|
ಕನ್ನಡ ಸಾಹಿತ್ಯ.ಕಾಂ
|
|
ಕನ್ನಡದ ಕಣ್ಣಲ್ಲಿ ವಿಶ್ವದ ಕನಸು
|
|
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ
|
|
ಪಂಜರ ಬಿಟ್ಟು ಹಾರಿದ ಹಕ್ಕಿಗಳೆ
|
|
ಬಂದು ಒಂದು ಕ್ಷಣ ಮುಖದೋರಿರೆ
|
|
ಚೂರಾಗಿದೆ ಈ ಕಡಲಲ್ಲಿ ನಿಮ್ಮ ಹಡಗು
|
|
ಮೀನುಗಳಂತೆ ಅದು ಮತ್ತೆ ತೇಲಿದ ಬೆಡಗು
|
|
ಮಾಡು ಮುರಿದು ಮತ್ತೆ ಮೂಲ ಸಖನಿಗೆ ವಾಪಸೆ?
|
|
ಬಲೆ ಜಾರಿತೆ ಕೈಯಿಂದ ಮತ್ತೆ ಮಿಕ ಮಾಯವೆ?
|
|
ನಿಮ್ಮಾತ್ಮದ ಬೆಂಕಿಗೆ ನೀವೆ ತರಗೆಲೆಯೇ?
|
|
ಒಳಬೆಂಕಿ ಆರಿತೆ? ನೀವೆ ಭಗ್ಗೆಂದು ಉರಿದ ಬೆಳಕೆ?
|
|
ಆ ಗಾಳಿಯೆ ಪೀಡೆಯಾಗಿ ಕಾಡಿತೆ, ಹೋದ ಹೋದಲ್ಲಿ
|
|
ಜಿಪ್ಸಿರ್ ಗಾಳಿಯಾಗಿ ಕಾಡಿತೆ? ಅದು ಬಂದ ಬಂದಲ್ಲಿ
|
|
ಅಂತಕನ ದೂತರು ಬಂದಾಗ ಹುಟ್ಟಿದವರೆ
|
|
ನಿಮಗೀಗ ಮರುಜನ್ಮ, ಹುಟ್ಟಿರೆ, ಮತ್ತೆ ಹುಟ್ಟಿರೆ
|
|
ನೀವು ಭವಿಗಳೊ ಭಕ್ತರೊ ಎಂಬುದೀಗ ಮನಕ್ಕೆ ನಿರ್ಣಯವಾಗಲಿದೆ
|
|
ಮುಖದ ತೆರೆ ಸರಿಸಿರ
|
|
ತಬ್ರೀಜಿನ ಶಂಸ್‌ನ ಕೃಪೆಗೆ ನೀವು ಪಾತ್ರರೆ?
|
|
ಶೂನ್ಯ ಸಿಂಹಾಸನದ ಸರದಾರರು ನೀವು, ಅವನ ಅನಂತ ಕರುಣೆ
|
|
*****
|
|
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಕೆಂಪ ಕೆನ್ನೆಯ ಕಂಡು, ಕಲ್ಲುಗಿರಣಿ ಕೂಡಾ ಹುಚ್ಚೆದ್ದು ಕುಣಿದೀತು ಪರದೆಯಾಚೆಗಿನ ಮುಖ ಕಂಡು, ಮೂಕ ಪ್ರೇಮಿಯ ಹೃದಯ ಶಾಂತವಾದೀತು ಜ್ಞಾನ ದಿಕ್ಕೆಟ್ಟು ದಾರಿ ಮರೆತೀತು, ತಾರ್ಕಿಕನ […]
|
|
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ತಲೆಕೆರೆಯಲು ಕೂಡಾ ಹೊತ್ತಿಲ್ಲ, ಅಷ್ಟೊಂದು ಕಾಟ ತಬ್ಬಿ ಎದೆಗೊತ್ತಿಕೊಂಡ ಅವನ ದೇಹದ ಮಾಟ ಹಿಡಿದೆಳೆದು ಒಂಟೆಗಳ ಸಾಲಿಗೆ ದೂಡಿದ ದೊರೆ ಥಟ್ಟನೆ- “ನೀನೇ ದಳಪತಿ ಈಗ” […]
|
|
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ದೊರೆ, ಈ ಸುಗಂಧ ಆತ್ಮದ ತೋಟದಿಂದ ಬಂದದ್ದೆ? ಇಲ್ಲ ತಾರೆ ನೀಹಾರಿಕೆಗಳಾಚೆಯಿಂದ ಬೀಸಿದ್ದೆ? ದೊರೆ, ಉಕ್ಕಿದ ಈ ಜೀವ ಜಲದ ಸೆಲೆ ಯಾವ ನಾಡಿನದು? ದೊರೆ, ಚರಾಚರ […]
|
|
ಬಿಟ್ಟ್ಯಾ
|
|
ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ…
|
|
ಟಿಪ್ಸ್ ಸುತ್ತ ಮುತ್ತ
|
|
"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ…
|
|
ಮನ್ನಿ
|
|
ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ…
|
|
ಬುಗುರಿ
|
|
ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… |