File size: 5,534 Bytes
94fcbe1 |
1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 |
ಕನ್ನಡ ಸಾಹಿತ್ಯ.ಕಾಂ ಕನ್ನಡದ ಕಣ್ಣಲ್ಲಿ ವಿಶ್ವದ ಕನಸು ಬಾನಿನೊಂದೆಡೆ ತಮದ ರುಂದ್ರ ಪಾತ್ರೆಯಲಿಳಿದು ದೀನ ಮೊಗದಲಿ ಕಿರಣ ತಾನ ಸೋಪಾನದಲಿ ನಿರ್‍ನಿಮೇಷಾಕ್ಷಿಯೊಳಗೇನನೀಕ್ಷಿಸುತಿರುವೆ ಲಲಿತಾಂಗಿ ನಕ್ಷತ್ರವೆ? ಉನ್ನತದ ತಾರಕಿತ ಗಗನದೊಳು ಏಕಾಕಿ ಬಿನ್ನಗಾಗುತ ಮೌನವ್ರತಧಾರಿಯಾಗಿರಲು ಪನ್ನತಿಕೆ ಬಹುದೆಂದು? ಎದ ಭಾರವನು ಇಳುಹಲಾರದೆಯೆ ಕೊರಗುತಿರುವೆ! ಭವದ ಬಾಳಿನೊಳಿಲ್ಲಿ ದಿವದ ಕನಸನು ಕಂಡು ಜೀವನದ ಪಾವನಂಗೊಳಿಪ ಹಂಬಲದೊಳಿರೆ ಆವ ನೋವಿನ ಕಾವು ಕೆಂಗುಲಿಮೆಯಲಿ ಕುದಿಸಿ ನಿನ್ನ ದಿಗ್ಬಲಿ ಹೊಡೆಯಿತೊ! ಭಾವುಕರಿಗಾತ್ಮಾಭಿರಾಮ ಧೀಮಂತರಿಗೆ ನೋವಿನೊಡ ಹುಟ್ಟಿ ಮೃದು ಹೂವಾಗಿ ಪ್ರೇಮದಲಿ ನವೆದ ಸತ್ಯಾಶ್ರಯರಿಗೀ ಜಗದೊಳುಳಿಗಾಲ ಬೆಳೆಗಾಲವಿಲ್ಲವೇನೊ! ನೊಂದವರ ಕಣ್ಣೀರ ಬಿಂದುಬಿಂದುವು ಜಿನುಗಿ ಕುಂದದಮರ ಪ್ರೇಮ ಬಾನಾಳ್ಮೆಯಲಿ ಮಿನುಗಿ- ಅಂದಗೆಟ್ಟಿಹ ಬಾಳೊಳಾವ ಸಂದೇಶವನು ತಂದಿರುವೆ ಕಿರುತಾರಗೆ? ಅಂಧಕಾರವು ಕಣ್ಣ ತಿವಿದು ನಿನ್ನದಗುದಿಗೆ ಇಂಧನವನೊಟ್ಟಿ ಹಸಿ ಹೆಣವ ಬೇಯಿಸುತಲಿದೆ! ಬಂಧಮುಕ್ತಿಯ ಪಡೆದ ಚೊಕ್ಕ ಬೆಳಕಿನ ಚಿಕ್ಕೆ ಮುಂದಾವ ಗುರಿಯು ನಿನಗೆ? ***** ನಡುವಗಲ ಪೊಳ್ತು; ಬೆಂಬಿಸಿಲಾಳುತಿದೆ ಜಗವ. ಗಿರಿಸಾನು ಪೇರಡವಿ ದಿಙ್ಮೂಢವಾಗಿಹವು; ಬೇಲಿಪೊದ ಸಾಲಿನಲಿ ಕೀಟಗಳ ನಸು ಸುಳಿವು; ಮೇಲೆ ನೀಲಾಂಬರದಿ ನುಸುಳಿ ಮಲ್ಲಡಿಯಿಡುವ ತೇಲು-ಮೋಡದ ಕೂಸು; ಹುಲ್ಲುಗಾವಲದಲ್ಲಿ ಹೆಸರಿರದ ಚಿತ್ರಮಯ ಹೂಗಳೊಡನಾಡುತಿದೆ ಏಕಾಂಗಿ ಚಿಟ್ಟೆ; ಅಲುಗುತ್ತಿವ […] ಕುರಿಗಳು, ಸಾರ್, ಕುರಿಗಳು ಕುರಿಗಳು, ಸಾರ್, ಕುರಿಗಳು ಕುರಿಗಳು, ಸಾರ್, ಕುರಿಗಳು: ಸಾಗಿದ್ದೇ ಗುರಿಗಳು. ಮಂದೆಯಲ್ಲಿ ಒಂದಾಗಿ, ಸ್ವಂತತೆಯೇ ಬಂದಾಗಿ ಇದರ ಬಾಲ ಅದು, ಮತ್ತೆ ಅದರ ಬಾಲ ಇದು ಮೂಸಿ ದನಿ ಕುಗ್ಗಿಸಿ, […] ಇರುಳು ನಕ್ಷತ್ರ ಮಿನುಗುತ್ತವೆ- ಎಂದರೆ, ಬೆಳಕು ಬಾಯ್‌ಬಿಟ್ಟು, ತುಟಿಗೆ ತುಟಿ ಹಚ್ಚದೆ ಮಾತಾಡಿಕೊಳ್ಳುತ್ತವೆ. ಕವಿತೆ ಕಿವಿಗೊಟ್ಟು ಕೇಳುತ್ತದೆ. ಮಂದ ಬೆಳಕಿನಲ್ಲಿ ಗಿರಿ ಶಿಖರ ಗಿರಿಗಿರಿ ಬುಗುರಿಯಾಡಿ ಇದ್ದಲ್ಲೆ ನಿದ್ದೆ ಹೋಗುತ್ತವೆ. ಗಿಡಮರಗಳು ಆಕಾಶದಲ್ಲಿ ಬೇಕಾದ […] ಬಿಟ್ಟ್ಯಾ ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… ಟಿಪ್ಸ್ ಸುತ್ತ ಮುತ್ತ "ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… ಮನ್ನಿ ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… ಬುಗುರಿ ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… |