CoolCoder44's picture
Upload folder using huggingface_hub
94fcbe1 verified
raw
history blame
6.28 kB
ಕನ್ನಡ ಸಾಹಿತ್ಯ.ಕಾಂ
ಕನ್ನಡದ ಕಣ್ಣಲ್ಲಿ ವಿಶ್ವದ ಕನಸು
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ
ದೊರೆ, ಈ ಸುಗಂಧ ಆತ್ಮದ ತೋಟದಿಂದ ಬಂದದ್ದೆ?
ಇಲ್ಲ ತಾರೆ ನೀಹಾರಿಕೆಗಳಾಚೆಯಿಂದ ಬೀಸಿದ್ದೆ?
ದೊರೆ, ಉಕ್ಕಿದ ಈ ಜೀವ ಜಲದ ಸೆಲೆ ಯಾವ ನಾಡಿನದು?
ದೊರೆ, ಚರಾಚರ ರೂಪಗಳ ಈ ಬೆಳಕು ಯಾವ ಸೀಮೆಯದು?
ಆಶ್ಚರ್ಯ! ದೊರೆ, ಈ ಸದ್ದು ದೇವತೆಗಳ ಸೈನ್ಯದ್ದೆ?
ಅದ್ಭುತ! ದೊರೆ, ಎದ್ದ ಈ ನಗುವಿನ ಅಲೆ ಸ್ವರ್ಗದಪ್ಸರೆಯರದೆ?
ಯಾವ ದಿವ್ಯಗಾನವಿದು? ಆತ್ಮ ಹುಚ್ಚೆದ್ದು ಕುಣಿದಿದೆ
ಯಾವ ಶಿಳ್ಳೆಯದು? ಎದೆಯ ಹಕ್ಕಿ ರೆಕ್ಕೆ ಬಿಚ್ಚಿ ಚಡಪಡಿಸಿದೆ
ಯಾವ ಮದುವೆಯೂಟವಿದು? ಎಂಥ ಮದುವೆ?
ಸ್ವರ್ಗವೇ ಅಂತಃಪಟವಾದಂತೆ, ಬಂಗಾರ ಹರಿವಾಣದ ಚಂದ್ರನೇ ಬಂದಂತೆ
ಎಂಥಾ ಬೇಟೆ ಇದು? ವಿಧಿಯ ಬಾಣವೇ ಹಾರುತ್ತಿದೆ
ಅಲ್ಲವೆಂದರೆ ಈ ದಿವ್ಯ ಗಾಂಡೀವವೇಕೆ ಮಿಡಿದಿದೆ
ಬೆಸಗೊಳ್ಳಿರಿ, ಸಖಿಯರೆ, ಸುಭಸುದ್ದಿ
ತಟ್ಟಿ ಚಪ್ಪಾಳೆ, ಮಿಕ್ಕು ಮೀರಿ ಹೋಹ ಚಪ್ಪಾಳೆಯೊಡನೆ ಬಂದ
ಆಕಾಶಗಳ ಕೋಟೆಯಿಂದ ಅಭಯದ ದನಿ ಕೇಳಿದೆ
ಕಡಲ ತೆರೆಗಳ ಮಧ್ಯದಿಂದ ಎಂಥದೋ ಭಯ ಮೊರೆದಿದೆ
ಶ್ರೀಮಂತ ನಯನಗಳಿಗೆ ಸೊಕ್ಕೇರಿದೆ ನಿನ್ನ ದರ್ಶನದಿಂದ
ಕಣ್ಣಾರೆ ಕಂಡದ್ದಕ್ಕೆ ಸ್ವತಃ ಸಾಕ್ಷಿ ಹೇಳಿದೆ
ಬರಗಾಲದ ಬದುಕಿನಿಂದ ಹಾರಿ ಹೋಗು
ಅಗುಳಿಗಾಗಿ ಆತ್ಮಘಾತವಾಗುವ ಕಡೆಯಿಂದ ದೂರ ಸಾಗು
ಜೀವನಕ್ಕಿಂತ ಯಾವುದು ಸುಂದರ?
ಜೀವ ಹಾರಿತೆ, ಭಯವಿರಲಿ ದೂರ
ಜೀವ ಹಾರಿದ್ದಕ್ಕೆ ಅಳುವೇಕೆ?
ಜೀವದಾಗಮನಕ್ಕಿಂತ ಅದು ಒಳಿತಲ್ಲವೆ?
ಪ್ರತಿಯೊಬ್ಬನೂ ಎಂಥದಕ್ಕೂ ವಿಸ್ಮಯ ಶೀಲ
ನನ್ನ ವಿಸ್ಮಯದ ಮೂಲ! ಈತ ನಡುಮಧ್ಯವಿದ್ದೂ ಇಲ್ಲವಲ್ಲ
ಇದೇ ಶೂನ್ಯ, ನಾನು ವಿವರಿಸುವುದಿಲ್ಲ
ಏನು ವಿವರಿಸುತ್ತಿದ್ದಿ?
ಅಗೊ ವಿವರಗಳಾತ್ಮವೇ ಬಂದ
*****
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಇಷ್ಟೆಲ್ಲ ದೌರ್ಬಲ್ಯಕ್ಕೆ ಎಷ್ಟು ನೆಪ ಹೇಳುತ್ತಿ, ಹೃದಯವೆ? ಎಷ್ಟೊಂದು ನಿಷ್ಠೆ ಅತ್ತ ಕಡೆಯಿಂದ, ನಿನ್ನಿಂದ ಮಾತ್ರ ಬರೀ ದ್ರೋಹವೇ! ಅತ್ತ ಕಡೆಯಿಂದ ಅಷ್ಟೆಲ್ಲ ಹೃದಯ ವೈಶಾಲ್ಯ […]
ನನ್ನ ಹೃದಯದ ಹಕ್ಕಿ ಮತ್ತೆ ಚೀರಿ ಹಾರಾಡಿತು ನನ್ನ ಆತ್ಮದರಗಿಣಿ ಮಾತ್ರ ಸಕ್ಕರೆ ಮೆಲ್ಲುತ್ತ ನೋಡಿತು ಹುಚ್ಚು ಕುಡುಕ ಒಂಟೆ ಮತ್ತೆ ವಿವೇಕದ ಸಂಕೋಲೆ ಹರಿಯಿತು ಹೆಂಡ ಮತ್ತೆ ಮೆದುಳಿಗೆ, ಕಂಗಳಿಗೆ ಏರಿ ಚಿತ್ತಾಗಿಸಿತು […]
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ವಸಂತಾಗಮನದ ಜತೆಗೆಯೇ ಬಂತು ನಲ್ಲನ ಸಂದೇಶ ನಾವೀಗ ಪ್ರೇಮ ಸುರೋನ್ಮತ್ತರು, ನಿಲ್ಲಲಾಗದೆ ತೂರಾಡಿದವರು ಹೋಗು ನಂದನವನಕ್ಕೆ ನನ್ನ ನಲ್ಲ, ಅಲ್ಲಿ ಕಾದ ನಂದನದ ಸುಂದರಿಯರು, ನಿನ್ನ ನಿರೀಕ್ಷೆಯಲ್ಲಿ […]
ಬಿಟ್ಟ್ಯಾ
ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ…
ಟಿಪ್ಸ್ ಸುತ್ತ ಮುತ್ತ
"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ…
ಮನ್ನಿ
ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ…
ಬುಗುರಿ
ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ…