆ ಮನಸೇಚ್ಛೆ ಬೆಳೆದಿಹ ಬಳ್ಳಿತೆರೆದಿಹುದು ನೂರು ಸವಿರ ನೀಲ ಬಗೆಗಣ್ಣು!(ನೇಸರನಿಗೂ ಜಗಕು ಇನ್ನೂ ನಿದ್ದೆಗಣ್ಣು) […]
ಬಿಟ್ಟ್ಯಾ
ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ…
ಟಿಪ್ಸ್ ಸುತ್ತ ಮುತ್ತ
"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ…
ಮನ್ನಿ
ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ…
ಬುಗುರಿ
ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ…