| ಕನ್ನಡ ಸಾಹಿತ್ಯ.ಕಾಂ | |
| ಕನ್ನಡದ ಕಣ್ಣಲ್ಲಿ ವಿಶ್ವದ ಕನಸು | |
| ರಾಗ — ಮುಖಾರಿ | |
| ತಾಳ — ಛಾಪು | |
| ಕಷ್ಟಪಟ್ಟರೂ ಇಲ್ಲ ಕಳವಳಿಸಿದರಿಲ್ಲ | | |
| ಭ್ರಷ್ಟಮಾನವ ಹಣೆಯಬರಹವಲ್ಲದೆ ಇಲ್ಲ ||ಪ|| | |
| ಸಿರಿವಂತನ ಸ್ನೇಹಮಾಡಿ ನಡೆದರಿಲ್ಲ | | |
| ಪರಿಪರಿಯಲಿ ವಿದ್ಯೆ ಕಲಿತರಿಲ್ಲ || | |
| ನರಿಯ ಬುದ್ಧಿಯಲಿ ನಡೆದುಕೊಂಡರು ಇಲ್ಲ | | |
| ಅರಿಯದೆ ಹಲವ ಹಂಬಲಿಸಿದರಿಲ್ಲ ||೧|| | |
| ಕೊಂಡೆಗಾರಿಕೆಯನ್ನು ಹೇಳಿ ನಡೆದರಿಲ್ಲ | | |
| ಕಂಡಕಂಡವರಿಗೆ ಕೈಮುಗಿದರಿಲ್ಲ || | |
| ಗಂಡುಗತ್ತರಿಯನ್ನು ಕೊರಳಿಗಿಟ್ಟರು ಇಲ್ಲ ಪ್ರ – | | |
| ಚಂಡನಾದರೂ ಇಲ್ಲ ಪರಿಹಾಸ್ಯವಲ್ಲ ||೨|| | |
| ಕಟ್ಟಾಳು ಕಡುಜಾಣನಾಗಿ ಪುಟ್ಟಿದರಿಲ್ಲ | | |
| ಬೆಟ್ಟಗಳನು ಕಿತ್ತಿ ಇಟ್ಟರಿಲ್ಲ || | |
| ಸೃಷ್ಟಿಯೊಳು ಕಾಗಿನೆಲೆಯಾದಿಕೇಶವರಾಯ | | |
| ಕೊಟ್ಟವರಿಗೆ ಉಂಟು ಕೊಡದವರಿಗೆ ಇಲ್ಲ ||೩|| | |
| ***** | |
| ರಾಗ — ಮೋಹನ ತಾಳ — ಅಟ್ಟ ಆರು ಬಾಳಿದರೇನು ಆರು ಬದುಕಿದರೇನು | ನಾರಾಯಣನ ಸ್ಮರಣೆ ನಮಗಿಲ್ಲದನಕ ||ಪ|| ಉಣ್ಣಬರದವರಲ್ಲಿ ಊರೂಟವಾದರೆ ಏನು | ಹಣ್ಣು ಬಿಡದ ಮರಗಳು ಹಾಳಾದರೇನು || ಕಣ್ಣಿಲದವಗಿನ್ನು […] | |
| ರಾಗ — ಭೈರವಿ ತಾಳ — ರೂಪಕ ನಾನು ನೀನು ಎನ್ನದಿರೋ ಹೀನಮಾನವ |ಜ್ಞಾನದಿಂದ ನಿನ್ನ ನೀನೆ ತಿಳಿದುನೋಡೆಲೊ – ಪ್ರಾಣಿ ||ಪ|| ಹೆಣ್ಣು – ಹೊನ್ನು – ಮಣ್ಣು ಮೂರು ನಿನ್ನವೇನೆಲೊ |ಅನ್ನದಿಂದ […] | |
| ರಾಗ — ಕಾಂಬೋದಿ ತಾಳ — ಝಂಪೆ ತಲ್ಲಣಿಸದಿರು ಕಂಡೆಯಾ ತಾಳು ಮನವೆ – ಸ್ವಾಮಿ | ನಿಲ್ಲದಲೆ ರಕ್ಷಿಸುವ ಸಂದೇಹ ಬೇಡ ||ಪ|| ಬೆಟದಾ ತುದಿಯಲ್ಲಿ ಬೆಳೆದ ವೃಕ್ಷಂಗಳಿಗೆ | ಕಟ್ಟೆಕಟ್ಟುತ ನೀರ […] | |
| ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ | |
| ಟಿಪ್ಪಣಿ * | |
| ಹೆಸರು * | |
| ಮಿಂಚೆ * | |
| ಜಾಲತಾಣ | |
| ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. | |
| This site uses Akismet to reduce spam. Learn how your comment data is processed. | |
| ಬಿಟ್ಟ್ಯಾ | |
| ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… | |
| ಟಿಪ್ಸ್ ಸುತ್ತ ಮುತ್ತ | |
| "ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… | |
| ಮನ್ನಿ | |
| ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… | |
| ಬುಗುರಿ | |
| ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… |